ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಜಿಡಿಪಿ ದರ ಶೇ. 7.2: ಆರ್‌ಬಿಐ ಅಂದಾಜಿನಲ್ಲಿ ಇಲ್ಲ ಬದಲಾವಣೆ

|
Google Oneindia Kannada News

ನವದೆಹಲಿ, ಜೂನ್ 8: ಜಾಗತಿಕ ವಿದ್ಯಮಾನ, ಹಣದುಬ್ಬರ ಇತ್ಯಾದಿ ಸಮಸ್ಯೆಗಳಿಂದ ಭಾರತದ ಆರ್ಥಿಕ ಚೇತರಿಕೆ ವೇಗ ನಿರೀಕ್ಷಿತ ಮಟ್ಟಕ್ಕಿಂತ ಕಡಿಮೆ ಆಗಬಹುದು ಎಂದು ಅನೇಕ ರೇಟಿಂಗ್ ಸಂಸ್ಥೆಗಳು ಅಂದಾಜು ಮಾಡಿವೆ. ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಹಿಂದಿನ ಅಂದಾಜನ್ನೇ ಉಳಿಸಿಕೊಂಡಿದೆ. ಭಾರತದ ಜಿಡಿಪಿ ಶೇ. 7.2ರ ದರದಲ್ಲಿ ಪ್ರಗತಿ ಕಾಣಬಹುದು ಎಂದು ಈ ಹಿಂದಿನ ಲೆಕ್ಕಾಚಾರದಲ್ಲಿ ಆರ್‌ಬಿಐ ಅಂದಾಜು ಮಾಡಿತ್ತು. ಇಂದು ಬುಧವಾರ ಬೆಳಗ್ಗೆ ಎಂಪಿಸಿ ಸಭೆಯಲ್ಲಿ ಆರ್‌ಬಿಐ ಇದೇ ನಿಲುವಿಗೆ ಬದ್ಧವಾಗಿದೆ.

ಆರ್‌ಬಿಐ ಅಂದಾಜಿನ ಪ್ರಕಾರ ಈ ಹಣಕಾಸು ವರ್ಷದ ನಾಲ್ಕು ತ್ರೈಮಾಸಿಕ ಅವಧಿಯಲ್ಲಿ ಜಿಡಿಪಿ ದರ ಕ್ರಮೇಣ ಇಳಿಮುಖವಾಗಬಹುದು ಎಂದು ಹೇಳಲಾಗಿದೆ. ಮೊದಲ ಅವಧಿಯಲ್ಲಿ ಶೇ. 16.1 ಇದ್ದರೆ ಎರಡನೇ ಅವಧಿಯಲ್ಲಿ ಶೇ. 6.2, ಮೂರನೇ ಅವಧಿಯಲ್ಲಿ ಶೇ. 4.1 ಮತ್ತು ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿ ಶೇ. 4ರಷ್ಟು ಬೆಳವಣಿಗೆ ಆಗಬಹುದು ಎಂದು ಭಾವಿಸಲಾಗಿದೆ.

ಕೋವಿಡ್ ಸಾಂಕ್ರಾಮಿಕತೆಯ ತೀವ್ರತೆ ಕಡಿಮೆ ಆಗಿರುವ ಹಿನ್ನೆಲೆಯಲ್ಲಿ ದೈಹಿಕ ಸಂಪರ್ಕವಿರುವ ಸೇವೆಗಳ ಪ್ರಮಾಣ ಹೆಚ್ಚುತ್ತಿರುವುದು ನಗರವಾಸಿಗಳ ಅನುಭೋಗಕ್ಕೆ ಪುಷ್ಟಿ ಸಿಗುವ ಸಾಧ್ಯತೆ ಇದೆ. ಕೃಷಿ ವಲಯದಲ್ಲಿ ಕಾಣುತ್ತಿರುವ ಪ್ರಗತಿ ಮತ್ತು ಉತ್ತಮ ಮುಂಗಾರು ಮಳೆ ಸಾಧ್ಯತೆ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದಲ್ಲಿ ಆರ್ಥಿಕ ಚಟುವಟಿಕೆಗಳು ಗರಿಗೆದರಬಹುದು ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ನಿರೀಕ್ಷಿಸಿದ್ದಾರೆ.

RBI Keeps Real GDP Forecast Unchanged at 7.2 pc

ಆರ್‌ಬಿಐ ಸದ್ಯ ಸತತ ಎರಡು ಬಾರಿ ಬಡ್ಡಿ ದರಗಳನ್ನು ಹೆಚ್ಚಿಸಿದೆ. ಕೋವಿಡ್ ಸಾಂಕ್ರಾಮಿಕ ಸ್ಥಿತಿ ವಕ್ಕರಿಸಿಕೊಂಡ ಬಳಿಕ ಆರ್‌ಬಿಐ ಹಲವು ಬಾರಿ ರೆಪೋ ಮತ್ತಿತರ ದರಗಳನ್ನು ಇಳಿಸುತ್ತಾ ಬಂದಿತ್ತು. ಕಳೆದ ಬಾರಿ ನಡೆದ ಎಂಪಿಸಿ ಸಭೆಯಲ್ಲಿ ರೆಪೋ ದರ ಏರಿಸುವ ನಿರ್ಧಾರ ಮಾಡಲಾಯಿತು. ಇಂದು ಬುಧವಾರವೂ ಕೂಡ ರೆಪೋ ದರದ ಏರಿಕೆ ಆಗಿದೆ. ಹಣದುಬ್ಬರವನ್ನು ನಿಯಂತ್ರಣಕ್ಕೆ ತರಲು ಆರ್‌ಬಿಐ ತೆಗೆದುಕೊಂಡ ಈ ಕ್ರಮ ನಿರೀಕ್ಷಿತವಾಗಿಯೇ ಇದೆ.

ನಿನ್ನೆ ಮಂಗಳವಾರ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಭಾರತದ ಜಿಡಿಪಿ ವೃದ್ಧಿ ದರ ವಿಚಾರದಲ್ಲಿ ತಾನು ಮಾಡಿದ್ದ ಅಂದಾಜನ್ನು ತುಸು ತಗ್ಗಿಸಿದೆ. ಈ ಹಿಂದೆ ಶೇ. 9ರಷ್ಟು ಜಿಡಿಪಿ ಬೆಳವಣಿಗೆ ಆಗಬಹುದು ಎಂದು ನಿರೀಕ್ಷಿಸಿದ್ದ ಐಎಂಎಫ್ ಇದೀಗ ಆ ದರವನ್ನು ಶೇ. 8.2ಕ್ಕೆ ತಗ್ಗಿಸಿ ಅಂದಾಜು ವ್ಯಕ್ತಪಡಿಸಿದೆ.

RBI Keeps Real GDP Forecast Unchanged at 7.2 pc

ಮೂಡೀಸ್, ಎಸ್ ಅಂಡ್ ಪಿ ಗ್ಲೋಬರ್ ರೇಟಿಂಗ್, ಫಿಚ್, ಎಡಿಬಿ ಮೊದಲಾದ ಸಂಸ್ಥೆಗಳೂ ಕೂಡ ಭಾರತದ ಜಿಡಿಪಿ ನಿರೀಕ್ಷಿತ ಮಟ್ಟದಲ್ಲಿ ವೃದ್ಧಿಕಾಣುವುದಿಲ್ಲ ಎಂಬ ಅಭಿಪ್ರಾಯಕ್ಕೆ ಬಂದಿವೆ.

(ಒನ್ಇಂಡಿಯಾ ಸುದ್ದಿ)

English summary
Reserve Bank of India has retained its forecast of Real GDP rate for India unchanged at 7.2% in 2022-23 financial year. Most of the global rating agencies have downed their forecast in the projection of India GDP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X