ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ದುರ್ಬಳಕೆ ತಡೆಯಲು ಆರ್‌ಬಿಐ ಮಹತ್ವದ ನಿರ್ಧಾರ

|
Google Oneindia Kannada News

ನವದೆಹಲಿ, ಜನವರಿ 16: ದೇಶದಲ್ಲಿ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳ ಬಳಕೆಯಾಗುತ್ತಿರುವ ಸ್ವರೂಪದಲ್ಲಿ ಭಾರಿ ಬದಲಾವಣೆಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ಜಾರಿಗೊಳಿಸಿದೆ.

ಕಾರ್ಡ್ ವ್ಯವಹಾರಗಳಲ್ಲಿ ಭದ್ರತೆಯನ್ನು ಹೆಚ್ಚಿಸಲು ಮತ್ತು ಬಳಕೆದಾರ ಸ್ನೇಹಿಯಾಗುವಂತೆ ಸುಧಾರಿಸಲು ಆರ್‌ಬಿಐ, ಬ್ಯಾಂಕುಗಳು ಮತ್ತು ಇತರೆ ಹಣಕಾಸು ಸಂಸ್ಥೆಗಳಿಗೆ ಹೊಸ ನಿಯಮಗಳನ್ನು ಹೊರಡಿಸಿದೆ.

ಜ. 1ರಿಂದ ಎಸ್ಬಿಐನ ಯಾವ ಯಾವ ಡೆಬಿಟ್ ಕಾರ್ಡ್ ವರ್ಕ್ ಆಗಲ್ಲಜ. 1ರಿಂದ ಎಸ್ಬಿಐನ ಯಾವ ಯಾವ ಡೆಬಿಟ್ ಕಾರ್ಡ್ ವರ್ಕ್ ಆಗಲ್ಲ

ಕಾರ್ಡ್‌ಗಳ ವಿತರಣೆ ಮತ್ತು ಮರುವಿತರಣೆ ಸಂದರ್ಭದಲ್ಲಿ ಭಾರತದೊಳಗೆ ಎಟಿಎಂಗಳು ಮತ್ತು ಪಾಯಿಂಟ್ ಆಫ್ ಸೇಲ್ ಯಂತ್ರಗಳಲ್ಲಿ (ಪಿಓಎಸ್) ಬಳಕೆದಾರರು ಹಣದ ವಹಿವಾಟು ನಡೆಸಲು ಅವಕಾಶ ನೀಡುವಂತೆ ಸುತ್ತೋಲೆಯಲ್ಲಿ ಸೂಚಿಸಲಾಗಿದೆ.

ಹಾಲಿ ಇರುವ ಕಾರ್ಡ್‌ಗಳಲ್ಲಿ ಕಾರ್ಡ್‌ಗಳನ್ನು ದೇಶಿ ಅಥವಾ ಅಂತಾರಾಷ್ಟ್ರೀಯ ವ್ಯವಹಾರಗಳಲ್ಲಿ ಬಳಸಬೇಕೇ ಅಥವಾ ಬಳಸದಂತೆ ತಡೆಯಬೇಕೇ (ಆನ್ ಮತ್ತು ಆಫ್) ಎಂಬುದನ್ನು ನಿರ್ಧರಿಸುವ ಅವಕಾಶವನ್ನು ಬಳಕೆದಾರರು ನೀಡಲಾಗಿದೆ. ಕಾರ್ಡ್‌ಗಳನ್ನು ತಮ್ಮ ಅಗತ್ಯಕ್ಕೆ ಅನುಗುಣವಾಗಿ ಬಳಕೆದಾರರು ಸಕ್ರಿಯ ಅಥವಾ ನಿಷ್ಕ್ರಿಯಗೊಳಿಸುವ ಅವಕಾಶವನ್ನು ಪಡೆದುಕೊಳ್ಳಲಿದ್ದಾರೆ.

ವಹಿವಾಟುಗಳ ಸ್ವರೂಪದ ಬದಲಾವಣೆ

ವಹಿವಾಟುಗಳ ಸ್ವರೂಪದ ಬದಲಾವಣೆ

ಕಾರ್ಡ್ ಬಳಕೆದಾರರು ದೇಶಿ ಅಥವಾ ಅಂತಾರಾಷ್ಟ್ರೀಯ ವ್ಯವಹಾರಗಳಲ್ಲಿ ಕಾರ್ಡ್‌ಗಳನ್ನು ಬಳಸದೆ ವಹಿವಾಟು ನಡೆಸಲು, ಅಂತಾರಾಷ್ಟ್ರೀಯ ವ್ಯವಹಾರಗಳಲ್ಲಿ ಕಾರ್ಡ್ ಬಳಸಿ ವಹಿವಾಟು ನಡೆಸಲು ಮತ್ತು ಚಿಪ್ ಕಾರ್ಡ್ ಅಥವಾ ಕಾಂಟ್ಯಾಕ್ಟ್‌ಲೆಸ್ ವಹಿವಾಟುಗಳಲ್ಲಿ ತಮಗೆ ಬೇಕಿರುವುದನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ಅವರಿಗೆ ಕಾರ್ಡ್ ವಿತರಕ ಬ್ಯಾಂಕುಗಳು ನೀಡಬೇಕು ಎಂದು ಸೂಚಿಸಿದೆ.

ಆನ್‌ಲೈನ್ ವಹಿವಾಟುಗಳಿಗೆ ಬಳಕೆಯಾಗದೆ ಇರುವ ಹಾಲಿ ಕಾರ್ಡ್‌ಗಳನ್ನು ಭದ್ರತೆಯ ಕಾರಣದಿಂದ ಸ್ಥಗಿತಗೊಳಿಸುವುದು ಕಡ್ಡಾಯ ಎಂದು ನಿರ್ದೇಶಿಸಲಾಗಿದೆ.

ಬಳಸದೆ ಕಾರ್ಡ್‌ಗಳು ಬ್ಲಾಕ್

ಬಳಸದೆ ಕಾರ್ಡ್‌ಗಳು ಬ್ಲಾಕ್

ಕಾರ್ಡ್ ಬಳಕೆದಾರರು ಇದುವರೆಗೂ ಯಾವುದೇ ಆನ್‌ಲೈನ್ ವಹಿವಾಟು ನಡೆಸದೆಯೇ ಇದ್ದಲ್ಲಿ ಅವರ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳು ಮಾರ್ಚ್ 16ರಿಂದ ಬ್ಲಾಕ್ ಆಗಲಿವೆ. ಒಮ್ಮೆ ಬ್ಲಾಕ್ ಆದರೆ ಬಳಕೆದಾರರು ತಮ್ಮ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ ಬಳಸಿ ನಗದುರಹಿತ ವಹಿವಾಟನ್ನು ನಡೆಸಲು ಆ ಆಯ್ಕೆಯಾಗಿ ಬ್ಯಾಂಕ್‌ಗೆ ಪುನಃ ಮನವಿ ಮಾಡಬೇಕಾಗುತ್ತದೆ. ಹೀಗೆ ಬ್ಲಾಕ್ ಆದ ಕಾರ್ಡ್‌ಗಳಿಂದ ಎಟಿಎಂ ಮೂಲಕ ಹಣ ಪಡೆಯಲು ಅವಕಾಶ ಮುಂದುವರಿಯುತ್ತದೆ.

ಇ -ಕೆವೈಸಿ ಪ್ರಕ್ರಿಯೆಗೂ ಡಿಜಿ ಲಾಕರ್ ಬಳಸಲು ಆರ್ ಬಿಐ ಅನುಮತಿಇ -ಕೆವೈಸಿ ಪ್ರಕ್ರಿಯೆಗೂ ಡಿಜಿ ಲಾಕರ್ ಬಳಸಲು ಆರ್ ಬಿಐ ಅನುಮತಿ

ಆಯ್ಕೆಯ ಅವಕಾಶ ಗ್ರಾಹಕರಿಗೆ

ಆಯ್ಕೆಯ ಅವಕಾಶ ಗ್ರಾಹಕರಿಗೆ

ಕಾರ್ಡ್‌ಗಳನ್ನು ಸಕ್ರಿಯಗೊಳಿಸುವ, ಸ್ಥಗಿತಗೊಳಿಸುವ, ಅಂತಾರಾಷ್ಟ್ರೀಯ ವಹಿವಾಟು, ಪಿಓಎಸ್, ಎಟಿಎಂ, ಆನ್‌ಲೈನ್, ಚಿಪ್ ಕಾರ್ಡ್ ವಹಿವಾಟುಗಳನ್ನು ಮಿತಿಗೊಳಿಸುವ ಅವಕಾಶ ಗ್ರಾಹಕರಿಗೆ ನೀಡಬೇಕು. ಈ ಬದಲಾವಣೆಗಳನ್ನು ಮಾಡಿಕೊಳ್ಳಲು ಅವರಿಗೆ ಹಲವು ಆಯ್ಕೆಗಳನ್ನು ನೀಡಬೇಕು. ಈ ಸೌಲಭ್ಯವನ್ನು ದಿನದ 24 ಗಂಟೆಯೂ ನೀಡಬೇಕು.

ಗ್ರಾಹಕರಿಗೆ ಮಾಹಿತಿ ನೀಡಬೇಕು

ಗ್ರಾಹಕರಿಗೆ ಮಾಹಿತಿ ನೀಡಬೇಕು

ಮೊಬೈಲ್ ಅಪ್ಲಿಕೇಷನ್, ಇಂಟರ್ನೆಟ್ ಬ್ಯಾಂಕಿಂಗ್, ಎಟಿಎಂಗಳು, ಇಂಟರಾಕ್ಟೀವ್ ವಾಯ್ಸ್ ರೆಸ್ಪಾನ್ಸ್ (ಐವಿಆರ್) ಮುಂತಾದವುಗಳ ಮೂಲಕ 24*7ರ ಅವಧಿಯಲ್ಲಿ ಈ ಆಯ್ಕೆಗಳ ಬದಲಾವಣೆಗೆ ಅವಕಾಶ ನೀಡಬೇಕು. ಹಾಗೆಯೇ ಇದಕ್ಕೆ ಬ್ಯಾಂಕ್ ಶಾಖೆ ಮತ್ತು ಕಚೇರಿಗಳಲ್ಲಿಯೂ ವ್ಯವಸ್ಥೆ ಕಲ್ಪಿಸಬೇಕು ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.

ಭವಿಷ್ಯದಲ್ಲಿ ಡೆಬಿಟ್ ಕಾರ್ಡ್‌ಗಳ ಬಳಕೆಯೂ ಸ್ಥಗಿತ: ಎಸ್‌ಬಿಐ ಇಂಗಿತಭವಿಷ್ಯದಲ್ಲಿ ಡೆಬಿಟ್ ಕಾರ್ಡ್‌ಗಳ ಬಳಕೆಯೂ ಸ್ಥಗಿತ: ಎಸ್‌ಬಿಐ ಇಂಗಿತ

ಕಾರ್ಡ್‌ನ ಯಾವುದೇ ಸ್ಥಿತಿಯಲ್ಲಿ ಬದಲಾವಣೆಗಳಾದರೆ ಕಾರ್ಡ್ ಬಳಕೆದಾರರಿಗೆ ಎಸ್‌ಎಂಎಸ್, ಇ-ಮೇಲ್ ಮೂಲಕ ಅದರ ಮಾಹಿತಿ, ಅಲರ್ಟ್, ಸ್ಥಿತಿಗಳ ವಿವರಗಳನ್ನು ಬ್ಯಾಂಕ್ ನೀಡಬೇಕು.

ಮಾರ್ಚ್ 16ರಿಂದ ಜಾರಿ

ಮಾರ್ಚ್ 16ರಿಂದ ಜಾರಿ

ಮಾರ್ಚ್ 16ರಿಂದ ಹೊಸ ನಿಯಮಗಳು ಜಾರಿಗೆ ಬರಲಿವೆ. ದೇಶದಲ್ಲಿ 80 ಕೋಟಿ ಡೆಬಿಟ್ ಕಾರ್ಡ್ ಮತ್ತು 5 ಕೋಟಿ ಕ್ರೆಡಿಟ್ ಕಾರ್ಡ್‌ಗಳು ಬಳಕೆಯಾಗುತ್ತಿವೆ. ಈ ಎಲ್ಲ ಕಾರ್ಡ್‌ಗಳಿಗೂ ಹೊಸ ನಿಯಮ ಅನ್ವಯವಾಗಿವೆ. ಆದರೆ ಮೊದಲೇ ಪಾವತಿ ಮಾಡಲಾಗಿರುವ ಉಡುಗೊರೆ ಕಾರ್ಡ್‌ಗಳು, ಸಾರ್ವಜನಿಕ ಸಾರಿಗೆಗಳಲ್ಲಿ ಬಳಕೆಯಾಗುವ ಕಾರ್ಡ್‌ಗಳಿಗೆ ಈ ನಿಯಮ ಅನ್ವಯವಾಗುವುದಿಲ್ಲ ಎಂದಿರುವ ಆರ್‌ಬಿಐ, ಹೊಸ ನಿಯಮಗಳನ್ನು ಗ್ರಾಹಕರಿಗೆ ತಿಳಿಸಲು ಕಾರ್ಡ್ ವಿತರಕಾ ಸಂಸ್ಥೆಗಳು ವ್ಯಾಪಕ ಪ್ರಚಾರ ನೀಡಬೇಕು ಎಂದು ಸೂಚಿಸಿದೆ.

English summary
The Reserve Bank Of India on Wednesday issued a new debit, credit card rules for banks and other financial institutions to improve security of card transactions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X