ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೆಪೋ ದರದಲ್ಲಿ ಶೇ. 0.25 ಏರಿಕೆ ಮಾಡಿದ ರಿಸರ್ವ್ ಬ್ಯಾಂಕ್

By Sachhidananda Acharya
|
Google Oneindia Kannada News

ಬೆಂಗಳೂರು, ಜೂನ್ 6: ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರಗಳಲ್ಲಿ 25 ಅಂಕ ಏರಿಕೆ ಮಾಡಿದೆ. ಹೀಗಾಗಿ ಬ್ಯಾಂಕ್‌ಗಳಿಗೆ ರಿಸರ್ವ್ ಬ್ಯಾಂಕ್ ನಿಂದ ನೀಡುವ ಸಾಲದ ಬಡ್ಡಿ ದರ (ರೆಪೋ) ಶೇ 6.25ಕ್ಕೆ ಏರಿಕೆಯಾಗಿದೆ.

ಮತ್ತು ಕಮರ್ಷಿಯಲ್ ಬ್ಯಾಂಕ್‌ಗಳಿಂದ ಪಡೆಯುವ ಸಾಲಕ್ಕೆ ಪಾವತಿಸುವ ಬಡ್ಡಿ ದರವನ್ನು (ರಿವರ್ಸ್‌ ರೆಪೋ) ಶೇ. 6.50ಗೆ ಏರಿಕೆ ಮಾಡಿದೆ. ರೆಪೊ ದರ ಏರಿಕೆ ಆಗಿರುವುದರಿಂದ ಗೃಹ ಸಾಲದ ಬಡ್ಡಿ ದರದಲ್ಲಿ ಏರಿಕೆಯಾಗಲಿದೆ.

ಮುಂಬೈನ ಈ ಬ್ಯಾಂಕ್ ಗ್ರಾಹಕರು 1,000ಕ್ಕಿಂತ ಹೆಚ್ಚು ಡ್ರಾ ಮಾಡಂಗಿಲ್ಲ! ಮುಂಬೈನ ಈ ಬ್ಯಾಂಕ್ ಗ್ರಾಹಕರು 1,000ಕ್ಕಿಂತ ಹೆಚ್ಚು ಡ್ರಾ ಮಾಡಂಗಿಲ್ಲ!

ಈ ಹಿಂದೆ ಡಿಸೆಂಬರ್ ನಿಂದ ರೆಪೋ ದರದಲ್ಲಿ ಆರ್‌ಬಿಐ ಯಾವುದೇ ಬದಲಾವಣೆ ಮಾಡಿರಲಿಲ್ಲ. ಇದೀಗ ಶೇಕಡಾ 0.25 ರಷ್ಟು ರೆಪೋದರವನ್ನು ಏರಿಕೆ ಮಾಡಲಾಗಿದೆ.

RBI hikes Repo Rate by 25 bps to 6.25%. Reverse Repo rate at 6.50%

ರಿಸರ್ವ್‌ ಬ್ಯಾಂಕ್‌ ಆಫ್ ಇಂಡಿಯಾವು ತನ್ನ ಹಣಕಾಸು ನೀತಿ ಪರಾಮರ್ಶೆಯಲ್ಲಿ ಹಣದುಬ್ಬರ ದರ 2018-19ರ ಮೊದಲಾರ್ಧದಲ್ಲಿ ಶೇಕಡಾ 4.8 ರಿಂದ 4.9 ರಷ್ಟು ಇರಲಿದೆ ಎಂದು ಅಂದಾಜು ಮಾಡಿದೆ. ದ್ವಿತೀಯಾರ್ಧದಲ್ಲಿ ಶೇಕಡಾ 4.7 ರಷ್ಟು ಹಣದುಬ್ಬರ ದರ ಇರಲಿದೆ ಎಂದು ಬ್ಯಾಂಕ್ ಹೇಳಿದೆ.

ಏಪ್ರಿಲ್ 16ರಿಂದ ಚಿನ್ನದ ಬಾಂಡ್ ಯೋಜನೆ ಆರಂಭ ಏಪ್ರಿಲ್ 16ರಿಂದ ಚಿನ್ನದ ಬಾಂಡ್ ಯೋಜನೆ ಆರಂಭ

ಜಿಡಿಪಿಯನ್ನೂ ಆರ್.ಬಿ.ಐ ಅಂದಾಜಿಸಿದ್ದು 2018-19ನೇ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ ಶೇಕಡಾ 7.5 - 7.6 ಮತ್ತು ದ್ವಿತೀಯಾರ್ಧದಲ್ಲಿ ಶೇಕಡಾ 7.3 ರಿಂದ 7.4 ಇರಲಿದೆ ಎಂದು ಹೇಳಿದೆ.

English summary
Reserve Bank of India (RBI) hikes Repo Rate by 25 bps to 6.25% and Reverse RepR rate at 6.50%
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X