• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಾರ್ಡ್‌ಲೆಸ್‌ ವಹಿವಾಟು ಮಿತಿ 2,000 ದಿಂದ 5,000 ರೂಪಾಯಿಗೆ ಏರಿಕೆ

|
Google Oneindia Kannada News

ನವದೆಹಲಿ, ಡಿಸೆಂಬರ್ 04: ಜನರು ಇನ್ಮುಂದೆ 5 ಸಾವಿರ ರೂಪಾಯಿವರೆಗೆ ಸಂಪರ್ಕವಿಲ್ಲದೆ ವಹಿವಾಟು ನಡೆಸಬಹುದಾಗಿದೆ. ಶುಕ್ರವಾರ ನಡೆದ ದ್ವೈಮಾಸಿಕ ಹಣಕಾಸು ನೀತಿ ಪರಿಶೀಲನೆ ಬಳಿಕ ಆರ್‌ಬಿಐ ವಹಿವಾಟು ಮಿತಿಯನ್ನು ಹೆಚ್ಚಿಸಿದೆ.

ಎಂಪಿಸಿ ಸಭೆಯಲ್ಲಿ ಈ ಹಿಂದಿನ 2000 ರೂಪಾಯಿ ಮಿತಿಯನ್ನು 5000 ರೂ.ಗೆ ಹೆಚ್ಚಿಸಲು ನಿರ್ಧರಿಸಲಾಗಿದೆ. ಇದು ಜನವರಿ 1, 2021ರಿಂದ ಕಾರ್ಯರೂಪಕ್ಕೆ ಬರಲಿದೆ.

ರೆಪೋ ದರದಲ್ಲಿ ಬದಲಾವಣೆ ಇಲ್ಲ: ಆರ್‌ಬಿಐನ ಪ್ರಮುಖ ನಿರ್ಧಾರಗಳು ಇಲ್ಲಿದೆರೆಪೋ ದರದಲ್ಲಿ ಬದಲಾವಣೆ ಇಲ್ಲ: ಆರ್‌ಬಿಐನ ಪ್ರಮುಖ ನಿರ್ಧಾರಗಳು ಇಲ್ಲಿದೆ

ಇದರ ಜೊತೆಗೆ ಮುಂದಿನ ಕೆಲವು ದಿನಗಳಲ್ಲಿ ರಿಯಲ್ ಟೈಮ್ ಗ್ರಾಸ್ ಸೆಟಲ್ಮೆಂಟ್ (ಆರ್‌ಟಿಜಿಎಸ್) ವ್ಯವಸ್ಥೆಯನ್ನು 24 ಗಂಟೆಗಳ ಕಾಲ ಲಭ್ಯವಾಗಲಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಶುಕ್ರವಾರ ಹೇಳಿದೆ.

ಆರ್‌ಟಿಜಿಎಸ್ ಪ್ರಸ್ತುತ ಭಾನುವಾರ ಸೇರಿ, ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರಗಳನ್ನು ಹೊರತುಪಡಿಸಿ, ವಾರದ ಎಲ್ಲಾ ಕೆಲಸದ ದಿನಗಳಲ್ಲಿ ಬೆಳಿಗ್ಗೆ 7 ರಿಂದ ಸಂಜೆ 6 ರವರೆಗೆ ಲಭ್ಯವಿದೆ. ಮುಂದಿನ ಕೆಲವು ದಿನಗಳಲ್ಲಿ ಆರ್‌ಟಿಜಿಎಸ್ ವ್ಯವಸ್ಥೆಯನ್ನು ಗ್ರಾಹಕರಿಗೆ 24 × 7 ಲಭ್ಯವಾಗಲಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ತಿಳಿಸಿದ್ದಾರೆ.

ಈ ಮೊದಲಿನ ವಾರದಲ್ಲಿ ಐದು ದಿನಗಳ ಬದಲಿಗೆ ಎಲ್ಲಾ ದಿನಗಳಲ್ಲಿ ಎಇಪಿಎಸ್, ಐಎಂಪಿಎಸ್, ಎನ್‌ಇಟಿಸಿ, ಎನ್‌ಎಫ್‌ಸಿ, ರುಪೇ, ಯುಪಿಐ ವಹಿವಾಟುಗಳನ್ನು ಇತ್ಯರ್ಥಗೊಳಿಸಲು ಅನುಕೂಲವಾಗಲಿದೆ. ಇದು ಪಾವತಿ ವ್ಯವಸ್ಥೆಯನ್ನು ಹೆಚ್ಚು ಪರಿಣಾಮಕಾರಿಯಾಗಿಸುತ್ತದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದರು.

English summary
RBI Governer Shaktikant Das Friday announced Rbi has enhanced limits for contactless card payments from Rs 2000 to Rs 5000.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X