• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ರೆಪೋ ದರ ಹೆಚ್ಚಿಸಿದ ಆರ್‌ಬಿಐ

|
Google Oneindia Kannada News

ಬೆಂಗಳೂರು ಆಗಸ್ಟ 05: ಭಾರತೀಯ ರಿಸರ್ವ ಬ್ಯಾಂಕ್ (ಆರ್‌ಬಿಐ) ಹಣದುಬ್ಬರ ಸರಿದೂಗಿಸುವ ಸಂಬಂಧ ಕೋವಿಡ್ ಸಾಂಕ್ರಾಮಿಕಕ್ಕೂ ಮುನ್ನದ ರೆಪೋ (ಅಲ್ಪಾವಧಿ ಸಾಲದ ದರ) ಮೂಲ ಅಂಕವನ್ನು (ಬೇಸಿಸ್ ಪಾಯಿಂಟ್‌) 50 ಕ್ಕೆ ಹೆಚ್ಚಿಸಿದೆ. ರೆಪೋ ಬಡ್ಡಿದರ ಶೇ.5.40ಕ್ಕೆ ಏರಿಕೆ ಮಾಡುವ ಮೂಲಕ ಆರ್‌ಬಿಐ ಶಾಕ್ ನೀಡಿದೆ.

ಆರ್‌ಬಿಐ ಶುಕ್ರವಾರ ದಿಢೀರನೆ ರೆಪೋ ದರ ಏರಿಕೆ ಮಾಡಿದೆ. ಕೆಲವೇ ದಿನಗಳಲ್ಲಿ ಮೂರನೇ ಬಾರಿಗೆ ರೆಪೋ ದರ ಏರಿಕೆ ಕಂಡಿದೆ. ಹಣದುಬ್ಬರ ವ್ಯವಸ್ಥೆಯಲ್ಲಿನ ಕೊರತೆಯಿಂದಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ತಿಳಿಸಿದ್ದಾರೆ.

ಕಳೆದ ಜೂನ್ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರವು ಶೇಕಡಾ 7.1ರಷ್ಟು ಇತ್ತು. ಇದು ಆರ್‌ಬಿಐನ ಶೇ.2ರಿಂದ6 ಮಧ್ಯಮ ಅವಧಿಯ ಗುರಿಗಿಂತಲೂ ಅಧಿಕವಾಗಿದೆ. ಈ ಆತಂಕದಿಂದಲೇ ಭಾರತೀಯ ರಿಸರ್ವ್ ಬ್ಯಾಂಕ್‌ನ ವಿತ್ತೀಯ ನೀತಿ ಸಮಿತಿಯು (ಎಂಪಿಸಿ) ಪ್ರಮುಖ ಅಲ್ಪಾವಧಿಯ ಸಾಲದ ದರ ಅಥವಾ ರೆಪೋ ದರದ ಮೂಲಾಂಕವನ್ನು 50 ಹೆಚ್ಚಿಸುವ ಮೂಲಕ ಜನರಿಗೆ ಬಡ್ಡಿದರದ (ಶೇ.5.40) ಶಾಕ್ ನೀಡಿದೆ.

ಸದ್ಯದ ಈ ಶೇ.5.40 ಏರಿರುವ ಬಡ್ಡಿದರವು ಕೋವಿಡ್‌ಗೂ ಮುನ್ನ ಶೇ.5.15ಕ್ಕೆ ಏರಿಕೆ ಆಗಿತ್ತು. ಇದೀಗ ಪೂರ್ವ ಕೋವಿಡ್ ಮಟ್ಟಕ್ಕಿಂತಲೂ ಅಧಿಕ ಏರಿಕೆ ಕಂಡಿದೆ ಎನ್ನಬಹುದಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್‌ನ ವಿತ್ತೀಯ ನೀತಿ ಸಮಿತಿಯು (ಎಂಪಿಸಿ) ಪ್ರಮುಖ ಅಲ್ಪಾವಧಿಯ ಸಾಲದ ದರ ಏರಿಕೆಗೆ ಎಲ್ಲ ಆರು ಸದಸ್ಯರು ಒಪ್ಪಿ ಒಮ್ಮತದಿಂದ ಸಹಿ ಹಾಕಿದ್ದಾರೆ.

ಅಲ್ಲದೇ ಆರ್‌ಬಿಐ ಮೇ ತಿಂಗಳಲ್ಲಿ ನಡೆಸಿದ ಸಭೆಯಲ್ಲಿ 40ಬಿಪಿಎಸ್ ಹೆಚ್ಚಳದೊಂದಿಗೆ ಮಾರುಕಟ್ಟೆಯಲ್ಲಿ ಹಿಡಿತ ಸಾಧಿಸಿತ್ತು. ನಂತರ ಜೂನ್‌ನಲ್ಲಿ 50 ಬಿಪಿಎಸ್ ಹೆಚ್ಚಳದೊಂದಿಗೆ ಬೆಲೆಗಳು ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗುವ ಲಕ್ಷಣಗಳು ಕಂಡು ಬಂದಿವೆ. ಈ ಮೂಲಕ ಕೇಂದ್ರೀಯ ಬ್ಯಾಂಕ್ ಎದುರಿಸುತ್ತಿರುವ ಹಣದುಬ್ಬರದ ಸಂದಿಗ್ಧತೆ, ನೀಡಬೇಕಾದ ಆರ್ಥಿಕ ಕಾಳಜಿ ಕುರಿತು ಶಕ್ತಿಕಾಂತ ದಾಸ್ ವಿವರಿಸಿದರು.

ಈ ವರ್ಷದ ಆರಂಭದ ತಿಂಗಳು ಜನವರಿಯಿಂದಲೂ ಆರ್‌ಬಿಐನ ಸಾಮಾನ್ಯ ಶೇ.6ರಷ್ಟು ಹೆಚ್ಚು ಹಣದುಬ್ಬರದ ಕೊರತೆ ಎದುರಾಗಿದ್ದು, ಇಂದಿಗೂ ಆ ಸಮಸ್ಯೆ ಮುಂದುವರಿದಿದೆ. ಸಗಟು ಬೆಲೆ ಸೂಚ್ಯಂಕ ಆಧರಿಸಿ ಹಣದುಬ್ಬರ ಸತತ 15 ತಿಂಗಳವರೆಗೆ ಎರಡಂಕಿಯಲ್ಲಿ ಕಂಡು ಬಂದಿತ್ತು. ಇನ್ನು ಜೂನ್‌ ತಿಂಗಳಲ್ಲಿ ಡಬ್ಲುಪಿಐ ರೀಡಿಂಗ್ ಪ್ರಮಾಣ ಶೇ. 15.18ರಷ್ಟಿತ್ತು.

RBI Hikes again key lending rate by 50 basis points

ಇತ್ತೀಚಿಗೆ ಆರ್‌ಬಿಐ ಕೈಗೊಳ್ಳುತ್ತಿರುವ ಕ್ರಮಗಳು ಬ್ಯಾಂಕ್ ಆಫ್ ಇಂಗ್ಲೆಂಡ್ ದರವನ್ನು ಅನುಸರಿದಂತೆ ಕಾಣುತ್ತದೆ. ಅಲ್ಲಿ ಸಹ 50 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸುವ ಮೂಲಕ ಬಡ್ಡಿದರ 1.75ಕ್ಕೆ ಏರಿಸಲಾಗಿತ್ತು. ಇದು ಅತೀ ದೊಡ್ಡ ಏರಿಕೆ ಎಂದು ಆರ್ಥಿಕ ತಜ್ಞರು ಅಭಿಪ್ರಯಾಪಟ್ಟಿದ್ದಾರೆ. ಕಳೆದ ಜುಲೈ ತಿಂಗಳು ಯುಎಸ್ ಫೆಡರಲ್ ರಿಸರ್ವ್ ತನ್ನ ಎರಡನೇ ಸತತ ಶೇ.0.75 ಮೂಲ ಪಾಯಿಂಟ್ ಬಡ್ಡಿದರವನ್ನು ಹೆಚ್ಚಿಸಿದ್ದು ಸಹ ಪರಿಣಾಮ ಬೀರಿತ್ತು.

Recommended Video

   ಹಿಂಬದಿ ಸೀಟ್‌ನಲ್ಲಿ ಪುರುಷರು ಓಡಾಡುವುದಕ್ಕೆ ಕೆಲವು ದಿನಗಳ ಕಾಲದವರೆಗೆ ನಿರ್ಬಂಧ | *Politics | Oneindia Kannada

   ಇದೇ ರೀತಿ ಮುಂದಿನ ದಿನಗಳಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಆರ್ಥಿಕತೆ ದೃಷ್ಟಿಯಿಂದ ಕೈಗೊಳ್ಳುವ ನಿರ್ಧಾರಗಳು, ಅವರು ಗಮನಹರಿಸುವ ಅಂಶಗಳ ಮೇಲೆ ಜನರ ದೃಷ್ಟಿ ಕೇಂದ್ರಿಕರಿಸಿದ್ದಾರೆ ಎಂದು ತಿಳಿದು ಬಂದಿದೆ.

   English summary
   Reserve Bank of India (RBI) Hiked key lending rate by 50 basis points.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X