ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಊರ್ಜಿತ್ ಪಟೇಲ್ ರಾಜೀನಾಮೆ: ಚೌಕಿದಾರನ ಹಲ್ಲೆಯ ಪ್ರತಿಫಲ'

|
Google Oneindia Kannada News

ನವದೆಹಲಿ, ಡಿಸೆಂಬರ್ 10: ಭಾರತೀಯ ರಿಸರ್ವ್ ಬ್ಯಾಂಕ್‌ನ ಗವರ್ನರ್ ಊರ್ಜಿತ್ ಪಟೇಲ್ ರಾಜೀನಾಮೆ ರಾಜಕೀಯ ರಂಗದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಆರ್ ಬಿಐ ಮತ್ತು ಸರ್ಕಾರದ ನಡುವಿನ ಬಿಕ್ಕಟ್ಟು ತೀವ್ರ ಸ್ವರೂಪಕ್ಕೆ ತಲುಪಿದ್ದಾಗ ಊರ್ಜಿತ್ ಪಟೇಲ್ ಕಳೆದ ತಿಂಗಳೇ ರಾಜೀನಾಮೆ ನೀಡಲಿದ್ದಾರೆ ಎಂಬ ಸುದ್ದಿ ಹರಡಿತ್ತು. ಆದರೆ, ಸರ್ಕಾರ ನಡೆಸಿದ ಮಾತುಕತೆ ಬಳಿಕ ಈ ಸುದ್ದಿ ತಣ್ಣಗಾಗಿತ್ತು.

ಆರ್ ಬಿಐ ಗವರ್ನರ್ ಸ್ಥಾನ ತೊರೆದ ಊರ್ಜಿತ್ ಪಟೇಲ್ಆರ್ ಬಿಐ ಗವರ್ನರ್ ಸ್ಥಾನ ತೊರೆದ ಊರ್ಜಿತ್ ಪಟೇಲ್

ಸರ್ಕಾರ ಹಾಗೂ ಆರ್ ಬಿಐ ನಡುವೆ ಎಲ್ಲವೂ ಸರಿಯಿಲ್ಲ ಎಂಬುದು ಪ್ರಚಲಿತದಲ್ಲಿದ್ದರೂ ಊರ್ಜಿತ್ ಪಟೇಲ್ ರಾಜೀನಾಮೆ ನಿರ್ಧಾರದಿಂದ ಹಿಂದಕ್ಕೆ ಸರಿದಿದ್ದಾರೆ ಎಂದೇ ಹೇಳಲಾಗಿತ್ತು. ಈಗ ಊರ್ಜಿತ್ ಅಚ್ಚರಿ ನಿರ್ಧಾರ ತೆಗೆದುಕೊಂಡಿದ್ದು, ಸರ್ಕಾರಕ್ಕೆ ಮುಜುಗರ ಉಂಟಾಗಿದೆ.

ಆದರೆ, ಈ ಘಟನೆ ಕಾಂಗ್ರೆಸ್ ಮತ್ತು ಇತರೆ ಪ್ರತಿಪಕ್ಷಗಳ ಪಾಲಿಗೆ ಅಸ್ತ್ರವಾಗಿ ದೊರೆತಿದೆ. ಟ್ವಿಟ್ಟರ್‌ನಲ್ಲಿ ಪರ-ವಿರೋಧದ ಚರ್ಚೆಗಳು ನಡೆಯುತ್ತಿವೆ.

ಬಿಜೆಪಿಯ ನರೇಂದ್ರ ಮೋದಿ, ಅರುಣ್ ಜೇಟ್ಲಿ ಸೇರಿದಂತೆ ಅನೇಕರು ಊರ್ಜಿತ್ ಅವರ ಸೇವಾವಧಿಯನ್ನು ಶ್ಲಾಘಿಸಿ ಟ್ವೀಟ್ ಮಾಡಿದ್ದರೆ, ಕಾಂಗ್ರೆಸ್ ಹಾಗೂ ಉಳಿದ ವಿರೋಧಪಕ್ಷಗಳು ಮೋದಿ ವಿರುದ್ಧ ಹರಿಹಾಯಲು ಬಳಸಿಕೊಂಡಿವೆ.

ಬ್ಯಾಂಕಿಂಗ್ ವ್ಯವಸ್ಥೆ ಸರಿಪಡಿಸಿದವರು

ಊರ್ಜಿತ್ ಪಟೇಲ್ ವಿಶಾಲ ಆರ್ಥಿಕ ಸಮಸ್ಯೆಗಳ ಬಗ್ಗೆ ಆಳವಾದ ಮತ್ತು ಒಳಗಣ್ಣಿನಿಂದ ಅರ್ಥಮಾಡಿಕೊಳ್ಳಬಲ್ಲ ಸಾಮರ್ಥ್ಯವುಳ್ಳ ಅರ್ಥಶಾಸ್ತ್ರಜ್ಞ. ಗೊಂದಲದಲ್ಲಿದ್ದ ಬ್ಯಾಂಕಿಂಗ್ ವ್ಯವಸ್ಥೆಯನ್ನು ಸೂಕ್ತ ಸ್ಥಿತಿಗೆ ತಂದು ಶಿಸ್ತು ಮೂಡಿಸಿದರು. ಅವರ ನಾಯಕತ್ವದಲ್ಲಿ ಆರ್ ಬಿಐ ಆರ್ಥಿಕ ಸ್ಥಿರತೆ ಸಾಧಿಸಿತು.

ಅವರು ಅಪಾರ ದೃಢತೆಯುಳ್ಳ ವೃತ್ತಿಪರ ವ್ಯಕ್ತಿ. ಡೆಪ್ಯುಟಿ ಗವರ್ನರ್ ಮತ್ತು ಗವರ್ನರ್ ಆಗಿ ಆರ್ ಬಿಐನಲ್ಲಿ ಆರು ವರ್ಷ ಇದ್ದರು. ಅವರನ್ನು ಬಹುವಾಗಿ ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

ಚೌಕಿದಾರನ ಹಲ್ಲೆ

ಆರ್ ಬಿಐ ಗವರ್ನರ್ ಊರ್ಜಿತ್ ಪಟೇಲ್ ರಾಜೀನಾಮೆ ಸಲ್ಲಿಸಿದ್ದಾರೆ. ಇದು ಪ್ರಜಾಪ್ರಭುತ್ವ ಸಂಸ್ಥೆಗಳ ಮೇಲೆ 'ಚೌಕಿದಾರ'ನ ಹಲ್ಲೆಯ ಫಲಿತಾಂಶ ಎಂದು ಕಾಂಗ್ರೆಸ್ ಟೀಕೆ ಮಾಡಿದೆ.

ಕಾಯ್ದಿರಿಸಿದ ದುಡ್ಡು ಕೊಡಲು ಸಾಧ್ಯವಿಲ್ಲ: ಕೇಂದ್ರಕ್ಕೆ ಊರ್ಜಿತ್ ಪಟೇಲ್ ಖಡಕ್ ಹೇಳಿಕೆಕಾಯ್ದಿರಿಸಿದ ದುಡ್ಡು ಕೊಡಲು ಸಾಧ್ಯವಿಲ್ಲ: ಕೇಂದ್ರಕ್ಕೆ ಊರ್ಜಿತ್ ಪಟೇಲ್ ಖಡಕ್ ಹೇಳಿಕೆ

ದೇಶಕ್ಕೆ ನೀಡಿದ ಸೇವೆ

ಊರ್ಜಿತ್ ಪಟೇಲ್ ಅವರು ಆರ್ ಬಿಐ ಗವರ್ನರ್ ಮತ್ತು ಡೆಪ್ಯುಟಿ ಗವರ್ನರ್ ಆಗಿ ತಮ್ಮ ಸಾಮರ್ಥ್ಯದ ಮೂಲಕ ದೇಶಕ್ಕೆ ಸಲ್ಲಿಸಿರುವ ಸೇವೆಯನ್ನು ಸರ್ಕಾರ ಶ್ಲಾಘಿಸುತ್ತದೆ. ಅವರೊಂದಿಗೆ ಇದ್ದು, ಅವರ ಜ್ಞಾನದ ಪ್ರಯೋಜನವನ್ನು ಪಡೆದಿದ್ದು ನನ್ನ ಭಾಗ್ಯ. ಅವರು ಸಾರ್ವಜನಿಕ ಸೇವೆಯಲ್ಲಿ ಇನ್ನಷ್ಟು ಕಾಲ ಇರಲಿ ಎಂದು ಆಶಿಸುತ್ತೇನೆ ಎಂದು ಅರುಣ್ ಜೇಟ್ಲಿ ಹೇಳಿದ್ದಾರೆ.

ಪ್ರತಿಭಟನೆಯ ದ್ಯೋತಕ

ಪ್ರತಿಭಟನೆಯ ದ್ಯೋತಕ

ಊರ್ಜಿತ್ ಪಟೇಲ್ ಅವರ ರಾಜೀನಾಮೆ ಕೇಂದ್ರ ಸರ್ಕಾರದ ನೀತಿಗಳ ವಿರುದ್ಧದ ಪ್ರತಿಭಟನೆಯ ಸಂಕೇತ ಎಂದು ಆರ್ ಬಿಐ ಮಾಜಿ ಗವರ್ನರ್ ರಘುರಾಂ ರಾಜನ್ ವ್ಯಾಖ್ಯಾನಿಸಿದ್ದಾರೆ.

ಆರ್ ಬಿಐನಲ್ಲಿ ನಡೆಯುತ್ತಿರುವ ಘಟನೆಗಳ ಬಗ್ಗೆ ಭಾರತೀಯರೆಲ್ಲರೂ ಗಮನ ಹರಿಸುವುದು ಅಗತ್ಯವಾಗಿದೆ ಎಂದು ಅವರು ಹೇಳಿದ್ದಾರೆ.

ಊರ್ಜಿತ್ ಪಟೇಲ್ ಪ್ರಬುದ್ಧತೆ, ಹಣಕಾಸು ಸಚಿವಾಲಯದ ಪಟ್ಟು; ಗೆದ್ದಿದ್ದು ಯಾರು?ಊರ್ಜಿತ್ ಪಟೇಲ್ ಪ್ರಬುದ್ಧತೆ, ಹಣಕಾಸು ಸಚಿವಾಲಯದ ಪಟ್ಟು; ಗೆದ್ದಿದ್ದು ಯಾರು?

ಆರ್ಥಿಕತೆಗೆ ಕೆಟ್ಟದ್ದು

ಊರ್ಜಿತ್ ಅವರ ರಾಜೀನಾಮೆಯಿಂದ ನಮ್ಮ ಆರ್ಥಿಕತೆ, ಆರ್ ಬಿಐ ಮತ್ತು ಸರ್ಕಾರಕ್ಕೆ ಕೆಡುಕಾಗಲಿದೆ. ಅವರು ಕಡೇಪಕ್ಷ ಜುಲೈವರೆಗೂ, ಮುಂದಿನ ಸರ್ಕಾರ ಅಸ್ತಿತ್ವಕ್ಕೆ ಬರುವವರೆಗಾದರೂ ಅಧಿಕಾರದಲ್ಲಿ ಇರಬೇಕಿತ್ತು. ಪ್ರಧಾನಿ ಅವರನ್ನು ಕರೆದು ಕಾರಣಗಳ ಬಗ್ಗೆ ಚರ್ಚಿಸಬೇಕು ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಸಲಹೆ ನೀಡಿದ್ದಾರೆ.

Array

ಈ ರೀತಿ ನಡೆದಿರಲಿಲ್ಲ

ಆರ್ ಬಿಐ ಇತಿಹಾಸದಲ್ಲಿ ಈ ರೀತಿಯ ಘಟನೆಯನ್ನು ನೋಡಿರಲಿಲ್ಲ. ನರೇಂದ್ರ ಮೋದಿ ಮತ್ತು ಅವರ ಆಪ್ತರಾದ ಅರುಣ್ ಜೇಟ್ಲಿ ಅವರ ಅಧಿಪತ್ಯದಲ್ಲಿ ಸಂಸ್ಥೆಗಳು ನೆಲಕಚ್ಚುತ್ತಿವೆ. ಭಾರತಕ್ಕೆ ಇದು ದುಃಖದ ದಿನ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಹಿಂದೆಂದೂ ಬಳಸದ ಆರ್ ಬಿಐ ಕಾಯ್ದೆಯ ಸೆಕ್ಷನ್ 7 ಈಗಿನ ಸರಕಾರಕ್ಕೆ ಏಕೆ?ಹಿಂದೆಂದೂ ಬಳಸದ ಆರ್ ಬಿಐ ಕಾಯ್ದೆಯ ಸೆಕ್ಷನ್ 7 ಈಗಿನ ಸರಕಾರಕ್ಕೆ ಏಕೆ?

ಕಠಿಣ ಕೆಲಸ

ನಿರ್ಮಿಸುತ್ತಿರುವ ಆರ್ ಬಿಐ ಗವರ್ನರ್ ಊರ್ಜಿತ್ ಪಟೇಲ್ ಅವರು, ತಮ್ಮ ಹಿಂದಿನ ಅಧಿಕಾರಿ ರಘುರಾಮ್ ರಾಜನ್ ಬಿಟ್ಟುಹೋಗಿದ್ದ ಎನ್ ಪಿಎ ಮತ್ತು ಬ್ಯಾಂಕಿಂಗ್‌ನ ಅವ್ಯವಸ್ಥೆಗಳನ್ನು ಸರಿಪಡಿಸುವ ಕಠಿಣ ಕೆಲಸ ಎದುರಿಸಿದ್ದರು. ಅವರೊಂದಿಗಿನ ನನ್ನ ಎಲ್ಲ ಮಾತುಕತೆಗಳೂ ಸಕಾರಾತ್ಮಕವಾಗಿತ್ತು. ಅವರ ಭವಿಷ್ಯ ಉಜ್ವಲವಾಗಿರಲಿ ಎಂದು ಸಂಸದ ರಾಜೀವ್ ಚಂದ್ರಶೇಖರ್ ಟ್ವೀಟ್ ಮಾಡಿದ್ದಾರೆ.

ಅಚ್ಚರಿಯಾಗಿಲ್ಲ, ಬೇಸರ

ಡಾ. ಊರ್ಜಿತ್ ಪಟೇಲ್ ಅವರ ರಾಜೀನಾಮೆಯಿಂದ ಅಚ್ಚರಿಯಾಗಿಲ್ಲ ಆದರೆ, ಬೇಸರವಿದೆ. ಈ ಸರ್ಕಾರದ ಜೊತೆ ಆತ್ಮ ಗೌರವವುಳ್ಳ ವಿದ್ವಾಂಸ ಅಥವಾ ತಜ್ಞರು ಕೆಲಸ ಮಾಡುವುದು ಸಾಧ್ಯವಿಲ್ಲ ಎಂದು ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಟೀಕಿಸಿದ್ದಾರೆ.

ವಿಧ್ವಂಸಕ ಕೃತ್ಯ

ಊರ್ಜಿತ್ ಪಟೇಲ್ ಅವರ ರಾಜೀನಾಮೆಯು ನರೇಂದ್ರ ಮೋದಿ ಅವರು ಸಂಸ್ಥೆಗಳನ್ನು ನಾಶ ಮಾಡುವ ತಮ್ಮದೇ ಮೋದಿಫೈಡ್ ಆರ್ಥಿಕ ಸಿದ್ಧಾಂತಗಳ ಪ್ರಯತ್ನದ ಪರಿತಾಂಶ. ಅಪ್ರಬುದ್ಧರ ಅಂತಹ ಪ್ರಯತ್ನಗಳನ್ನು ಯಾವ ಸುಶಿಕ್ಷಿತ ಅರ್ಥಶಾಸ್ತ್ರಜ್ಞರೂ ಸಹಿಸಿಕೊಳ್ಳಲಾರರು ಎಂದು ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿದೆ.

English summary
Narendra Modi, Arun Jaitely and other supporters hails the contribution of outgoing RBI Governor Urjit Patel. But the oppositions slams NDA government for the resignation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X