ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಕ್ತಿಕಾಂತ್ ದಾಸ್ ಸುದ್ದಿಗೋಷ್ಠಿ: ಕೋವಿಡ್ ಸಾಲದ ಸುತ್ತಾ

|
Google Oneindia Kannada News

ನವದೆಹಲಿ, ಮೇ 5: ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಗವರ್ನರ್ ಶಕ್ತಿಕಾಂತ್ ದಾಸ್ ಸುದ್ದಿಗೋಷ್ಠಿ ನಡೆಸಿ, ಅಗತ್ಯ ಆರ್ಥಿಕ ನೆರವು ಘೋಷಿಸಿದರು. ವಿವಿಧ ಸಾಲದ ಕಂತು ಅವಧಿ ವಿಸ್ತರಣೆ ಬಗ್ಗೆ ಘೋಷಣೆ ನಿರೀಕ್ಷೆ ಹೊಂದಲಾಗಿತ್ತು. ಈ ಬಗ್ಗೆ ಯಾವುದೇ ನೇರ ಪರಿಹಾರವನ್ನು ಶಕ್ತಿಕಾಂತ್ ಅವರು ಸೂಚಿಸಿಲ್ಲ.

ಕೋವಿಡ್ 19 ಪರಿಸ್ಥಿತಿಗೆ ತಕ್ಕಂತೆ ರಿಸರ್ವ್ ಬ್ಯಾಂಕ್ ತನ್ನ ಸಂಪನ್ಮೂಲ ನಿಯೋಜಿಸಲಿದೆ. ಕೋವಿಡ್ 19 ಸಂಕಷ್ಟವನ್ನು ಭಾರತ ಸಮರ್ಥವಾಗಿ ಎದುರಿಸುವ ನಂಬಿಕೆ ಇದೆ ಎಂದರು.

ಗ್ರಾಮೀಣ ಭಾಗದಲ್ಲಿ ಉತ್ತಮ ಮುಂಗಾರಿನ ನಿರೀಕ್ಷೆಇದೆ, ಕೋವಿಡ್ 19 ಪರಿಸ್ಥಿತಿಗೆ ತಕ್ಕಂತೆ ಬದಲಾವಣೆ ಮಾಡಿಕೊಳ್ಳಲು ಉತ್ಪಾದಕರು, ಪೂರೈಕೆದಾರರು ಹಾಗೂ ಮಾರುಕಟ್ಟೆ ಮುಂದಾಗಿವೆ ಎಂದು ಹೇಳಿದರು.

RBI Governor Shaktikanta Das Speech Highlights in Kannada

ಮುಖ್ಯಾಂಶಗಳು:

  • ನಿಯಮಿತ ಕೆವೈಸಿ ಡಿಸೆಂಬರ್ 1, 2021ತನಕ ವಿಸ್ತರಿಸಲಾಗಿದೆ.
  • 500 ಕೋಟಿ ರು ತನಕ ಅತಿ ಸಣ್ಣ ಹಣಕಾಸು ಸಂಸ್ಥೆಗಳಿಗೆ ಸಣ್ಣ ಹಣಕಾಸು ಸಂಸ್ಥೆಯಿಂದ ನೆರವು ನೀಡಲು ಅನುಮತಿ.
  • ದೀಪವನ್ನು ಹೊತ್ತಿ ಉರಿಸುವುದಷ್ಟೇ ಅಲ್ಲ, ಸುತ್ತಮುತ್ತಲು ಕತ್ತಲು ತೊಲಗಿಸುವುದು ನಮ್ಮ ಉದ್ದೇಶ ಹಾಗೂ ನಂಬಿಕೆ ಎಂದು ಮಹಾತ್ಮ ಗಾಂಧಿ ಹೇಳಿಕೆ ಉಲ್ಲೇಖಿಸಿದ ದಾಸ್.
  • ಆರ್ಥಿಕ ಸಂಕಷ್ಟಕ್ಕೆ ಸಿಲುಕಿದವರ ಜೀವ ಉಳಿಸುವುದು ಮೊದಲ ಆದ್ಯತೆ.
  • ತುರ್ತು ವೈದ್ಯಕೀಯ ಪರಿಸ್ಥಿತಿ ನಿಭಾಯಿಸಲು, ಲಸಿಕೆ ಉತ್ಪಾದನೆ, ಇತ್ಯಾದಿಗೆ ಬಳಕೆ ಮಾಡಲು 50,000 ಕೋಟಿ ರು ನೀಡಲು ಮುಂದಾದ ಆರ್‌ಬಿಐ.
  • ಮಾರ್ಚ್ 31, 2022 ತನಕ ಕೋವಿಡ್ ಲೋನ್ ಪುಸ್ತಕ ನಿರ್ವಹಿಸಲು ಬ್ಯಾಂಕುಗಳಿಗೆ ನಿರ್ದೇಶನ.
  • ಅಸಂಘಟಿತ ವಲಯದ ಉಪಯೋಗಕ್ಕಾಗಿ 3 ವರ್ಷಗಳ ಅವಧಿಗೆ 10,000 ಕೋಟಿ ರು ಸಣ್ಣ ಮಧ್ಯಮ ಬ್ಯಾಂಕ್ ಗಳಿಗೆ ನೀಡಲಾಗುತ್ತಿದ್ದು, 10 ಲಕ್ಷ ರು ತನಕ ಸಾಲ ಪಡೆಯಬಹುದು.
  • ಮೇ 20ರಂದು ಜಿ ಸ್ಯಾಪ್ 1.0 ಅಡಿಯಲ್ಲಿ ಜಿ -SEC ಖರೀದಿಗೆ ₹35,000 cr ಬಳಕೆ.
English summary
Covid-19 RBI Governor Shaktikanta Das Speech Highlights and Key decisions taken. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X