ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

RTGS ಹಾಗೂ NEFT ಶುಲ್ಕ ತೆಗೆಯಲು ರಿಸರ್ವ್ ಬ್ಯಾಂಕ್ ತೀರ್ಮಾನ

By ಅನಿಲ್ ಆಚಾರ್
|
Google Oneindia Kannada News

ನವದೆಹಲಿ, ಜೂನ್ 6: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಗುರುವಾರದಂದು RTGS (ರಿಯಲ್ ಟೈಮ್ ಗ್ರಾಸ್ ಸೆಟ್ಲ್ ಮೆಂಟ್ ಸಿಸ್ಟಮ್) ಮತ್ತು NEFT (ನ್ಯಾಷನಲ್ ಎಲೆಕ್ಟ್ರಾನಿಕ್ ಫಂಡ್ಸ್ ಟ್ರಾನ್ಸ್ ಫರ್) ವ್ಯವಹಾರಗಳಿಗೆ ಇರುವ ಶುಲ್ಕವನ್ನು ತೆಗೆದುಹಾಕಲು ನಿರ್ಧಾರ ಮಾಡಿದೆ. ಈ ಬಗ್ಗೆ ಕೇಂದ್ರ ಬ್ಯಾಂಕ್ ನಿಂದ ಅಧಿಸೂಚನೆ ಹೊರಡಿಸಲಾಗಿದೆ.

ದೊಡ್ಡ ಮೊತ್ತದ RTGS ಹಾಗೂ NEFT ವ್ಯವಹಾರಗಳಿಗೆ ಕನಿಷ್ಠ ಪ್ರಮಾಣದ ಶುಲ್ಕವನ್ನು ಬ್ಯಾಂಕ್ ಗಳಿಗೆ ಹಾಕಲಾಗುತ್ತದೆ. ಅವುಗಳು ಗ್ರಾಹಕರ ಮೇಲೆ ವಿಧಿಸುತ್ತವೆ. ಡಿಜಿಟಲ್ ವ್ಯವಹಾರಗಳಿಗೆ ಪ್ರೋತ್ಸಾಹ ನೀಡಿ, ಡಿಜಿಟಲ್ ಹಣಕಾಸಿನ ವ್ಯವಹಾರ ಸಲೀಸಾಗಿ ಆಗಲಿ ಎಂಬ ಕಾರಣಕ್ಕೆ ಆರ್ ಬಿಐ ಈ ತೀರ್ಮಾನವನ್ನು ಮಾಡಿದೆ.

ಆರ್‌ಬಿಐ ರೆಪೋ ದರ ಕಡಿತ, ಬ್ಯಾಂಕ್ ಸಾಲ ಅಗ್ಗ, ಜತೆಗೆ ಮತ್ತಷ್ಟು ಕೊಡುಗೆ ಆರ್‌ಬಿಐ ರೆಪೋ ದರ ಕಡಿತ, ಬ್ಯಾಂಕ್ ಸಾಲ ಅಗ್ಗ, ಜತೆಗೆ ಮತ್ತಷ್ಟು ಕೊಡುಗೆ

ಬ್ಯಾಂಕ್ ಗಳಿಗೆ ದೊರೆಯುವ ಈ ಅನುಕೂಲವನ್ನು ಗ್ರಾಹಕರಿಗೆ ವರ್ಗಾಯಿಸಬೇಕು. ಈ ಸಂಬಂಧವಾಗಿ ಸೂಚನೆಗಳನ್ನು ಇನ್ನು ಒಂದು ವಾರದಲ್ಲಿ ಹೊರಡಿಸಲಾಗುವುದು ಎಂದು ತಿಳಿಸಲಾಗಿದೆ. ಆಟೋಮೆಟೆಡ್ ಟೆಲ್ಲರ್ ಮಶೀನ್ (ಎಟಿಎಂ) ಇಂಟರ್ ಚೇಂಜ್ ಶುಲ್ಕ ಸ್ವರೂಪದ ಬಗ್ಗೆ ಪರಿಶೀಲನೆ ನಡೆಸಲು ರಿಸರ್ವ್ ಬ್ಯಾಂಕ್ ಸಮಿತಿಯನ್ನು ರಚಿಸಲಿದೆ.

RBI decided to remove RTGS and NEFT charges for the benefit of Bank customers

ಸಾರ್ವಜನಿಕರು ಎಟಿಎಂ ಬಳಸುತ್ತಿರುವುದು ವ್ಯಾಪಕವಾಗಿದೆ. ಇದರ ಜತೆಗೆ ಎಟಿಎಂ ಬಳಕೆಯ ಶುಲ್ಕ ಮತ್ತು ದರದ ಇಳಿಕೆಗೆ ಬೇಡಿಕೆ ಕೂಡ ಹೆಚ್ಚಾಗಿದೆ. ಈ ಬೇಡಿಕೆಯನ್ನು ಪರಿಶೀಲಿಸುವ ಉದ್ದೇಶದಿಂದ ಸಮಿತಿ ರಚಿಸಲು ತೀರ್ಮಾನಿಸಿದೆ. ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ ನ ಸಿಇಒ ಅಧ್ಯಕ್ಷತೆಯಲ್ಲಿ ಎಟಿಎಂ ಶುಲ್ಕ ಮತ್ತು ದರದ ಬಗ್ಗೆ ಪರೀಕ್ಷೆ ಮಾಡಲಾಗುವುದು ಎಂದು ತಿಳಿಸಲಾಗಿದೆ.

ಮೊದಲ ಸಭೆ ನಡೆದ ಎರಡು ತಿಂಗಳಲ್ಲಿ ಸಮಿತಿಯು ತನ್ನ ವರದಿ ಸಲ್ಲಿಸುವ ನಿರೀಕ್ಷೆ ಇದೆ. ಸಮಿತಿಯ ಸದಸ್ಯರು ಮತ್ತಿತರ ವಿವರಗಳು ಇನ್ನೊಂದು ವಾರದಲ್ಲಿ ಬಹಿರಂಗ ಆಗಲಿದೆ.

English summary
Reserve Bank of India Thursday decided to remove RTGS and NEFT charges for the benefit of Bank customers. Here is the details of the story.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X