ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೆಪೋ 50 ಮೂಲಾಂಶ ದರ ಕಡಿತ: ಬಡ್ಡಿದರ ಇಳಿಕೆ ಕಾಲವಯ್ಯ

|
Google Oneindia Kannada News

ಮುಂಬೈ, ಸೆಪ್ಟೆಂಬರ್. 29: ಗೃಹಸಾಲ, ವಾಹನ ಸಾಲ ಮಾಡುವವರಿಗೆ ಆರ್ ಬಿಐ ಶುಭ ಸುದ್ದಿ ನೀಡಿದೆ. ರೆಪೋ ದರವನ್ನು 50 ಮೂಲಾಂಶ ಕಡಿತ ಮಾಡಲಾಗಿದ್ದು ಸಾಲಗಳ ಮೇಲಿನ ಬಡ್ಡಿ ದರ ಮತ್ತಷ್ಟು ಇಳಿಕೆಯಾದರೆ ಆಶ್ಚರ್ಯವಿಲ್ಲ.

ಭಾರತೀಯ ರಿಸರ್ವ್ ಬ್ಯಾಂಕ್ ಮಂಗಳವಾರ ನಿರೇಕ್ಷೆಗೂ ಮೀರಿ ರೆಪೋ ದರವನ್ನು ಕಡಿತ ಮಾಡಿದೆ. ಈ ಮೂಲಕ ರಘುರಾಂ ರಾಜನ್ ಆರ್ಥಿಕ ವ್ಯವಸ್ಥೆಯಲ್ಲಿನ ಬದಲಾವಣೆಗೆ ಹೊಸ ಮಾರ್ಗ ಸೂಚಿಸಿದ್ದಾರೆ.[ಹಿಂದೆ ರೆಪೋ ದರ ಕಡಿತವಾಗಿದ್ದು ಯಾವಾಗ?]

RBI Cuts Repo Rate In Monetary Policy By 50 Basis Points; Holds CRR Rate Steady

ರೆಪೋ ದರವನ್ನು ನಾಲ್ಕು ವರ್ಷಕ್ಕಿಂತ ಕಡಿಮೆ ಮಾಡಲಾಗಿದ್ದು 50 ಬೆಸಿಸ್ ಪಾಯಿಂಟ್ಸ್ ಇಳಿಕೆ ಮಾಡಲಾಗಿದೆ. ಶೇ.7.25 ರಿಂದ ಶೇ. 6.75ಕ್ಕೆ ಇಳಿದಿದ್ದು ಹಣದುಬ್ಬರ ನಿಯಂತ್ರಣ ದೃಷ್ಟಿಯಲ್ಲಿ ಇಟ್ಟುಕೊಂಡು ಈ ಕ್ರಮ ತೆಗೆದುಕೊಳ್ಳಲಾಗಿದೆ. 2016ರ ಜನವರಿಗೆ ಹಣದುಬ್ಬರವನ್ನು ಶೇ. 6 ಕ್ಕೆ ನಿಯಂತ್ರಣ ಮಾಡುವುದು ನಮ್ಮ ಮುಂದಿರುವ ಗುರಿ ಎಂದು ರಾಜನ್ ಸ್ಪಷ್ಟಪಡಿಸಿದ್ದಾರೆ.[ಪೆಟಿಎಮ್ ಎಂದರೇನು? ಬಳಕೆ ಹೇಗೆ?]

2015ರಲ್ಲಿ ನಾಲ್ಕನೇ ಬಾರಿಗೆ ರೆಪೊ ದರ ಕಡಿತ ಮಾಡಲಾಗುತ್ತಿದೆ. ಪರಿಣಾಮ ಸಾಲದ ಮೇಲಿನ ಬಡ್ಡಿ ಪ್ರಮಾಣದಲ್ಲೂ ಇಳಿಕೆಯಾಗಲಿದೆ. ನಾಗರಿಕರು ಮತ್ತು ಉದ್ಯಮಿಗಳು 25 ಬೆಸಿಸ್ ಪಾಯಿಂಟ್ಸ್ ಕಡಿತದ ನಿರೀಕ್ಷೆ ಹೊಂದಿದ್ದರು. ಆದರೆ ರಘುರಾಂ ರಾಜನ್ 50 ಬೆಸಿಸ್ ಪಾಂಯಿಂಟ್ಸ್ ಕಡಿತ ನೀಡಿದ್ದಾರೆ.

* ಸಿಆರ್ ಅರ್: ಬ್ಯಾಂಕುಗಳಲ್ಲಿರುವ ಠೇವಣಿಗೆ ಅನುಗುಣವಾಗಿ ಆರ್ ಬಿಐ ನಲ್ಲಿ ಇಡಬೇಕಾದ ಹಣದ ಮೊತ್ತ.
* ರೆಪೋ ದರ: ಆರ್ ಬಿಐನಿಂದ ಬ್ಯಾಂಕುಗಳ ಹಣ ಪಡೆಯುವ ದರ. (ಒನ್ ಇಂಡಿಯಾ ಸುದ್ದಿ)

English summary
In a move that surprised the market the Reserve Bank of India (RBI) today cut repo rate by 50 basis points from 7.25 per cent to 6.75 per cent. Repo rates are the rates at which the country's central bank lends money to other scheduled commercial banks in the country and is also known as the RBI Bank Rate. This was the fourth time this year in 2015 that the RBI decided to cut interest rates, making the drop a full 1.25 per cent this year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X