• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರೆಪೋ ದರ ಇಳಿಕೆ; ಗೃಹ, ವಾಹನ ಸಾಲದ ಬಡ್ಡಿ ದರ ಇಳಿಕೆ?

|

ಮುಂಬೈ, ಆಗಸ್ಟ್ 07: ಅರ್ಥ ವ್ಯವಸ್ಥೆಯ ಉತ್ತೇಜನ, ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಸ್ಥಿರತೆ, ಹಣದುಬ್ಬರ ನಿಯಂತ್ರಣ ಹಿನ್ನೆಲೆಯಲ್ಲಿ ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರು ಬುಧವಾರ ಹೊಸ ಹಣಕಾಸು ನೀತಿಯನ್ನು ಪ್ರಕಟಿಸಿದ್ದಾರೆ. 2019-20ರ ಸಾಲಿಗೆ ಜಿಡಿಪಿ ಪ್ರಗತಿ ದರವನ್ನು ಶೇ 7ರಿಂದ ಶೇ 6.9ಕ್ಕೆ ತಗ್ಗಿಸಲಾಗಿದೆ. ಖಾಸಗಿ ಬಂಡವಾಳ ಹೂಡಿಕೆಗೆ ಉತ್ತೇಜನ ನೀಡುವುದು ಆರ್ ಬಿಐ ಉದ್ದೇಶವಾಗಿದೆ.

ಆರು ಮಂದಿಯುಳ್ಳ RBI ಹಣಕಾಸು ನೀತಿ ಸಮಿತಿಯಲ್ಲಿ ಗವರ್ನರ್ ಶಕ್ತಿಕಾಂತ ದಾಸ್, ರವೀಂದ್ರ ಎಚ್, ಧೋಳಾಕಿಯಾ, ಮೈಕಲ್ ದೇವವ್ರತ ಪಾತ್ರಾ, ಬಿಭು ಪ್ರಸಾದ್ ಕನಂಗು ಅವರು ರೆಪೋ ದರ 35 ಮೂಲಾಂಶ ತಗ್ಗಿಸಲು ವೋಟ್ ಮಾಡಿದರೆ, ಚೇತನ್ ಘಾಟೆ, ಪಾಮಿ ದುವಾ ಅವರು 25 ಮೂಲಾಂಶ(bps) ತಗ್ಗಿಸುವುದು ಒಳ್ಳೆಯದು ಎಂದು ಅಭಿಪ್ರಾಯಪಟ್ಟಿದ್ದಾರೆ. ಒಟ್ಟಾರೆ, ಈ ವರ್ಷದಲ್ಲಿ 110 bps ಕಡಿತಗೊಂಡಿದ್ದು, ಬ್ಯಾಂಕ್ ಗಳು ನೀಡುವ ಗೃಹ, ವಾಹನ ಸಾಲದ ಮೇಲಿನ ಬಡ್ಡಿದರ, ಇಎಂಐ ದರ ತಗ್ಗಿಸುವ ನಿರೀಕ್ಷೆಯಿದೆ.

ದರದಲ್ಲಿ ಬದಲಾವಣೆ

* ಆರ್ ಬಿಐ ರೆಪೋ ದರ 35 ಮೂಲಾಂಶ ಇಳಿಕೆ ಮಾಡಿ 5.40%

* ರಿಸರ್ವ್ ರೆಪೋ ದರ ಎಲ್ ಎಎಫ್(ಏನಿದು?) ವನ್ನು 5.51% ಸರಿ ಹೊಂದಿಸಲಾಗಿದೆ.

* ಮಾರ್ಜಿನಲ್ ಸ್ಟ್ಯಾಂಡಿಂಗ್ ಫೆಸಿಲಿಟಿ(ಎಂಎಸ್ ಎಫ್) ಹಾಗೂ ಬ್ಯಾಂಕ್ ದರ ಶೇ 5.65% ನಷ್ಟಿದೆ.

* 2019-20 ಆರ್ಥಿಕ ವರ್ಷಕ್ಕೆ ಜಿಡಿಪಿ ಮಾರ್ಗದರ್ಶಿ ಪ್ರಗತಿ ದರ ಶೇ7 ರಿಂದ ಶೇ6.9ಕ್ಕೆ ಇಳಿಕೆ

* ಗ್ರಾಹಕ ಸಂವೇದಿ ಸೂಚ್ಯಂಕ CPI inflation ಹಣದುಬ್ಬರ ದರ 3.1%(ಎರಡನೇ ತ್ರೈಮಾಸಿಕ) ಎಂದು ಸೂಚಿಸಲಾಗಿದೆ.

ಬ್ಯಾಂಕುಗಳ ಗೃಹ ಹಾಗೂ ಕಾರು ಸಾಲ ಕೈಗುಟುಕುವಂತಾಗಲಿದೆ. ಆದರೆ, ಎಸ್ ಬಿಐ ಹಾಗೂ ಎಚ್ ಡಿಎಫ್ ಸಿ ಸೇರಿದಂತೆ ಪ್ರಮುಖ ಬ್ಯಾಂಕ್ ಗಳು ಸಾಲ ಬಡ್ಡಿದರ ಬಗ್ಗೆ ಯಾವುದೇ ಪ್ರತಿಕ್ರಿಯೆ ತಕ್ಷಣಕ್ಕೆ ನೀಡಿಲ್ಲ.

ಭಾರತಕ್ಕೆ ಆಘಾತ! ಜಿಡಿಪಿ ಶ್ರೇಯಾಂಕ ಪಟ್ಟಿಯಲ್ಲಿ ಸ್ಥಾನ ಕುಸಿತ

ಆರ್ ಬಿಐ ರೆಪೋ ದರ ಬಡ್ಡಿದರ ಇಳಿಕೆ ಮಾಡಿದ ಕೂಡಲೇ ಬ್ಯಾಂಕ್ ಗಳು ವಿವಿಧ ಸಾಲಕ್ಕೆ ನೀಡಿದ ಬಡ್ಡಿದರ ಇಳಿಕೆ ಮಾಡಲೇಬೇಕೆಂಬ ನಿಯಮವೇನೂ ಇಲ್ಲ. ಆದರೆ, ಕ್ರೆಡಿಟ್ ಆಫ್ ಟೇಕ್ ಪ್ರಬಲವಾಗಿಲ್ಲದ ಕಾರಣ ಬ್ಯಾಂಕುಗಳು ಅನಿವಾರ್ಯವಾಗಿ ಬಡ್ಡಿ ದರ ಇಳಿಕೆ ಮಾಡಿ ಗ್ರಾಹಕರನ್ನು ಆಕರ್ಷಿಸಲು ತೊಡಗಿವೆ.

ಸಾಲದ ಮೇಲಿನ ಬಡ್ಡಿದರ ಇಳಿಕೆಯಿಂದಾಗಿ ಬ್ಯಾಂಕಿನಿಂದ ಸಾಲ ಪಡೆಯುವವರಿಗೆ ಹಾಗೂ ಇಎಂಐ ಬಯಸುವವರಿಗೆ ಹಿತಕರ ಸುದ್ದಿ ಸಿಕ್ಕಿದೆ. ಅದರೆ, ಸಣ್ಣ ಮಟ್ಟದ ಹೂಡಿಕೆ ಹಾಗೂ ಪಿಂಚಣಿದಾರರಿಗೆ ಠೇವಣಿ ದರ ಹೆಚ್ಚಳದಿಂದ ಭಾರಿ ತೊಂದರೆಯಾಗುವ ಸಾಧ್ಯತೆಯಿದೆ.

ಜುಲೈ 01ರಿಂದ ಆನ್ ಲೈನ್ ನಲ್ಲಿ ಹಣ ವರ್ಗಾವಣೆ ಅಗ್ಗ

ಸಿಆರ್ ಅರ್: ಬ್ಯಾಂಕುಗಳಲ್ಲಿರುವ ಠೇವಣಿಗೆ ಅನುಗುಣವಾಗಿ ಆರ್ ಬಿಐ ನಲ್ಲಿ ಇಡಬೇಕಾದ ಹಣದ ಮೊತ್ತ.

ರೆಪೋ ದರ: ಆರ್ ಬಿಐನಿಂದ ಬ್ಯಾಂಕುಗಳ ಹಣ ಪಡೆಯುವ ದರ. (ಒನ್ ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Reserve Bank of India (RBI) cut key interest rates by 35 basis points (bps) on Wednesday, its fourth reduction this year, various loans may get cheaper.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more