ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2010ರಿಂದ ಈಚೆಗೆ ಕನಿಷ್ಠ ಮಟ್ಟಕ್ಕೆ ರೆಪೋ ದರ; 5.15 ಪರ್ಸೆಂಟ್ ಗೆ ಇಳಿಕೆ

|
Google Oneindia Kannada News

ನವದೆಹಲಿ, ಅಕ್ಟೋಬರ್ 4: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಶುಕ್ರವಾರ 0.25 ಪರ್ಸೆಂಟೇಜ್ ಪಾಯಿಂಟ್ ಅನ್ನು ಕಡಿತಗೊಳಿಸಿದ್ದು, ಇದೀಗ ರೆಪೋ ದರವು 5.15 ಪರ್ಸೆಂಟ್ ತಲುಪಿದೆ. ಕೇಂದ್ರ ಬ್ಯಾಂಕ್ ನ ಹಣಕಾಸು ನೀತಿ ಸಮಿತಿಯು ಯಾವುದೇ ಮುಖ್ಯ ಬಡ್ಡಿದರವನ್ನು ಸದ್ಯಕ್ಕೆ ಏರಿಕೆ ಮಾಡುವುದಿಲ್ಲ ಎಂಬುದನ್ನು ಖಾತ್ರಿ ಪಡಿಸಲಾಗಿದೆ.

ಆರ್ಥಿಕ ಸಮಿತಿಯ ಒಬ್ಬ ಸದಸ್ಯರನ್ನು ಹೊರತುಪಡಿಸಿ ಉಳಿದವರು 0.25 ಪರ್ಸೆಂಟೇಜ್ ಮುಖ್ಯ ದರ ಇಳಿಕೆ ಪರವಾಗಿ ಮತ ಚಲಾಯಿಸಿದರು. ಒಟ್ಟಾರೆಯಾಗಿ ಈ ವರ್ಷವು ಆರ್ ಬಿಐನಿಂದ 135 ಬಿಪಿಎಸ್ ಇಳಿಸಲಾಗಿದೆ. ಇನ್ನು ಎರಡನೇ ತ್ರೈಮಾಸಿಕದಲ್ಲಿ ಜಿಡಿಪಿಯು 5.3 ಪರ್ಸೆಂಟ್ ಗೆ ವಿಸ್ತರಣೆ ಆಗಬಹುದು. 2019- 2020ನೇ ಸಾಲಿನ ದ್ವಿತೀಯಾರ್ಧದಲ್ಲಿ 6.6- 7.2 ಪರ್ಸೆಂಟ್ ಆಗಬಹುದು ಎನ್ನಲಾಗಿದೆ.

ರೆಪೋ ದರ ಇಳಿಕೆ; ಗೃಹ, ವಾಹನ ಸಾಲದ ಬಡ್ಡಿ ದರ ಇಳಿಕೆ?ರೆಪೋ ದರ ಇಳಿಕೆ; ಗೃಹ, ವಾಹನ ಸಾಲದ ಬಡ್ಡಿ ದರ ಇಳಿಕೆ?

ಇದೇ ರೀತಿಯಲ್ಲಿ ಹಣದ ಹರಿವಿಗೆ ಅನುಕೂಲ ಆಗುವ ನಿಲುವನ್ನು ಪ್ರಗತಿಯ ದರ ಕಾಯ್ದುಕೊಳ್ಳುವ ತನಕ ತೆಗೆದುಕೊಳ್ಳಲಾಗುವುದು ಎಂದು ಆರ್ ಬಿಐ ಅಧ್ಯಕ್ಷ ಶಕ್ತಿಕಾಂತ್ ದಾಸ್ ಹೇಳಿದ್ದಾರೆ. ಮುಂದಿನ ಹಣಕಾಸು ನೀತಿ ಹೇಗಿರಬೇಕು ಎಂಬ ಬಗ್ಗೆ ಸೆಪ್ಟೆಂಬರ್ ತ್ರೈಮಾಸಿಕದ ಜಿಡಿಪಿ ದತ್ತಾಂಶವು ನಿರ್ಧರಿಸುತ್ತದೆ ಎನ್ನಲಾಗುತ್ತಿದೆ.

RBI Cut Repo Rate By 0.25 Percentage To 5.15 Percent

ಅಂದ ಹಾಗೆ, ಬ್ಯಾಂಕ್‌ ಗಳಿಗೆ ರಿಸರ್ವ್ ಬ್ಯಾಂಕ್ ನಿಂದ ನೀಡುವ ಸಾಲಕ್ಕೆ ವಿಧಿಸುವ ಬಡ್ಡಿ ದರವನ್ನು ರೆಪೋ ದರ ಎನ್ನಲಾಗುತ್ತದೆ. ಇನ್ನು ಕಮರ್ಷಿಯಲ್ ಬ್ಯಾಂಕ್‌ಗಳಿಂದ ಪಡೆಯುವ ಸಾಲಕ್ಕೆ ರಿಸರ್ವ್ ಬ್ಯಾಂಕ್ ಪಾವತಿಸುವ ಬಡ್ಡಿ ದರವನ್ನು ರಿವರ್ಸ್‌ ರೆಪೋ ಎನ್ನಲಾಗುತ್ತದೆ.

English summary
The RBI on Friday lowered the repo rate by 0.25 percentage point to 5.15 per cent.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X