ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಲದ ಆಮಿಷ ಒಡ್ಡುವ ಅನಧಿಕೃತ ಆ್ಯಪ್‌ಗಳ ಜಾಲಕ್ಕೆ ಬಲಿಯಾಗಬೇಡಿ: ಆರ್‌ಬಿಐ ಎಚ್ಚರಿಕೆ

|
Google Oneindia Kannada News

ನವದೆಹಲಿ, ಡಿಸೆಂಬರ್ 24: ಕೆಲ ನಿಮಿಷಗಳಲ್ಲಿ ಸಾಲ ನೀಡಿ, ಅತಿ ಹೆಚ್ಚಿನ ಬಡ್ಡಿ ವಿಧಿಸಿ, ಬಾಕಿ ಹಣವನ್ನು ವಸೂಲಿ ಮಾಡುವ ಅನಧಿಕೃತ ಡಿಜಿಟಲ್ ಆ್ಪ್‌ಗಳ ವಿರುದ್ಧ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಗ್ರಾಹಕರಿಗೆ ಎಚ್ಚರಿಕೆ ನೀಡಿದೆ.

ಸಾಲ ನೀಡುವುದಾಗಿ ತಮ್ಮ ಜಾಲಕ್ಕೆ ಕೆಡವಿಕೊಳ್ಳುವ ಇಂತಹ ಮೊಬೈಲ್ ಆ್ಯಪ್‌ಗಳ ಬಲಿಯಾಗದಿರಿ ಎಂದು ಸಾರ್ವಜನಿಕರಿಗೆ ಆರ್‌ಬಿಐ ಎಚ್ಚರಿಸಿದೆ. ಜೊತೆಗೆ ಇತ್ತೀಚಿನ ದಿನಗಳಲ್ಲಿ ಇಂತಹ ಆ್ಯಪ್‌ಗಳ ಸಂಖ್ಯೆಯು ಹೆಚ್ಚುತ್ತಿದೆ ಎಂದು ಹೇಳಿದೆ.

ಈ ಸಹಕಾರಿ ಬ್ಯಾಂಕ್‌ನ ಲೈಸೆನ್ಸ್‌ ರದ್ದುಗೊಳಿಸಿದ RBI: ಠೇವಣಿದಾರರಿಗೆ 5 ಲಕ್ಷ ರೂ.ವರೆಗೆ ಮರುಪಾವತಿಈ ಸಹಕಾರಿ ಬ್ಯಾಂಕ್‌ನ ಲೈಸೆನ್ಸ್‌ ರದ್ದುಗೊಳಿಸಿದ RBI: ಠೇವಣಿದಾರರಿಗೆ 5 ಲಕ್ಷ ರೂ.ವರೆಗೆ ಮರುಪಾವತಿ

ಸಾಲವನ್ನು ತಕ್ಷಣಕ್ಕೆ ನೀಡುವ ಈ ಆ್ಯಪ್ ಜಾಲದಿಂದಾಗಿ ಸಾಕಷ್ಟು ಸಾರ್ವಜನಿಕರು ಹಾಗೂ ಸಣ್ಣ ಉದ್ದಿಮೆಗಳು ಸಂಕಷ್ಟಕ್ಕೆ ಸಿಲುಕಿವೆ ಎಂದು ಆರ್‌ಬಿಐ ಪ್ರಕಟಿಸಿದೆ.

ಸಾಲ ನೀಡುವ ಅಪ್ಲಿಕೇಶ್‌ಗಳ ಪೂರ್ವಾಪರ ಪರಿಶೀಲಿಸಿ!

ಸಾಲ ನೀಡುವ ಅಪ್ಲಿಕೇಶ್‌ಗಳ ಪೂರ್ವಾಪರ ಪರಿಶೀಲಿಸಿ!

"ಸಾರ್ವಜನಿಕರ ಸದಸ್ಯರು ಇಂತಹ ಜಾಲಗಳಿಗೆ ಬಲಿಯಾಗದಂತೆ ಎಚ್ಚರಿಕೆ ವಹಿಸಬೇಕಿದೆ ಮತ್ತು ಆನ್‌ಲೈನ್ ಅಥವಾ ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ ಸಾಲ ನೀಡುವ ಕಂಪನಿ ಅಥವಾ ಸಂಸ್ಥೆಗಳ ಕುರಿತು ಪೂರ್ವಾಪರಗಳನ್ನು ಗ್ರಾಹಕರು ಪರಿಶೀಲಿಸಬೇಕಿದೆ" ಎಂದು ಆರ್‌ಬಿಐ ತಿಳಿಸಿದೆ.

ಇಂತಹ ಅಪ್ಲಿಕೇಶನ್‌ಗಳ ವಿರುದ್ಧ ದೂರು ನೀಡಿ!

ಇಂತಹ ಅಪ್ಲಿಕೇಶನ್‌ಗಳ ವಿರುದ್ಧ ದೂರು ನೀಡಿ!

"ಇದಲ್ಲದೆ, ಗ್ರಾಹಕರು ಎಂದಿಗೂ ಕೆವೈಸಿ ದಾಖಲೆಗಳ ಪ್ರತಿಗಳನ್ನು ಗುರುತಿಸಲಾಗದ ವ್ಯಕ್ತಿಗಳು, ಪರಿಶೀಲಿಸದ / ಅನಧಿಕೃತ ಅಪ್ಲಿಕೇಶನ್‌ಗಳೊಂದಿಗೆ ಹಂಚಿಕೊಳ್ಳಬಾರದು ಮತ್ತು ಅಂತಹ ಅಪ್ಲಿಕೇಶನ್‌ಗಳು / ಬ್ಯಾಂಕ್ ಖಾತೆ ಮಾಹಿತಿಯನ್ನು ಕೇಳುವ ಆ್ಯಪ್‌ಗಳ ವಿರುದ್ಧ ಕಾನೂನು ಜಾರಿ ಸಂಸ್ಥೆಗಳಿಗೆ ವರದಿ ಮಾಡಬೇಕು ಅಥವಾ ಆನ್‌ಲೈನ್ ದೂರು ದಾಖಲಿಸಲು ಸ್ಯಾಚೆಟ್ ಪೋರ್ಟಲ್ ಅನ್ನು ಬಳಸಬೇಕು" ಅದು ಹೇಳಿದೆ.

ಎಂಎಸ್‌ಎಂಇ ವಲಯಕ್ಕೆ ಬ್ಯಾಂಕ್‌ನಿಂದ 2.05 ಲಕ್ಷ ಕೋಟಿ ಸಾಲ ಮಂಜೂರುಎಂಎಸ್‌ಎಂಇ ವಲಯಕ್ಕೆ ಬ್ಯಾಂಕ್‌ನಿಂದ 2.05 ಲಕ್ಷ ಕೋಟಿ ಸಾಲ ಮಂಜೂರು

ಬ್ಯಾಂಕುಗಳು ಮತ್ತು ಎನ್‌ಬಿಎಫ್‌ಸಿಗಳ ಪರವಾಗಿ ಬಳಸುವ ಎಲ್ಲಾ ಡಿಜಿಟಲ್ ಸಾಲ ನೀಡುವ ವೇದಿಕೆಗಳು ಬ್ಯಾಂಕಿನ ಹೆಸರನ್ನು ಅಥವಾ ಎನ್‌ಬಿಎಫ್‌ಸಿ ಮುಂಗಡ ಹಣವನ್ನು ಗ್ರಾಹಕರಿಗೆ ಬಹಿರಂಗಪಡಿಸಬೇಕು ಎಂದು ಕೇಂದ್ರ ಬ್ಯಾಂಕ್ ಹೇಳಿದೆ.

ನೀವು ಸಾಲ ಪಡೆದರೆ ವಿಪರೀತ ಬಡ್ಡಿ ದರ ವಿಧಿಸುತ್ತವೆ

ನೀವು ಸಾಲ ಪಡೆದರೆ ವಿಪರೀತ ಬಡ್ಡಿ ದರ ವಿಧಿಸುತ್ತವೆ

ಇಂತಹ ಸಾಲ ನೀಡುವ ಆ್ಯಪ್‌ಗಳಲ್ಲಿ ವಿಪರೀತಿಯ ಬಡ್ಡಿದರವಿರುತ್ತದೆ. ಹಲವು ಶುಲ್ಕಗಳನ್ನು ವಿಧಿಸುವುದರ ಜೊತೆಗೆ ಸಾಲ ವಸೂಲಿ ಮಾಡುತ್ತವೆ. ಬಳಕೆದಾರರ ಮೊಬೈಲ್ ಡೇಟಾವನ್ನು ಅಕ್ರಮವಾಗಿ ಬಳಕೆ ಮಾಡಿಕೊಳ್ಳುತ್ತವೆ ಎಂಬ ವರದಿಗಳಿವೆ ಎಂದು ಆರ್‌ಬಿಐ ಹೇಳಿದೆ.

ಆರ್‌ಬಿಐ ಕಿವಿಮಾತು

ಆರ್‌ಬಿಐ ಕಿವಿಮಾತು

ಯಾವುದೇ ಅಪರಿಚಿತ ವ್ಯಕ್ತಿಗಳ ಜೊತೆ ಅಥವಾ ಆ್ಯಪ್‌ಗಳೊಂದಿಗೆ ನಿಮ್ಮ ಕೆವೈಸಿ ದಾಖಲೆಗಳನ್ನು ಹಂಚಿಕೊಳ್ಳಬೇಡಿ

ಇಂತಹ ಆ್ಯಪ್‌ಗಳ ವಿರುದ್ಧ ಕಾನೂನು ಸಂಸ್ಥೆಗಳಿಗೆ ದೂರು ನೀಡಿ

ವೆಬ್‌ಸೈಟ್‌ಗೆ ಭೇಟಿ ನೀಡಿ ದೂರ ನೀಡಬಹುದು

ನೋಂದಾಯಿತ ಎನ್‌ಬಿಎಫ್‌ಸಿಗಳನ್ನು ಮೊದಲೇ ತಿಳಿದುಕೊಳ್ಳಿ

English summary
RBI on Wednesday warned consumers against the questionable digital money lending entities that promise loans in seconds at exorbitant rates of interest, and then use muscle powers to recover dues.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X