ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ವಿಟ್ಟರಲ್ಲಿ ವಿಶ್ವದಾಖಲೆ ಬರೆದ ಆರ್‌ಬಿಐನಿಂದ ಹೊಸ ವಿಕ್ರಮ

|
Google Oneindia Kannada News

ನವದೆಹಲಿ, ನ. 22: ಭಾರತೀಯ ರಿಸರ್ವ್ ಬ್ಯಾಂಕ್( ಆರ್‌ಬಿಐ) ಹೊಸ ಸಾಧನೆ ಮಾಡಿದೆ. ವಿಶ್ವದಲ್ಲಿ ಯಾವುದೇ ದೇಶದ ಕೇಂದ್ರಿಯ ಬ್ಯಾಂಕ್ ಕೂಡಾ ಈ ಸಾಧನೆ ಮಾಡಿಲ್ಲ. ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರಲ್ಲಿ ಆರ್‌ಬಿಐ 10 ಲಕ್ಷ ಹಿಂಬಾಲಕರನ್ನು ಪಡೆದುಕೊಂಡಿದೆ.

ಈ ಮೂಲಕ ಈ ಮೈಲಿಗಲ್ಲು ದಾಟಿದ ಮೊದಲ ಬ್ಯಾಂಕ್ ಎನಿಸಿಕೊಂಡಿದೆ. ಯುಎಸ್ ಫೆಡರಲ್ ಬ್ಯಾಂಕ್ 6,77,000 ಹಿಂಬಾಲಕರನ್ನು ಮಾತ್ರ ಹೊಂದಿದೆ.

ಆರ್‌ಬಿಐ ಇಂದು ಹೊಸ ದಾಖಲೆ ಬರೆದಿದೆ. ಟ್ವಿಟ್ಟರಲ್ಲಿ 1 ಮಿಲಿಯನ್ ಹಿಂಬಾಲಕರನ್ನು ಗಳಿಸಿ ಹೊಸ ಮೈಲಿಗಲ್ಲು ದಾಟಿದೆ. ನನ್ನ ಸಹೋದ್ಯೋಗಿಗಳಿಗೆ ಅಭಿನಂದನೆಗಳು ಎಂದು ಗವರ್ನರ್ ಶಕ್ತಿಕಾಂತ್ ದಾಸ್ ಟ್ವೀಟ್ ಮಾಡಿದ್ದಾರೆ.

Rbi Becomes First Central Bank In World To Reach Million Followers Club

ಯುರೋಪಿಯನ್ ಸೆಂಟ್ರಲ್ ಬ್ಯಾಂಕ್ 5.9 ಲಕ್ಷ ಹಿಂಬಾಲಕರನ್ನು ಹೊಂದಿದೆ. ಬ್ರೆಜಿಲ್ ಸೆಂಟ್ರಲ್ ಬ್ಯಾಂಕ್ 3.8 ಲಕ್ಷ ಹಾಗೂ ಬ್ಯಾಂಕ್ ಆಫ್ ಇಂಗ್ಲೆಂಡ್ 3.17 ಲಕ್ಷ ಹಿಂಬಾಲಕರು ಹಾಗೂ ಕೆನಡಾ ಬ್ಯಾಂಕ್ 1.8 ಲಕ್ಷ ಹಾಗೂ ಬ್ಯಾಂಕ್ ಆಫ್ ಆಸ್ಟ್ರೇಲಿಯಾ 49,200 ಹಿಂಬಾಲಕರನ್ನು ಮಾತ್ರ ಗಳಿಸಿದೆ ಎಂದು ಟ್ವಿಟ್ಟರ್ ಅಂಕಿ ಅಂಶದಂದ ತಿಳಿದು ಬಂದಿದೆ.

Recommended Video

Covid Vaccine ಹಂಚುವಿಕೆ ಬಗ್ಗೆ ಮುಖ್ಯಮಂತ್ರಿಗಳ ಸಭೆ ಕರೆದ Modi | Oneindia Kannada

ಇದೇ ರೀತಿ ಬ್ಯಾಂಕ್ ಆಫ್ ಫ್ರಾನ್ಸ್, ಡ್ಯುಯೆಚ್ ಬುಂಡೆಸ್ ಬ್ಯಾಂಕ್ ಹಾಗೂ ಬ್ಯಾಂಕ್ ಆಫ್ ಜಪಾನ್ ಕ್ರಮವಾಗಿ 37,100, 30,000 ಹಾಗೂ 28,900 ಹಿಂಬಾಲಕರನ್ನು ಹೊಂದಿವೆ. ಬ್ಯಾಂಕ್ ಆಫ್ ಸ್ಪೇನ್ 15, 900 ಹಾಗೂ ಬ್ಯಾಂಕ್ ಆಫ್ ಇಟಲಿ 14,500 ಹಿಂಬಾಲಕರನ್ನು ಗಳಿಸಿವೆ.

English summary
With one million Twitter followers, the Reserve Bank of India has become the first central bank in the world to reach this milestone.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X