ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೂಪಾಯಿ ಕರೆನ್ಸಿಯಲ್ಲೇ ವಹಿವಾಟು ನಡೆಸಲು ಆರ್‌ಬಿಐ ಅನುಮತಿ

|
Google Oneindia Kannada News

ಮುಂಬೈ, ಜುಲೈ 12: ಭಾರತ ನಡೆಸುವ ಅಂತಾರಾಷ್ಟ್ರೀಯ ವ್ಯವಹಾರದಲ್ಲಿ ರೂಪಾಯಿ ಕರೆನ್ಸಿ ಮೂಲಕವೇ ವಹಿವಾಟು ನಡೆಸಲು ಅನುವಾಗುವಂತೆ ಆರ್‌ಬಿಐ ವ್ಯವಸ್ಥೆ ಮಾಡಿದೆ. ಈ ಕ್ರಮದಿಂದ ಭಾರತದ ಜಾಗತಿಕ ವ್ಯವಹಾರಕ್ಕೆ ಪುಷ್ಠಿ ಸಿಗುವ ನಿರೀಕ್ಷೆ ಇದೆ.

"ಜಾಗತಿಕ ವ್ಯಾಪಾರ ಹೆಚ್ಚಿಸಲು, ಅದರಲ್ಲೂ ಭಾರತದ ರಫ್ತನ್ನು ಉತ್ತೇಜಿಸುವ ದೃಷ್ಟಿಯಿಂದ ಹಾಗೂ ರೂಪಾಯಿ ಕರೆನ್ಸಿ ಮೇಲೆ ಇರುವ ಜಾಗತಿಕ ವ್ಯಾಪಾರಿ ಸಮುದಾಯದ ಆಸಕ್ತಿಯ ದೃಷ್ಟಿಯಿಂದ ರಫ್ತು ಮತ್ತು ಆಮದು ವ್ಯವಹಾರದಲ್ಲಿ ರೂಪಾಯಿಯಲ್ಲೇ ವಹಿವಾಟು ನಡೆಸುವ ವ್ಯವಸ್ಥೆಯನ್ನು ಜಾರಿಗೊಳಿಸಲು ನಿರ್ಧರಿಸಲಾಗಿದೆ" ಎಂದು ಅಧಿಕೃತ ಡೀಲರ್ ಬ್ಯಾಂಕುಗಳಿಗೆ ಬರೆದ ಪತ್ರದಲ್ಲಿ ಆರ್‌ಬಿಐ ತಿಳಿಸಿದೆ.

ಹಣದುಬ್ಬರ ಎಂದರೇನು? ಭಾರತ ಹಾಗು ಬೇರೆ ದೇಶಗಳ ಪರಿಸ್ಥಿತಿ ಹೇಗೆ?ಹಣದುಬ್ಬರ ಎಂದರೇನು? ಭಾರತ ಹಾಗು ಬೇರೆ ದೇಶಗಳ ಪರಿಸ್ಥಿತಿ ಹೇಗೆ?

ಆಥರೈಸ್ಡ್ ಡೀಲರ್ ಬ್ಯಾಂಕುಗಳು ಮುಂಬೈನಲ್ಲಿರುವ ಆರ್‌ಬಿಐ ಕಚೇರಿಯ ವಿದೇಶಿ ವಿನಿಮಯ ವಿಭಾಗದಿಂದ ಪೂರ್ವಾನುಮತಿ ಪಡೆದುಕೊಳ್ಳುವ ಅಗತ್ಯ ಇದೆ. ಅದಾದ ಬಳಿಕ ರೂಪಾಯಿ ಕರೆನ್ಸಿಯಲ್ಲಿ ವಹಿವಾಟು ನಡೆಸುವ ವ್ಯವಸ್ಥೆಯನ್ನು ಆರ್‌ಬಿಐ ಅಳವಡಿಸಲಿದೆ.

ನಿರ್ದಿಷ್ಟ ಉದ್ದೇಶಕ್ಕಾಗಿ ವಿದೇಶಿ ವಿನಿಮಯ ಖರೀದಿ ಮತ್ತು ಮಾರಾಟಕ್ಕೆ ಆರ್‌ಬಿಐ ಅನುಮತಿ ನೀಡಿರುವ ಬ್ಯಾಂಕುಗಳು ಕೆಟಗರಿ-1 ಆಥರೈಸ್ಡ್ ಡೀಲರ್ ಬ್ಯಾಂಕುಗಳೆನಿಸಿವೆ. ಆಂಧ್ರ ಬ್ಯಾಂಕ್, ಕಾರ್ಪೊರೇಶನ್ ಬ್ಯಾಂಕ್, ಹೆಚ್‌ಡಿಎಫ್‌ಸಿ, ಕರ್ನಾಟಕ ಬ್ಯಾಂಕ್ ಇತ್ಯಾದಿ ಸೇರಿ ನೂರಕ್ಕೂ ಹೆಚ್ಚು ಎಡಿ ಬ್ಯಾಂಕುಗಳಿವೆ.

ವಿನಿಮಯ ದರ ಹೇಗೆ ನಿಗದಿ?

ವಿನಿಮಯ ದರ ಹೇಗೆ ನಿಗದಿ?

ಎರಡು ದೇಶಗಳ ನಡುವೆ ನಡೆಯುವ ವ್ಯಾಪಾರದಲ್ಲಿ ಕರೆನ್ಸಿಗಳ ವಿನಿಮಯ ದರ ಮಾರುಕಟ್ಟೆ ಆಧಾರದಲ್ಲಿ ನಿರ್ಧಾರ ಆಗುತ್ತದೆ. ಆರ್‌ಬಿಐ ರೂಪಿಸಿರುವ ವಿಧಾನದ ಪ್ರಕಾರ ರೂಪಾಯಿ ಕರೆನ್ಸಿಯಲ್ಲಿ ವ್ಯವಹಾರದ ವಹಿವಾಟು ನಡೆಯಬೇಕಾಗುತ್ತದೆ.

ಈ ಬಗ್ಗೆ ಹಣಕಾಸು ವಿಶ್ಲೇಷಕ ಅನಂತ್ ನಾರಾಯಣ್ ಹೇಳುವುದು ಹೀಗೆ: "ಆರ್‌ಬಿಐ ಹೊರಡಿಸಿದ ಈ ಸುತ್ತೋಲೆಯನ್ನು ನೋಡಿದಾಗ ಮೊದಲು ಅನಿಸಿದ್ದು, ಇದು ರಷ್ಯಾದ ರೂಬಲ್-ರುಪಾಯಿ ವ್ಯವಹಾರವನ್ನು ರೂಪಾಯಿಯಲ್ಲೇ ನಡೆಸಲು ಅನುವಾಗುವ ರೀತಿಯಲ್ಲಿ ರೂಪಿಸಿರುವಂತೆ ತೋರುತ್ತದೆ. ಆದರೆ, ಅಗತ್ಯ ಬಿದ್ದರೆ ಭಾರತದ್ದೇ ಪರ್ಯಾಯ ಹಣಕಾಸು ವಹಿವಾಟು ವ್ಯವಸ್ಥೆಗೆ (SWIFT) ಆದ್ಯತೆ ಕೊಡಲು ನಡೆಸಿರುವ ಸಿದ್ಧತೆಯಂತೆ ತೋರುತ್ತದೆ" ಎಂದು ಹೇಳುತ್ತಾರೆ.

ವಿಮಾನದ ಟೆಕೆಟ್ ದರ ಹೆಚ್ಚಳ: ವಿದೇಶ ಪ್ರಯಾಣಕ್ಕೆ ತೆರಬೇಕು ದುಬಾರಿ ಬೆಲೆವಿಮಾನದ ಟೆಕೆಟ್ ದರ ಹೆಚ್ಚಳ: ವಿದೇಶ ಪ್ರಯಾಣಕ್ಕೆ ತೆರಬೇಕು ದುಬಾರಿ ಬೆಲೆ

ವಿಶೇಷ ವೋಸ್ಟ್ರೋ ಖಾತೆ

ವಿಶೇಷ ವೋಸ್ಟ್ರೋ ಖಾತೆ

ಭಾರತದಲ್ಲಿರುವ ಎಡಿ ಬ್ಯಾಂಕುಗಳು ವಿಶೇಷ ವೋಸ್ಟ್ರೋ (Special Vostro) ಖಾತೆಗಳನ್ನು ತೆರೆಯಲು ಅನುಮತಿಸಲಾಗಿದೆ. ಭಾರತದೊಂದಿಗೆ ವಹಿವಾಟು ನಡೆಸುವ ದೇಶದ ಬ್ಯಾಂಕಿನೊಂದಿಗೆ ಭಾರತದ ಒಂದು ಎಡಿ ಬ್ಯಾಂಕ್ ವೋಸ್ಟ್ರೋ ಖಾತೆಯನ್ನು ತೆರೆಯಬೇಕಾಗುತ್ತದೆ.

"ಭಾರತದ ವ್ಯಾಪಾರಿಗಳು ಆಮದು ಮಾಡಿಕೊಂಡಾಗ ರೂಪಾಯಿ ಲೆಕ್ಕದಲ್ಲಿ ಹಣವನ್ನು ಇನ್ನೊಂದು ದೇಶದ ಬ್ಯಾಂಕಿನ ಸ್ಪೆಷಲ್ ವೋಸ್ಟ್ರೋ ಖಾತೆಗೆ ಪಾವತಿಸಬೇಕಾಗುತ್ತದೆ," ಎಂದು ಆರ್‌ಬಿಐ ತಿಳಿಸಿದೆ.

ರಫ್ತು ಮಾಡಿದಾಗ

ರಫ್ತು ಮಾಡಿದಾಗ

ಭಾರತದ ವ್ಯಾಪಾರಿಗಳು ತಮ್ಮ ಸರಕನ್ನು ಅಥವಾ ಸೇವೆಯನ್ನು ರಫ್ತು ಮಾಡಿದಾಗ ಇನ್ನೊಂದು ದೇಶದ ಬ್ಯಾಂಕಿನ ವಿಶೇಷ ವೋಸ್ಟ್ರೋ ಖಾತೆಯಿಂದ ಅವರಿಗೆ ರೂಪಾಯಿ ಲೆಕ್ಕದಲ್ಲಿ ಹಣ ಜಮೆಯಾಗುತ್ತದೆ ಎಂದು ಆರ್‌ಬಿಐ ಸುತ್ತೋಲೆಯಲ್ಲಿ ವಿವರಿಸಲಾಗಿದೆ.

ಡಾಲರ್ ಕರೆನ್ಸಿ ಬೈಪಾಸ್

ಡಾಲರ್ ಕರೆನ್ಸಿ ಬೈಪಾಸ್

ಸಾಮಾನ್ಯವಾಗಿ ಅಂತಾರಾಷ್ಟ್ರೀಯ ವ್ಯವಹಾರ ಅಮೆರಿಕದ ಡಾಲರ್ ಕರೆನ್ಸಿಯಲ್ಲೇ ನಡೆಯುತ್ತದೆ. ಆದರೆ, ಡಾಲರ್ ಎದುರು ರೂಪಾಯಿ ಮೌಲ್ಯ ತೀರಾ ಕುಸಿಯುತ್ತಿರುವುದು ಭಾರತದ ಆಮದು ಮತ್ತು ರಫ್ತು ವ್ಯವಹಾರಕ್ಕೆ ಹಿನ್ನಡೆಯಾಗಿದೆ. ರಷ್ಯಾ, ಶ್ರೀಲಂಕಾ ಮೊದಲಾದ ದೇಶಗಳ ಜೊತೆ ಭಾರತ ಡಾಲರ್ ಕರೆನ್ಸಿಯ ವಿನಿಯಮ ದರದಲ್ಲಿ ವಹಿವಾಟು ನಡೆಸುವುದಕ್ಕಿಂತ ನೇರವಾಗಿ ರೂಪಾಯಿ ಕರೆನ್ಸಿಯಲ್ಲಿ ವಹಿವಾಟು ನಡೆಸುವುದು ಭಾರತಕ್ಕೆ ಅನುಕೂಲ ಎಂದು ಭಾವಿಸಲಾಗಿದೆ.

ಭಾರತ ಮತ್ತು ಶ್ರೀಲಂಕಾ ನಡುವೆ ನಡೆಯುವ ವಾರ್ಷಿಕ ವ್ಯಾಪಾರ 3.6 ಬಿಲಿಯನ್ ಡಾಲರ್‌ನಷ್ಟಿದೆ. ಶ್ರೀಲಂಕಾದ ಅತಿದೊಡ್ಡ ಟ್ರೇಡಿಂಗ್ ಪಾರ್ಟ್ನರ್ ದೇಶಗಳ ಪಟ್ಟಿಯಲ್ಲಿ ಭಾರತದ್ದು ಎರಡನೇ ಸ್ಥಾನ. ಈಗ ಆರ್‌ಬಿಐ ತೆಗೆದುಕೊಂಡಿರುವ ಹೊಸ ಕ್ರಮವು ಈ ವ್ಯವಹಾರಕ್ಕೆ ಪುಷ್ಟಿ ನೀಡುವ ನಿರೀಕ್ಷೆ ಇದೆ.

(ಒನ್ಇಂಡಿಯಾ ಸುದ್ದಿ)

English summary
The Reserve Bank of India (RBI) has allowed trade settlements between India and other countries, including Sri Lanka and Russia in rupees.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X