ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರ ಸರ್ಕಾರಕ್ಕೆ 57,128 ಕೋಟಿ ಲಾಭಾಂಶವನ್ನು ಅನುಮೋದಿಸಿದ ಆರ್‌ಬಿಐ

|
Google Oneindia Kannada News

ನವದೆಹಲಿ, ಆಗಸ್ಟ್‌ 14: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್‌ಬಿಐ) ಶುಕ್ರವಾರ ಸರ್ಕಾರಕ್ಕೆ, 57,128 ಕೋಟಿ ಲಾಭಾಂಶವನ್ನು ಅನುಮೋದಿಸಿದೆ.

ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಆರ್‌ಬಿಐನ ಕೇಂದ್ರ ಮಂಡಳಿ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದ್ದು, ಆಕಸ್ಮಿಕ ಅಪಾಯದ ಬಫರ್ ಅನ್ನು ಶೇ. 5.5ರಷ್ಟು ನಿರ್ವಹಿಸಲು ಮಂಡಳಿ ನಿರ್ಧರಿಸಿದೆ.

ಹಣಕಾಸು ನೀತಿ ಪರಿಶೀಲನೆ: ಆರ್‌ಬಿಐ ಗವರ್ನರ್ ಸುದ್ದಿಗೋಷ್ಟಿ ಹೈಲೈಟ್ಸ್ಹಣಕಾಸು ನೀತಿ ಪರಿಶೀಲನೆ: ಆರ್‌ಬಿಐ ಗವರ್ನರ್ ಸುದ್ದಿಗೋಷ್ಟಿ ಹೈಲೈಟ್ಸ್

"ಪ್ರಸ್ತುತ ಆರ್ಥಿಕ ಪರಿಸ್ಥಿತಿ, ಮುಂದುವರಿದ ಜಾಗತಿಕ ಮತ್ತು ದೇಶೀಯ ಸವಾಲುಗಳು ಮತ್ತು ಕೋವಿಡ್-19 ಸಾಂಕ್ರಾಮಿಕ ರೋಗದ ಆರ್ಥಿಕ ಪರಿಣಾಮವನ್ನು ತಗ್ಗಿಸಲು ಆರ್‌ಬಿಐ ಕೈಗೊಂಡ ವಿತ್ತೀಯ, ನಿಯಂತ್ರಣ ಮತ್ತು ಇತರ ಕ್ರಮಗಳನ್ನು ಮಂಡಳಿ ಪರಿಶೀಲಿಸಿದೆ. ಇನ್ನೋವೇಶನ್ ಹಬ್ ಸ್ಥಾಪಿಸುವ ಪ್ರಸ್ತಾಪವನ್ನು ಮಂಡಳಿ ಚರ್ಚಿಸಿತು. ಕಳೆದ ವರ್ಷದಲ್ಲಿ ಬ್ಯಾಂಕಿನ ಕಾರ್ಯಾಚರಣೆಯ ವಿವಿಧ ಕ್ಷೇತ್ರಗಳ ಬಗ್ಗೆ ಚರ್ಚಿಸಲಾಗಿದೆ ಮತ್ತು 2019-20ನೇ ಸಾಲಿನ ರಿಸರ್ವ್ ಬ್ಯಾಂಕಿನ ವಾರ್ಷಿಕ ವರದಿ ಮತ್ತು ಖಾತೆಗಳನ್ನು ಅನುಮೋದಿಸಿದೆ. ಸರ್ಕಾರಕ್ಕೆ 57,128 ಕೋಟಿ ರೂಪಾಯಿ ಹೆಚ್ಚುವರಿ ಹಣವನ್ನು ಕೇಂದ್ರ ಸರ್ಕಾರಕ್ಕೆ ವರ್ಗಾಯಿಸಲು ಮಂಡಳಿಯು ಅನುಮೋದನೆ ನೀಡಿತು. ಅಕೌಂಟಿಂಗ್ ವರ್ಷ 2019-20, ಆಕಸ್ಮಿಕ ಅಪಾಯದ ಬಫರ್ ಅನ್ನು ಶೇ. 5.5ರಷ್ಟು ನಿರ್ವಹಿಸಲು ನಿರ್ಧರಿಸಿದೆ "ಎಂದು ಕೇಂದ್ರ ಬ್ಯಾಂಕ್ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

RBI Approved Rs 57128 Crore To Government

ಕಳೆದ ವರ್ಷ ಆರ್‌ಬಿಐ ಮಂಡಳಿಯು ಸರ್ಕಾರಕ್ಕೆ 1.76 ಟ್ರಿಲಿಯನ್ ಪಾವತಿಸಲು ಅನುಮೋದನೆ ನೀಡಿತು. ಇದರಲ್ಲಿ 1.23 ಟ್ರಿಲಿಯನ್ ಲಾಭಾಂಶ ಮತ್ತು ಅದರ ಹೆಚ್ಚುವರಿ ಬಂಡವಾಳದಿಂದ, 52,640 ಕೋಟಿ ರೂಪಾಯಿ ಸೇರಿವೆ.

English summary
Reserve Bank of India on Friday approved dividend of Rs 57,128 crore to government. The decision was taken when the Central Board Of the RBI met on Friday under the chairmanship of Governor Shaktikanta Das.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X