ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧನಲಕ್ಷ್ಮಿ ಬ್ಯಾಂಕ್‌ಗೆ ಹೆಚ್ಚುವರಿ ನಿರ್ದೇಶಕರನ್ನು ನೇಮಿಸಿದ ಆರ್‌ಬಿಐ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 30: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಖಾಸಗಿ ವಲಯದ ಧನಲಕ್ಷ್ಮಿ ಬ್ಯಾಂಕ್‌ಗೆ ಹೆಚ್ಚುವರಿ ನಿರ್ದೇಶಕರನ್ನು ನೇಮಕ ಮಾಡಿದ್ದು, ಆದರೆ ಯಾವ ಕಾರಣಕ್ಕೆ ನೇಮಿಸಲಾಗಿದೆ ಎಂಬುದನ್ನು ತಿಳಿಸಿಲ್ಲ.

ಆರ್‌ಬಿಐ ಬ್ಯಾಂಕ್‌ ಮಂಡಳಿಯಲ್ಲಿ ಹೆಚ್ಚುವರಿ ನಿರ್ದೇಶಕರಾಗಿ ಬೆಂಗಳೂರು ಪ್ರಾದೇಶಿಕ ಕಚೇರಿಯ ರಿಸರ್ವ್ ಬ್ಯಾಂಕ್ ಜನರಲ್ ಮ್ಯಾನೇಜರ್ ಡಿ.ಕೆ ಕಶ್ಯಪ್ ಅವರನ್ನು ಎರಡು ವರ್ಷಗಳ ಅವಧಿಗೆ ನೇಮಕ ಮಾಡಿದೆ ಎಂದು ಬ್ಯಾಂಕ್ ತಿಳಿಸಿದೆ.

 ಸಹಕಾರಿ ಬ್ಯಾಂಕುಗಳು ಇನ್ಮುಂದೆ ಆರ್‌ಬಿಐ ವ್ಯಾಪ್ತಿಗೆ: ಬ್ಯಾಂಕಿಂಗ್ ಕಾಯ್ದೆಗೆ ತಿದ್ದುಪಡಿ ಸಹಕಾರಿ ಬ್ಯಾಂಕುಗಳು ಇನ್ಮುಂದೆ ಆರ್‌ಬಿಐ ವ್ಯಾಪ್ತಿಗೆ: ಬ್ಯಾಂಕಿಂಗ್ ಕಾಯ್ದೆಗೆ ತಿದ್ದುಪಡಿ

ಆರ್‌ಬಿಐ ತನ್ನ ನಾಮಿನಿಗಳನ್ನು ಖಾಸಗಿ ಬ್ಯಾಂಕುಗಳ ಮಂಡಳಿಗಳಲ್ಲಿ ಇಡುವುದು ಸಾಮಾನ್ಯವಾಗಿದೆ. ಈ ಹಿಂದೆ ಧನಲಕ್ಷ್ಮಿ ಮಂಡಳಿಯಲ್ಲಿ ಮೂವರು ಆರ್‌ಬಿಐ ನಾಮಿನಿಗಳು ಇದ್ದರು. ಆದಾಗ್ಯೂ, ವ್ಯವಹಾರದಲ್ಲಿ ಸುಧಾರಣೆಯೊಂದಿಗೆ, ಸೆಂಟ್ರಲ್ ಬ್ಯಾಂಕ್ ಕಳೆದ ವರ್ಷ ಒಬ್ಬರನ್ನು ಹಿಂತೆಗೆದುಕೊಂಡಿತ್ತು. ಪ್ರಸ್ತುತ ಸನ್ನಿವೇಶದಲ್ಲಿ, ಹೊಸ ನಿರ್ದೇಶಕರ ನೇಮಕ ಗಮನಾರ್ಹವಾಗಿದೆ.

RBI Appoints Additional Director On Dhanalaxmi Bank Board

ಧನಲಕ್ಷ್ಮಿ ಬ್ಯಾಂಕ್‌ನಲ್ಲಿನ ಕೆಲವು ವ್ಯವಹಾರಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ಬ್ಯಾಂಕ್ ನೌಕರರ ಒಕ್ಕೂಟಗಳು ಆರ್‌ಬಿಐ ತಕ್ಷಣವೇ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿದ್ದವು.

English summary
The Reserve Bank of India (RBI) has appointed one of its officers on the Board of Thrissur-based Dhanlaxmi Bank for a period of two years from September 28.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X