ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪರಿಸರ ಸ್ನೇಹಿ 'ಇಕೋವೆರಾ' ಶ್ರೇಣಿ ಪರಿಚಯಿಸಿದ ರೇಮಂಡ್

|
Google Oneindia Kannada News

ಮುಂಬೈ, ಏಪ್ರಿಲ್ 08: ಫ್ಯಾಶನ್ ಹಾಗೂ ಜವಳಿ ಉತ್ಪಾದನೆ ಮತ್ತು ಮಾರಾಟದಲ್ಲಿ ಭಾರತದ ಪ್ರಮುಖ ಸಂಸ್ಥೆಯಾದ ರೇಮಂಡ್ ಗ್ರೂಪ್, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ (ಆರ್‌ಐಎಲ್) ಅತ್ಯಾಧುನಿಕ R|Elan ತಂತ್ರಜ್ಞಾನ ಬಳಸಿ ತಯಾರಿಸಲಾದ 'ಇಕೋವೇರಾ' ಪರಿಸರ ಸ್ನೇಹಿ ವಸ್ತ್ರಗಳ ಶ್ರೇಣಿಯನ್ನು ಅನಾವರಣಗೊಳಿಸಿದೆ.

ಇಕೋವೇರಾ ಶ್ರೇಣಿಯು ಸದ್ಯದಲ್ಲೇ 700 ನಗರಗಳಲ್ಲಿರುವ 1500 ಮಳಿಗೆಗಳ ಮೂಲಕ ಲಭ್ಯವಾಗಲಿದೆ. ಈ ಶ್ರೇಣಿಯ ವಸ್ತ್ರಗಳನ್ನು ಪ್ರಪಂಚದಲ್ಲೇ ಅತ್ಯಂತ ಪರಿಸರ ಸ್ನೇಹಿ ಫೈಬರ್ ಆದ R|Elan ಗ್ರೀನ್‌ಗೋಲ್ಡ್ ಬಳಸಿ ತಯಾರಿಸಲಾಗಿದೆ. ಗ್ರಾಹಕರ ಬಳಕೆಯ ನಂತರ ಕಸಕ್ಕೆ ಸೇರುವ ನಿರುಪಯುಕ್ತ ಪೆಟ್ ಬಾಟಲುಗಳನ್ನು ಜೈವಿಕ ಇಂಧನ ಹಾಗೂ ಇಂಧನ-ದಕ್ಷ ಪ್ರಕ್ರಿಯೆಗಳ ಮೂಲಕ ಸಂಸ್ಕರಿಸಿ R|Elan ಗ್ರೀನ್‌ಗೋಲ್ಡ್ ಅನ್ನು ತಯಾರಿಸಲಾಗುತ್ತದೆ.

ಜವಳಿ ಉದ್ಯಮದ ದೈತ್ಯ ರೇಮಂಡ್: ಅಪ್ಪ ಕಂಪೆನಿಯನ್ನು ಎತ್ತರಕ್ಕೇರಿಸಿದರೆ, ಮಗ ಅಪ್ಪನನ್ನೇ ಹೊರಹಾಕಿದ ಜವಳಿ ಉದ್ಯಮದ ದೈತ್ಯ ರೇಮಂಡ್: ಅಪ್ಪ ಕಂಪೆನಿಯನ್ನು ಎತ್ತರಕ್ಕೇರಿಸಿದರೆ, ಮಗ ಅಪ್ಪನನ್ನೇ ಹೊರಹಾಕಿದ

ರಿಲಯನ್ಸ್‌ನ R|Elan ನಿಂದ ಸಶಕ್ತವಾದ ರೇಮಂಡ್‌ನ ಇಕೋವೇರಾ, ಸರಿಸುಮಾರು 1 ಮಿಲಿಯನ್ ಪೆಟ್ ಬಾಟಲುಗಳನ್ನು ಮಣ್ಣಿಗೆ ಸೇರದಂತೆ ತಡೆಯಲಿದೆ. ಭೂಮಿಯನ್ನು ರಕ್ಷಿಸುವ ಆರ್‌ಐಎಲ್ ಹಾಗೂ ರೇಮಂಡ್ಸ್ ಬದ್ಧತೆಗೆ ಈ ಬೆಳವಣಿಗೆ ಸಾಕ್ಷ್ಯವಾಗಿದೆ.

Raymond launches Ecovera in collaboration with Reliance Industries

ಸುಸ್ಥಿರ ಶ್ರೇಣಿಯ ಜಂಟಿ ಅಭಿವೃದ್ಧಿಯ ಕುರಿತು ಮಾತನಾಡಿದ ರೇಮಂಡ್ಸ್ ಲಿಮಿಟೆಡ್‌ನ ಜವಳಿ ವಿಭಾಗದ ಅಧ್ಯಕ್ಷ ಸುಧಾಂಶು ಪೋಖ್ರಿಯಾಲ್, "ನೈಸರ್ಗಿಕ ಹಾಗೂ ಮಾನವ ನಿರ್ಮಿತ ಫೈಬರ್‌ಗಳೆರಡನ್ನೂ ಬಳಸಿಕೊಂಡು ಹೊಸ ಬದಲಾವಣೆಗಳೊಡನೆ ಅತ್ಯುತ್ತಮ ಗುಣಮಟ್ಟದ ವಸ್ತ್ರಗಳ ತಯಾರಿಕೆಗೆ ನಮ್ಮ ಸಂಸ್ಥೆ ಹೆಸರುವಾಸಿ. ಪರಿಸರ ಸ್ನೇಹಿ, ಸುಸ್ಥಿರ ವಸ್ತ್ರಗಳನ್ನು ಸೃಷ್ಟಿಸುವ ನಮ್ಮ ಪ್ರಯತ್ನದಲ್ಲಿ ಹಲವಾರು ವೈಶಿಷ್ಟ್ಯಗಳುಳ್ಳ ವಸ್ತ್ರಗಳನ್ನು ತಯಾರಿಸಲು ಖ|ಇಟಚಿಟಿTM ಗ್ರೀನ್‌ಗೋಲ್ಡ್ ನಿಜಕ್ಕೂ ಅತ್ಯುತ್ತಮ ಆಯ್ಕೆ. ನಮ್ಮ ಸಂಸ್ಥೆಯನ್ನು ಸುಸ್ಥಿರ ಹಾಗೂ ಪರಿಸರ ಸ್ನೇಹಿಯಾಗಿ ಬೆಳೆಸುವ ನಿಟ್ಟಿನಲ್ಲೂ R|Elan ಗ್ರೀನ್‌ಗೋಲ್ಡ್ ಒಂದು ಮಹತ್ವದ ಹೆಜ್ಜೆ." ಎಂದು ಹೇಳಿದರು.

ಲಂಬವಾಗಿ ಹಾಗೂ ಅಡ್ಡಡ್ಡಲಾಗಿ ಸಂಯೋಜಿತವಾಗಿರುವ ಪ್ರಪಂಚದ ಅತಿದೊಡ್ಡ ವರ್‌ಸ್ಟೆಡ್ ಸೂಟಿಂಗ್ ವಸ್ತ್ರಗಳ ನಿರ್ಮಾತೃಗಳ ಪೈಕಿ ರೇಮಂಡ್‌ನದು ಪ್ರಮುಖ ಹೆಸರು. ಭಾರತದ ವರ್‌ಸ್ಟೆಡ್ ಸೂಟಿಂಗ್ ವಸ್ತ್ರಗಳ ಮಾರುಕಟ್ಟೆಯಲ್ಲಿ ಅದು ಶೇಕಡ 60ಕ್ಕಿಂತ ಅಧಿಕ ಪಾಲನ್ನು ಹೊಂದಿದೆ. ಆಧುನಿಕ ಪುರುಷನಿಗೆ ಸರಿಯಾದ ಉಡುಪುಗಳನ್ನು ಒದಗಿಸುವುದು ('ಡ್ರೆಸಿಂಗ್ ದ ಮಾಡರ್ನ್ ಮ್ಯಾನ್ ರೈಟ್') ಹಿಂದಿನಿಂದಲೂ ರೇಮಂಡ್‌ನ ಗುರಿಯಾಗಿದೆ.

ರಿಲಯನ್ಸ್‌ನ ವ್ಯಾಪಕ ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ಫೈಬರ್‌‍ಗಳನ್ನು ಕುರಿತ ಅಗಾಧ ಅನುಭವದ ಹಿನ್ನೆಲೆಯಲ್ಲಿ ರೂಪುಗೊಂಡಿರುವ R|Elan ಸಾಮಾನ್ಯಕ್ಕಿಂತ ಹೆಚ್ಚನ್ನು ಸಾಧಿಸುವ ವಿನೂತನ ವಸ್ತ್ರಗಳ ಸಂಗ್ರಹವಾಗಿದೆ. ಆರ್‌ಐಎಲ್‌ನ R|Elan ಗ್ರೀನ್‌ಗೋಲ್ಡ್ ಜಾಗತಿಕವಾಗಿ ಅತ್ಯುತ್ತಮ ಇಕೋ-ಕ್ರೆಡೆನ್‌ಶಿಯಲ್‌ಗಳನ್ನು ಹೊಂದಿರುವ ಹೊಸ ತಲೆಮಾರಿನ ತಂತ್ರಜ್ಞಾನವಾಗಿದ್ದು, ಸುಸ್ಥಿರ ಫ್ಯಾಶನ್‌ಗಾಗಿ ಗ್ರಾಹಕರ ಬೇಡಿಕೆಯನ್ನು ಪೂರೈಸುವ ನಿಟ್ಟಿನಲ್ಲಿ ಅದನ್ನು ರೂಪಿಸಲಾಗಿದೆ. ಫ್ಯಾಶನ್ ಉದ್ದಿಮೆಗೆ ಅತ್ಯಂತ ಪರಿಸರ ಸ್ನೇಹಿ ಕಚ್ಚಾಪದಾರ್ಥಗಳಲ್ಲೊಂದಾದ ಗ್ರೀನ್‌ಗೋಲ್ಡ್, ಪ್ರಮುಖ ಬ್ರಾಂಡುಗಳಿಗೆ ಪರಿಸರದ ಕುರಿತ ತಮ್ಮ ಬದ್ಧತೆಯನ್ನು ಪೂರ್ಣಗೊಳಿಸಲು ನೆರವಾಗುತ್ತಿದೆ.

Raymond launches Ecovera in collaboration with Reliance Industries

ಆರ್‌ಐಎಲ್ ಪಾಲಿಯೆಸ್ಟರ್ ಬಿಸಿನೆಸ್‌ನ ಸಿಎಂಓ ಗುಂಜನ್ ಶರ್ಮಾ ಮಾತನಾಡಿ, "ರೇಮಂಡ್‌ನೊಡನೆ ಜೊತೆಗೂಡಲು ನಮಗೆ ಹೆಮ್ಮೆಯೆನಿಸುತ್ತದೆ. ಪರಿಸರಕ್ಕಾಗಿ ನಮ್ಮ ಪಾಲಿನ ಕೊಡುಗೆ ನೀಡಲು ಇದು ನಮಗೊಂದು ಅವಕಾಶ ನೀಡಿದೆ. ಸುಸ್ಥಿರತೆಯ ಹೆಚ್ಚುವರಿ ಸೇರ್ಪಡೆಯೊಡನೆ ವಿನೂತನವಾದ ಫ್ಯಾಶನಬಲ್ ವಸ್ತ್ರಗಳನ್ನು ರೂಪಿಸಲು ರೇಮಂಡ್ ಸಂಸ್ಥೆಗೆ R|Elan ಗ್ರೀನ್‌ಗೋಲ್ಡ್ ನೆರವಾಗುತ್ತದೆ" ಎಂದು ಹೇಳಿದರು.

ಸರ್ಕ್ಯುಲರ್ ಇಕಾನಮಿ, ಮರುಬಳಕೆ ಹಾಗೂ ಕಸ ತಗ್ಗಿಸುವಿಕೆಯ ಪರಿಕಲ್ಪನೆಗಳನ್ನು ಅವಲಂಬಿಸಲು ಆರ್‌ಐಎಲ್‌ನ ಪೆಟ್ರೋಕೆಮಿಕಲ್ಸ್ ಬಿಸಿನೆಸ್ ಬದ್ಧವಾಗಿದೆ. ಈ ಪರಿಕಲ್ಪನೆಗಳನ್ನು ಬಳಸುವಲ್ಲಿ ಭಾರತದ ಜವಳಿ ಹಾಗೂ ಫ್ಯಾಶನ್ ಉದ್ದಿಮೆಯನ್ನು ಮುಂಚೂಣಿ ಸ್ಥಾನಕ್ಕೆ ತರುವುದು ಅದರ ಗುರಿ.

English summary
Raymond Group, India’s leading fashion and textile manufacturer and retailer, has unveiled the eco-friendly Ecovera – a range of fabrics manufactured by using R|Elan™, the latest technology from Reliance Industries Ltd (RIL).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X