ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಓಲಾ ಸಂಸ್ಥೆಯಲ್ಲಿ ರತನ್ ಟಾಟಾ 650 ಕೋಟಿ ರು. ಹೂಡಿಕೆ?

ಭಾರತದಲ್ಲಿ ತನಗೆ ತೀವ್ರ ಪೈಪೋಟಿ ನೀಡುತ್ತಿರುವ ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಉಬರ್ ಕಂಪನಿಯನ್ನು ಹಿಂದಿಕ್ಕಲು ಓಲಾ, ಹೆಚ್ಚಿನ ಮಟ್ಟದ ಸೇವೆ ನೀಡಲು ಬಂಡವಾಳ ಹೂಡಿಕೆಯತ್ತ ಮುಂದಾಗಿದೆ ಎಂದು ಹೇಳಲಾಗಿದೆ.

|
Google Oneindia Kannada News

ಬೆಂಗಳೂರು, ಏಪ್ರಿಲ್ 3: ಖ್ಯಾತ ಟ್ಯಾಕ್ಸಿ ಸೇವಾ ಸಂಸ್ಥೆಯಾದ ಓಲಾದಲ್ಲಿ ಟಾಟಾ ಸನ್ಸ್ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ರತನ್ ಟಾಟಾ, ಸುಮಾರು 650 ಕೋಟಿ ರು. ಬಂಡವಾಳ ಹೂಡಲಿದ್ದಾರೆಂದು ಮೂಲಗಳು ಹೇಳಿವೆ.

ರತನ್ ಟಾಟಾ ಅವರು ಇತ್ತೀಚೆಗೆ ಹುಟ್ಟುಹಾಕಿರುವ ಆರ್ ಎನ್ ಟಿ ಕ್ಯಾಪಿಟಲ್ ಸಂಸ್ಥೆಯೊಂದಿಗೆ ಓಲಾ ಸಂಸ್ಥೆಯ ಪ್ರತಿನಿಧಿಗಳು ಈಗಾಗಲೇ ಕೆಲವು ಸುತ್ತಿನ ಮಾತುಕತೆಯನ್ನು ನಡೆಸಿದ್ದಾರೆ.[ನಾರಾಯಣ ಮೂರ್ತಿ ವಿವಾದ: ಇನ್ಫಿ ಷೇರು ಮೌಲ್ಯ ಕುಸಿತ]

Ratan Tata set to invest about 650 cr in Ola

ಮಾತುಕತೆಯು ಫಲಪ್ರದವಾಗುವ ನಿಟ್ಟಿನಲ್ಲಿ ಮುಂದುವರಿದಿದ್ದು ಶೀಘ್ರದಲ್ಲೇ ರತನ್ ಟಾಟಾ ಕಂಪನಿ, ಓಲಾ ಸಂಸ್ಥೆಯಲ್ಲಿ ದೊಡ್ಡ ಬಂಡವಾಳ ಹೂಡಲಿದೆ ಎಂದು ಹೇಳಲಾಗಿದೆ.

ಟಾಟಾ ಸಂಸ್ಥೆಯಿಂದಷ್ಟೇ ಅಲ್ಲದೆ, ಇತರ ಬಂಡವಾಳಗಾರರಿಂದ ಸುಮಾರು 200 ಕೋಟಿ ರು. ಸಂಗ್ರಹಿಸಲೂ ಓಲಾ ಸಂಸ್ಥೆ ಪ್ರಯತ್ನ ನಡೆಸುತ್ತಿದೆ ಎಂದೂ ಕೆಲ ಮೂಲಗಳು ತಿಳಿಸಿವೆ.

ಭಾರತದಲ್ಲಿ ತನಗೆ ತೀವ್ರ ಪೈಪೋಟಿ ನೀಡುತ್ತಿರುವ ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಉಬರ್ ಕಂಪನಿಯನ್ನು ಹಿಂದಿಕ್ಕಲು ಓಲಾ, ಹೆಚ್ಚಿನ ಮಟ್ಟದ ಸೇವೆ ನೀಡಲು ಬಂಡವಾಳ ಹೂಡಿಕೆಯತ್ತ ಮುಂದಾಗಿದೆ ಎಂದು ಹೇಳಲಾಗಿದೆ.

English summary
Ola is in advanced talks to raise fresh capital of about Rs 650 crore ($100 million) led by RNT Capital Advisers, a venture fund set up by Tata Sons chairman emeritus Ratan Tata, according to two people aware of the deal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X