ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Viral Video: ಉದ್ಯಮಿ ರತನ್ ಟಾಟಾ ಮಾಡಿದ ಬದುಕಿನ ಪಾಠ ಓದಿ ತಿಳಿಯಿರಿ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 27: ಭಾರತದ ಹಿರಿಯ ಉದ್ಯಮಿ ರತನ್ ಟಾಟಾ ಕೇವಲ ಒಬ್ಬ ಉದ್ಯಮಿಯಾಗಿ ಹೆಸರು ಸಂಪಾದಿಸಿಲ್ಲ. ತಮ್ಮ ಸಮಾಜಸೇವೆ ಮತ್ತು ಸಹಾಯ ಗುಣಗಳಿಂದ ಜನ ಮೆಚ್ಚುಗೆ ಗಳಿಸಿರುವುದು ಗೊತ್ತಿದೆ.

ಟಾಟಾ ಗ್ರೂಪ್ ಆಫ್ ಇಂಡಸ್ಟ್ರೀಸ್‌ನ ಅಧ್ಯಕ್ಷರಾದ ರತನ್ ಟಾಟಾ ಇತರ ಹಲವು ಕಾರಣಗಳಿಗಾಗಿ ಹೆಸರುವಾಸಿಯಾಗಿದ್ದಾರೆ. ಪರೋಪಕಾರಿ ಹಾಗೂ ತುರ್ತು ಸಂದರ್ಭಗಳಲ್ಲಿ ಅಪಾಯ ಹಣವನ್ನು ದಾನ ಮಾಡಿದ್ದಾರೆ. ಇದರ ಜೊತೆ ಅವರ ಪ್ರೇರಕ ಭಾಷಣಗಳು ಮತ್ತು ಉಲ್ಲೇಖಗಳಿಂದ ಜನಮನ ಸೆಳೆದಿದ್ದಾರೆ.

'ಗುಡ್‌ಫೆಲೋಸ್' ಸ್ಟಾರ್ಟ್‌ಅಪ್‌ ಬಿಡಗಡೆ ಮಾಡಿದ ರತನ್ ಟಾಟಾ: ವಿಶೇಷತೆ ಏನು?'ಗುಡ್‌ಫೆಲೋಸ್' ಸ್ಟಾರ್ಟ್‌ಅಪ್‌ ಬಿಡಗಡೆ ಮಾಡಿದ ರತನ್ ಟಾಟಾ: ವಿಶೇಷತೆ ಏನು?

ಇತ್ತೀಚೆಗೆ, ಅವರ ಭಾಷಣದ ವಿಡಿಯೋ ಕ್ಲಿಪ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿ ಹರಡುತ್ತಿದೆ. ಇದರಲ್ಲಿ 84 ವರ್ಷದ ಉದ್ಯಮಿ ನಿಜವಾಗಿಯೂ ತಮ್ಮ ಸಂತೋಷ ಹಿಂದಿನ ಸೀಕ್ರೆಟ್ ಏನು ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ಸಂತೋಷದ ಹಿಂದಿನ ಸೀಕ್ರೆಟ್ ತಿಳಿಸಿದ ರತನ್ ಟಾಟಾ

"ಎಲ್ಲರೂ ತಮಗೆ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ಹೇಳುತ್ತಿರುವುವಾಗ, ಅಂಥ ಕಾರ್ಯವನ್ನು ಮಾಡುವ ಅವಕಾಶ ನನಗೆ ಸಿಕ್ಕಿರುವುದೇ ಸಂತೋಷವನ್ನು ಉಂಟು ಮಾಡುತ್ತದೆ," ಎಂದು ರತನ್ ಟಾಟಾ ತಮ್ಮ ಭಾಷಣದಲ್ಲಿ ಹೇಳಿಕೊಂಡಿದ್ದಾರೆ. ಈ ಭಾಷಣದ ತುಣುಕನ್ನು ಆರ್‌ಪಿಜಿ ಎಂಟರ್‌ಪ್ರೈಸಸ್ ಅಧ್ಯಕ್ಷ ಹರ್ಷ್ ಗೋಯೆಂಕಾ ಪೋಸ್ಟ್ ಮಾಡಿದ್ದಾರೆ. ಕೈಗಾರಿಕೋದ್ಯಮಿಯ ನಮ್ರತೆಯ ಹಾಗೂ ಸರಳತೆಯ ಜೊತೆಗೆ ಅವರ ಪ್ರೇರಕ ಭಾಷಣಗಳು ನೆಟ್ಟಿಗರ ಹೃದಯ ಗೆದ್ದಿದೆ. ಜನರು ಅವರನ್ನು 'ಲೆಜೆಂಡ್' ಎಂದು ಕರೆದಿದ್ದು, ವೀಡಿಯೊಗೆ ಹಲವಾರು ಪ್ರತಿಕ್ರಿಯೆ ನೀಡಿದ್ದಾರೆ.

ರತನ್ ಟಾಟಾ ಅಸಾಧ್ಯವನ್ನು ಸಾಧ್ಯವಾಗಿ ಮಾಡಿರುವರು

ರತನ್ ಟಾಟಾ ಅಸಾಧ್ಯವನ್ನು ಸಾಧ್ಯವಾಗಿ ಮಾಡಿರುವರು

"ನಿಜ. ಆಟೋಮೊಬೈಲ್ ಉದ್ಯಮವು ರತನ್ ಟಾಟಾಗೆ ಕೇವಲ 1 ಲಕ್ಷ ರೂಪಾಯಿ ಅಲ್ಲಿ ಕಾರನ್ನು ತಯಾರಿಸುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿತ್ತು. ಆದರೆ, ಅಲ್ಲಿಂದ ಒಂದು ಹೆಜ್ಜೆ ಮುಂದೆ ಸಾಗಿದ ಅವರು, "ಅಸಾಧ್ಯ" ಎಂಬುದನ್ನು ಸಾಧ್ಯ ಮಾಡಿ ತೋರಿಸಿದ್ದಾರೆ. ಅವರು ಅತ್ಯಂತ ಉತ್ಸಾಹದಿಂದ ಯೋಜನೆಯನ್ನು ಕಾರ್ಯಗತ ಮಾಡಿದರು. ಆ ಮೂಲಕ ಎಲ್ಲವನ್ನೂ ಸಾಬೀತುಪಡಿಸಿದರು. ಯಾರು "ಅದನ್ನು ಮಾಡಲಾಗುವುದಿಲ್ಲ" ಎಂದಿದ್ದರೋ ಅವರೇ ತಪ್ಪು ಎಂಬುದನ್ನು ತೋರಿಸಿ ಕೊಟ್ಟರು," ಎಂದು ಕಾಮೆಂಟ್ ಮಾಡಿದ್ದಾರೆ.

ಸೂಪರ್ ಪವರ್ ಬಗ್ಗೆ ಉಲ್ಲೇಖ

ಸೂಪರ್ ಪವರ್ ಬಗ್ಗೆ ಉಲ್ಲೇಖ

"ಅಸಾಮಾನ್ಯ ಮನುಷ್ಯರು ಇತರರು ಯೋಚಿಸುವುದಕ್ಕಿಂತ ಹೆಚ್ಚು ವಿಭಿನ್ನವಾಗಿ ಯೋಚಿಸುತ್ತಾರೆ. ಭೂಮಿಯ ಈ ರೀತಿ ಆಲೋಚನೆ ಮಾಡುವ ಮನಸುಗಳಲ್ಲಿ ಅಗೋಚರವಾದ ಸೂಪರ್ ಪವರ್ ಇರುತ್ತದೆ. ನೀತಿ-ನಿಯತ್ತು ಸೇರಿದಂತೆ ಬದುಕಿನ ಮೌಲ್ಯಗಳನ್ನು ಇಂಥ ವ್ಯಕ್ತಿಗಳು ಸರಿಯಾಗಿ ಅರ್ಥ ಮಾಡಿಕೊಂಡಿರುತ್ತಾರೆ. ಇಂಥವರ ಜೊತೆಗೆ ದೇವರು ಸದಾಕಾಲ ಇರುತ್ತಾನೆ," ಎಂದು ಮತ್ತೊಬ್ಬ ನೆಟ್ಟಿಗನು ಟ್ವೀಟ್ ಮಾಡಿದ್ದಾನೆ.

"ಇದೇ ಉತ್ಸಾಹ ಎಲ್ಲರಲ್ಲೂ ಇರಬೇಕು. ನಾವು ಆರಂಭದಲ್ಲಿ "ಮಾಡಲಾಗಲಿಲ್ಲ" ಎಂಬ ಆಲೋಚನೆಯನ್ನು ಹೊಂದಿದ್ದೇವೆ. ನಾವು ಮೌಲ್ಯಮಾಪನ ಮಾಡದೆಯೇ ಸಾಧ್ಯವಾದದ್ದನ್ನು ಅಸಾಧ್ಯವೆಂದು ಪರಿವರ್ತಿಸುತ್ತೇವೆ. ಟಾಟಾ ಅವರು "ಮಾಡಬಹುದು" ಎಂಬ ಮನೋಭಾವದಿಂದ ವಿಭಿನ್ನವೆಂದು ಸಾಬೀತುಪಡಿಸಿದ್ದಾರೆ. ಟಾಟಾ ಗ್ರೂಪ್ ಸಾಕಷ್ಟು ಬದಲಾವಣೆ ಮತ್ತು ಬೆಳವಣಿಗೆಗೆ ಸಾಕ್ಷಿಯಾಗಿದೆ," ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.

 ಉದ್ಯಮಿ ರತನ್ ಟಾಟಾ ತಮ್ಮ ಭಾಷಣದಲ್ಲಿ ಹೇಳಿದ್ದೇನು?

ಉದ್ಯಮಿ ರತನ್ ಟಾಟಾ ತಮ್ಮ ಭಾಷಣದಲ್ಲಿ ಹೇಳಿದ್ದೇನು?

* ಬದುಕಿನ ಹಾದಿಯಲ್ಲಿ ಏಳು-ಬೀಳು ಹಾಗೂ ಏರಿಳಿತಗಳು ಸರ್ವೇ ಸಾಮಾನ್ಯವಾಗಿ ಇರಬೇಕಾಗುತ್ತದೆ, ಏಕೆಂದರೆ ಇಸಿಜಿ ಪ್ರಕಾರ ಸರಳ ಹಾಗೂ ನೇರ ಗೆರೆಯು ನಾವು ಜೀವಂತವಾಗಿ ಉಳಿದಿಲ್ಲ ಎಂಬುದರ ಸಂಕೇತವಾಗಿರುತ್ತದೆ.

* ಒಂದು ವೇಳೆ ನೀವು ವೇಗವಾಗಿ ಸಾಗಬೇಕು ಎಂದಿದ್ದರೆ, ಏಕಾಂಗಿಯಾಗಿ ಸಾಗಿ. ಆದರೆ ದೂರವರೆಗೂ ಸಾಗಬೇಕು ಅಂತಿದ್ದರೆ ಜೊತೆಯಲ್ಲಿ ಮುಂದೆ ಸಾಗಿರಿ

* ಜನರು ನಿಮ್ಮ ಮೇಲೆ ಎಸೆಯುವ ಕಲ್ಲುಗಳನ್ನೇ ತೆಗೆದುಕೊಂಡು, ಅದರಿಂದಲೇ ಸ್ಮಾರಕ ನಿರ್ಮಿಸಲು ಸಾಧ್ಯವಾಗುತ್ತದೆ

* ಕಬ್ಬಿಣವನ್ನು ಯಾರಿಂದಲೂ ನಾಶಪಡಿಸುವುದಕ್ಕೆ ಸಾಧ್ಯವಿಲ್ಲ, ಆದರೆ ತುಕ್ಕಿನಿಂದ ಅದು ಸಾಧ್ಯವಾಗುತ್ತದೆ. ಅದೇ ರೀತಿ ಬೇರೆಯವರು ನಿಮ್ಮನ್ನು ನಾಶಪಡಿಸಲು ಆಗುವುದಿಲ್ಲ, ನಿಮ್ಮೊಳಗಿನ ಆಲೋಚನೆಗಳೇ ನಿಮ್ಮ ನಾಶಕ್ಕೆ ಕಾರಣವಾಗುತ್ತವೆ.

* ನನ್ನ ಬದುಕಿನ ದಾರಿಯುದ್ದಕ್ಕೂ ಕೆಲವರನ್ನು ನೋಯಿಸಿರಬಹುದು, ಆದರೆ ಯಾವುದೇ ಪರಿಸ್ಥಿತಿಯಲ್ಲಿ ಸರಿಯಾದ ಕೆಲಸವನ್ನು ಮಾಡಲು ಮತ್ತು ರಾಜಿ ಮಾಡಿಕೊಳ್ಳದೆ ತನ್ನ ಕೈಲಾದಷ್ಟು ಕೆಲಸವನ್ನು ಮಾಡಿದ ವ್ಯಕ್ತಿಯಾಗಿ ಗುರುತಿಸಿಕೊಳ್ಳಲು ನಾನು ಬಯಸುತ್ತೇನೆ.

English summary
Ratan Tata's speech on what really excites him or his greatest pleasure; Video Goes Viral.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X