• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಫ್ಲಿಪ್ ಕಾರ್ಟ್ ಫ್ಯಾಷನ್ ರಾಯಭಾರಿಗಳಾದ ರಣಬೀರ್ -ಆಲಿಯಾ

|

ಬೆಂಗಳೂರು, ಮೇ 28: ಫ್ಲಿಪ್ ಕಾರ್ಟ್ ಸಂಸ್ಥೆ ತಮ್ಮ ನೂತನ 'ಇಂಡಿಯಾದ ಹೊಸ ಫ್ಯಾಷನ್ ರಾಜಧಾನಿ' ವಿಭಾಗಕ್ಕೆ ಪ್ರಪ್ರಥಮ ಬಾರಿಗೆ ಬಾಲಿವುಡ್ ಸೆಲೆಬ್ರಿಟಿದ್ವಯರಾದ ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಅವರನ್ನು ಜೊತೆಯಾಗಿ ಕರೆ ತಂದು ಫ್ಯಾಷನ್ ಅನ್ನು ಇನ್ನಷ್ಟು ಚೇತೋಹಾರಿಯನ್ನಾಗಿಸಿದೆ.

ಈ ಹಿಂದೆ ಬ್ರಾಂಡ್ ನೊಂದಿಗೆ ವೈಯಕ್ತಿಕವಾಗಿ ಕೈಜೋಡಿಸಿದ್ದ ಈ ಜೋಡಿ, ಈಗ ಫ್ಲಿಪ್ ಕಾರ್ಟ್ ಫ್ಯಾಷನ್ ನ ರಾಷ್ಟ್ರೀಯ ಅಭಿಯಾನಕ್ಕೆ ಮೊದಲ ಬಾರಿಗೆ ಒಟ್ಟಿಗೆ ತೆರೆ ಹಂಚಿಕೊಳ್ಳಲಿದ್ದಾರೆ.

ಚುನಾವಣೆ 2019: ಇಂದಿನ ಮತದಾರರ ಮನವೊಲಿಸಿದ ಫ್ಲಿಪ್ ಕಾರ್ಟ್

ದೇಶದ ಅತಿ ಹೆಚ್ಚು ಪ್ರೀತಿಗೆ ಪಾತ್ರರಾಗಿರುವ ಈ ಇಬ್ಬರ ನಡುವಿನ ಹಲವು ಹಾಸ್ಯಮಯ ಸಂಭಾಷಣೆಯನ್ನೊಳಗೊಂಡ ಈ ಅಭಿಯಾನ ಫ್ಲಿಪ್ ಕಾರ್ಟ್ ಫ್ಯಾಷನ್ ಗ್ರಾಹಕರಿಗೆ ನೀಡಲು ಮುಂದಾಗಿರುವ ವಿಭಿನ್ನ ಕೊಡುಗೆಗಳ ಕುರಿತು ಪ್ರಚಾರ ಮಾಡಲಿದ್ದು, ಗ್ರಾಹಕರು ನೂತನ ಟ್ರೆಂಡ್, ಸೆಲೆಬ್ರಿಟಿ ಸ್ಟೈಲ್ ಅಥವಾ ಅತ್ಯುತ್ತಮ ಬೆಲೆಯಲ್ಲಿ ಉತ್ತಮ ಬ್ರಾಂಡ್ ಗಳ ಸಂಗ್ರಹವಿರಲಿ, 'ಪ್ರತಿನಿತ್ಯ ಏನಾದರೂ ಹೊಸತು' ಪಡೆಯಲು ಸಾಧ್ಯವಾಗುತ್ತದೆ.

'ಮುಂದಿನ ವಾಟ್ಸಾಪ್ ಭಾರತದಿಂದ ಬರಲಿದೆ': ಸಿಇಒ ಅಭಿಜಿತ್ ಬೋಸ್

ಒಂದು ವರ್ಷದ ಹಿಂದೆ ತಯಾರಾಗಿ ಆರಂಭಗೊಂಡ ಈ ಭಾರತೀಯ ಫ್ಯಾಷನ್ ನ ರಾಜಧಾನಿ ಎಂಬ ಮೂರನೇ ಅಧ್ಯಾಯ ತನ್ನ ಮೊದಲ ಎರಡು ಅಭಿಯಾನಗಳ ಆಧಾರದ ಮೇಲೆ ಸಾಕಷ್ಟು ಸುಧಾರಣೆ ಕಂಡಿದ್ದು, ಭಾರತಾದ್ಯಂತ ಫ್ಲಿಪ್ ಕಾರ್ಟ್ ಫ್ಯಾಷನ್ ಅನ್ನು ಜನರ ಫ್ಯಾಷನ್ ಆಯ್ಕೆಯ ಆದ್ಯತೆಯ ವಲಯ (ಗೋ-ಟು ಫ್ಯಾಷನ್ ಡೆಸ್ಟಿನೇಷನ್) ಆಗಿ ಪರಿವರ್ತಿಸಲು ಇಚ್ಛಿಸಿದೆ.

ವಿನೂತನ ಹಾಗೂ ಸಮಗ್ರ ಅಭಿಯಾನದ ಯೋಜನೆ

ವಿನೂತನ ಹಾಗೂ ಸಮಗ್ರ ಅಭಿಯಾನದ ಯೋಜನೆ

ಫ್ಲಿಪ್ ಕಾರ್ಟ್ ಸಂಸ್ಥೆಗೆ ಈ ವಿನೂತನ ಹಾಗೂ ಸಮಗ್ರ ಅಭಿಯಾನದ ಯೋಜನೆ, ಬಿಡುಗಡೆ ಹಾಗೂ ಕಾರ್ಯಾರಂಭಕ್ಕೆ ಲೋವಿ ಲಿಂಟಾಸ್ ಹಾಗೂ ಡೆಂಟ್ಸು ವೆಬ್ಚುಟ್ನಿ ಏಜೆನ್ಸಿಗಳು ಬೆಂಬಲ ವ್ಯಕ್ತಪಡಿಸಿವೆ.

ಆಲಿಯಾ ಹಾಗೂ ರಣಬೀರ್ ಕಪೂರ್ ಜೊತೆಗೆ, ಈ ಅಭಿಯಾನದಲ್ಲಿ ದಕ್ಷಿಣ ಭಾರತದ ಪ್ರಖ್ಯಾತ ಕಲಾವಿದರಾದ ಸಮಂತಾ ಅಕಿನೇನಿ, ವಿಜಯ್ ದೇವರಕೊಂಡ ಹಾಗೂ ದುಲ್ಕರ್ ಸಲ್ಮಾನ್ ಅವರನ್ನು ಒಳಗೊಂಡಿದೆ. ಈ ಸಮಗ್ರ ಹಾಗೂ ವಿಭಿನ್ನ ಅಭಿಯಾನದೊಂದಿಗೆ, ಫ್ಲಿಪ್ ಕಾರ್ಟ್ ಫ್ಯಾಷನ್ ದೇಶಾದ್ಯಂತದ ಎಲ್ಲಾ ಗ್ರಾಹಕರನ್ನು ತಲುಪಲು ಯೋಜಿಸಿದ್ದು, ಫ್ಯಾಷನ್ ಗೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ಸಂಭಮಿಸಲು ತಯಾರಿ ನಡೆಸಿದೆ.

ಪ್ರತಿ ನಿತ್ಯ ಆಧುನಿಕ ಹಾಗೂ ಪರಿಷ್ಕೃತ ಫ್ಯಾಷನ್

ಪ್ರತಿ ನಿತ್ಯ ಆಧುನಿಕ ಹಾಗೂ ಪರಿಷ್ಕೃತ ಫ್ಯಾಷನ್

ಈ ಅಭಿಯಾನ ಫ್ಲಿಪ್ ಕಾರ್ಟ್ ಫ್ಯಾಷನ್ ಅನ್ನು ಗ್ರಾಹಕರ ಅಭ್ಯಾಸವಾಗಿ ಬದಲಾಯಿಸಿ, ಅವರಿಗೆ ಈ ವೇದಿಕೆಯ ಮೂಲಕ ಹೆಚ್ಚು ಸಂಪರ್ಕ ಸಾಧಿಸಲು ನೆರವಾಗುವ ಉದ್ದೇಶ ಹೊಂದಿದೆ. ಜೊತೆಗೆ, ಪ್ರತಿ ನಿತ್ಯ ಆಧುನಿಕ ಹಾಗೂ ಪರಿಷ್ಕೃತ ಫ್ಯಾಷನ್ ಅನ್ನು ಗ್ರಾಹಕರಿಗೆ ಒದಗಿಸುವುದಾಗಿ ಸಂಸ್ಥೆ ಭರವಸೆ ನೀಡಿದೆ.

8 ವಾರಗಳ ಕಾಲ ನೇರ ಪ್ರಸಾರವಾಗಲಿದೆ

8 ವಾರಗಳ ಕಾಲ ನೇರ ಪ್ರಸಾರವಾಗಲಿದೆ

ಈ ಅಭಿಯಾನ ಟಿವಿ ಹಾಗೂ ಡಿಜಿಟಲ್ ವೇದಿಕೆಗಳಲ್ಲಿ ಜುಲೈ ವರೆಗೆ 8 ವಾರಗಳ ಕಾಲ ನೇರ ಪ್ರಸಾರವಾಗಲಿದೆ, ಈ ಮೂರು ಟಿವಿ ಪ್ರಸಾರವನ್ನು ಹೊರತುಪಡಿಸಿ, ಗ್ರಾಹಕರು ಸಾಲು ಸಾಲು ಡಿಜಿಟಲ್ ಪ್ರಸಾರವನ್ನು ಕೂಡ ನಿರೀಕ್ಷಿಸಬಹುದು. ಇದರಲ್ಲಿ ಪುರುಷರು ಹಾಗೂ ಮಹಿಳೆಯರ ಭಾರತೀಯ ಹಾಗೂ ಪಾಶ್ಚಾತ್ಯ ಉಡುಗೆಗಳ ವಿಸ್ತೃತ ಸಂಗ್ರಹಣೆಯನ್ನು ಪ್ರದರ್ಶಿಸುವುದರ ಜೊತೆಗೆ, ಆಲಿಯಾ ಹಾಗೂ ರಣಬೀರ್ ಅವರ ಆಪ್ತ ಸಂದರ್ಶನಗಳು, ತಮ್ಮ ಅನುಯಾಯಿಗಳಿಗಾಗಿ ಅತ್ಯುತ್ತಮ ಫ್ಯಾಷನ್ ಅಭ್ಯಾಸಗಳ ಕುರಿತು ವಿವರಣೆಗಳು ಕೂಡ ಇರಲಿದೆ.

‘ಪ್ರತಿನಿತ್ಯ ಏನಾದರೂ ಹೊಸತು' ನೀಡುವ ಯೋಜನೆ

‘ಪ್ರತಿನಿತ್ಯ ಏನಾದರೂ ಹೊಸತು' ನೀಡುವ ಯೋಜನೆ

ಅಭಿಯಾನದ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡ ಫ್ಲಿಪ್ ಕಾರ್ಟ್ ನ ಮಾರುಕಟ್ಟೆ ವಿಭಾಗದ ಹಿರಿಯ ಉಪಾಧ್ಯಕ್ಷರಾದ ಅನಿಲ್ ಗೊಟೇಟಿ, ಫ್ಲಿಪ್ ಕಾರ್ಟ್ ಫ್ಯಾಷನ್ ಇಂದು ಭಾರತದ ಆದ್ಯತೆಯ ಫ್ಯಾಷನ್ ವೇದಿಕೆಯಾಗಿದೆ. ಇದರಲ್ಲಿ ನೂತನ, ಟ್ರೆಂಡಿ, ಪ್ರತಿನಿತ್ಯ ಪರಿಷ್ಕೃತಗೊಂಡ ಸ್ಟೈಲ್ ಗಳು ಲಭ್ಯವಿವೆ. ನಾವು ಮತ್ತೊಮ್ಮೆ ಭಾರತದ ಅತ್ಯುತ್ತಮ ನಟರಾದ ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಅವರೊಂದಿಗೆ ಪಾಲುದಾರಿಕೆ ಹೊಂದಲು ಉತ್ಸುಕರಾಗಿದ್ದೇವೆ. ನಮ್ಮ ‘ಪ್ರತಿನಿತ್ಯ ಏನಾದರೂ ಹೊಸತು' ನೀಡುವ ಯೋಜನೆ ಗ್ರಾಹಕರಿಗೆ ಪ್ರತಿನಿತ್ಯ ತಮ್ಮ ವೆಬ್ ಸೈಟ್ ಭೇಟಿ ನೀಡಲು ಕಾರಣ ನೀಡುತ್ತದೆ ಎಂಬ ವಿಶ್ವಾಸವಿದೆ' ಎಂದರು.

ಗ್ರಾಹಕರಿಗೆ ಪ್ರತಿನಿತ್ಯ ಖರೀದಿ ಮಾಡಲು ಸೂಕ್ತ ಕಾರಣ

ಗ್ರಾಹಕರಿಗೆ ಪ್ರತಿನಿತ್ಯ ಖರೀದಿ ಮಾಡಲು ಸೂಕ್ತ ಕಾರಣ

ಐಎಫ್ ಕೆಸಿ ಅನ್ನು 2018ರ ಜೂನ್ ಅನ್ನು ಆರಂಭಿಸಲಾಗಿದ್ದು, ಇದು ಭಾರತೀಯ ಗ್ರಾಹಕರ ನಡುವೆ ತಮ್ಮ ಬ್ರಾಂಡ್ ಗೆ ಪ್ರತ್ಯೇಕ ಛಾಪು ಮೂಡಿಸುವ ಗುರಿ ಹೊಂದಿದೆ. ಇದರ ಅಳವಡಿಕೆಯಿಂದ ಫ್ಲಿಪ್ ಕಾರ್ಟ್, ಹಲವು ಆಯ್ಕೆಗಳು ಹಾಗೂ ಗ್ರಾಹಕರಿಗೆ ಪ್ರತಿನಿತ್ಯ ಖರೀದಿ ಮಾಡಲು ಸೂಕ್ತ ಕಾರಣ ನೀಡುವ ಮೂಲಕ ಫ್ಯಾಷನ್ ಮಾರುಕಟ್ಟೆಯಲ್ಲಿ ನಿರಂತರ ಪ್ರಗತಿ ಕಂಡಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Flipkart is making fashion more exciting by bringing together Bollywood celebrity duo Ranbir Kapoor and Alia Bhatt for the first time ever, in the latest edition of the brand’s India Ka Fashion Capital campaign.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more