ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಂಚನೆ ಪ್ರಕರಣದಲ್ಲಿ Ranbaxy ಮಾಜಿ ಪ್ರವರ್ತಕ ಶಿವಿಂದರ್ ಸಿಂಗ್ ಬಂಧನ

|
Google Oneindia Kannada News

ನವದೆಹಲಿ, ಅಕ್ಟೋಬರ್ 10: ಫಾರ್ಮಾಸ್ಯುಟಿಕಲ್ ಕಂಪೆನಿಗಳಲ್ಲೇ ಅಗ್ರ ಮಾನ್ಯ ಹೆಸರಾದ ರಾನ್ ಬ್ಯಾಕ್ಸಿಯ ಮಾಜಿ ಪ್ರವರ್ತಕ ಶಿವಿಂದರ್ ಸಿಂಗ್ ರನ್ನು ಗುರುವಾರ ಬಂಧಿಸಲಾಗಿದೆ. 740 ಕೋಟಿ ರುಪಾಯಿ ವಂಚನೆ ಪ್ರಕರಣದಲ್ಲಿ ಅವರನ್ನು ಬಂಧಿಸಲಾಗಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಿಂದರ್ ಅಣ್ಣ ಮಲ್ವಿಂದರ್ ಸಿಂಗ್ ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಇಬ್ಬರ ಮೇಲೂ ಕಳೆದ ಆಗಸ್ಟ್ ನಲ್ಲಿ ಜಾರಿ ನಿರ್ದೇಶನಾಲಯದಿಂದ ದಾಳಿ ನಡೆದಿತ್ತು. ಈ ಇಬ್ಬರೂ ಸೋದರರು ವಂಚನೆ ಹಾಗೂ ಹಣ ದುರುಪಯೋಗ ಎಂದು 740 ಕೋಟಿ ರುಪಾಯಿ ತನಕ ಮೋಸ ಮಾಡಿದ್ದಾರೆ ಎಂದು ರೆಲಿಗೇರ್ ಫಿನ್ವೆಸ್ಟ್ ಆರೋಪ ಮಾಡಿದೆ. ಸಿಂಗ್ ಸೋದರರ ವಿರುದ್ಧ ದೆಹಲಿ ಪೊಲೀಸ್ ನ ಆರ್ಥಿಕ ಅಪರಾಧ ವಿಭಾಗದಲ್ಲಿ ರೆಲಿಗೇರ್ ಫಿನ್ವೆಸ್ಟ್ ದೂರು ದಾಖಲಿಸಿತ್ತು.

ಪಿಎಂಸಿ ಬ್ಯಾಂಕ್ ಗೆ 4355 ಕೋಟಿ ನಷ್ಟ; ಮುಂಬೈ ಪೊಲೀಸರಿಂದ FIRಪಿಎಂಸಿ ಬ್ಯಾಂಕ್ ಗೆ 4355 ಕೋಟಿ ನಷ್ಟ; ಮುಂಬೈ ಪೊಲೀಸರಿಂದ FIR

ಕಳೆದ ಮೇ ತಿಂಗಳಲ್ಲಿ ದೂರು ದಾಖಲಿಸಿತ್ತು. ಈ ಇಬ್ಬರ ಮೆಲೆ 740 ಕೋಟಿ ರುಪಾಯಿ ತನಕ ವಂಚನೆ, ಮೋಸ ಹಾಗೂ ಹಣಕಾಸು ದುರುಪಯೋಗದ ಆರೋಪ ಮಾಡಲಾಗಿದೆ. ಜಾರಿ ನಿರ್ದೇಶನಾಲಯದಿಂದ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Ranbaxy Ex Promoter Shivinder Singh Arrested In Cheating Case

ಈ ಇಬ್ಬರು ಸೋದರರ ತಂದೆ ರಾನ್ ಬ್ಯಾಕ್ಸಿ ಕಂಪೆನಿಯ ಸ್ಥಾಪಕರು. 2008ರಲ್ಲಿ ಈ ಕಂಪೆನಿಯನ್ನು ಜಪಾನಿನ ದಾಯ್ಚಿ ಸಾಂಕ್ಯೋಗೆ ಮಾರಿ, ಕುಟುಂಬಕ್ಕೆ ಸೇರಿದ ಫೋರ್ಟೀಸ್ ಹೆಲ್ತ್ ಕೇರ್ ಹಾಗೂ ರೆಲಿಗೇರ್ ಎಂಟರ್ ಪ್ರೈಸಸ್ ನೋಡಿಕೊಳ್ಳುತ್ತಿದ್ದಾರೆ. ಆರ್ಥಿಕ ಸಮಸ್ಯೆಯಿಂದ ಎರಡೂ ಕಂಪೆನಿಗಳಲ್ಲಿ ಅವರ ಮಾಲೀಕತ್ವಕ್ಕೆ ಕುಂದು ಬಂದಿತು.

ಅಮೆರಿಕದ ಫುಡ್ ಮತ್ತು ಡ್ರಗ್ ಅಡ್ಮಿನಿಸ್ಟ್ರೇಷನ್ ನಿಂದ ರಾನ್ ಬ್ಯಾಕ್ಸಿ ಕಂಪೆನಿಯು ತನಿಖೆ ಎದುರಿಸುತ್ತಿರುವುದನ್ನು ಮುಚ್ಚಿಟ್ಟು, ಕಂಪೆನಿ ಷೇರುಗಳನ್ನು ಸಿಂಗ್ ಸೋದರರು ಮಾರಿದ್ದಾರೆ ಎಂದು ಜಪಾನ್ ಕಂಪೆನಿ ಕೋರ್ಟ್ ಮೆಟ್ಟಿಲೇರಿತ್ತು. ಆದ್ದರಿಂದ ಸುಪ್ರೀಂ ಕೋರ್ಟ್ ಈ ವರ್ಷದ ಆರಂಭದಲ್ಲಿ ಆದೇಶ ನೀಡಿ, ಜಪಾನ್ ಕಂಪೆನಿಗೆ 3,500 ಕೋಟಿ ರುಪಾಯಿ ಹಣ ನೀಡದಿದ್ದರೆ ಜೈಲು ಸೇರಬೇಕಾಗುತ್ತದೆ ಎಂದು ಸಿಂಗ್ ಸೋದರರಿಗೆ ತಿಳಿಸಿತ್ತು.

ಕಳೆದ ವರ್ಷದ ಫೆಬ್ರವರಿಯಲ್ಲಿ ಫೋರ್ಟೀಸ್ ಹೆಲ್ತ್ ಕೇರ್ ನ ಆಡಳಿತ ಮಂಡಳಿ ನಿರ್ದೇಶಕರ ಹುದ್ದೆಯಿಂದ ಇಬ್ಬರೂ ರಾಜೀನಾಮೆ ನೀಡಿದ್ದರು. ಇನ್ನು ತನ್ನ ಅಣ್ಣನ ವಿರುದ್ಧವೇ ಶಿವಿಂದರ್ ಸಿಂಗ್ ಕಳೆದ ಸೆಪ್ಟೆಂಬರ್ ನಲ್ಲಿ ದಾವೆ ಹೂಡಿದ್ದರು. ಆರ್ ಎಚ್ ಸಿ ಹೋಲ್ಡಿಂಗ್, ರೆಲಿಗೇರ್ ಹಾಗೂ ಫೋರ್ಟೀಸ್ ನಲ್ಲಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಈ ದಾವೆ ಹೂಡಿದ್ದರು.

English summary
740 crore cheating case against Ranbaxy ex promoter Shivinder Singh with Delhi police, now Singh arrested.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X