ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದೇ ತಿಂಗಳಲ್ಲಿ ಹೂಡಿಕೆದಾರರ ಹಣವನ್ನ ದ್ವಿಗುಣಗೊಳಿಸಿದ ಷೇರು: ಯಾವುದು ಗೊತ್ತೆ?

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 05: ಕೊರೊನಾವೈರಸ್ ಹಾವಳಿಯಿಂದಾಗಿ ಇಡೀ ದೇಶದಲ್ಲಿ ಜನರು ವಿವಿಧ ರೀತಿಯಲ್ಲಿ ಸಾಕಷ್ಟು ನಷ್ಟವನ್ನು ಅನುಭವಿಸಿದ್ದಾರೆ. ಅನೇಕ ಕಂಪನಿಗಳು ಚೇತರಿಸಿಕೊಳ್ಳಲಾರದ ಮಟ್ಟವನ್ನು ತಲುಪಿವೆ. ಇನ್ನೂ ಕೆಲ ಕಂಪನಿಗಳು ಮುಂದುವರಿಯಲಾರದ ಪರಿಸ್ಥಿತಿಯಲ್ಲಿವೆ.

ಇದರ ನಡುವೆ ಕೊರೊನಾ ನಡುವೆ ಲಾಭಗಳಿಸಿದ ಕಂಪನಿಗಳ ಉದಾಹರಣೆಯನ್ನು ನಾವು ನೋಡಬಹುದು. ಅಮೆರಿಕಾದಲ್ಲಿ ಅಮೆಜಾನ್, ಟೆಸ್ಲಾ ಕಂಪನಿಯು ವಿಶ್ವದಲ್ಲೇ ಅತಿ ಹೆಚ್ಚು ಲಾಭಗಳಿಸಿದವು. ಭಾರತದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನಂಬಲು ಸಾಧ್ಯವಾಗದಷ್ಟು ಹೂಡಿಕೆದಾರರನ್ನು ಸೆಳೆದು ಜಿಯೋ ಪ್ಲಾಟ್‌ಫಾರ್ಮ್‌ಗಳನ್ನು ಮತ್ತಷ್ಟು ಬಲಿಷ್ಠಗೊಳಿಸಿದೆ.

1 ವರ್ಷದ ಹಿಂದೆ 43 ರೂಪಾಯಿ ಮೌಲ್ಯದ ಷೇರು, ಇಂದು 573 ರೂಪಾಯಿ: ಯಾವ ಕಂಪನಿ ಷೇರು ಗೊತ್ತೆ?1 ವರ್ಷದ ಹಿಂದೆ 43 ರೂಪಾಯಿ ಮೌಲ್ಯದ ಷೇರು, ಇಂದು 573 ರೂಪಾಯಿ: ಯಾವ ಕಂಪನಿ ಷೇರು ಗೊತ್ತೆ?

ಇದರ ನಡುವೆ ಚೆನ್ನೈ ಮೂಲದ ಐಟಿ ಸೇವಾ ಸಂಸ್ಥೆ ರಾಮ್ಕೊ ಸಿಸ್ಟಮ್ಸ್ ಶುಕ್ರವಾರದ (ಸೆಪ್ಟೆಂಬರ್ 4, 2020) ವಹಿವಾಟಿನಲ್ಲಿ 12 ರೂಪಾಯಿ ಏರಿಕೆಗೊಂಡು 52 ವಾರಗಳಲ್ಲಿ ಗರಿಷ್ಠ 275 ರೂಪಾಯಿಗೆ ತಲುಪಿದೆ. ಈ ಮೂಲಕ ಮಾಸಿಕ ಆಧಾರದ ಮೇಲೆ ಇದು ಕೇವಲ ಒಂದು ತಿಂಗಳಲ್ಲಿ ಹೂಡಿಕೆದಾರರ ಸಂಪತ್ತನ್ನು ದ್ವಿಗುಣಗೊಳಿಸಿದೆ.

Ramco System Ltd Stock Jumped Over 100 Percent In 1 Month

ಚೆನ್ನೈ ಮೂಲದ ಈ ಐಟಿ ಕಂಪನಿಯು 3 ವರ್ಷಗಳ ಅವಧಿಯಲ್ಲಿ, ಬೆಂಚ್‌ಮಾರ್ಕ್ ಸೂಚ್ಯಂಕದಲ್ಲಿ 13 ಪ್ರತಿಶತದಷ್ಟು ಲಾಭದ ವಿರುದ್ಧ ಆದಾಯವು ಶೇಕಡಾ 277ರಷ್ಟಿದೆ.

ರಾಮ್ಕೊ ಸಿಸ್ಟಮ್ಸ್ ಷೇರು ಮೌಲ್ಯ ಹೆಚ್ಚಲು ಪ್ರಮುಖ ಕಾರಣಗಳು:

1. ರಾಮ್ಕೊ ಸಿಸ್ಟಂಗಳಲ್ಲಿ ಎಚ್‌ಡಿಎಫ್‌ಸಿ ಮ್ಯೂಚುಯಲ್ ಫಂಡ್ ಖರೀದಿ ಪಾಲು ಕಳೆದ ವಾರದಲ್ಲಿ ಹೆಚ್ಚಿಸಲಾಗಿದೆ ಎಂದು ಮ್ಯೂಚುಯಲ್ ಸ್ಟಾಕ್ ಫೈಲಿಂಗ್‌ನಲ್ಲಿ ಎಚ್‌ಡಿಎಫ್‌ಸಿ ಮ್ಯೂಚುವಲ್ ಫಂಡ್‌ ತಿಳಿಸಿದೆ. ರಾಮ್ಕೊ ಸಿಸ್ಟಂಗಳ ಷೇರುದಾರರಲ್ಲಿ ಆಗಸ್ಟ್ 26 ರ ವೇಳೆಗೆ ಶೇಕಡಾ 2.25 ರಷ್ಟು ಹೆಚ್ಚಳವಾಗಿದೆ ಎಂದು ಸ್ಟಾಕ್ ಫೈಲಿಂಗ್‌ನಲ್ಲಿ ತಿಳಿಸಿದೆ. ಎಚ್‌ಡಿಎಫ್‌ಸಿ ಮ್ಯೂಚುವಲ್ ಫಂಡ್ 157,337 ಈಕ್ವಿಟಿ ಷೇರುಗಳನ್ನು ಖರೀದಿಸಿತು

2. ಕಂಪನಿಯು ಮೊದಲ ಬಾರಿಗೆ ನಿವ್ವಳ ಲಾಭವನ್ನು 14 ಕೋಟಿ ರೂ. ಹಣಕಾಸು ವರ್ಷ 21 ಕ್ಕೆ ಇದೇ ತ್ರೈಮಾಸಿಕದಲ್ಲಿ 3 ಕೋಟಿ ರೂಪಾಯಿಯಷ್ಟಿತ್ತು.

3. ಕಂಪನಿಯು ತನ್ನ ಬಂದರುಗಳು ಮತ್ತು ಲಾಜಿಸ್ಟಿಕ್ಸ್ ಕಾರ್ಯಾಚರಣೆಗಳ ಮೂಲಕ ಡಿಜಿಟಲ್ ರೂಪಾಂತರವನ್ನು ಒದಗಿಸಲು ಪ್ರಮುಖ ಉಪಯುಕ್ತತೆಗಳು ಮತ್ತು ಮೂಲಸೌಕರ್ಯ ಗುಂಪಿನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಅದರೊಂದಿಗೆ ಕಂಪನಿಯು ಮಲೇಷ್ಯಾದಲ್ಲಿ ಶೇಕಡಾ 50ರಷ್ಟು ಬಂದರು ಚಟುವಟಿಕೆಯ ಕಾರ್ಯಾಚರಣೆಯನ್ನು ನಿರ್ವಹಿಸುತ್ತದೆ.

4. ಜೂನ್‌ನಲ್ಲಿ ಪ್ರಮುಖ ಹೂಡಿಕೆದಾರ ವಿಜಯ್ ಕೆಡಿಯಾ ಕಂಪನಿಯಲ್ಲಿ 3 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದು, ಆತನ ಪಾಲು ಈಗ ಶೇಕಡಾ 1.1ರಷ್ಟಿದೆ. ಆದರೆ ಡಿಸೆಂಬರ್ ತ್ರೈಮಾಸಿಕದಲ್ಲಿ ಅವರು ಸಂಸ್ಥೆಯಲ್ಲಿ ಯಾವುದೇ ಹಿಡುವಳಿಯನ್ನ ಹೊಂದಿರಲಿಲ್ಲ.

English summary
Chennai based IT services firm Ramco Systems scaled to its 52-high in Friday's (September 4, 2020) session of Rs. 275. And at the same on a monthly basis it double investors wealth in just a month
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X