ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಕೇಶ್ ಜುಂಜುನ್‌ವಾಲಾರ 'ಆಕಾಶ್ ಏರ್' ಆಗಸ್ಟ್ 7ರಿಂದ ಹಾರಾಟ

|
Google Oneindia Kannada News

ನವದೆಹಲಿ,ಜುಲೈ. 22: ರಾಕೇಶ್ ಜುಂಜುನ್‌ವಾಲಾ ಮಾಲೀಕತ್ವದ 'ಆಕಾಶ ಏರ್' ತನ್ನ ಮೊದಲ ವಾಣಿಜ್ಯ ಹಾರಾಟವನ್ನು ಆಗಸ್ಟ್ 7ರಂದು ಆರಂಭಿಸಲಿದೆ. ಮುಂಬೈ- ಅಹಮದಾಬಾದ್ ಮಾರ್ಗದಲ್ಲಿ ಮೊದಲ ವಿಮಾನ ಹಾರಾಟ ನಡೆಸಲಿದೆ.

ಬೋಯಿಂಗ್ 737 ಮ್ಯಾಕ್ಸ್ ವಿಮಾನವನ್ನು ಆಕಾಶ್‌ ಏರ್ ಹಾರಿಸಲಿದೆ. ಮುಂಬೈ-ಅಹಮದಾಬಾದ್ ಮಾರ್ಗದಲ್ಲಿ ವಾರಕ್ಕೊಮ್ಮೆ ಕಾರ್ಯನಿರ್ವಹಿಸುವ 28 ವಿಮಾನಗಳ ಟಿಕೆಟ್‌ಗಳ ಮಾರಾಟವನ್ನು ಪ್ರಾರಂಭಿಸಿದೆ. ಹಾಗೆಯೇ ಆಗಸ್ಟ್ 13 ರಿಂದ ಬೆಂಗಳೂರು- ಕೊಚ್ಚಿ ಮಾರ್ಗದಲ್ಲಿ ಹಾರುವ 28 ವಿಮಾನಗಳ ಟಿಕೆಟ್‌ ಅನ್ನು ಮಾರಾಟ ಮಾಡಲಿದೆ ಎಂದು ಶುಕ್ರವಾರದ ಪ್ರಕಟಣೆಯಲ್ಲಿ ತಿಳಿಸಿದೆ.

ವಾಣಿಜ್ಯ ವಿಮಾನ ಹಾರಾಟಕ್ಕೆ ಅನುಮತಿ ಪಡೆದ ಆಕಾಶ ಏರ್: ಜುಲೈ ಅಂತ್ಯದಿಂದ ಆರಂಭವಾಣಿಜ್ಯ ವಿಮಾನ ಹಾರಾಟಕ್ಕೆ ಅನುಮತಿ ಪಡೆದ ಆಕಾಶ ಏರ್: ಜುಲೈ ಅಂತ್ಯದಿಂದ ಆರಂಭ

ಎರಡು ಬೋಯಿಂಗ್ 737 ಮ್ಯಾಕ್ಸ್ ವಿಮಾನಗಳಲ್ಲಿ ಹಾರಾಟ ಕಾರ್ಯಾಚರಣೆ ನಡೆಸಲಾಗುವುದು ಎಂದು ಏರ್‌ಲೈನ್ ಕ್ಯಾರಿಯರ್ ಹೇಳಿದೆ. ಈಗಾಗಲೇ ಬೋಯಿಂಗ್ ವಿಮಾನ ಸಿದ್ಧವಾಗಿದೆ ಮತ್ತು ಎರಡನೇಯ ಸಿದ್ಧತೆಯನ್ನು ಈ ತಿಂಗಳ ಕೊನೆಯಲ್ಲಿ ನಿಗದಿಪಡಿಸಲಾಗಿದೆ ಎಂದು ಅದು ಹೇಳಿದೆ.

Rakesh Jhunjhunwalas Akash is ready to fly from August 7

ನಾವು ಮುಂಬೈ ಮತ್ತು ಅಹಮದಾಬಾದ್ ನಡುವಿನ ವಿಮಾನಗಳೊಂದಿಗೆ ಹೊಚ್ಚ ಹೊಸ ಬೋಯಿಂಗ್ 737 ಮ್ಯಾಕ್ಸ್ ವಿಮಾನದೊಂದಿಗೆ ಕಾರ್ಯಾಚರಣೆಯನ್ನು ಪ್ರಾರಂಭಿಸುತ್ತೇವೆ ಎಂದು ಆಕಾಶ ಏರ್‌ನ ಸಹ-ಸಂಸ್ಥಾಪಕ ಮತ್ತು ಮುಖ್ಯ ವಾಣಿಜ್ಯ ಅಧಿಕಾರಿ ಪ್ರವೀಣ್ ಅಯ್ಯರ್ ಅವರನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.

 ರಾಕೇಶ್ ಒಡೆತನದ ಅಕಾಶ ಏರ್ ಸಿಬ್ಬಂದಿ ಯೂನಿಫಾರ್ಮ್ ಲುಕ್ ಹೇಗಿದೆ? ರಾಕೇಶ್ ಒಡೆತನದ ಅಕಾಶ ಏರ್ ಸಿಬ್ಬಂದಿ ಯೂನಿಫಾರ್ಮ್ ಲುಕ್ ಹೇಗಿದೆ?

ನಾವು ಮೊದಲ ವರ್ಷದಲ್ಲಿ ನಾವು ಪ್ರತಿ ತಿಂಗಳು ಎರಡು ವಿಮಾನಗಳನ್ನು ನಮ್ಮ ತಂಡಕ್ಕೆ ಸೇರಿಸುವುದರಿಂದ, ನಮ್ಮ ಜಾಲ ವಿಸ್ತರಣೆ ಯೋಜನೆಗಳನ್ನು ಹೆಚ್ಚಿಸಲು ಹಂತ ಹಂತವಾಗಿ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳುತ್ತೇವೆ. ಅಲ್ಲದೇ ಹೆಚ್ಚಿನ ನಗರಗಳಲ್ಲಿ ಕ್ರಮೇಣವಾಗಿ ಹಾರಾಟ ಹೆಚ್ಚಿಸುತ್ತೇವೆ ಎಂದು ಅಯ್ಯರ್ ಹೇಳಿದರು.

Rakesh Jhunjhunwalas Akash is ready to fly from August 7

ಏವಿಯೇಷನ್ ​​ರೆಗ್ಯುಲೇಟರ್ ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ ​​(ಡಿಜಿಸಿಎ) ಜುಲೈ 7ರಂದು ಆಕಾಶ ಏರ್‌ಗೆ ಅದರ ಏರ್ ಆಪರೇಟರ್ ಪ್ರಮಾಣಪತ್ರವನ್ನು (ಎಒಸಿ) ನೀಡಿದೆ. ಆಗಸ್ಟ್‌ನಲ್ಲಿ ಡಿಜಿಸಿಎಯಿಂದ ಗ್ರೀನ್ ಸಿಗ್ನಲ್ ಪಡೆದ ನಂತರ 72 ಮ್ಯಾಕ್ಸ್ ವಿಮಾನಗಳನ್ನು ಖರೀದಿಸಲು ಆಕಾಶ್ ಏರ್ ಕಳೆದ ವರ್ಷ ನವೆಂಬರ್ 26ರಂದು ಬೋಯಿಂಗ್‌ನೊಂದಿಗೆ ಒಪ್ಪಂದ ಮಾಡಿಕೊಂಡಿತ್ತು.

Recommended Video

Rocky Pointing ಟೀಂ ಇಂಡಿಯಾ ಕೋಚ್ ಆಗಿದ್ದಿದ್ರೆ Virat Kohli ಗೆ ಏನ್ ಮಾಡ್ತಿದ್ರು? | *Cricket | OneIndia

English summary
Rakesh Jhunjhunwala-owned Aakash Air will launch its first commercial flight on August 7 on the Mumbai-Ahmedabad route.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X