ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಷೇರು ಹೂಡಿಕೆದಾರ ರಾಕೇಶ್ ಝುಂಝುನ್ ವಾಲಾ ಮೇಲೆ 'ಸೆಬಿ' ಕಣ್ಣು

|
Google Oneindia Kannada News

ನವದೆಹಲಿ, ಜೂನ್ 16: ದೇಶದ ಖ್ಯಾತ ಷೇರು ಹೂಡಿಕೆದಾರರಲ್ಲಿ ಒಬ್ಬರಾದ ರಾಕೇಶ್ ಝುಂಝುನ್ ವಾಲಾ ಅವರ ಮತ್ತು ಕುಟುಂಬದ ಒಡೆತನದ ಶಿಕ್ಷಣ ಸಂಸ್ಥೆಯಾದ ಆಪ್ಟೆಕ್ ಲಿಮಿಟೆಡ್‌ನ ಷೇರುಗಳಲ್ಲಿ ಆಂತರಿಕ ವಹಿವಾಟು ನಡೆಸಿದ ಆರೋಪದ ಮೇಲೆ ಮಾರುಕಟ್ಟೆ ನಿಯಂತ್ರಕ ಸೆಕ್ಯುರಿಟೀಸ್ & ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಶೋಕಾಸ್ ನೋಟಿಸ್ ಅನ್ನು ನೀಡಿದೆ.

Recommended Video

ರೈತರ ಪಾಲಿಗೆ ಉತ್ತಮ ಫಸಲನ್ನು ನೀಡಲಿದೆ 2020 | Oneindia Kannada

ನಾಲ್ಕು ವರ್ಷಗಳ ಹಿಂದೆ ಸಂಸ್ಥೆಯ ಷೇರುಗಳಲ್ಲಿ ವಹಿವಾಟು ನಡೆಸಿದ್ದಕ್ಕಾಗಿ ಝುಂಝುನ್ ವಾಲಾ, ಅವರ ಕುಟುಂಬ ಸದಸ್ಯರು ಮತ್ತು ಆಪ್ಟೆಕ್‌ನ ಇತರ ಮಂಡಳಿಯ ಸದಸ್ಯರನ್ನು ಪರಿಶೀಲಿಸಿದೆ. ಬಿಲಿಯನೇರ್ ಹೂಡಿಕೆದಾರರ ಪೋರ್ಟ್ಫೋಲಿಯೊದಲ್ಲಿ ನಿರ್ವಹಣಾ ನಿಯಂತ್ರಣವನ್ನು ಹೊಂದಿರುವ ಏಕೈಕ ಕಂಪನಿ ಅಂದರೆ ಅದು ಆಪ್ಟೆಕ್.

ಝುಂಝುನ್ ವಾಲಾ ಅವರ ಬ್ಯಾಂಕ್ ಖಾತೆಗಳನ್ನು "ಲಾಭ ಗಳಿಸಿದ" ಮಟ್ಟಿಗೆ ಫ್ರೀಜ್ ಮಾಡಲು ಆದೇಶಿಸಲು ಸೆಬಿ ಯೋಜಿಸಿದೆ ಎಂದು ನೋಟಿಸ್ ತಿಳಿಸಿದೆ, ಈ ವಿಷಯದ ಬಗ್ಗೆ ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.

Rakesh Jhunjhunwala Under Sebi Lens: Show-Cause Notice To Rakesh Jhunjhunwala

ಈ ವರ್ಷದ ಜನವರಿ 24ರಂದು, ಆಪ್ಟೆಕ್ ಷೇರುಗಳಲ್ಲಿ ಆಂತರಿಕ ವಹಿವಾಟು ನಡೆಸಿದ ಆರೋಪದ ಮೇಲೆ ಝುಂಝುನ್ ವಾಲಾವನ್ನು ಮಾರುಕಟ್ಟೆ ನಿಯಂತ್ರಕರಿಂದ(ಸೆಬಿ) ತನಿಖೆ ನಡೆಸಲಾಯಿತು. ಝುಂಝುನ್ ವಾಲಾ ಜೊತೆಗೆ, ಸಹೋದರ ರಾಜೇಶ್, ಪತ್ನಿ ರೇಖಾ, ಸಹೋದರಿ ಸುಧಾ ಮತ್ತು ಅತ್ತೆ ಸುಶೀಲದೇವಿ ಗುಪ್ತಾ ಅವರನ್ನು ಈ ವಿಷಯದಲ್ಲಿ ಸೆಬಿ ಪ್ರಶ್ನಿಸಲಾಗಿತ್ತು.

ಸಿಇಒ ಮತ್ತು ಆಪ್ಟೆಕ್ ನಿರ್ದೇಶಕ ಉತ್ಪಾಲ್ ಶೆತ್ ಅವರ ಸಹೋದರಿ ಉಷ್ಮಾ ಶೆತ್ ಸುಲೇ ಅವರನ್ನು ಸೆಬಿ ಕರೆಸಿತ್ತು. ಹೂಡಿಕೆದಾರ ರಮೇಶ್ ಎಸ್ ದಮಾನಿ ಮತ್ತು ನಿರ್ದೇಶಕ ಮಧು ಜಯಕುಮಾರ್ ಸೇರಿದಂತೆ ಇತರ ಮಂಡಳಿಯ ಸದಸ್ಯರ ಪಾತ್ರದ ಬಗ್ಗೆಯೂ ಸೆಬಿ ತನಿಖೆ ನಡೆಸುತ್ತಿದೆ.

ಸೆಬಿ ಮೇ 2016 ಮತ್ತು ಅಕ್ಟೋಬರ್ 2016 ರ ನಡುವಿನ ವಹಿವಾಟಿನ ಬಗ್ಗೆ ತನಿಖೆ ನಡೆಸುತ್ತಿದೆ. ಭಾರತೀಯ ಷೇರು ಮಾರುಕಟ್ಟೆಯ ವಾರೆನ್ ಬಫೆಟ್ ಎಂದು ಕರೆಯಲ್ಪಡುವ ರಾಕೇಶ್ ಝುಂಝುನ್ ವಾಲಾ ಮತ್ತು ಅವರ ಕುಟುಂಬ ಸದಸ್ಯರು ಆಪ್ಟೆಕ್‌ನ ಹಣಕಾಸು ಮತ್ತು ವಿಸ್ತರಣಾ ಯೋಜನೆಗಳ ಬಗ್ಗೆ ಮಾಹಿತಿಯನ್ನು ಹೊಂದಿದ್ದರು. ಈ ಮಾಹಿತಿಯ ಆಧಾರದ ಮೇಲೆ ವಹಿವಾಟು ನಡೆದಿದೆ ಎಂಬ ಆರೋಪ ಇದೆ.

ಜೊತೆಗೆ ಷೇರುಗಳಲ್ಲಿ ವ್ಯಾಪಾರ ಮಾಡಲು ನಿರ್ದೇಶಕರಿಗೆ ಏಕೆ ಆದ್ಯತೆ ನೀಡಿದೆ ಎಂದು ಆಪ್ಟೆಕ್‌ನಿಂದ ತಿಳಿಯಲು ಮಾರುಕಟ್ಟೆ ನಿಯಂತ್ರಕವು ಪ್ರಯತ್ನಿಸಿದೆ.

ಷೇರುಗಳ ಆಂತರಿಕ ವಹಿವಾಟು ಎಂದರೇನು?

ಒಬ್ಬ ವ್ಯಕ್ತಿಗೆ ಸಂಬಂಧಪಟ್ಟಂತೆ ಪಟ್ಟಿ ಮಾಡಲಾದ ಷೇರು ವ್ಯಾಪಾರವು ನಿರ್ವಹಣೆಯಲ್ಲಿರುವ ಅಥವಾ ಅವರ ಹತ್ತಿರವಿರುವ ವ್ಯಕ್ತಿಗಳಿಂದ ಗೌಪ್ಯ ಮಾಹಿತಿಗೆ ಪ್ರವೇಶವನ್ನು ಹೊಂದುವ ಮೂಲಕ ಷೇರು ವಿನಿಮಯ ಕೇಂದ್ರದಲ್ಲಿ ಒಬ್ಬರ ಸ್ವಂತ ಲಾಭಕ್ಕಾಗಿ ವ್ಯಾಪಾರ ಮಾಡುವ ಕಾನೂನುಬಾಹಿರ ಅಭ್ಯಾಸ.

English summary
The Securities & Exchange Board of India (Sebi) has shot off a show-cause notice to ace investor Rakesh Jhunjhunwala for alleged insider trading in the shares of Aptech
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X