ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರೂರ್ ವೈಶ್ಯ ಬ್ಯಾಂಕ್‌ನಲ್ಲಿ ಪಾಲನ್ನು ಹೆಚ್ಚಿಸಿಕೊಂಡ ರಾಕೇಶ್‌ ಜುಂಜುನ್‌ವಾಲಾ

|
Google Oneindia Kannada News

ನವದೆಹಲಿ, ಜುಲೈ 27: ಖ್ಯಾತ ಹೂಡಿಕೆದಾರ ರಾಕೇಶ್‌ ಜುಂಜುನ್‌ವಾಲಾ ಅವರು ಕರೂರ್ ವೈಶ್ಯ ಬ್ಯಾಂಕಿನಲ್ಲಿ ತಮ್ಮ ಪಾಲನ್ನು ಹೆಚ್ಚಿಸಿಕೊಂಡಿದ್ದು, ಬ್ಯಾಂಕಿನ ಇತ್ತೀಚಿನ ಷೇರುದಾರರ ಮಾಹಿತಿಯಲ್ಲಿ ಬಹಿರಂಗವಾಗಿದೆ.

Recommended Video

EMISAT ಪ್ರಕಾರ India China Border ನಲ್ಲಿ ಇನ್ನು ಬೆಂಕಿ ಆರಿಲ್ಲ | Oneindia Kannada

ರಾಕೇಶ್‌ ಜುಂಜುನ್‌ವಾಲಾ ಅವರು ಜೂನ್ ತ್ರೈಮಾಸಿಕದಲ್ಲಿ ಕರೂರ್ ವೈಶ್ಯ ಬ್ಯಾಂಕಿನಲ್ಲಿ ತಮ್ಮ ಪಾಲನ್ನು ಶೇ. 4.5ರಷ್ಟು ಹೆಚ್ಚಿಸಿದ್ದಾರೆ, ಮಾರ್ಚ್ ತ್ರೈಮಾಸಿಕದಲ್ಲಿ ಇದು ಶೇ. 4.2ರಷ್ಟಿತ್ತು.

ಷೇರು ಹೂಡಿಕೆದಾರ ರಾಕೇಶ್ ಝುಂಝುನ್ ವಾಲಾ ಮೇಲೆ 'ಸೆಬಿ' ಕಣ್ಣುಷೇರು ಹೂಡಿಕೆದಾರ ರಾಕೇಶ್ ಝುಂಝುನ್ ವಾಲಾ ಮೇಲೆ 'ಸೆಬಿ' ಕಣ್ಣು

ಷೇರುದಾರರ ಮಾದರಿಯು ಕರೂರ್ ವೈಶ್ಯ ಬ್ಯಾಂಕಿನಲ್ಲಿ ಸುಮಾರು ಶೇ. 17ರಷ್ಟು ಪಾಲನ್ನು ಹೊಂದಿರುವ ಮ್ಯೂಚುವಲ್ ಫಂಡ್‌ಗಳನ್ನು ತೋರಿಸಿದರೆ, ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಶೇ. 21.11ರಷ್ಟಿದೆ.

Rakesh Jhunjhunwala Rises Stakes In Karur Vysya Bank

ಸೆನ್ಸೆಕ್ಸ್‌ನಲ್ಲಿ ಶೇ. 0.4ರಷ್ಟು ಕುಸಿತಕ್ಕೆ ಹೋಲಿಸಿದರೆ ಕರೂರ್ ವೈಶ್ಯ ಬ್ಯಾಂಕಿನ ಷೇರುಗಳು ಇಂದು ಬಿಎಸ್‌ಇಯಲ್ಲಿ ಶೇ. 0.8ರಷ್ಟು ಏರಿಕೆ ಕಂಡಿತು, ಅಲ್ಲದೆ ಗರಿಷ್ಠ 31.90 ರುಪಾಯಿಗೆ ತಲುಪಿದೆ. ಬ್ಯಾಂಕಿನ ಷೇರುಗಳು 52 ವಾರಗಳ ಕನಿಷ್ಠ 18.15 ರಿಂದ ತೀವ್ರವಾಗಿ ಏರಿಕೆಯಾಗಿದ್ದು, ಈ ವರ್ಷದ ಮಾರ್ಚ್‌ನಲ್ಲಿ ಕುಸಿತ ಅನುಭವಿಸಿತ್ತು.

ಇತರ ಮೂಲಗಳಿಂದ ಹೆಚ್ಚಿನ ಆದಾಯದ ಮೇಲೆ ಮಾರ್ಚ್ 2020 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಬ್ಯಾಂಕ್ ನಿವ್ವಳ ಲಾಭದಲ್ಲಿ ಶೇ. 39.5 ರಷ್ಟು ಏರಿಕೆಗೊಂಡು 83.70 ಕೋಟಿಗೆ ತಲುಪಿದೆ. ಇದು 2018-19ರ ಇದೇ ಅವಧಿಯಲ್ಲಿ 60.02 ಕೋಟಿ ನಿವ್ವಳ ಲಾಭವನ್ನು ದಾಖಲಿಸಿದೆ.

ಇತ್ತೀಚೆಗಷ್ಟೇ ರಮೇಶ್ ಬಾಬು ಬೊಡ್ಡು ಅವರನ್ನು ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಕ ಮಾಡಿರುವುದಾಗಿ ಕರೂರ್ ವೈಶ್ಯ ಬ್ಯಾಂಕ್ ಪ್ರಕಟಿಸಿದೆ.

English summary
India's Ace Invester Rakesh Jhunjhunwala has increased his stake in private lender Karur Vysya Bank, shows the latest shareholding pattern of the bank.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X