ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಿವಿ 9 ವಾಹಿನಿ ಕೊಳ್ಳಲಿದ್ದಾರೆಯೇ ಸಂಸದ ರಾಜೀವ್ ಚಂದ್ರಶೇಖರ್?

ಕನ್ನಡದ ಜನಪ್ರಿಯ ಸುದ್ದಿ ವಾಹಿನಿಯಾದ ಟಿ.ವಿ. 9 ಕೊಳ್ಳಲು ಬಿಜೆಪಿ ಸಂಸದ ರಾಜೀವ್ ಚಂದ್ರಶೇಖರ್ ನಿರ್ಧಾರ. ವಾಹಿನಿಯಲ್ಲಿರುವವ ಶೇ. 60ರಷ್ಟು ಷೇರು ಕೊಳ್ಳಲು ರಾಜೀವ್ ಚಂದ್ರಶೇಖರ್ ಸಿದ್ಧ ಎಂದ ಮೂಲಗಳು.

By ಒನ್ ಇಂಡಿಯಾ ನ್ಯೂಸ್ ಡೆಸ್ಕ್
|
Google Oneindia Kannada News

ಬೆಂಗಳೂರು, ಜುಲೈ 15: ಕನ್ನಡ ಸುದ್ದಿ ವಾಹಿನಿಗಳ ಲೋಕದಲ್ಲಿ ಅತ್ಯಂತ ಜನಪ್ರಿಯ ಸುದ್ದಿಸಂಸ್ಥೆಯೆಂದೆನಿಸಿರುವ 'ಟಿವಿ 9 ಕನ್ನಡ' ವಾಹಿನಿಯನ್ನು ಕೊಳ್ಳಲು ಬಿಜೆಪಿ ಸಂಸದ ರಾಜೀವ್ ಚಂದ್ರಶೇಖರ್ ಪ್ರಯತ್ನಿಸಿದ್ದಾರೆಂಬ ವರದಿಯೊಂದು ಮಾಧ್ಯಮ ಲೋಕದಲ್ಲಿ ಗುಲ್ಲೆಬ್ಬಿಸಿದೆ.

'ಜ್ಯೂಪಿಟರ್ ಕ್ಯಾಪಿಟಲ್ಸ್' ಎಂಬ ಸಂಸ್ಥೆಯ ಒಡೆಯರೂ ಆಗಿರುವ ರಾಜೀವ್ ಚಂದ್ರಶೇಖರ್, ಟಿವಿ 9ನಲ್ಲಿನ ಸುಮಾರು ಶೇ. 60ರಷ್ಟು ಷೇರನ್ನು ಕೊಳ್ಳಲು ಮುಂದಾಗಿದ್ದಾರೆಂದು 'ಎಕ್ಸ್ ಚೇಂಜ್ 4 ಮೀಡಿಯಾ' ಎಂಬ ಸುದ್ದಿಸಂಸ್ಥೆ ತನ್ನ ವರದಿಯಲ್ಲಿ ಹೇಳಿದೆ.

ಬೆಂಗಳೂರು ಮತದಾರರ ಪಟ್ಟಿಯಲ್ಲಿ 50 ಸಾವಿರ ಅಕ್ರಮ ಬಾಂಗ್ಲಾ ಪ್ರಜೆಗಳು!ಬೆಂಗಳೂರು ಮತದಾರರ ಪಟ್ಟಿಯಲ್ಲಿ 50 ಸಾವಿರ ಅಕ್ರಮ ಬಾಂಗ್ಲಾ ಪ್ರಜೆಗಳು!

Rajeev Chandrasekhar will purchase TV 9 Kannada, says rumours

ಈ ಬಗ್ಗೆ ತಮ್ಮನ್ನು ಸಂಪರ್ಕಿಸಿದ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ರಾಜೀವ್ ಚಂದ್ರಶೇಖರ್ ತಾವು ಟಿವಿ 9 ಕೊಳ್ಳುತ್ತಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ಆದರೂ, ಮಾಧ್ಯಮ ಲೋಕದ ವ್ಯವಹಾರಗಳ ಕೆಲ ಉನ್ನತ ಮೂಲಗಳು ರಾಜೀವ್ ಅವರ ಕಡೆಗೇ ಕೈ ತೋರಿಸುತ್ತಿವೆ ಎಂದು ವರದಿಯಲ್ಲಿ ಹೇಳಲಾಗಿದೆ.

ಟಿವಿ 9ನಲ್ಲಿ ತಮ್ಮ ಷೇರುಗಳನ್ನು ಮಾರಾಟಕ್ಕಿಟ್ಟಿರುವ ಶ್ರೀನಿವಾಸ್ ರಾಜು ಎಂಬುವರು, ಎಕ್ಸ್ ಚೇಂಜ್ 4 ಮೀಡಿಯಾದೊಂದಿಗೆ ಮಾತನಾಡಿ, ತಮ್ಮ ಷೇರುಗಳನ್ನು ಮಾರಾಟ ಮಾಡಲು ತಾವು ಸಿದ್ಧರಿದ್ದು, ಸುಮಾರು 4 ಕಂಪನಿಗಳೊಂದಿಗೆ ಮಾತುಕತೆ ನಡೆಸಿರುವುದಾಗಿ ಹೇಳಿದ್ದಾರೆ.

ಪರಪ್ಪನ ಅಗ್ರಹಾರ ಜೈಲಲ್ಲ, ಬಾರ್: ಅಶೋಕ್ಪರಪ್ಪನ ಅಗ್ರಹಾರ ಜೈಲಲ್ಲ, ಬಾರ್: ಅಶೋಕ್

ಆದರೆ, ಈ ಬಗ್ಗೆ ಹೆಚ್ಚಿನ ವಿವರ ಹೇಳಲು ನಿರಾಕರಿಸಿದ ಅವರು ಗೌಪ್ಯತೆ ಕಾಪಾಡುವ ಒಪ್ಪಂದಕ್ಕೆ ತಾವು ಸಹಿ ಹಾಕಿರುವುದರಿಂದ ಈ ಬಗ್ಗೆ ಹೆಚ್ಚಿನದ್ದೇನೂ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.

ಒಂದು ಮೂಲದ ಪ್ರಕಾರ, ಟಿವಿ 9 ಕನ್ನಡದಲ್ಲಿ ಶ್ರೀನಿವಾಸ್ ರಾಜು ಅವರ ಪಾಲು 500ರಿಂದ 600 ಕೋಟಿ ರು.ಗಳಿಷ್ಟಿರಬಹುದು ಎಂದು ಅಂದಾಜಿಸಲಾಗಿದೆ.

ಅದೇನೇ ಇರಲಿ, ಟಿವಿ 9 ಕನ್ನಡ ಸಂಸ್ಥೆ ಮಾರಾಟಕ್ಕಿದೆ ಎಂಬ ಮಾತು ಬಹು ದಿನಗಳಿಂದಲೇ ಕೇಳಿಬರುತ್ತಿರುವುದಂತೂ ಸತ್ಯ. ಅದರ ಬೆನ್ನಲ್ಲೇ, ಹಲವಾರು ವದಂತಿಗಳೂ ಹೀಗೆ ಹರಿದಾಡುತ್ತಿರುವೂ ಅಷ್ಟೇ ಸತ್ಯ.

English summary
Karnataka media rumor mill says BJP MP Rajeev Chandrasekhar is planning to purchase 60% of shares of No. 1 Kannada News Channel 'TV 9 Kannada'. However, Chandrashekhar has denied these rumors.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X