ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆಟ್ರೋಲ್ 100ರು ಗಡಿದಾಟಿದ ಬಳಿಕ ಕೊನೆಗೂ ತೆರಿಗೆ ಇಳಿಕೆ

|
Google Oneindia Kannada News

ಜೈಪುರ, ಜನವರಿ 29: ಪೆಟ್ರೋಲ್ ಬೆಲೆ ದಾಖಲೆ ಪ್ರಮಾಣದಲ್ಲಿ ಏರಿಕೆ ಕಂಡು ಪ್ರತಿ ಲೀಟರ್ ದರ 100 ರು ಗಡಿ ದಾಟುತ್ತಿದ್ದಂತೆ ಕೊನೆಗೂ ಎಚ್ಚೆತ್ತುಕೊಂಡ ಸರ್ಕಾರ ತೆರಿಗೆ ಇಳಿಕೆ ಮಾಡಿದೆ.
ರಾಜಸ್ಥಾನದ ಶ್ರೀಗಂಗಾನಗರದಲ್ಲಿ 100 ರು ಗಡಿ ದಾಟಿದ ಪೆಟ್ರೋಲ್ ಬಿಲ್ ವೈರಲ್ ಆಗಿತ್ತು. ದೇಶದ ಹಲವು ನಗರಗಳಲ್ಲೂ 100 ರು ಗಡಿ ದಾಟಿದೆ. ಆದರೆ, ಸದ್ಯಕ್ಕೆ ರಾಜಸ್ಥಾನ ಸರ್ಕಾರ ಮಾತ್ರ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ವ್ಯಾಟ್ ತಗ್ಗಿಸುವುದಾಗಿ ಘೋಷಣೆ ಮಾಡಿದೆ.

ಶ್ರೀಗಂಗಾನಗರದಲ್ಲಿ ಸಾದಾ ಪೆಟ್ರೋಲ್ ಬೆಲೆಯೇ ಪ್ರತಿ ಲೀಟರ್‌ಗೆ 98.40 ರು ನಷ್ಟಿದ್ದರೆ, ಪ್ರೀಮಿಯಂ ಬ್ರ್ಯಾಂಡೆಡ್ ಪೆಟ್ರೋಲ್ ದರ 101.15 ರು ಆಗಿದೆ. ಜನವರಿ 28ರಂದು ಪೆಟ್ರೋಲ್, ಡೀಸೆಲ್ ದರದಲ್ಲಿ ಅಂಥಾ ವ್ಯತ್ಯಾಸ ಕಂಡು ಬಂದಿರಲಿಲ್ಲ. ಆದರೆ, ವಾಹನ ಸವಾರರ ಆಕ್ರೋಶಕ್ಕೆ ಮಣಿದ ರಾಜಸ್ಥಾನ ಸರ್ಕಾರವು ಪೆಟ್ರೋಲ್, ಡೀಸೆಲ್ ಮೇಲಿನ ವ್ಯಾಟ್ ಶೇ 2 ರಷ್ಟು ತಗ್ಗಿಸಿರುವುದಾಗಿ ಘೋಷಿಸಿದೆ. ಸದ್ಯ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ವ್ಯಾಟ್ ಕ್ರಮವಾಗಿ ಶೇ 36 ಹಾಗೂ ಶೇ 26ರಷ್ಟಿದೆ.

ಜನವರಿ 6ರಿಂದ ಬಹುತೇಕ ಎಲ್ಲಾ ದಿನಗಳಂದು ಇಂಧನ ಬೆಲೆ ಏರಿಕೆ ಕಾಣುತ್ತಲೇ ಇದೆ. ದೆಹಲಿಯಲ್ಲಿ ಜನವರಿ 27ರಂದು ಗರಿಷ್ಠ ಮಟ್ಟ ಮುಟ್ಟಿ ಪೆಟ್ರೋಲ್ 86.30 ರು ಹಾಗೂ ಡೀಸೆಲ್ 76. 23 ರು ಆಗಿತ್ತು. ಬ್ರ್ಯಾಂಡೆಡ್ ಪೆಟ್ರೋಲ್ ದರ 89.10 ರು ನಷ್ಟಿದೆ.

Rajasthan Government reduces VAT on diesel and petrol

ಮುಂಬೈನಲ್ಲಿ ಪ್ರತಿ ಲೀಟರ್‌ಗೆ ನಾರ್ಮಲ್ ಪೆಟ್ರೋಲ್ 92.86 ರು ಇದ್ದರೆ,ಬ್ರ್ಯಾಂಡೆಡ್ ಪೆಟ್ರೋಲ್ ದರ 95.61 ರು ಆಗಿದೆ.

ಕೇಂದ್ರ ಸರ್ಕಾರ ಮೂಲ ಬೆಲೆಯ 125% ರಷ್ಟು ತೆರಿಗೆ ವಿಧಿಸುತ್ತದೆ. ಇಂಧನದ ಮೇಲೆ ಅಬಕಾರಿ ಸುಂಕ 32. 98ರು ನಷ್ಟಿದೆ. ದೆಹಲಿಯಲ್ಲಿ 19 ರು ಪ್ರತಿ ಲೀಟರ್ ವ್ಯಾಟ್, ಡೀಲರ್ ಕಮಿಷನ್ 3.67 ರು ಪ್ರತಿ ಲೀಟರ್ ಸೇರಿ ಬೆಲೆ ಇನ್ನಷ್ಟು ಏರಿಕೆಗೆ ಕಾರಣವಾಗಿದೆ.

English summary
Rajasthan Government reduces VAT on diesel and petrol by 2% eachNow 36% VAT applicable on petrol and 26% on diesel.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X