ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆಟ್ರೋಲ್‌, ಡಿಸೇಲ್‌ ಬೆಲೆ ಇಳಿಸಿ: ತೈಲ ಕಂಪನಿಗಳ ಬಳಿ ರಾಹುಲ್‌ ಆಗ್ರಹ

|
Google Oneindia Kannada News

ನವದೆಹಲಿ, ಜನವರಿ 06: ಜಾಗತಿಕವಾಗಿ ಕಚ್ಚಾ ತೈಲ ದರ ಕುಸಿದಿದೆ ಎಂಬ ವರದಿಗಳ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಕಡಿಮೆ ಮಾಡಲು ಆಗ್ರಹ ಮಾಡಿದ್ದಾರೆ. ಪ್ರಸ್ತುತ ಕಚ್ಚಾ ತೈಲದ ಬೆಲೆ ಗ್ಯಾಲನ್‌ಗೆ 7.3 ಡಾಲರ್‌ಗಳಷ್ಟು ಕುಸಿದಿದೆ ಮತ್ತು ತೈಲ ಕಂಪನಿಗಳು ಬೆಲೆಗಳನ್ನು ಕಡಿಮೆ ಮಾಡಿದರೆ ಪೆಟ್ರೋಲ್ ಬೆಲೆ ಲೀಟರ್‌ಗೆ 8 ರೂಪಾಯಿಗಳಷ್ಟು ಕುಸಿಯುತ್ತದೆ ಎಂಬ ವರದಿಯೊಂದನ್ನು ಟ್ಯಾಗ್‌ ಮಾಡಿ ಈ ಆಗ್ರಹವನ್ನು ರಾಹುಲ್‌ ಗಾಂಧಿ ಮಾಡಿದ್ದಾರೆ.

ಈ ಬಗ್ಗೆ ವರದಿಯನ್ನು ಉಲ್ಲೇಖ ಮಾಡಿ ಹಿಂದಿಯಲ್ಲಿ ಟ್ವೀಟ್‌ ಮಾಡಿರುವ ಕಾಂಗ್ರೆಸ್‌ ಸಂಸದ, "ತುಂಬಾ ಆಗಿ ಬಿಟ್ಟಿದೆ, ಈಗಲಾದರೂ ಪೆಟ್ರೋಲ್‌ ಬೆಲೆಯನ್ನು ಇಳಿಕೆ ಮಾಡಿ," ಎಂದು ಒತ್ತಾಯಿಸಿದ್ದಾರೆ. ಹಾಗೆಯೇ #PetrolDieselPrice ಹಾಗೂ #FuelLoot ಹ್ಯಾಷ್‌ ಟ್ಯಾಗ್‌ ಬಳಸಿದ್ದಾರೆ.

ಇನ್ನು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಹಾಗೂ ಮುಖ್ಯ ವಕ್ತಾರ ರಣದೀಪ್ ಸುರ್ಜೇವಾಲಾ ಕೂಡ ಇದನ್ನು "ಲೂಟಿ" ಎಂದಿದ್ದಾರೆ. ಲೂಟಿಯನ್ನು ನಿಲ್ಲಿಸಿ, ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಕಡಿಮೆ ಮಾಡಲು ಕರೆ ನೀಡಿದ್ದಾರೆ. ಹಾಗೆಯೇ "ಲೂಟಿಜೀವಿ ಮೋದಿ ಸರ್ಕಾರ, ಬಡವರು, ಮಧ್ಯಮ ವರ್ಗದವರು ಮತ್ತು ಸಂಬಳದಾರರ ಜೇಬಿನಿಂದ ದರೋಡೆ ಮಾಡುತ್ತಿರುವುದನ್ನು ಏಕೆ ನಿಲ್ಲಿಸುವುದಿಲ್ಲ," ಎಂದು ಪ್ರಶ್ನೆ ಮಾಡಿದ್ದಾರೆ.

Rahul Gandhi targets government over high petrol, diesel prices

ಚುನಾವಣೆ ಬರುತ್ತಿದೆ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಮಾಡಿ

"ಈಗ ಚುನಾವಣೆಯೂ ಹತ್ತಿರವಾಗಿರುವುದರಿಂದ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಮಾಡಬೇಕು," ಎಂದು ಕೂಡಾ ಹೇಳಿದ್ದಾರೆ. "ಈಗ ಚುನಾವಣಾ ಕಾಲ ಕೂಡ ಬಂದಿದೆ. ಕಚ್ಚಾ ತೈಲ ದರಗಳು ಕಡಿಮೆಯಾದಾಗ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಕಡಿಮೆ ಮಾಡಲಾಗಿದೆ ಎಂಬುದನ್ನು ಸರ್ಕಾರಕ್ಕೆ ನೆನಪಿಸಬೇಕೇ?, #StopFuelLoot," ಎಂದು ಕಾಂಗ್ರೆಸ್‌ ವಕ್ತಾರ ರಣದೀಪ್ ಸುರ್ಜೇವಾಲಾ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಹೆಚ್ಚಿನ ತೆರಿಗೆ ಮತ್ತು ಹೆಚ್ಚಿನ ಇಂಧನ ಬೆಲೆಗಳ ವಿಚಾರದಲ್ಲಿ ಕಾಂಗ್ರೆಸ್ ಪಕ್ಷವು ಸರ್ಕಾರದ ವಿರುದ್ಧ ನಿರಂತರವಾಗಿ ವಾಗ್ದಾಳಿ ನಡೆಸುತ್ತಿದೆ. ಈ ವಿಚಾರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಕಾಂಗ್ರೆಸ್‌ ವಕ್ತಾರ ಗೌರವ್‌ ವಲ್ಲಭ, "2014ರಲ್ಲಿ ಯುಪಿಎ ಸರ್ಕಾರವು ಇಂಧನದ ಮೇಲೆ ಎಷ್ಟು ತೆರಿಗೆ ವಿಧಿಸಿತ್ತೋ ಅಷ್ಟೇ ತೆರಿಗೆಗೆ ಕೇಂದ್ರ ಬಿಜೆಪಿ ಸರ್ಕಾರವು ಪ್ರಸ್ತುತ ತೆರಿಗೆಯನ್ನು ಇಳಿಕೆ ಮಾಡಿದರೆ, ಪೆಟ್ರೋಲ್‌ ಹಾಗೂ ಡೀಸೆಲ್‌ ದರವು ಕ್ರಮವಾಗಿ 26 ಹಾಗೂ 25 ರೂಪಾಯಿಗೆ ಇಳಿಕೆ ಆಗಲಿದೆ," ಎಂದಿದ್ದಾರೆ.

ದೇಶದಲ್ಲಿ ಹೀಗಿದೆ ಪೆಟ್ರೋಲ್‌, ಡೀಸೆಲ್ ದರ

ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ದೇಶದಲ್ಲಿ ಇಂದು ಕೂಡಾ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯನ್ನು ಇಳಿಕೆ ಅಥವಾ ಏರಿಕೆ ಮಾಡಿಲ್ಲ. ಸತತ ಎರಡು ತಿಂಗಳು ಇಂಧನ ದರ ಸ್ಥಿರವಾಗಿದೆ. ಆದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂದು ಕಚ್ಚಾತೈಲದ ಬೆಲೆ ಏರಿಕೆಯ ಹಾದಿ ಹಿಡಿದಿದ್ದು, ಪ್ರತಿ ಬ್ಯಾರೆಲ್ ಬೆಲೆ 80 ಯುಎಸ್ ಡಾಲರ್ ದಾಟಿದೆ. ಭಾರತದಲ್ಲಿ ನವೆಂಬರ್ ತಿಂಗಳಲ್ಲಿ ಕೇಂದ್ರ ಹಾಗೂ ವಿವಿಧ ರಾಜ್ಯಗಳಲ್ಲಿ ಅಬಕಾರಿ ಸುಂಕ, ಸೆಸ್, ವ್ಯಾಟ್ ಇಳಿಕೆ ಮಾಡಿದ ಬಳಿಕ ಇಂಧನ ದರ ಇಳಿಕೆ ಮಾಡಲಾಗಿದೆ. ದೆಹಲಿಯ ಕೇಜ್ರಿವಾಲ್ ಸರ್ಕಾರ ಪೆಟ್ರೋಲ್​ ಮೇಲಿನ ವ್ಯಾಟ್ ಅನ್ನು ಶೇಕಡ ಶೇ.30ರಿಂದ ಶೇ.19.40ಕ್ಕೆ ಇಳಿಸಿದೆ. ಅಂದರೆ ದೆಹಲಿಯಲ್ಲಿ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯು ಎಂಟು ರೂಪಾಯಿ ಇಳಿಕೆ ಕಂಡಿದೆ. ಪ್ರಸ್ತುತ ಬೆಂಗಳೂರಿನಲ್ಲಿ ಪೆಟ್ರೋಲ್‌ ಹಾಗೂ ಡೀಸೆಲ್‌ ದರವು 100.58 ರೂಪಾಯಿ ಆಗಿದೆ. (ಒನ್‌ಇಂಡಿಯಾ ಸುದ್ದಿ)

English summary
Rahul Gandhi targets government over high petrol, diesel prices.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X