ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಡಿಪಿ ಪ್ರಗತಿ ಇಳಿಕೆ; ಜುಲೈ- ಸೆಪ್ಟೆಂಬರ್ ತ್ರೈಮಾಸಿಕ ದರ 7.1%

|
Google Oneindia Kannada News

ಭಾರತದ ಪ್ರಗತಿ ದರವು ಕಳೆದ ತ್ರೈ ಮಾಸಿಕದಲ್ಲಿ ನಿಧಾನವಾಗಿದೆ. ಮೇಲಿಂದ ಮೇಲೆ ಬಡ್ಡಿ ದರದಲ್ಲಿನ ಏರಿಕೆ, ರಫ್ತು ಬೇಡಿಕೆ ದುರ್ಬಲಗೊಂಡಿದ್ದ ಕಾರಣಕ್ಕೆ ಜಗತ್ತಿನಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗೆ ತಡೆ ಬಿದ್ದಂತಾಗಿದೆ.

ಕಳೆದ ತ್ರೈ ಮಾಸಿಕದಲ್ಲಿ 8% ಪ್ರಗತಿ ಸಾಧಿಸಲು ಸಾಧ್ಯವಾಗಿತ್ತು. ಆದರೆ ಈ ಬಾರಿ, ಅಂದರೆ ಜುಲೈನಿಂದ ಸೆಪ್ಟೆಂಬರ್ ಅವಧಿಯಲ್ಲಿ 7.1% ತಲುಪಿದೆ. ಕನಿಷ್ಠ 7.5% ಆದರೂ ದಾಖಲಿಸಬಹುದು ಎಂಬ ಆರ್ಥಿಕ ತಜ್ಞರ ನಿರೀಕ್ಷೆ ಹುಸಿಯಾಗಿದೆ.

ನೋಟು ನಿಷೇಧ ಬಹುದೊಡ್ಡ ವಿತ್ತೀಯ ಆಘಾತ: ಅರವಿಂದ್ ಸುಬ್ರಮಣಿಯನ್ನೋಟು ನಿಷೇಧ ಬಹುದೊಡ್ಡ ವಿತ್ತೀಯ ಆಘಾತ: ಅರವಿಂದ್ ಸುಬ್ರಮಣಿಯನ್

ಈ ಸಂಖ್ಯೆ ಬಹಳ ನಿರಾಶಾದಾಯಕ. ಎಲ್ಲರೂ ನಿರೀಕ್ಷೆ ಮಾಡಿದ್ದಕ್ಕಿಂತ ಬಹಳ ಕಡಿಮೆ ಇದೆ ಎಂದು ಹಿರಿಯ ಅರ್ಥಶಾಸ್ತ್ರಜ್ಞ ಹ್ಯೂಗೋ ಎರ್ಕೆನ್ ಅಭಿಪ್ರಾಯ ಪಟ್ಟಿದ್ದಾರೆ. ಪರಿಸ್ಥಿತಿ ಹೀಗಿರುವುದರಿಂದ ಮುಂದಿನ ವಾರ ನಡೆಯಲಿರುವ ರಿಸರ್ವ್ ಬ್ಯಾಂಕ್ ಸಭೆಯಲ್ಲಿ ಬಡ್ಡಿ ದರ ಬದಲಾವಣೆ ಆಗುವ ಸಾಧ್ಯತೆ ಇಲ್ಲ ಎನ್ನಲಾಗಿದೆ.

Q2 GDP growth of India slows to 7.1%

ಈ ಪರಿಸ್ಥಿತಿಯಲ್ಲಿ ಕೇಂದ್ರ ಬಜೆಟ್ ಮೇಲೆ ಹೆಚ್ಚಿನ ಒತ್ತಡ ಬೀಳಲಿದೆ. ಜತೆಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಕೇಂದ್ರ ಸರಕಾರದ ಮಧ್ಯದ ಉದ್ವಿಗ್ನತೆಯನ್ನು ಹೆಚ್ಚಿಸುತ್ತದೆ. ಸಾಲದ ಕೊರತೆಯನ್ನು ನೀಗಿಸಲು ರಿಸರ್ವ್ ಬ್ಯಾಂಕ್ ಆಫ್ ಗವರ್ನರ್ ಹಾಗೂ ಅವರ ತಂಡ ಹೆಚ್ಚಿನ ಪ್ರಯತ್ನ ಮಾಡಬೇಕು ಎಂಬುದು ಸದ್ಯದ ನಿರೀಕ್ಷೆ.

ಸಾಲ ಮರುಪಾವತಿ ಮಾಡದವರ ಕಾರಣದಿಂದ ಚಿಲ್ಲರೆ ವ್ಯಾಪಾರ ಹಾಗೂ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಹೊಡೆತ ಬಿದ್ದಿದೆ. ಇದರ ಪರಿಣಾಮವು ಬ್ಯಾಂಕ್ ಗಳ ಮೇಲೆ ಬಿದ್ದಿದ್ದು, ತಾವು ಹಣ ಪಡೆವ ಮೇಲಿನ ವೆಚ್ಚ ಹೆಚ್ಚಾಗುವ ಹಿನ್ನೆಲೆಯಲ್ಲಿ ಸಾಲ ನೀಡುವುದನ್ನು ಸಹ ಕಡಿಮೆ ಮಾಡಲಾಗಿದೆ.

ಮೊದಲ ತ್ರೈಮಾಸಿಕ ಜಿಡಿಪಿ ನೋಡಿ ಖುಷಿ ಪಡುವ ಮೊದಲು...ಮೊದಲ ತ್ರೈಮಾಸಿಕ ಜಿಡಿಪಿ ನೋಡಿ ಖುಷಿ ಪಡುವ ಮೊದಲು...

ಮುಂದಿನ ವಾರ ನಡೆಯುವ ಆರ್ ಬಿಐ ಸಭೆಯಲ್ಲಿ ಈ ಎಲ್ಲ ಕಾರಣಗಳಿಂದಾಗಿ ಬಡ್ಡಿದರ ಬದಲಾವಣೆ ಮಾಡುವ ಸಾಧ್ಯತೆ ಇಲ್ಲ. ಕಳೆದ ಅಕ್ಟೋಬರ್ 6.5% ದರದಲ್ಲಿ ಯಾವುದೇ ಬದಲಾವಣೆ ಮಾಡಿರಲಿಲ್ಲ.

English summary
GDP growth slowed in the second quarter (July-September) of this financial year to 7.1% from 8.2% in the previous quarter, according to official data released on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X