ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Q1 ವರದಿ : ಎಸ್ಬಿಐಗೆ 4,876 ಕೋಟಿ ರು ನಷ್ಟ

By Mahesh
|
Google Oneindia Kannada News

ಬೆಂಗಳೂರು, ಆಗಸ್ಟ್ 10: ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್ಬಿಐ) ಶುಕ್ರವಾರದಂದು ತನ್ನ ಮೊದಲ ತ್ರೈಮಾಸಿಕ ವರದಿಯನ್ನು ಪ್ರಕಟಿಸಿದೆ. ಸತತ ಮೂರನೇ ತ್ರೈಮಾಸಿಕದಲ್ಲಿ ನಷ್ಟ ಅನುಭವಿಸಿದೆ.

ಜೂನ್ ತಿಂಗಳ ಅಂತ್ಯಕ್ಕೆ ಕೊನೆಗೊಂಡ ತ್ರೈಮಾಸಿಕದಂತೆ ನಿವ್ವಳ ನಷ್ಟ 4,875.85 ಕೋಟಿ ರು ಆಗಿದೆ. ಕಳೆದ ವರ್ಷ ಇದೇ ಅವಧಿಗೆ 2,005.53 ಕೋಟಿ ರು ಲಾಭ ದಾಖಲಿಸಿತ್ತು. ಕನಿಷ್ಟ 237.80 ಕೋಟಿ ರು ಲಾಭದ ನಿರೀಕ್ಷೆಯಿತ್ತು.

ಮಿನಿಮಮ್ ಬ್ಯಾಲನ್ಸ್ ಇಟ್ಟುಕೊಳ್ಳದ ಗ್ರಾಹಕರಿಗೆ 5 ಸಾವಿರ ಕೋಟಿ ದಂಡಮಿನಿಮಮ್ ಬ್ಯಾಲನ್ಸ್ ಇಟ್ಟುಕೊಳ್ಳದ ಗ್ರಾಹಕರಿಗೆ 5 ಸಾವಿರ ಕೋಟಿ ದಂಡ

ಮಾರ್ಚ್ ತಿಂಗಳಿನಲ್ಲಿ 7,718.18 ಕೋಟಿ ರು ನಷ್ಟ ಹಾಗೂ ಡಿಸೆಂಬರ್ ತಿಂಗಳ ಅಂತ್ಯಕ್ಕೆ 2,416.40 ಕೋಟಿ ರು ನಷ್ಟ ಅನುಭವಿಸಿತ್ತು.

Q1 results: SBI posts third consecutive loss

ನಿವ್ವಳ ಬಡ್ಡಿದರ ಆದಾಯ ( ಎನ್ಐಐ) ಈ ತ್ರೈಮಾಸಿಕದಲ್ಲಿ 21,798 ಕೋಟಿ ರು ನಷ್ಟಿದೆ. ಕಳೆದ ವರ್ಷ ಇದೇ ಅವಧಿಗೆ 17,606 ಕೋಟಿ ರು ನಷ್ಟಿತ್ತು.

ಜಿಯೋ ಪೇಮೆಂಟ್ ಬ್ಯಾಂಕ್: ರಿಲಯನ್ಸ್ ಜತೆ ಕೈಜೋಡಿಸಿದ ಎಸ್ಬಿಐ ಜಿಯೋ ಪೇಮೆಂಟ್ ಬ್ಯಾಂಕ್: ರಿಲಯನ್ಸ್ ಜತೆ ಕೈಜೋಡಿಸಿದ ಎಸ್ಬಿಐ

ಎಸ್ಬಿಐನ ತೈಮಾಸಿಕ ಅವಧಿಯ ಒಟ್ಟಾರೆ ಆದಾಯ 65,492.67 ಕೋಟಿ ರು ನಷ್ಟಿದೆ. ಕಳೆದ ವರ್ಷ ಈ ತ್ರೈಮಾಸಿಕದಲ್ಲಿ 62,911.08 ಕೋಟಿ ರು ನಷ್ಟಿತ್ತು.

ಶುಕ್ರವಾರದಂದು ಬಿಎಸ್ ಇಯಲ್ಲಿ ಎಸ್ಬಿಐ ಷೇರುಗಾಳು 317ರು ನಂತೆ ವಹಿವಾಟು ಆರಂಭಿಸಿ, ಶೇ 3.79ರಷ್ಟು ಇಳಿಕೆಯಾಗಿ 304.45 ರು ಆಗಿತ್ತು. ಎನ್ಎಸ್ ಇಯಲ್ಲಿ ಶೇ 4.08ರಷ್ಟು ಕಳೆದುಕೊಂಡು 304.45ರು ನಂತೆ ವಹಿವಾಟು ಅಂತ್ಯಗೊಳಿಸಿದೆ.

English summary
State Bank of India (SBI) on Friday reported a loss for a third consecutive quarter as non-performing assets (NPAs) continued to mount and provisions soared
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X