• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಒಂದು ಲಕ್ಷ ರೂಪಾಯಿಗೂ ಹೆಚ್ಚು ಚಿನ್ನ ಖರೀದಿಸಿದರೆ ನೀವು ಐಟಿ ವ್ಯಾಪ್ತಿಗೆ..!

|

ನವದೆಹಲಿ, ಆಗಸ್ಟ್‌ 14: ಒಂದು ಲಕ್ಷ ರೂಪಾಯಿಗಿಂತ ಹೆಚ್ಚಿನ ಆಭರಣಗಳು, ವರ್ಣಚಿತ್ರಗಳ ಖರೀದಿ, ಹಾಗೂ ಶಾಲೆಯ ಶುಲ್ಕ ಪಾವತಿಯು ಶೀಘ್ರದಲ್ಲೇ ಆದಾಯ ತೆರಿಗೆ ವ್ಯಾಪ್ತಿಗೆ ಬರಲಿದೆ.

ತೆರಿಗೆ ಆಧಾರವನ್ನು ವಿಸ್ತರಿಸುವ ಉದ್ದೇಶಿತ ಕ್ರಮಗಳ ಪ್ರಕಾರ 20,000 ರೂಪಾಯಿಗೂ ಹೆಚ್ಚಿನ ಹೋಟೆಲ್‌ ಬಿಲ್‌ಗಳು, ಒಂದು ಲಕ್ಷಕ್ಕೂ ರೂ. ಹೆಚ್ಚಿನ ಚಿನ್ನದ ಖರೀದಿ ಹಾಗೂ ಶಾಲೆಯ ಶುಲ್ಕ ವರ್ಷಕ್ಕೆ ಒಂದು ಲಕ್ಷಕ್ಕೂ ಹೆಚ್ಚು ಮೀರಿದರೆ ಆದಾಯ ತೆರಿಗೆ ಇಲಾಖೆಯ ಸ್ಕ್ಯಾನರ್ ಅಡಿಯಲ್ಲಿ ಬರುತ್ತದೆ ಎನ್ನಲಾಗಿದೆ.

ಪಾರದರ್ಶಕ ತೆರಿಗೆ ವೇದಿಕೆಗೆ ಪ್ರಧಾನಿ ಮೋದಿ ಚಾಲನೆ: ಪ್ರಾಮಾಣಿಕ ತೆರಿಗೆದಾರರಿಗೆ ಸಿಗಲಿದೆ ಗೌರವ

ಇದರ ಜೊತೆಗೆ ದೇಶೀಯ ಬಿಜಿನೆಸ್ ಕ್ಲಾಸ್ ವಿಮಾನ ಪ್ರಯಾಣ ಮತ್ತು ವಿದೇಶಿ ಪ್ರಯಾಣ ಕೂಡ ಐಟಿ ವ್ಯಾಪ್ತಿಗೆ ಬರಲಿದೆ.

ಆದಾಯ ತೆರಿಗೆ ಇಲಾಖೆ ತನ್ನ ವಹಿವಾಟು ವರದಿ ಚೌಕಟ್ಟಿನಡಿಯಲ್ಲಿ ಹೆಚ್ಚಿನ ವಹಿವಾಟುಗಳನ್ನು ಸೇರಿಸಲು ನೋಡುತ್ತಿದೆ. ಇದರರ್ಥ ಹಣಕಾಸು ಸಂಸ್ಥೆಗಳು ಮತ್ತು ಇತರ ಸಂಸ್ಥೆಗಳು ನಿಗದಿತ ಮಿತಿಗಿಂತ ಹೆಚ್ಚಿನ ವಹಿವಾಟುಗಳನ್ನು ವರದಿ ಮಾಡಬೇಕಾಗಬಹುದು.

ಈ ಹೊಸ ತೆರಿಗೆಯ ಮೂಲಕ ತೆರಿಗೆ ಇಲಾಖೆಯು ದೊಡ್ಡ ಖರೀದಿಗಳನ್ನು ಮಾಡುತ್ತಿರುವ ಜನರು ಹಾಗೂ ಆದರೆ ತೆರಿಗೆ ಪಾವತಿಸದೇ ಅಥವಾ ತೆರಿಗೆ ರಿಟರ್ನ್ಸ್ ಸಲ್ಲಿಸದ ಜನರನ್ನು ಗುರುತಿಸಲು ಡೇಟಾವನ್ನು ಸಂಗ್ರಹಿಸುತ್ತದೆ. ಇದು ತೆರಿಗೆ ಮೂಲವನ್ನು ವಿಸ್ತರಿಸುವ ಸರ್ಕಾರದ ಪ್ರಯತ್ನಗಳ ಒಂದು ಭಾಗವಾಗಿದೆ.

ತೆರಿಗೆದಾರರ ವ್ಯಾಪ್ತಿಯ ಅಡಿಯಲ್ಲಿ ಬರಲು ಉದ್ದೇಶಿಸಲಾದ ವಹಿವಾಟುಗಳು:

-ಶಿಕ್ಷಣ ಶುಲ್ಕ ಪಾವತಿ ಮತ್ತು ವಾರ್ಷಿಕ 1 ಲಕ್ಷ ರೂ.ಗಿಂತ ಹೆಚ್ಚಿನ ದೇಣಿಗೆ.

-ವಾರ್ಷಿಕ ಒಂದು ಲಕ್ಷ ರೂ.ಗಿಂತ ಹೆಚ್ಚಿನ ವಿದ್ಯುತ್ ಬಳಕೆ.

-ದೇಶೀಯ ಅಥವಾ ವಿದೇಶಿ ವ್ಯಾಪಾರ ವರ್ಗದ ವಿಮಾನ ಪ್ರಯಾಣ.

-20,000 ರೂ.ಗಿಂತ ಹೆಚ್ಚಿನ ಹೋಟೆಲ್‌ಗಳಿಗೆ ಪಾವತಿ.

-1 ಲಕ್ಷ ರೂ.ಗಿಂತ ಹೆಚ್ಚಿನ ಆಭರಣಗಳು, ಬಿಳಿ ವಸ್ತುಗಳು, ವರ್ಣಚಿತ್ರಗಳ ಖರೀದಿ.

-ಆಸ್ತಿ ತೆರಿಗೆಯನ್ನು ವಾರ್ಷಿಕವಾಗಿ 20,000 ರೂ. ಹೆಚ್ಚು ಪಾವತಿಸುವುದು

-ಜೀವ ವಿಮಾ ಪ್ರೀಮಿಯಂ, ಆರೋಗ್ಯ ವಿಮಾ ಪ್ರೀಮಿಯಂ ಕ್ರಮವಾಗಿ 50,000 ಮತ್ತು 20,000 ರೂ. ಹೆಚ್ಚು

-ಮಾರುಕಟ್ಟೆ ವಹಿವಾಟು ಮತ್ತು ಬ್ಯಾಂಕ್ ಲಾಕರ್‌ಗಳ ವಿವರಗಳ ಮಾಹಿತಿ

English summary
Hotel bills above Rs 20,000, education fee over Rs 1 lakh, and purchase of jewellery and white goods valued above Rs 1 lakh may come under Income Tax Department’s scanner
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X