ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖಾದಿ, ಪೂಜಾ ಸಾಮಗ್ರಿಗಳಿಗೆ ಜಿಎಸ್ಟಿಯಿಂದ ವಿನಾಯಿತಿ

ಖಾದಿ ನೂಲು, ಗಾಂಧಿ ಟೋಪಿ, ಪೂಜಾ ಸಾಮಗ್ರಿಗಳಿಗೆ ಸರಕು ಹಾಗೂ ಸೇವಾ ತೆರಿಗೆ (ಜಿಎಸ್ ಟಿ)ವ್ಯವಸ್ಥೆಯಿಂದ ವಿನಾಯಿತಿ ಸಿಕ್ಕಿದೆ.

By Mahesh
|
Google Oneindia Kannada News

ಬೆಂಗಳೂರು, ಜೂನ್ 05: ಖಾದಿ ನೂಲು, ಗಾಂಧಿ ಟೋಪಿ, ಪೂಜಾ ಸಾಮಗ್ರಿಗಳಿಗೆ ಸರಕು ಹಾಗೂ ಸೇವಾ ತೆರಿಗೆ (ಜಿಎಸ್ ಟಿ)ವ್ಯವಸ್ಥೆಯಿಂದ ವಿನಾಯಿತಿ ಸಿಕ್ಕಿದೆ.

ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಅಡಿಯಲ್ಲಿ ಚಿನ್ನ, ಪಾದರಕ್ಷೆ ಸೇರಿದಂತೆ ಇತರ ಪರಿಕರಗಳಿಗೆ ವಿಧಿಸಬೇಕಿದ್ದ ದರಗಳ ಪಟ್ಟಿಯನ್ನು ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಪ್ರಕಟಿಸಿದ ಬಳಿಕ ಈ ಪಟ್ಟಿ ಹೊರಬಂದಿದೆ. ಸರಕು ಹಾಗೂ ಸೇವಾ ತೆರಿಗೆ (ಜಿಎಸ್ ಟಿ)ವ್ಯವಸ್ಥೆಯಿಂದ ಖಾದಿ ನೂಲು, ಗಾಂಧಿ ಟೋಪಿ, ರಾಷ್ಟ್ರಧ್ವಜ ಹೊರಗುಳಿಯಲಿವೆ. ಉಳಿದಂತೆ ಶೇ 5 ರಿಂದ ಶೇ 28ರ ತನಕದ ತೆರಿಗೆ ಪಟ್ಟಿಯನ್ನು ಪ್ರಕಟಿಸಲಾಗಿದೆ.[ಜಿಎಸ್ ಟಿ ಪರಿಣಾಮ: ಚಿನ್ನದ ಮೇಲೆ ಶೇ. 3ರಷ್ಟು ತೆರಿಗೆ]

'Puja Samagri' Exempt Under GST Along With Khadi Yarn, National Flag

* ಪೂಜಾ ಸಾಮಗ್ರಿಯಾಗಿ ಬಳಸುವ ರುದ್ರಾಕ್ಷಿ, ಪಾದುಕೆ, ಪಂಚಾಮೃತ, ತುಳಸಿ ಮಾಲೆ, ಪವಿತ್ರ ದಾರ ಹಾಗೂ ವಿಭೂತಿಯಂತಹ ಪೂಜಾ ಸಾಮಗ್ರಿಗಳು ಜಿಎಸ್ ಟಿ ವ್ಯವಸ್ಥೆಯಿಂದ ಹೊರಗುಳಿಯಲಿವೆ.

* ಶ್ರೀಗಂಧದ ತಿಲಕ, ಬ್ರಾಂಡ್ ಇಲ್ಲದ ಜೇನುತುಪ್ಪ, ದೀಪದ ಬತ್ತಿಗೆ ಜುಲೈ 1ರಿಂದ ಜಾರಿಯಾಗಲಿರುವ ಜಿಎಸ್ ಟಿ ವ್ಯವಸ್ಥೆಯಲ್ಲಿ ರಿಯಾಯಿತಿ ಸಿಗಲಿದೆ.[ಜಿಎಸ್ ಟಿ ಪರಿಣಾಮ: ಯಾವ್ಯಾವುದರ ಮೇಲೆ ಎಷ್ಟೆಷ್ಟು ತೆರಿಗೆ?]
* ಸಾಂಬ್ರಾಣಿ, ಕಲ್ಲುಸಕ್ಕರೆ ಹಾಗೂ ಮಿಠಾಯಿಗೆ ಶೇಕಡಾ 5ರಷ್ಟು ತೆರಿಗೆ ವಸೂಲಿ ಮಾಡಲಾಗುವುದು.
* ಜವಳಿ ವಿಭಾಗದಲ್ಲಿ ಒಂದು ಸಾವಿರ ರೂಪಾಯಿ ಕಡಿಮೆ ಬೆಲೆಯ ಕಂಬಳಿ, ಪರದೆ, ಹಾಸಿಗೆ ಹಾಗೂ ಟವೆಲ್ ಗೆ ಶೇಕಡಾ 5ರಷ್ಟು ತೆರಿಗೆ ಬೀಳಲಿದೆ. ಸಾವಿರ ರೂಪಾಯಿಗಿಂತ ಹೆಚ್ಚು ಬೆಲೆಯ ವಸ್ತುಗಳಿಗೆ ಶೇಕಡಾ 12ರಷ್ಟು ತೆರಿಗೆ ವಿಧಿಸಲಾಗುವುದು.

ವಿನಾಯಿತಿ: ಬಡವರು, ನಿರ್ಗರ್ತಿಕರಿಗೆ ನೀಡಲಾಗುವ ಆಹಾರ ಸಾಮಗ್ರಿ, ಔಷಧಿ, ಬಟ್ಟೆ, ಅಗತ್ಯ ವಸ್ತುಗಳ ಮೇಲೆ ವಿನಾಯಿತಿ ನೀಡಲಾಗಿದೆ. ವಿದೇಶದಿಂದ ಉಡುಗೊರೆ ರೂಪದಲ್ಲಿ ಉಚಿತವಾಗಿ ವಿತರಿಸಲು ಭಾರತದ ಎನ್ ಜಿಒ ಗಳಿಗೆ ತಲುಪುವ ಸಾಮಗ್ರಿಗಳಿಗೂ ವಿನಾಯಿತಿ ಸಿಕ್ಕಿದೆ.

ನೈಸರ್ಗಿಕ ವಿಕೋಪದ ಸಂದರ್ಭಗಳಲ್ಲಿ ರೆಡ್ ಕ್ರಾಸ್ ಸೊಸೈಟಿಗೆ ನೀಡಲಾಗುವ ಔಷಧಿ, ಅಗತ್ಯ ವಸ್ತುಗಳ ಮೇಲೆ ವಿನಾಯಿತಿ ಇದೆ.(ಪಿಟಿಐ)

English summary
The Goods and Tax Services Council has decided to include 'puja samagri' in the list of items to receive tax exempt along with Khadi yarn, Gandhi topi and the national flag, while imitation jewellery, pearls and coins are to carry 3 per cent levy from the next month.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X