• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗೂಗಲ್ ಪ್ಲೇ ವರ್ಷದ ಗೇಮ್ ಪ್ರಶಸ್ತಿ ಗೆದ್ದ ಪಬ್‍ಜಿ ಮೊಬೈಲ್, ಸೀಸನ್ 5 ಅಪ್ಡೇಟ್

|

2018ರ ಬಳಕೆದಾರರ ಆಯ್ಕೆ ಪ್ರಶಸ್ತಿ ಮತ್ತು ವರ್ಷದ ಅತಿ ಸ್ಪರ್ಧಾತ್ಮಕ ಆಟ ಪ್ರಶಸ್ತಿಗೂ ಭಾಜನವಾದ ಭಾರತದ ಸರ್ವರ ಆಯ್ಕೆಯ ಗೇಮ್ ಪಬ್ಜಿ, ಭಾರತದಲ್ಲಿ ಕಾಲಿಟ್ಟ ದಿನದಿಂದಲೇ, ಈ ಗೇಮ್ ದೇಶಾದ್ಯಂತ ಬಿರುಗಾಳಿ ಎಬ್ಬಿಸಿದ್ದು, ಭಾರತದ ಫೇವರಿಟ್ ಟೈಂಪಾಸ್ ಗೇಮ್ ಎಂಬ ಹೆಗ್ಗಳಿಕೆಯನ್ನೂ ಪಡೆದಿದೆ. ಪಬ್‍ಜಿ ಮೊಬೈಲ್ ಎಂಬ ಈ ವಿದ್ಯಮಾನದ ಬಗ್ಗೆ ಇಲ್ಲಿ ತಿಳಿದುಕೊಳ್ಳೋಣ.

ಟೆನ್ಸೆಂಟ್ ಅವರ ಪಬ್‍ಜಿ ಮೊಬೈಲ್ ಎನ್ನುವುದು ಮೊದಲ ತ್ರೈಮಾಸಿಕದಲ್ಲಿ ಜಗತ್ತಿನಾದ್ಯಂತ ಅತಿ ಹೆಚ್ಚು ಇನ್‍ಸ್ಟಾಲ್ ಆದಂಥ ಮೊಬೈಲ್ ಗೇಮ್ ಆಗಿದೆ. ಮಾರ್ಚ್ ಮಧ್ಯಭಾಗದಲ್ಲಿ ಇದನ್ನು ಪರಿಚಯಸಿದರೂ, ಯು.ಎಸ್.ನಲ್ಲಿ ಇತರೆ ಎಲ್ಲ ಗೇಮ್‍ಗಳಿಗಿಂತಲೂ ಹೆಚ್ಚು ಡೌನ್‍ಲೋಡ್ ಆದ ಗೇಮ್ ಇದಾಗಿದೆ.

ಪ್ಲೇಯರ್ ಅನ್‍ನೋನ್ ಬ್ಯಾಟಲ್‍ಗ್ರೌಂಡ್ (ಪಬ್‍ಜಿ) ವಿಶ್ವದಲ್ಲೇ ಅತಿ ಹೆಚ್ಚು ಇನ್‍ಸ್ಟಾಲ್ ಆದ ಮೊಬೈಲ್ ಗೇಮ್ ಎಂಬ ಖ್ಯಾತಿಗೆ ಪಾತ್ರವಾಗಿದೆ. ಈ ತ್ರೈಮಾಸಿಕದಲ್ಲೇ 50 ದಶಲಕ್ಷ ಡೌನ್‍ಲೋಡ್‍ಗಳನ್ನು ಈ ಗೇಮ್ ಕಂಡಿದೆ.

ಪಬ್‍ಜಿ ಮೊಬೈಲ್ ಕ್ಯಾಂಪಸ್ ಚಾಂಪಿಯನ್‍ಶಿಪ್ ಗೆದ್ದ ಮುಂಬೈ ತಂಡ

ಪ್ರಶಸ್ತಿಗಳು ಮತ್ತು ಮಾನ್ಯತೆ

ಇತ್ತೀಚೆಗಷ್ಟೇ, ಗೂಗಲ್ ದಿ ಬೆಸ್ಟ್ ಆಫ್ 2018 ಪ್ರಶಸ್ತಿಗಳನ್ನು ಘೋಷಿಸಿದ್ದು, ಗೂಗಲ್ ಪ್ಲೇ ಇಂಡಿಯಾವು ಪಬ್‍ಜಿ ಮೊಬೈಲ್‍ಗೆ ಬೆಸ್ಟ್ ಗೇಮ್ ಆಫ್ 2018 ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಅಷ್ಟೇ ಅಲ್ಲ, ಜಾಗತಿಕವಾಗಿಯೂ ಇದೇ ಪ್ರಶಸ್ತಿಯನ್ನು ಈ ಗೇಮ್ ಪಡೆಯಿತು. ಇದರ ಜೊತೆಗೆ, 2018ರ ಅತ್ಯಂತ ಸ್ಪರ್ಧಾತ್ಮಕ ಗೇಮ್ ಎಂಬ ಪ್ರಶಸ್ತಿಗೂ ಈ ಗೇಮ್ ಭಾಜನವಾಯಿತು.

ಪಬ್‍ಜೀ ಮೊಬೈಲ್ ಇಂಡಿಯಾ ಸೀರೀಸ್ ಘೋಷಣೆ, 1 ಕೋಟಿ ರು ಬಹುಮಾನ

ನೈಜ ಆಟ ಮತ್ತು ಹೋಲಿಸಲಾಗದ ವಿಶ್ವಾಸಾರ್ಹತೆಯ ಮೂಲಕ ಇದು ಭಾರತದ ಆಯ್ಕೆಯ ಗೇಮ್ ಎಂದೂ ಕರೆಸಿಕೊಂಡಿದೆ. ಸಹಜವಾಗಿ, ಜಾಗತಿಕವಾಗಿ ಈ ಆಟವು ಬಳಕೆದಾರರ ಆಯ್ಕೆ ಪ್ರಶಸ್ತಿ 2018 ಅನ್ನೂ ತನ್ನದಾಗಿಸಿಕೊಂಡಿದೆ.

ಗೂಗಲ್ ಫ್ಯಾನ್-ಫೇವರಿಟ್

ಗೂಗಲ್ ಫ್ಯಾನ್-ಫೇವರಿಟ್

ಪ್ರಪ್ರಥಮ ಬಾರಿಗೆ ಗೂಗಲ್ ಫ್ಯಾನ್-ಫೇವರಿಟ್ ಎಂಬ ವಿಭಾಗವನ್ನು ಪರಿಚಯಿಸುವ ಮೂಲಕ, ಬಳಕೆದಾರರಿಗೆ ಮತ ಹಾಕಲು ಅವಕಾಶ ಕಲ್ಪಿಸಿತ್ತು. ಸಂಪರ್ಕದಲ್ಲಿನ ಸರಳತೆ, ಇತರೆ ಆಟಗಾರರೊಂದಿಗೆ ಸಂವಹನ ಸಾಧ್ಯತೆ ಇತ್ಯಾದಿಗಳು ಭಾರತದ ಮೊಬೈಲ್ ಗೇಮಿಂಗ್ ಕ್ಷೇತ್ರದಲ್ಲಿ ಹಿಂದೆ ಎಂದೂ ಕಂಡಿರದಂಥ ಅವಕಾಶಗಳನ್ನು ಈ ಗೇಮ್ ಕಲ್ಪಿಸಿತು.

ಗೋಲ್ಡನ್ ಜಾಯ್‍ಸ್ಟಿಕ್ ಪ್ರಶಸ್ತಿ

ಗೋಲ್ಡನ್ ಜಾಯ್‍ಸ್ಟಿಕ್ ಪ್ರಶಸ್ತಿ

ಗಮನಾರ್ಹವೆಂದರೆ, ಪಬ್‍ಜಿ ಮೊಬೈಲ್ ಕ್ಯಾಲಿಫೋರ್ನಿಯಾ ಲಾಸ್‍ಏಂಜಲೀಸ್‍ನಲ್ಲಿ ನಡೆದ 2018 ಗೋಲ್ಡನ್ ಜಾಯ್‍ಸ್ಟಿಕ್ ಪ್ರಶಸ್ತಿ ಸಮಾರಂಭದಲ್ಲಿ ಶ್ರೇಷ್ಠ ಮೊಬೈಲ್ ಗೇಮ್ ಎಂಬ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಅದಲ್ಲದೆ, ಗೇಮ್ ಅವಾರ್ಡ್ಸ್ 2018ರಲ್ಲೂ ಬೆಸ್ಟ್ ಮೊಬೈಲ್ ಗೇಮ್ ವಿಭಾಗಕ್ಕೆ ಈ ಆಟವೂ ನಾಮನಿರ್ದೇಶನಗೊಂಡಿದೆ.

ಅತಿ ಹೆಚ್ಚು ಇನ್ ಸ್ಟಾಲ್ ಆದ ಆಪ್

ಅತಿ ಹೆಚ್ಚು ಇನ್ ಸ್ಟಾಲ್ ಆದ ಆಪ್

ಸೆನ್ಸರ್ ಟವರ್ ಬಹಿರಂಗಪಡಿಸಿರುವಂಥ ಇತ್ತೀಚೆಗಿನ ಸ್ಟೋರ್ ಇಂಟೆಲಿಜೆನ್ಸ್ ಡೇಟಾ ಡೈಜೆಸ್ಟ್ ಪ್ರಕಾರ, ಪಬ್‍ಜಿಯನ್ನು ಗ್ರಾಹಕರು ಸ್ನ್ಯಾಪ್‍ಚಾಟ್, ಯೂಟ್ಯೂಬ್, ನೆಟ್‍ಫ್ಲಿಕ್ಸ್ ಮತ್ತು ಸ್ಪೋಟಿಫೈಗಿಂತಲೂ ಹೆಚ್ಚು ಬಾರಿ ಡೌನ್‍ಲೋಡ್ ಮಾಡಿದ್ದಾರೆ. ಐಒಎಸ್‍ನಲ್ಲಿ ಎರಡನೇ ಅತಿ ಹೆಚ್ಚು ಡೌನ್‍ಲೋಡ್ ಆದ ಆಪ್ ಅಂದರೆ 40 ದಶಲಕ್ಷ ಮಂದಿ ಇನ್‍ಸ್ಟಾಲ್ ಮಾಡಿರುವ ಆಪ್ ಎಂಬ ಖ್ಯಾತಿಯೂ ಪಬ್‍ಜಿ ಮೊಬೈಲ್‍ಗೆ ದಕ್ಕಿದೆ. ಈ ಸಂಖ್ಯೆಯಲ್ಲಿ ಚೀನಾದ ಆಟಗಾರರು ಒಳಪಟ್ಟಿಲ್ಲ.

ಪ್ರದೇಶಗಳ ಗೇಮಿಂಗ್ ಚಾರ್ಟ್‍ನಲ್ಲಿ ಈ ಆಟ

2018ರಲ್ಲಿ, ಒಂದೇ ವಾರದ ಅವಧಿಯಲ್ಲಿ 105 ರಾಷ್ಟ್ರಗಳು ಹಾಗೂ ಪ್ರದೇಶಗಳ ಗೇಮಿಂಗ್ ಚಾರ್ಟ್‍ನಲ್ಲಿ ಈ ಆಟವು ಟಾಪ್ ಸ್ಥಾನ ಪಡೆದಿತ್ತು. ಕೇವಲ ಆಟ ಮಾತ್ರವಲ್ಲ, ಇತ್ತೀಚಿನ ದಿನಗಳಲ್ಲಿ ನಡೆದ ಪಬ್‍ಜಿ ಮೊಬೈಲ್‍ನ ಕಾರ್ಯಕ್ರಮಗಳೇ ಈ ಗೇಮ್‍ಗೆ ದೇಶದಲ್ಲಿ ಸಿಕ್ಕಿರುವ ಜನಪ್ರಿಯತೆಯನ್ನು ಪ್ರತಿಬಿಂಬಿಸಿದೆ. ಪಬ್‍ಜಿ ಮೊಬೈಲ್ ಕ್ಯಾಂಪಸ್ ಚಾಂಪಿಯನ್‍ಷಿಪ್ ಎನ್ನುವುದು ಭಾರತದ ಮೊದಲ ಮೆಗಾ ಇಸ್ಪೋರ್ಟ್ಸ್ ಟೂರ್ನಮೆಂಟ್ ಆಗಿತ್ತು. ಈ ಟೂರ್ನಮೆಂಟ್‍ನಲ್ಲಿ 30+ ನಗರಗಳ 1000 ಕಾಲೇಜುಗಳ ಸುಮಾರು 2,50,000 ಮಂದಿ ನೋಂದಾಯಿಸಿಕೊಂಡಿದ್ದು, 40,000 ಮಂದಿ ಭಾಗವಹಿಸಿದ್ದರು.

ವಿಜೇತ ತಂಡಕ್ಕೆ 15,00,000 ರೂಪಾಯಿಗಳ ಬಹುಮಾನ

ವಿಜೇತ ತಂಡಕ್ಕೆ 15,00,000 ರೂಪಾಯಿಗಳ ಬಹುಮಾನ

20 ತಂಡಗಳು ಬೆಂಗಳೂರಿನಲ್ಲಿ ನಡೆದ ಗ್ರ್ಯಾಂಡ್ ಫಿನಾಲೆಗೆ ಆಯ್ಕೆಯಾದವು. ಈ ರಾಷ್ಟ್ರಮಟ್ಟದ ಅದ್ಧೂರಿ ಕಾರ್ಯಕ್ರಮದಲ್ಲಿ ಬೆಸ್ಟ್ ಪಬ್‍ಜಿ ಮೊಬೈಲ್ ಪ್ರತಿಭೆಯನ್ನು ಆಯ್ಕೆ ಮಾಡಲಾಯಿತು. ಇಂಥ ಇನ್ನೂ ಹಲವು ಕಾರ್ಯಕ್ರಮಗಳ ಮೂಲಕ ಪಬ್‍ಜಿ ಮೊಬೈಲ್ ದೇಶದಲ್ಲಿ ಇಸ್ಪೋರ್ಟ್ಸ್‍ನ ವ್ಯವಸ್ಥೆಯನ್ನು ಇನ್ನಷ್ಟು ಎತ್ತರಕ್ಕೇರಿಸಲು ಮುಂದಾಗಿದೆ.

ಇನ್ನು, ಕ್ಯಾಂಪಸ್ ಚಾಂಪಿಯನ್‍ಷಿಪ್ ಅಂತೂ ಭಾರತದ ಅತಿದೊಡ್ಡ ಇಸ್ಪೋರ್ಟ್ಸ್ ಟೂರ್ನಮೆಂಟ್ ಆಗಿದ್ದು, ಇದರ ಪ್ರಶಸ್ತಿಯ ಮೊತ್ತವು ಭಾರತದ ಇಸ್ಪೋರ್ಟ್ಸ್ ಇತಿಹಾಸದಲ್ಲೇ ಕಂಡು ಕೇಳರಿಯದಂಥದ್ದಾಗಿತ್ತು. ಒಟ್ಟಾರೆ ನಗದು ಪ್ರಶಸ್ತಿಯ ಮೊತ್ತ 50,00,000 ರೂ.ಗಳಾಗಿತ್ತು. ವಿಜೇತ ತಂಡವು 15,00,000 ರೂಪಾಯಿಗಳ ನಗದು ಬಹುಮಾನವನ್ನು ತನ್ನೊಂದಿಗೆ ಒಯ್ಯಿತು.

English summary
PUBG Corp. and Tencent Games have officially started Season 5 in PUBG Mobile, kicking things off with a new update that includes a new Royale Pass.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X