ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಬ್‍ಜಿ ಮೊಬೈಲ್ ಪ್ರತಿಭೆಗಳಿಗೆ ಸವಾಲ್, ಆಟವಾಡಿ 1.5 ಕೋಟಿ ರು ಗೆಲ್ಲಿ

|
Google Oneindia Kannada News

ಬೆಂಗಳೂರು, ಜುಲೈ 03: ಭಾರತದ ಪಬ್‍ಜಿ ಮೊಬೈಲ್ ಪ್ರತಿಭೆಗಳನ್ನು ಗುರುತಿಸುವ ನಿಟ್ಟಿನಲ್ಲಿ ಪಬ್‍ಜಿ ಮೊಬೈಲ್ ಇಂಡಿಯಾ ಟೂರ್ 2019 ಅನ್ನು ಒಪ್ಪೊ ಸಹಯೋಗದಲ್ಲಿ 2019 ರ ಜುಲೈ 1 ರಂದು ಆರಂಭಿಸಿದೆ. ಒಟ್ಟು ನಾಲ್ಕು ತಿಂಗಳ ಟೂರ್ ಇದಾಗಿದ್ದು, ದೇಶದಲ್ಲಿ ಇಷ್ಟೊಂದು ಸುದೀರ್ಘ ಅವಧಿವರೆಗೆ ಆಯೋಜಿಸಲಾಗಿರುವ ಅತಿದೊಡ್ಡ ಇಸ್ಪೋಟ್ರ್ಸ್ ಇದಾಗಿದೆ.

ಇದೇ ಮೊದಲ ಬಾರಿಗೆ ಬಹು-ನಗರಗಳ ಟೂರ್ನಮೆಂಟ್ ಇದಾಗಿದ್ದು, ಜೈಪುರ, ಗುವಾಹತಿ, ಪುಣೆ, ವೈಝಾಗ್ ನಗರಗಳಲ್ಲಿ ಪ್ರಾದೇಶಿಕ ಫೈನಲ್‍ಗಳು ನಡೆಯಲಿದ್ದು, 2019 ರ ಅಕ್ಟೋಬರ್‍ನಲ್ಲಿ ಕೋಲ್ಕತ್ತಾದಲ್ಲಿ ಗ್ರ್ಯಾಂಡ್ ಫೈನಲ್ ನಡೆಯಲಿದೆ.

ಒಪ್ಪೊ ಎಫ್11 ಪ್ರೊ ಜತೆ ಪಾಲುದಾರಿಕೆ ಹೊಂದುವುದರೊಂದಿಗೆ ಆರಂಭವಾಗಿರುವ ಈ ಟೂರ್ನಮೆಂಟ್‍ನಲ್ಲಿ ಎಫ್11 ಪ್ರೊದೊಂದಿಗೆ ನೀವು ಇರಿ ಎಂದು ಆಟಗಾರರನ್ನು ಉತ್ತೇಜಿಸಲಾಗುತ್ತದೆ. ಸಾಂಪ್ರದಾಯಿಕವಾದ ಮೊಬೈಲ್ ಫೋನ್‍ಗಳಿಗೆ ಹೋಲಿಸಿದರೆ ಈ ಎಫ್11 ಪ್ರೊ 6.5 ಇಂಚುಗಳ ಡಿಸ್‍ಪ್ಲೇ ಸ್ಕ್ರೀನ್ ಮತ್ತು ಸ್ಕ್ರೀನ್‍ನಿಂದ ಬಾಡಿಯ ಅನುಪಾತ 90.9 ರಷ್ಟಿದ್ದು, ದೊಡ್ಡ ಚಿತ್ರಗಳನ್ನು ನೀಡಲಿದೆ.

ಗೂಗಲ್ ಪ್ಲೇ ವರ್ಷದ ಗೇಮ್ ಪ್ರಶಸ್ತಿ ಗೆದ್ದ ಪಬ್‍ಜಿ ಮೊಬೈಲ್ಗೂಗಲ್ ಪ್ಲೇ ವರ್ಷದ ಗೇಮ್ ಪ್ರಶಸ್ತಿ ಗೆದ್ದ ಪಬ್‍ಜಿ ಮೊಬೈಲ್

ಇದಲ್ಲದೇ, ಕಣ್ಣಿಗೆ ಮುದ ನೀಡುವಂತಹ ಮನೋರಂಜನೆ ಮತ್ತು ಗೇಮಿಂಗ್ ಅನುಭವವನ್ನು ನೀಡಲಿದೆ. ಈ ಅನುಭವವನ್ನು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ವಿಒಒಸಿ 3.0 ಹ್ಯಾಂಡಿಯಲ್ಲಿ ಬಂದಿದ್ದು, ಈ ಮೂಲಕ ಇನ್ನೂ ಹೆಚ್ಚಿನ ಸಮಯ ಆಟವಾಡಬಹುದಾಗಿದೆ. ಹೊಸ ಹೆಲಿಯೋ ಪಿ70 ಯು ಹೈಪರ್‍ಬೂಸ್ಟ್ ಸಂಯೋಜನೆಯೊಂದಿಗೆ ಮೆಮೊರಿ ಸಾಮರ್ಥ್ಯವನ್ನು ಹೆಚ್ಚಿಸಲಿದ್ದು, ಆರ್‍ಎಎಂ ಮೊತ್ತದಲ್ಲಿ ಮೆಮೊರಿಯನ್ನು ನೀಡಲಿದೆ. ಇದರಿಂದ ಅತಿ ವೇಗವಾಗಿ ಲೋಡ್ ಆಗಲಿದೆ.

ಪಬ್‍ಜಿ ಮೊಬೈಲ್ ಇಂಡಿಯಾ ಟೂರ್ 2019

ಪಬ್‍ಜಿ ಮೊಬೈಲ್ ಇಂಡಿಯಾ ಟೂರ್ 2019

ಟೈರ್ ಪ್ಲಾಟಿನಂ 5 ಅಥವಾ ಲೆವೆಲ್ 20 ನ ಪಬ್‍ಜಿ ಮೊಬೈಲ್ ಅಕೌಂಟ್ ಇರುವ ಎಲ್ಲಾ ಭಾರತೀಯ ನಿವಾಸಿಗಳಿಗೆ ಈ ಒಪ್ಪೊ ಪಬ್‍ಜಿ ಮೊಬೈಲ್ ಇಂಡಿಯಾ ಟೂರ್ 2019 ರಲ್ಲಿ ಪಾಲ್ಗೊಳ್ಳಲು ಮುಕ್ತ ಅವಕಾಶವಿದೆ. ಈ ಟೂರ್ನಮೆಂಟಿನಲ್ಲಿ ಪಾಲ್ಗೊಳ್ಳಲು ನೋಂದಣಿ ಮಾಡಿಸುವಾಗ ಸ್ಪರ್ಧಿಗಳು ನಾಲ್ಕು ನಗರಗಳ ಪೈಕಿ ಯಾವುದೇ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು.

ಒಂದು ಗ್ರೂಪಿನಲ್ಲಿ ಎಷ್ಟು ಆಟಗಾರರು ಬೇಕಾದರೂ ನೋಂದಣಿ ಮಾಡಿಸಿಕೊಳ್ಳಬಹುದು. ಆದರೆ, ಒಬ್ಬ ಆಟಗಾರನಿಗೆ ಒಂದು ನೋಂದಣಿಗೆ ಮಾತ್ರ ಅವಕಾಶವಿರುತ್ತದೆ. ಅಂತಿಮವಾಗಿ, ತಂಡದ ಸದಸ್ಯರಿಗೆ ಯಾವುದೇ ಭೌಗೋಳಿಕ ಪ್ರದೇಶದ ನಿಯಂತ್ರಣ ಇರುವುದಿಲ್ಲ. ಭಾರತದ ಯಾವುದೇ ನಗರದಿಂದ ಮತ್ತೊಂದು ನಗರದಲ್ಲಿ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಗ್ರ್ಯಾಂಡ್ ಫೈನಲ್‍ನ ಹಾದಿ

ಗ್ರ್ಯಾಂಡ್ ಫೈನಲ್‍ನ ಹಾದಿ

ಇನ್-ಗೇಮ್ ಕ್ಯಾಲಿಫೈಯರ್ ಹಂತದಲ್ಲಿ ನೋಂದಾಯಿತ ತಂಡಗಳು ಪಡೆದ ಅಂಕಗಳ ಆಧಾರದಲ್ಲಿ ಪ್ರತಿ ಗುಂಪಿನ ಟಾಪ್ 500 ತಂಡಗಳನ್ನು ಆನ್‍ಲೈನ್ ಪ್ಲೇಆಫ್ಸ್'ಗೆ ಆಯ್ಕೆ ಮಾಡಲಾಗುತ್ತದೆ. ಪೂಲ್ ಅನ್ನು ಮತ್ತಷ್ಟು ಫಿಲ್ಟರ್ ಮಾಡಲಿದ್ದು, ಅತ್ಯುತ್ತಮ ಎನಿಸಿದ 20 ತಂಡಗಳನ್ನು ಆಯ್ಕೆ ಮಾಡಲಾಗುತ್ತದೆ. ಈ ತಂಢಗಳು ಗ್ರೂಪ್ ಫೈನಲ್ಸ್‍ನಲ್ಲಿ ಸ್ಪರ್ಧಿಸಲಿವೆ. ಪ್ರತಿ ಗುಂಪಿನ ಟಾಪ್ 4 ತಂಡಗಳು ಇಂಡಿಯಾ ಟೂರ್ ನ ಗ್ರ್ಯಾಂಡ್ ಫಿನಾಲೆಗೆ ನೇರವಾಗಿ ಬಡ್ತಿ ಪಡೆಯಲಿವೆ.

ಹೊಸದಾಗಿ ಪರಿಚಯಿಲಾಗಿರುವ ವೈಲ್ಡ್ ಕಾರ್ಡ್ ರೌಂಡ್ಸ್

ಹೊಸದಾಗಿ ಪರಿಚಯಿಲಾಗಿರುವ ವೈಲ್ಡ್ ಕಾರ್ಡ್ ರೌಂಡ್ಸ್

ಇದಲ್ಲದೇ, ಆನ್‍ಲೈನ್ ಪ್ಲೇಆಫ್‍ನಲ್ಲಿ ಹೊರಗುಳಿಯುವ ಟಾಪ್ 64 ತಂಡಗಳಿಗೆ (ಪ್ರತಿ ಗುಂಪಿನ ಫೈನಲ್‍ನ 16 ತಂಡಗಳು) ಹೊಸದಾಗಿ ಪರಿಚಯಿಲಾಗಿರುವ ವೈಲ್ಡ್ ಕಾರ್ಡ್ ರೌಂಡ್ಸ್ ನಲ್ಲಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿ ಗ್ರ್ಯಾಂಡ್ ಫಿನಾಲೆಗೆ ಪ್ರವೇಶಿಸಬಹುದು. ಈ ತಂಡಗಳ ಪೈಕಿ ಅತ್ಯುತ್ತಮವಾದ 4 ತಂಡಗಳು ಗ್ರ್ಯಾಂಡ್ ಫಿನಾಲೆ ಪ್ರವೇಶಿಸುವ ಅರ್ಹತೆ ಪಡೆಯಲಿವೆ.

ಪಬ್‍ಜಿ ಮೊಬೈಲ್ ಕ್ಯಾಂಪಸ್ ಚಾಂಪಿಯನ್‍ಶಿಪ್ ಗೆದ್ದ ಮುಂಬೈ ತಂಡ ಪಬ್‍ಜಿ ಮೊಬೈಲ್ ಕ್ಯಾಂಪಸ್ ಚಾಂಪಿಯನ್‍ಶಿಪ್ ಗೆದ್ದ ಮುಂಬೈ ತಂಡ

ಒಟ್ಟು ಬಹುಮಾನ 1.5 ಕೋಟಿ ರೂಪಾಯಿ

ಒಟ್ಟು ಬಹುಮಾನ 1.5 ಕೋಟಿ ರೂಪಾಯಿ

ಈ ಸ್ಪರ್ಧೆಯ ಒಟ್ಟು ಬಹುಮಾನ 1.5 ಕೋಟಿ ರೂಪಾಯಿಗಳು. ಮೊದಲ Ranking ಹೊಂದುವ ತಂಡ 50,00,000 ರೂಪಾಯಿ ಪಡೆಯಲಿದ್ದರೆ, ಎರಡನೇ ರ್ಯಾಂಕಿಂಗ್‍ನ ತಂಡಕ್ಕೆ 20,00,000 ರೂಪಾಯಿ ಮತ್ತು ಮೂರನೇ ತಂಡಕ್ಕೆ 10,00,000 ರೂಪಾಯಿ ನಗದು ಬಹುಮಾನ ಸಿಗಲಿದೆ. ಇದಲ್ಲದೇ, ಫೈನಲ್ ಪ್ರವೇಶಿಸುವ ಎಲ್ಲಾ ತಂಡಗಳಿಗೆ ನಗದು ಬಹುಮಾನಗಳನ್ನು ನೀಡಲಾಗುತ್ತದೆ.

English summary
Player Unknown’s Battle Ground or PUBG PUBG MOBILE is developed by Tencent Games and PUBG Corp has announced India Tour 2019. The new tournament has the highest prize pool ever to be seen in a PUBG Mobile tournament, with 1.5 crores over last years 1 crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X