ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಬ್‍ಜಿ ಮೊಬೈಲ್ ಕ್ಯಾಂಪಸ್ ಚಾಂಪಿಯನ್‍ಶಿಪ್ ಗೆದ್ದ ಮುಂಬೈ ತಂಡ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 22: ಟೆನ್ಸೆಂಟ್ ಗೇಮ್ಸ್ ಮತ್ತು ಪಬ್‍ಜಿ ಕಾರ್ಪ್ ಇತ್ತೀಚೆಗೆ ಆಯೋಜಿಸಿದ್ದ ಭಾರತದ ಅತಿದೊಡ್ಡ ಇಸ್ಪೋರ್ಟ್ಸ್ ಚಾಂಪಿಯನ್‍ಶಿಪ್ - 'ಪಬ್‍ಜಿ ಮೊಬೈಲ್ ಕ್ಯಾಂಪಸ್ ಚಾಂಪಿಯನ್‍ಶಿಪ್ 2018'ರ ಗ್ರ್ಯಾಂಡ್ ಫಿನಾಲೆ ಬೆಂಗಳೂರಿನಲ್ಲಿ ಅಕ್ಟೋಬರ್ 21ರಂದು ಸಮಾರೋಪಗೊಂಡಿತು.

ಮುಂಬೈನ 'ದಿ ಟೆರಿಫಯಿಂಗ್ ನೈಟ್‍ಮೇರ್ಸ್' ತಂಡವು ಪಬ್‍ಜಿ ಮೊಬೈಲ್ ಕ್ಯಾಂಪಸ್ ಚಾಂಪಿಯನ್‍ಶಿಪ್ 2018ರ ಕಿರೀಟ, 50,00,000 ರೂ. ನಗದು ಬಹುಮಾನಗಳನ್ನು ಹೊಂದಿದ್ದ ಭಾರತದ ಅತಿದೊಡ್ಡ ಇಸ್ಪೋರ್ಟ್ಸ್ ಚಾಂಪಿಯನ್‍ಶಿಪ್ ಗೆದ್ದು ಬೀಗಿದೆ.

ಆನ್ ಲೈನ್ ಗೇಮ್ ಚಟಕ್ಕೆ ಪಾಲಕರನ್ನೇ ಕೊಂದ ಮಗ! ಆನ್ ಲೈನ್ ಗೇಮ್ ಚಟಕ್ಕೆ ಪಾಲಕರನ್ನೇ ಕೊಂದ ಮಗ!

ಒಪ್ಪೋ ಇಂಡಿಯಾ ಪ್ರಾಯೋಜಕತ್ವದಲ್ಲಿ ಒಂದು ತಿಂಗಳ ಕಾಲ ನಡೆದ ಇಸ್ಪೋರ್ಟ್ಸ್, ಅತಿದೊಡ್ಡ ಮಟ್ಟದ ಕಾರ್ಯಕ್ರಮವಾಗಿ ಹೊರಹೊಮ್ಮಿದ್ದು, ಒಂದು ತಿಂಗಳ ಅವಧಿಯಲ್ಲಿ 2,50,000 ನೋಂದಣಿಯನ್ನು ಕಂಡಿತ್ತು.

ಈ ಬೃಹತ್ ಇಸ್ಪೋರ್ಟ್ಸ್ ಕಾರ್ಯಕ್ರಮಕ್ಕೆ ದೇಶಾದ್ಯಂತ ಅದ್ಭುತ ಸ್ಪಂದನೆ ಸಿಕ್ಕಿದ್ದು, ಸುಮಾರು 30 ನಗರಗಳ 1000ಕ್ಕೂ ಅಧಿಕ ಕಾಲೇಜುಗಳ ಕ್ರೀಡಾಳುಗಳು ಇದರಲ್ಲಿ ಭಾಗಿಯಾಗಿದ್ದರು.

ಪಾಲಕರೇ ಎಚ್ಚರ ಮೋಮೋ ಗೇಮ್‌ ಬ್ಲೂವೇಲ್‌ಗಿಂತಲೂ ಡೆಡ್ಲಿ!ಪಾಲಕರೇ ಎಚ್ಚರ ಮೋಮೋ ಗೇಮ್‌ ಬ್ಲೂವೇಲ್‌ಗಿಂತಲೂ ಡೆಡ್ಲಿ!

ಚಾಂಪಿಯನ್‍ಶಿಪ್ ಕುರಿತು ಮಾತನಾಡಿದ ಟೆನ್ಸೆಂಟ್ ಗೇಮ್ಸ್ ಇಂಡಿಯಾ ಜನರಲ್ ಮ್ಯಾನೇಜರ್ ಅನೀಷ್ ಅರವಿಂದ್ - 'ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಇಸ್ಪೋರ್ಟ್ಸ್ ಎನ್ನುವುದು ಅದ್ಭುತ ಪ್ರಗತಿ ಕಂಡಿದೆ. ಪಬ್‍ಜಿ ಮೊಬೈಲ್ ಕೂಡ ದೇಶದ ಗಮನಸೆಳೆದ ಗೇಮ್‍ಗಳ ವಿಚಾರದಲ್ಲಿ ಖ್ಯಾತಿ ಗಳಿಸಿದೆ ಎಂದರು.

ಭಾರತವು ಇಸ್ಪೋರ್ಟ್ಸ್ ನಲ್ಲಿ ಅತಿ ಭರವಸೆಯ ಮಾರುಕಟ್ಟೆ

ಭಾರತವು ಇಸ್ಪೋರ್ಟ್ಸ್ ನಲ್ಲಿ ಅತಿ ಭರವಸೆಯ ಮಾರುಕಟ್ಟೆ

ಭಾರತವು ಇಸ್ಪೋರ್ಟ್ಸ್ ನಲ್ಲಿ ಅತಿ ಭರವಸೆಯ ಮಾರುಕಟ್ಟೆ ಎಂಬ ನಂಬಿಕೆಯನ್ನು ಈ ಕ್ಯಾಪಸ್ ಚಾಂಪಿಯನ್‍ಶಿಪ್ ಮತ್ತಷ್ಟು ಗಟ್ಟಿಗೊಳಿಸಿದೆ. ಈ ಗೇಮ್‍ಗಳಿಗೆ ಅದ್ಭುತ ಸ್ಪಂದನೆಯೂ ವ್ಯಕ್ತವಾಗಿರುವುದು ನಮಗೆ ಇನ್ನಷ್ಟು ಸಂತೋಷ ತಂದುಕೊಟ್ಟಿದೆ.

ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ವಿಜೇತರಾದವರು ಮತ್ತು ಭಾಗಿಯಾದ ಎಲ್ಲರಿಗೂ ನಮ್ಮ ಹೃತ್ಪೂರ್ವಕ ಅಭಿನಂದನೆಗಳು. ಚಾಂಪಿಯನ್‍ಶಿಪ್‍ನ ಅಚ್ಚರಿಯ ಯಶಸ್ಸಿನ ಹಿನ್ನೆಲೆಯಲ್ಲಿ, ನಾವೀಗ ನಮ್ಮ ಅಭಿಮಾನಿಗಳಿಗೆ ಮುದ ನೀಡುವ ಇನ್ನಷ್ಟು ಚಟುವಟಿಕೆಗಳನ್ನು ಆಯೋಜಿಸುವುದರ ಮೂಲಕ, ಪಬ್‍ಜಿ ಮೊಬೈಲ್ ಅನ್ನು ಭಾರತದಲ್ಲಿ ಆಡುವ ಅತ್ಯುತ್ತಮ ಗೇಮ್ ಎಂಬಂತೆ ಖ್ಯಾತಿಗೊಳಿಸಲಿದ್ದೇವೆ'' ಎಂದರು.

ಚಾಂಪಿಯನ್‍ಶಿಪ್‍ನ ವಿಜೇತ ತಂಡವಾದ ಮುಂಬೈನ 'ದಿ ಟೆರಿಫಯಿಂಗ್ ನೈಟ್‍ಮೇರ್ಸ್'', 15,00,000 ರೂ.ಗಳ ನಗದು ಬಹುಮಾನವನ್ನು ಗಳಿಸಿತು. ಇದರ ಜೊತೆಗೆ ಟಾಪ್ 15ನಲ್ಲಿರುವ ಪ್ರತಿಯೊಬ್ಬರಿಗೂ ಒಪ್ಪೋ ಎಫ್ 9 ಸ್ಮಾರ್ಟ್ ಫೋನ್ ಗಳನ್ನು ನೀಡಲಾಯಿತು. ಈ ವೈಭವಯುತ ಕಾರ್ಯಕ್ರಮವು ಪಬ್‍ಜಿ ಮೊಬೈಲ್ ಅನ್ನು ಹಿಂದೆಂದೂ ಕಂಡಿರದಂಥ ಮಟ್ಟಕ್ಕೆ ಕೊಂಡೊಯ್ಯಿತು.

ಭಾರತದಲ್ಲಿ ಟೆನ್ಸೆಂಟ್ ನ ಫೋಕಸ್

ಭಾರತದಲ್ಲಿ ಟೆನ್ಸೆಂಟ್ ನ ಫೋಕಸ್

ಭಾರತದಲ್ಲಿ ಟೆನ್ಸೆಂಟ್ ನ ಫೋಕಸ್ ಕುರಿತು ಮಾತನಾಡಿದ ಟೆನ್ಸೆಂಟ್ ಸಂಸ್ಥೆಯ ಕಾರ್ಪೊರೇಟ್ ಉಪಾಧ್ಯಕ್ಷ ಹಾಗೂ ಲೈಟ್ ಸ್ಪೀಡ್ ಆಂಡ್ ಕ್ವಾಂಟಮ್ ಸ್ಟುಡಿಯೋಸ್ ಗ್ರೂಪ್ ನ ಅಧ್ಯಕ್ಷ ಚೆನ್ ಜೆರ್ರಿ, 'ಟೆನ್ಸೆಂಟ್ ಗೇಮ್ಸ್, ಆರಂಭದಿಂದಲೂ ತನ್ನ ಗ್ರಾಹಕರಿಗೆ ಖುಷಿ ನೀಡುವಂಥ ಸರಳ ತತ್ವ ಅನುಸರಿ ಸುತ್ತಾ ಬಂದಿದೆ. ಕ್ರೀಡಾಳುಗಳಿಗೆ ಆಟದಲ್ಲೂ ಮಜಾ ಒದಗಿಸುವ ಮತ್ತು ಭಾರತದಲ್ಲಿ ಇಸ್ಪೋರ್ಟ್ಸ್ ಕುತೂಹಲಿಗರಿಗೆ ಸುಸ್ಥಿರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದಕ್ಕೆ ಬೆಂಬಲ ನೀಡುವಲ್ಲಿ ಬದ್ಧರಾಗಿದ್ದೇವೆ.

ಹಲವು ಮಾರುಕಟ್ಟೆಗಳಲ್ಲಿನ ಇಸ್ಪೋರ್ಟ್ಸ್ ಉದ್ದಿಮೆಯಲ್ಲಿ ನಮಗಿರುವ ಅನುಭವ ಬಳಸಿ ಕೊಂಡು, ಅದರ ಪರಿಣತಿಯನ್ನು ಬೆಳೆಯುತ್ತಾ ಇರುವ ಮೊಬೈಲ್ ಗೇಮಿಂಗ್ ಲ್ಯಾಂಡ್‍ಸ್ಕೇಪ್ ಆಗಿರುವ ಪಬ್‍ಜಿ ಮೊಬೈಲ್ ಅನ್ನು ಇನ್ನಷ್ಟು ವೃದ್ಧಿಸುವ ನಿಟ್ಟಿನಲ್ಲಿ ಬಳಸಲು ನಾವು ಬಯಸಿದ್ದೇವೆ. ಈಗಿನ ಕ್ಯಾಂಪಸ್ ಚಾಂಪಿಯನ್‍ಶಿಪ್ ಎನ್ನುವುದು ಭಾರತದಲ್ಲಿ ಇಸ್ಪೋರ್ಟ್ಸ್ ಉದ್ದಿಮೆಯಲ್ಲಿ ಹೊಸ ಮೈಲುಗಲ್ಲು ಸಾಧಿಸುವ ನಿಟ್ಟಿನಲ್ಲಿ ನಾವು ಹಾಕಿರುವ ಅಡಿಪಾಯ ಎನ್ನಬಹುದು' ಎಂದರು.

ಹಲವು ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು

ಹಲವು ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು

ಅಂತಿಮ ಪಂದ್ಯದ ಬಳಿಕ, ಕ್ರೀಡಾಳುಗಳಿಗೆ ಅವರ ಸಾಧನೆಯ ಆಧಾರದಲ್ಲಿ ಹಲವು ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಇದು ಪಬ್‍ಜಿ ಮೊಬೈಲ್ ಆಸಕ್ತರಿಗೆ, ಅತ್ಯಂತ ಸಂತಸವನ್ನು ತಂದುಕೊಟ್ಟಿತು. ಕ್ಯಾಂಪಸ್ ಚಾಂಪಿಯನ್ ಶಿಪ್ ನ 'ಎಂವಿಪಿ' ಆಗಿ ಎನ್‍ಎಸ್ಡಿ ತಂಡದ ಎಲೀನ್ ರಾಜ್ ಹೊರಹೊಮ್ಮಿದರು. ಅಂತಿಮ ದಿನದಲ್ಲಿ ಗರಿಷ್ಠ ಸಂಖ್ಯೆಯ ಎಂವಿಪಿ ಪ್ರಶಸ್ತಿಗಳು ಈ ತಂಡಕ್ಕೆ ಲಭಿಸಿದವು. ಗರಿಷ್ಠ ರಿವೈವ್ ಗಳಿಸಿದ ಆರ್4ಡಬ್ಲ್ಯು ಒಫೀಶಿಯಲ್ ತಂಡದ ಹರ್ದೀಪ್ ಸಿಂಗ್ ಅವರಿಗೆ 'ದಿ ಮೆಡಿಕ್' ಪ್ರಶಸ್ತಿ ನೀಡಲಾಯಿತು. ಒಂದು ಆಟದಲ್ಲಿ ಗರಿಷ್ಠ ಕಿಲ್ಸ್ ಗಾಗಿ 6ix9ine ತಂಡದ ಜತಿನ್ ಗುಪ್ತಾ ಅವರಿಗೆ 'ದಿ ಲೋನ್ ರೇಂಜರ್' ಟ್ಯಾಗ್ ನೀಡಿ ಗೌರವಿಸಲಾಯಿತು.

ಭಾರತದ ಅತಿದೊಡ್ಡ ಇಸ್ಪೋರ್ಟ್ಸ್ ಕಾರ್ಯಕ್ರಮ

ಭಾರತದ ಅತಿದೊಡ್ಡ ಇಸ್ಪೋರ್ಟ್ಸ್ ಕಾರ್ಯಕ್ರಮ

ಭಾರತದಲ್ಲಿ ಪಬ್‍ಜಿ ಮೊಬೈಲ್‍ಗೆ ಸಿಗುತ್ತಿರುವ ಉತ್ತಮ ಪ್ರತಿಕ್ರಿಯೆಯಿಂದ ಪುಳಕಿತಗೊಂಡು ಮಾತನಾಡಿದ ಪಬ್‍ಜಿ ಕಾಪೆರ್Çರೇಷನ್ ಸಿಇಒ ಚಾಂಗ್ ಹ್ಯಾನ್ ಕಿಮ್, 'ಭಾರತದಲ್ಲಿ ಪಬ್‍ಜಿ ಮೊಬೈಲ್‍ಗೆ ಸಿಕ್ಕಿರುವ ಸ್ಪಂದನೆಯು ಅಭೂತಪೂರ್ವವಾದದ್ದು. ಈ ಗೇಮ್ ದೇಶದಲ್ಲಿ ಹೊಸ ಬಿರುಗಾಳಿಯನ್ನೇ ಎಬ್ಬಿಸಿದೆ. ಇದೀಗ ಕೇವಲ ಮೊಬೈಲ್ ಗೇಮ್ ಆಗಿ ಉಳಿಯದೇ ಭಾರತದ ಆಯ್ಕೆಯ ಗೇಮ್ ಆಗಿ ಪರಿವರ್ತಿತಗೊಂಡಿದೆ.

ಪಬ್‍ಜಿ ಮೊಬೈಲ್ ಕ್ಯಾಂಪಸ್ ಚಾಂಪಿಯನ್‍ಶಿಪ್ ಭಾರತದ ಅತಿದೊಡ್ಡ ಇಸ್ಪೋರ್ಟ್ಸ್ ಕಾರ್ಯಕ್ರಮವಾಗಿ ಜನಪ್ರಿಯತೆ ಗಳಿಸಿದೆ. ಟೂರ್ನಮೆಂಟ್‍ಗೆ ಸಿಕ್ಕಿರುವ ಹೃತ್ಪೂರ್ವಕ ಪ್ರತಿಕ್ರಿಯೆಯು ಭಾರತದಲ್ಲಿನ ನಮ್ಮ ಫೋಕಸ್ ಗೆ ಉತ್ತೇಜನ ನೀಡಿದೆ. ಭಾರತದಲ್ಲಿರುವ ಪಬ್‍ಜಿ ಮೊಬೈಲ್ ಅಭಿಮಾನಿಗಳಿಗೆ ಸ್ಥಳೀಯ ಅನುಭವವನ್ನು ಒದಗಿಸುವ ನಿಟ್ಟಿನಲ್ಲಿಯೂ ನಾವು ಹೆಜ್ಜೆ ಇಡಲಿದ್ದೇವೆ'' ಎಂದರು.

English summary
Mumbai’s ‘The Terrifying Nightmares’ won India’s first official PUBG MOBILE Campus Championship 2018 held in Bengaluru on Sunday. The team took the prize money of Rs 15,00,000.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X