ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

PUBG ಗೇಂ ಭಾರತದಲ್ಲಿ ಬ್ಯಾನ್ ಆದ್ರೂ ಇನ್ನೂ ಜೀವಂತ!

|
Google Oneindia Kannada News

ನವದೆಹಲಿ, ಸೆ 4: ಕೇಂದ್ರ ಸರಕಾರ ಕಳೆದ ಬುಧವಾರ 118 ಚೀನಾ ಆ್ಯಪ್‌ ಗಳಿಗೆ ನಿಷೇಧ ಹೇರಿತ್ತು, ಅದರಲ್ಲಿ ಜನಪ್ರಿಯ ಗೇಮಿಂಗ್ ಪಬ್ಜಿ ಕೂಡಾ ಸೇರಿತ್ತು. ಪಬ್ಜಿ ಮೊಬೈಲ್ ಮತ್ತು ಪಬ್ಬಿ ಮೊಬೈಲ್ ಲೈಟ್ ನ ಮೊಬೈಲ್ ಆವೃತ್ತಿ ಬ್ಯಾನ್ ಗೊಂಡಿದ್ದವು.

ಆದರೆ, ಈ ಆ್ಯಪ್‌ ಗಳು ಮೊಬೈಲ್ ನಲ್ಲಿ ನಿಷೇಧಗೊಂಡಿದ್ದರೂ ಡೆಸ್ಕ್ ಟಾಪ್ ಮೂಲಕ ಆಡಬಹುದಾಗಿದೆ. ಪಬ್ಜಿ ಮತ್ತು ಪಬ್ಬಿ ಮೊಬೈಲ್ ಲೈಟ್ ಎರಡು ಬೇರೆ ಬೇರೆ ಆ್ಯಪ್‌ ಗಳಾಗಿದ್ದು, ಇದನ್ನು ಡೆವಲಪ್ ಮಾಡಿದ್ದು ಎರಡು ಬೇರೆ ಬೇರೆ ಸಂಸ್ಥೆಗಳಾಗಿವೆ.

ಪಬ್ಜಿ ಸೇರಿದಂತೆ 118 ಚೀನಾ ಆ್ಯಪ್‌ಗಳು ನಿಷೇಧಪಬ್ಜಿ ಸೇರಿದಂತೆ 118 ಚೀನಾ ಆ್ಯಪ್‌ಗಳು ನಿಷೇಧ

ಪಬ್ಜಿಯ ಡೆಸ್ಕ್ ಟಾಪ್ ಆವೃತ್ತಿಯನ್ನು ಡೆವಲಪ್ ಮಾಡಿದ್ದು ಪಬ್ಜಿ ಕಾರ್ಪೋರೇಶನ್. ಇದು, ದಕ್ಷಿಣ ಕೊರಿಯಾದ ಸಿಯೋಲ್ ನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಬ್ಲೂಹೋಲ್ ಸ್ಟುಡಿಯೋಸ್ ಸಂಸ್ಥೆಯ ಅಧೀನದಲ್ಲಿದೆ.

PUBG Banned In India, But Can Be Played In Personal Computers

ಆದರೆ, ಡೆಸ್ಕ್ ಟಾಪ್ ಆವೃತ್ತಿ ಜನಪ್ರಿಯಗೊಂಡಿರದೇ ಇದ್ದಿದ್ದರಿಂದ, ಚೀನಾದ ಟೆನ್ಸೆಂಟ್ ಹೋಲ್ಡಿಂಗ್ ಲಿಮಿಟೆಡ್ ಸಂಸ್ಥೆ ಪರವಾನಿಗೆ ಪಡೆದು, ಪಬ್ಜಿಯ ಮೊಬೈಲ್ ಆವೃತ್ತಿಯನ್ನು ಬಿಡುಗಡೆ ಮಾಡಿತ್ತು. ಈಗ, ಮೊಬೈಲ್ ಆವೃತ್ತಿಗೆ ಭಾರತ ಸರಕಾರ ನಿಷೇಧ ಹೇರಿದೆ.

ಮೊಬೈಲ್ ಮತ್ತು ಡೆಸ್ಕ್ ಟಾಪ್ ಆವೃತ್ತಿ ಎರಡೂ ಒಂದೇ ರೀತಿಯಿದ್ದರೂ, ಡೆಸ್ಕ್ ಟಾಪ್ ಆವೃತ್ತಿ ಇನ್ನೂ ಸುಧಾರಿತಗೊಂಡಿದ್ದಾಗಿರುತ್ತದೆ. ಆದರೆ, ಹಳೇ ಪಿಸಿಗಳಲ್ಲಿ (ಕಂಪ್ಯೂಟರ್) ಗಳಲ್ಲಿ ಇದು ವರ್ಕ್ ಆಗುವುದಿಲ್ಲ.

ಭಾರತದಲ್ಲಿ ಪಬ್ಜಿ ಬ್ಯಾನ್ : ಟೆನ್ಸೆಂಟ್ ಕಂಪನಿಗೆ 1 ಲಕ್ಷ ಕೋಟಿ ರೂಪಾಯಿ ನಷ್ಟಭಾರತದಲ್ಲಿ ಪಬ್ಜಿ ಬ್ಯಾನ್ : ಟೆನ್ಸೆಂಟ್ ಕಂಪನಿಗೆ 1 ಲಕ್ಷ ಕೋಟಿ ರೂಪಾಯಿ ನಷ್ಟ

ಅನೇಕ ಪೋಷಕರು ಪಬ್ಜಿ ಗೇಮ್‌ನಿಂದಾಗಿ ಮಕ್ಕಳ ಮೇಲಾಗುತ್ತಿರುವ ದುಷ್ಪರಿಣಾಮದ ಕುರಿತು ದೂರಿದ್ದರು. ಪಬ್ಜಿ ನಿಷೇಧಕ್ಕೆ ಒತ್ತಾಯ ಕೂಡ ಕೇಳಿ ಬಂದಿತ್ತು. ಇದೀಗ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಪಬ್ಜಿ ಜೊತೆ 118 ಆ್ಯಪ್‌ಗಳನ್ನು ಬ್ಯಾನ್ ಮಾಡಿದೆ.

ಆದರೆ, ಡೆಸ್ಕ್ ಟಾಪ್ ಆವೃತ್ತಿಯ ವಿಚಾರದಲ್ಲೂ ಕೇಂದ್ರ ಸರಕಾರ ಗಮನ ಹರಿಸುವುದು ಸೂಕ್ತ. ಯಾಕೆಂದರೆ, ದೇಶದ ಯುವಕರನ್ನು ತನ್ನ ದಾಸರನ್ನಾಗಿಸಿದ್ದ ಗೇಮಿಂಗ್ ಆ್ಯಪ್‌ ಇದಾಗಿದೆ.

English summary
PUBG Banned In India, But Can Be Played In Personal Computers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X