ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

1 ತಿಂಗಳಲ್ಲಿ 20 ವಹಿವಾಟು ಮೀರಿದರೆ ಖಾಸಗಿ ಬ್ಯಾಂಕುಗಳು UPI ಪಾವತಿಗಳಿಗೆ ಶುಲ್ಕ ವಿಧಿಸುತ್ತಿವೆ

|
Google Oneindia Kannada News

ನವದೆಹಲಿ, ಆಗಸ್ಟ್‌ 27: ಕೇಂದ್ರ ಸರ್ಕಾರ ಡಿಜಿಟಲ್ ಪಾವತಿಗೆ ಹೆಚ್ಚು ಉತ್ತೇಜನ ನೀಡುತ್ತಲೇ ಬಂದಿದೆ. ಯುಪಿಐ ಪಾವತಿಗಳು ಮುಕ್ತ ಎಂದು ಸರ್ಕಾರ ಹೇಳುತ್ತದೆ. ಇದರ ನಡುವೆ ಕೆಲ ಖಾಸಗಿ ಬ್ಯಾಂಕುಗಳು ಯುಪಿಐ ಪಾವತಿಗೆ ಗರಿಷ್ಠ ವಹಿವಾಟು ಮಿತಿ ಜಾರಿಗೆ ತಂದು ಶುಲ್ಕ ವಿಧಿಸುತ್ತಿವೆ.

ದೇಶದ ದೊಡ್ಡ ಖಾಸಗಿ ಬ್ಯಾಂಕುಗಳು ಯುಪಿಐ (ಏಕೀಕೃತ ಪಾವತಿ ಇಂಟರ್ಫೇಸ್) ಮೂಲಕ ಪ್ರಾರಂಭಿಸಿದ ವ್ಯಕ್ತಿಯಿಂದ ವ್ಯಕ್ತಿಗೆ (ಪಿ 2 ಪಿ) ಪಾವತಿಗಳಿಗೆ 2.5 ರೂ. ರಿಂದ 5 ರೂ.ಗಳವರೆಗೆ ಶುಲ್ಕವನ್ನು ವಿಧಿಸುತ್ತಿವೆ. ಯುಪಿಐ ಪಾವತಿಗಳು ಮುಕ್ತವಾಗಿರುತ್ತವೆ ಎಂದು ಸರ್ಕಾರ ಸಮರ್ಥಿಸಿಕೊಂಡಿದ್ದರೂ, ಬ್ಯಾಂಕುಗಳು ಈ ಶುಲ್ಕಗಳನ್ನು ಜಾರಿಗೆ ತಂದಿವೆ ಎನ್ನಲಾಗಿದೆ.

2019-20ರಲ್ಲಿ ಬರೋಬ್ಬರಿ 1.85 ಲಕ್ಷ ಕೋಟಿ ರೂಪಾಯಿ ಬ್ಯಾಂಕ್ ವಂಚನೆ: ಆರ್‌ಬಿಐ2019-20ರಲ್ಲಿ ಬರೋಬ್ಬರಿ 1.85 ಲಕ್ಷ ಕೋಟಿ ರೂಪಾಯಿ ಬ್ಯಾಂಕ್ ವಂಚನೆ: ಆರ್‌ಬಿಐ

ಜಿಎಸ್‌ಟಿ (ಸರಕು ಮತ್ತು ಮಾರಾಟ ತೆರಿಗೆ) ಹೊರತುಪಡಿಸಿ, 1000 ಕ್ಕಿಂತ ಕಡಿಮೆ ಅಥವಾ 1000 ರ ವಹಿವಾಟಿಗೆ 2.5 ರೂ. ಶುಲ್ಕವನ್ನು ವಿಧಿಸಲಾಗುತ್ತಿದೆ. ಇನ್ನು 1000 ರೂಪಾಯಿ ಮೇಲಿನ ವಹಿವಾಟಿಗೆ ಜಿಎಸ್‌ಟಿ ಹೊರತುಪಡಿಸಿ 5 ರೂಪಾಯಿ ಶುಲ್ಕ ವಿಧಿಸುತ್ತಿವೆ.

Private banks charging fee on More Than 20 UPI payments in a month

ಆದಾಗ್ಯೂ, ಐಐಟಿ ಬಾಂಬೆಯ ಆಶಿಶ್ ದಾಸ್ ಪ್ರಕಟಿಸಿದ ವರದಿಯಲ್ಲಿ, ಬ್ಯಾಂಕುಗಳು ತಮ್ಮ ಅನುಕೂಲಕ್ಕೆ ಅನುಗುಣವಾಗಿ ಡಿಜಿಟಲ್ 'ಪಾವತಿ' ಉಚಿತವಾಗಿದ್ದರೂ, ವಹಿವಾಟು ಶುಲ್ಕ ವಿಧಿಸಬಹುದು. ಇದು ಬ್ಯಾಂಕಿಂಗ್ ಉದ್ಯಮದ ಇತರ ಬ್ಯಾಂಕುಗಳನ್ನು ದಾರಿ ತಪ್ಪಿಸಬಹುದು ಎಂದು ವರದಿ ಹೇಳುತ್ತದೆ.

ಯುಪಿಐ ವಹಿವಾಟು ಹಣದ ನಂತರ ಸಾಮಾನ್ಯವಾಗಿ ಬಳಸುವ ಪಾವತಿ ಸಾಧನವಾಗಿದೆ ಎಂದು ವರದಿ ಹೇಳುತ್ತದೆ. ಲಾಕ್‌ಡೌನ್ ಸಮಯದಲ್ಲಿ ಇದರ ಬಳಕೆಯು ತಿಂಗಳಿಗೆ ಸುಮಾರು ಶೇಕಡಾ 8ರಷ್ಟು ಹೆಚ್ಚಾಗಿದೆ. 2019 ರ ಏಪ್ರಿಲ್‌ನಲ್ಲಿ 80 ಕೋಟಿ ರೂ.ಗಳಿಂದ , ಆಗಸ್ಟ್ 2020 ರಲ್ಲಿ 160 ಕೋಟಿ ರೂಪಾಯಿಗೆ ಮಾಸಿಕ ಗುರಿ ತಲುಪಿದೆ.

English summary
The government of India has maintained that UPI payments would remain free, banks say they brought in these charges to prevent frivolous transactions from overburdening the system
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X