ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೈವ್ : ಮೇಕ್ ಇನ್ ಇಂಡಿಯಾ ಅಭಿಯಾನಕ್ಕೆ ಚಾಲನೆ

By Mahesh
|
Google Oneindia Kannada News

ನವದೆಹಲಿ, ಸೆ.25: ದೆಹಲಿಯ ವಿಜ್ಞಾನ ಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ಇತಿಹಾಸ ಸೃಷ್ಟಿಗೆ ಮುಂದಾಗಿದ್ದಾರೆ. ತಮ್ಮ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ ಮೇಕ್ ಇನ್ ಇಂಡಿಯಾ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಜಾಗತಿಕ ಮತ್ತು ಸ್ಥಳೀಯ ಉದ್ಯಮಿಗಳ ಬೃಹತ್ ಸಮಾವೇಶದ ಜೊತೆಗೆ ದೇಶದ ಉತ್ಪಾದನಾ ಕ್ಷೇತ್ರದಲ್ಲಿ ಸುಮಾರು 10೦ ಮಿಲಿಯನ್ ಉದ್ಯೋಗ ಸೃಷ್ಟಿಗೆ ಮುಂದಾಗಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆ ದಿನದಂದು ಮೋದಿ ಅವರು ಕೆಂಪುಕೋಟೆ ಮುಂದೆ ನಿಂತು ಭಾಷಣ ಮಾಡುತ್ತಾ' ಮೇಕ್ ಇನ್ ಇಂಡಿಯಾ' ಅಭಿಯಾನದ ಬಗ್ಗೆ ಹೇಳಿದ್ದರು. ಈಗ ಮೇಕ್ ಇನ್ ಇಂಡಿಯಾದ ಧ್ಯೇಯ ವಾಕ್ಯ ಘೋಷಿಸಲಾಗಿತ್ತು. Goodbye red tape, hello red carpet ಎಂದು ಘೋಷಿಸಲಾಗಿದೆ.

ಸ್ವಾತಂತ್ರ್ಯ ದಿನಾಚರಣೆಯಂದು ಐತಿಹಾಸಿಕ ಕೆಂಪುಕೋಟೆ ಮೇಲೆ ಭಾಷಣ ಮಾಡುವ ಸಂದರ್ಭದಲ್ಲಿ ಪ್ರಧಾನಿ ಮೇಕ್ ಇನ್ ಇಂಡಿಯಾಕ್ಕೆ ಒತ್ತುಕೊಟ್ಟಿದ್ದರು. ದೇಶದ ಯುವ ಜನತೆಗೆ ಈ ಅಭಿಯಾನ ನೆರವಾಗಲಿದೆ. ಯುವ ಇಂಜಿನಿಯರ್ ಗಳು ದೇಶದ ಉತ್ಪಾದನಾ ಕ್ಷೇತ್ರಕ್ಕೆ ಬೆನ್ನಲುಬಾಗಿ ನಿಲ್ಲಬೇಕಿದೆ ಎಂದಿದ್ದರು.[ಪ್ರಧಾನಿ ಮೋದಿ ಭಾಷಣ ಸಾರಾಂಶ]

ಕುಮಾರ್ ಮಂಗಲಂ ಬಿರ್ಲಾ, ಅಜೀಂ ಪ್ರೇಂಜಿ, ಫಿಲ್ ಶಾ, ವೈಸಿ ದೇವೇಶ್ವರ್, ಮುಖೇಶ್ ಅಂಬಾನಿ, ಸುಜುಕಿಯ ಕೆನಿಛಿ ಅಯುಕವಾ ಸೇರಿದಂತೆ ಅನೇಕ ಪ್ರಮುಖ ಕಂಪನಿಗಳ ಮುಖ್ಯಸ್ಥರು ಮೇಕ್ ಇನ್ ಇಂಡಿಯಾ ಅಭಿಯಾನ ಚಾಲನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಹಲವು ಉದ್ಯಮಿಗಳು ನಿಂತುಕೊಂಡೇ ಮೋದಿ ಅವರ ಭಾಷಣ ಕೇಳುತ್ತಿದ್ದರು. ಇದನ್ನು ಕಂಡ ಮೋದಿ ಅವರು ಭಾಷಣದ ಆರಂಭದಲ್ಲೇ ಉದ್ಯಮಿಗಳ ಕ್ಷಮೆಯಾಚಿಸಿದರು.

ಮೇಕ್ ಇನ್ ಇಂಡಿಯಾ ಲೋಗೋ

ಮೇಕ್ ಇನ್ ಇಂಡಿಯಾ ಲೋಗೋ

ಮೇಕ್ ಇನ್ ಇಂಡಿಯಾದ ಧ್ಯೇಯ ವಾಕ್ಯ: Goodbye red tape, hello red carpet

ಮೇಕ್ ಇನ್ ಇಂಡಿಯಾ ಟ್ವಿಟ್ಟರ್ ಐಡಿ: @makeinindia_
ವೆಬ್ ತಾಣ: http://www.makeinindia.com

ಪ್ರಧಾನಿ ಮೋದಿ ಭಾಷಣದ ಸಾರಾಂಶ

ಪ್ರಧಾನಿ ಮೋದಿ ಭಾಷಣದ ಸಾರಾಂಶ

* ಮೇಕ್ ಇನ್ ಇಂಡಿಯಾ ಕೇವಲ ಅಭಿಯಾನವಲ್ಲ, ನಮ್ಮ ಜವಾಬ್ದಾರಿಯಾಗಿದೆ
* FDI = First Development India ಎಂದಾಗಬೇಕು.
* ಕೌಶಲ್ಯ ಅಭಿವೃದ್ಧಿಗೆ PPP ಯೋಜನೆ ಮಾದರಿಯಲ್ಲಿ ಅಭಿಯಾನ ಬೇಕಿದೆ
* ಭಾರತದ ಬಡತನ ನಿವಾರಣೆಗೆ ಉದ್ಯೋಗ ನೀಡೋಣ ಆಗ ಗ್ರಾಹಕರ ಸಂಖ್ಯೆ ಹೆಚ್ಚುತ್ತದೆ
* ನಿನ್ನೆಯ ಮಂಗಳಯಾನ ಯಶಸ್ಸಿನ ನಂತರ ಭಾರತದ ಪ್ರತಿಭೆ ಬಗ್ಗೆ ಯಾರೂ ಎದುರು ಮಾತನಾಡುವುದಿಲ್ಲ.
* ಉದ್ಯಮಿಗಳೆ ನಿಮ್ಮ ಬಂಡವಾಳ ನಷ್ಟವಾಗದಂತೆ ಮೇಕ್ ಇನ್ ಇಂಡಿಯಾ ಅಭಿಯಾನ ರೂಪಿಸಲಾಗಿದೆ
* 'Look East' and 'Link West' policy in the country and we will move towards it
* ಉದ್ಯಮಿಗಳೆ ದೇಶ ತೊರೆಯಬೇಡಿ, ಭಾರತದ ಕಂಪನಿಗಳು ಇಲ್ಲೇ ಬೇರೂರಿ ಬಹುರಾಷ್ಟ್ರೀಯ ಕಂಪನಿಗಳಾಗಬಹುದು

ಕಾರ್ಯಕ್ರಮದ ನೇರ ಪ್ರಸಾರ ವಿಡಿಯೋ

ವಿಜ್ಞಾನ ಭವನದಲ್ಲಿ ನಡೆದಿರುವ ಕಾರ್ಯಕ್ರಮದ ನೇರ ಪ್ರಸಾರ ವಿಡಿಯೋ

ಎಷ್ಟು ಕಂಪನಿಗಳು ಪಾಲ್ಗೊಳ್ಳಲಿವೆ

ಎಷ್ಟು ಕಂಪನಿಗಳು ಪಾಲ್ಗೊಳ್ಳಲಿವೆ

ಒಟ್ಟಾರೆ ವಿವಿಧ ಕಂಪನಿಗೆ ಸೇರಿದ 500ಕ್ಕೂ ಅಧಿಕ ಸಿಇಒಗಳು, ಪ್ರತಿನಿಧಿಗಳು ಭಾಗವಹಿಸಿದ್ದಾರೆ. ಅಮೆರಿಕ, ಜಪಾನ್, ಕೊರಿಯಾ, ಸ್ವೀಡನ್, ಆಸ್ಟ್ರೇಲಿಯಾ, ಪೋಲ್ಯಾಂಡ್, ಚೀನಾ, ಇಟಲಿ, ಜರ್ಮನಿ, ಫ್ರಾನ್ಸ್ ಸೇರಿದಂತೆ ಅನೇಕ ರಾಷ್ಟ್ರಗಳ ವಾಣಿಜ್ಯ ಉದ್ಯಮಿಗಳು ಮತ್ತು ಭಾರತದ ಖ್ಯಾತ ಉದ್ಯಮಿಗಳು ಇದರಲ್ಲಿ ಪಾಲ್ಗೊಂಡಿದ್ದಾರೆ

ಎಷ್ಟು ಕ್ಷೇತ್ರದಲ್ಲಿ ಅಭಿಯಾನ ಅಳವಡಿಕೆ?

ಎಷ್ಟು ಕ್ಷೇತ್ರದಲ್ಲಿ ಅಭಿಯಾನ ಅಳವಡಿಕೆ?

ಎನ್ ಡಿಎ ಸರ್ಕಾರ ಸುಮಾರು 25 ಪ್ರಮುಖ ವಲಯಗಳನ್ನು ಗುರುತಿಸಿದೆ. ಈ ವಲಯಗಳಿಗೆ ಸಂಬಂಧಿಸಿದ ವಿವರಣೆಗಳ ಕೈಪಿಡಿಯನ್ನು ಪ್ರಧಾನಿ ಮೋದಿ ಅವರು ಬುಧವಾರವೇ ಬಿಡುಗಡೆಗೊಳಿಸಿದ್ದಾರೆ.

ಆಟೋಮೊಬೈಲ್, ಕೆಮಿಕಲ್, ಮಾಹಿತಿ ತಂತ್ರಜ್ಞಾನ, ಔಷಧ, ಜವಳಿ, ಬಂದರು, ವೈಮಾನಿಕ, ಚರ್ಮ, ಪ್ರವಾಸೋದ್ಯಮ, ಆತಿಥ್ಯೋದ್ಯಮ, ಆರೋಗ್ಯ, ರೈಲ್ವೆ, ಡಿಸೈನ್ ಉತ್ಪಾದನೆ, ಗಣಿಗಾರಿಕೆ, ಜೈವಿಕ ತಂತ್ರಜ್ಞಾನ, ಎಲೆಕ್ಟ್ರಾನಿಕ್ ಮುಂತಾದ ಕ್ಷೇತ್ರಗಳಿವೆ.

ಚಿತ್ರದಲ್ಲಿ : ಕುಮಾರ್ ಮಂಗಲಂ ಬಿರ್ಲಾ

ಮೋದಿ ಭಾಷಣದ ಟ್ವೀಟ್

ಮೋದಿ ಭಾಷಣ ಟ್ವೀಟ್ ಮಾಡಿದ ಮೇಕ್ ಇನ್ ಇಂಡಿಯಾ ಖಾತೆ. ವಿಜ್ಞಾನ ಭವನದಲ್ಲಿ ಉದ್ಯಮಿಗಳಿಗೆ ಕುಳಿತುಕೊಳ್ಳಲು ಸ್ಥಳವಕಾಶ ಸಿಗದಿದ್ದಕ್ಕಾಗಿ ಕ್ಷಮೆಯಾಚಿಸಿದ ಮೋದಿ ಅಭೂತ ಪೂರ್ವ ಭಾಷಣ ಮಾಡಿದರು.

ವೈ ಸಿ ದೇವೇಶ್ವರ್ ಅವರ ಮಾತುಗಳು

ಉದ್ಯಮಿ ಐಟಿಸಿ ಚೇರ್ಮನ್ ವೈ ಸಿ ದೇವೇಶ್ವರ್ ಅವರ ಮಾತುಗಳು

ಫಿಲ್ ಶಾ ಅವರ ಭಾಷಣ

ಫಿಲ್ ಶಾ ಅವರ ಭಾಷಣದಲ್ಲಿ ಹೇಳಿದ ಮಾತುಗಳಿವು.

ಉದ್ಯಮಿ ಫಿಲ್ ಶಾ ಮಾತುಗಳಿವು

ಉದ್ಯಮಿ ಲಾಕ್ ಶೀಡ್ ಮಾರ್ಟಿನ್ ಇಂಡಿಯಾ ಕಂಪನಿ ಸಿಇಒ ಫಿಲ್ ಶಾ ಮಾತುಗಳಿವು

ಅಭಿಯಾನದ ಮುಖ್ಯ ಉದ್ದೇಶ ಇದೆ

ಅಭಿಯಾನದ ಮುಖ್ಯ ಉದ್ದೇಶ ಏನು ಎಂಬುದನ್ನು ವಿಷದಪಡಿಸಿದ ಪ್ರಧಾನಿ ಸಚಿವಾಲಯ

English summary
Prime Minister Narendra Modi will launch the ambitious 'Make in India' campaign in the presence of global and domestic CEO. Make in India motto unveiled as 'Goodbye red tape, hello red carpet'. The government has also identified 25 Sectors in which India can become a global leader said commerce minister Nirmala Sitharaman
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X