ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಣದುಬ್ಬರ ಹೆಚ್ಚಳದಿಂದ ಸಾಮಾನ್ಯ ಜನರ ಬಜೆಟ್‌ಗೆ ಬರೆ: ದಿನಬಳಕೆಯ ವಸ್ತುಗಳು ಶೇ.22ರಷ್ಟು ದುಬಾರಿ?

|
Google Oneindia Kannada News

ಕೇಂದ್ರ ಸರ್ಕಾರದ ಅಂಕಿ-ಅಂಶಗಳು ಏನೇ ಹೇಳಲಿ ಆದರೆ, ದೈನಂದಿನ ವಸ್ತುಗಳ ಹಣದುಬ್ಬರವು ವೇಗವಾಗಿ ಹೆಚ್ಚುತ್ತಿದೆ. ಕಳೆದ ಜನವರಿಯಿಂದ ದಿನಬಳಕೆ ಸರಕುಗಳ ಬೆಲೆ ಶೇಕಡಾ 22ರಷ್ಟು ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಇದರ ಪರಿಣಾಮವು ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

ಹೌದು, ಹಬ್ಬದ ದಿನಗಳಲ್ಲಿ ಸಾಮಾನ್ಯ ಜನರ ಬಜೆಟ್ ಹಾಳಾಗುತ್ತಿದೆ. ಅದಕ್ಕಿಂತ ಹೆಚ್ಚಾಗಿ ಹಣದುಬ್ಬರವು ಜನರನ್ನು ಮತ್ತಷ್ಟು ತೊಂದರೆಗೀಡು ಮಾಡಿದೆ. ಅಡುಗೆ ಎಣ್ಣೆಯಿಂದ ಕೂದಲಿಗೆ ಎಣ್ಣೆಯವರೆಗೂ ಬೆಲೆ ಗಗನಕ್ಕೇರುತ್ತಿದೆ. ಚಿಲ್ಲರೆ ಮಾರುಕಟ್ಟೆಯ ಡೇಟಾವನ್ನು ವಿಶ್ಲೇಷಿಸುವ ವೇದಿಕೆಯಾದ ಬಿಜೋಮ್ (bezom) ಪ್ರಕಾರ, ಜನವರಿಯಿಂದ ದೈನಂದಿನ ವಸ್ತುಗಳ ಬೆಲೆಗಳು ಶೇಕಡಾ 10ರಿಂದ 20ರಷ್ಟು ಹೆಚ್ಚಾಗಿದೆ. ಇದರಲ್ಲಿ ನೀವು ಸಾಮಾನ್ಯವಾಗಿ ಅಂಗಡಿಗಳು ಅಥವಾ ಮಾಲ್‌ಗಳಿಂದ ಖರೀದಿಸುವ ವಸ್ತುಗಳು ಸೇರಿಕೊಂಡಿವೆ.

ಇನ್ನು ಬಿಝೋಮ್ ಪ್ಲಾಟ್‌ಫಾರ್ಮ್ ನಿರ್ವಹಿಸುತ್ತಿರುವ ಮೊಬಿಸಿ ಟೆಕ್ನಾಲಜೀಸ್‌ನ ಬೆಳವಣಿಗೆ ಮತ್ತು ಒಳನೋಟದ ವಿಭಾಗದ ಮುಖ್ಯಸ್ಥ ಅಕ್ಷಯ್ ಡಿಸೋಜಾ, ಸದ್ಯ ಹಬ್ಬದ ಸೀಸನ್ ಆಗಿರುವುದರಿಂದ ಮಾರುಕಟ್ಟೆಯು ಸರಕುಗಳ ಮೇಲೆ ಅವಲಂಬಿತವಾಗಿದೆ ಎಂದು ಹೇಳಿದ್ದು ಹಬ್ಬ ಮುಗಿದರು ಏರಿಕೆ ಕಂಡ ಬೆಲೆ ಕಡಿಮೆಯಾಗುವ ಸಾಧ್ಯತೆ ಕಡಿಮೆ ಎಂದು ಅವರು ತಿಳಿಸಿದ್ದಾರೆ.

 ನಾಲಿಗೆ ಉರಿಯುತ್ತದೆ; ಮಸಾಲೆಗಳು 3-17% ದುಬಾರಿ!

ನಾಲಿಗೆ ಉರಿಯುತ್ತದೆ; ಮಸಾಲೆಗಳು 3-17% ದುಬಾರಿ!

ಈ ಹಣದುಬ್ಬರದ ಪರಿಣಾಮವು ಮಧ್ಯಮ ವರ್ಗದ ಜನರ ಮೇಲೆ ಹೆಚ್ಚು ಬೀಳುತ್ತಿದೆ. ವಸ್ತುಗಳು ದುಬಾರಿಯಾದ ನಂತರ ಜನರು ಲೆಕ್ಕದ ಪ್ರಮಾಣದ ಹಣವನ್ನು ಖರ್ಚು ಮಾಡುವ ಮೂಲಕ ಕಡಿಮೆ ವಸ್ತುಗಳನ್ನು ಖರೀದಿಸಲು ಸಾಧ್ಯವಾಗುತ್ತದೆ. ಮೊದಲ ತ್ರೈಮಾಸಿಕದಲ್ಲಿಯೇ ಅಡುಗೆ ಎಣ್ಣೆಯು ಶೇಕಡಾ 35ರಷ್ಟು ದುಬಾರಿಯಾಗಿದೆ. ಅಂದಿನಿಂದ ಇದು ಸ್ವಲ್ಪ ಕಡಿಮೆಯಾಗಿದೆ ಆದರೆ ಜನವರಿಗೆ ಹೋಲಿಸಿದರೆ ಇದು ಇನ್ನೂ 5ರಿಂದ22 ಪ್ರತಿಶತದಷ್ಟು ದುಬಾರಿಯಾಗಿದೆ.

ಮಸಾಲೆ ಪದಾರ್ಥಗಳನ್ನು ನೋಡಿದರೆ ಇಲ್ಲಿಯೂ ಬೆಂಕಿ ಬಿದ್ದಿದೆ. ಇದರಲ್ಲಿ ಶೇ.3-17ರ ಹಣದುಬ್ಬರದ ಪರಿಣಾಮ ಹೇಗೆದೆ ಎಂದು ಕಾಣಬಹುದು. ಅಂಕಿ-ಅಂಶಗಳ ಪ್ರಕಾರ, ಜನವರಿಗೆ ಹೋಲಿಸಿದರೆ ಬ್ರಾಂಡೆಡ್ ಅಕ್ಕಿ, ಹಿಟ್ಟು, ಮೈದಾ ಮುಂತಾದ ವಸ್ತುಗಳ ಬೆಲೆಯೂ ಗಮನಾರ್ಹವಾಗಿ ಹೆಚ್ಚಾಗಿದೆ. ಈ ವಿಷಯಗಳಲ್ಲಿ ಹಣದುಬ್ಬರವು ಶೇಕಡಾ ಹತ್ತಕ್ಕಿಂತ ಹೆಚ್ಚು ದಾಖಲಾಗಿದೆ. ಸಾಬೂನು, ಸರ್ಫ್ ಮುಂತಾದ ವಸ್ತುಗಳ ಬೆಲೆಗಳು ಹೆಚ್ಚೇನೂ ಏರಿಕೆಯಾಗದೇ ಈ ಅವಧಿಯಲ್ಲಿ ಶೇ.1-3ರಷ್ಟು ದುಬಾರಿಯಾಗಿರುವುದು ಸಮಾಧಾನದ ಸಂಗತಿ.

 ಹಣದುಬ್ಬರ ನಿಲ್ಲುತ್ತದೆಯೇ?

ಹಣದುಬ್ಬರ ನಿಲ್ಲುತ್ತದೆಯೇ?

ವಿಪ್ರೋ ಕನ್ಸ್ಯೂಮರ್ ಕೇರ್‌ನ ಆಹಾರ ವ್ಯವಹಾರದ ಮುಖ್ಯಸ್ಥರಾದ ಅನುಲ್ ಚುಗ್ ಅವರ ಪ್ರಕಾರ, ಈ ವಿಷಯಗಳಲ್ಲಿ ಬರುತ್ತಿರುವ ಹಣದುಬ್ಬರವು ಶೀಘ್ರದಲ್ಲೇ ನಿಲ್ಲುತ್ತದೆ ಅಥವಾ ಕಡಿಮೆಯಾಗುತ್ತದೆ ಎಂದು ನಾವು ಭಾವಿಸುವುದಿಲ್ಲ. ಜಾಗತಿಕ ಮಾರುಕಟ್ಟೆಯಲ್ಲಿನ ಏರಿಳಿತಗಳು ಇದಕ್ಕೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಹೆಚ್ಚುತ್ತಿರುವ ಹಣದುಬ್ಬರದಿಂದಾಗಿ ಬೇಡಿಕೆಯೂ ಹೆಚ್ಚಿಲ್ಲ. ಕಳೆದ ವರ್ಷದಿಂದ ಹೆಚ್ಚಿನ ಸರಕು ಅಥವಾ ಕಚ್ಚಾ ವಸ್ತುಗಳ ಬೆಲೆಯೂ ಹೆಚ್ಚಾಗಿದೆ ಎಂದರು.

ಉದ್ಯಮವು ನೇರವಾಗಿ ಗ್ರಾಹಕರಿಗೆ ಬೆಲೆಯನ್ನು ಕಡಿಮೆ ಮಾಡುವ ಬದಲು ಪ್ರಚಾರ ಚಟುವಟಿಕೆಗಳ ಮೂಲಕ ತಾಳೆ ಮತ್ತು ಕಚ್ಚಾ ತೈಲದ ಬೆಲೆಯಲ್ಲಿನ ಕಡಿತವನ್ನು ವರ್ಗಾಯಿಸುತ್ತದೆ. ಇದಕ್ಕೆ ಕಾರಣ ಈ ಎರಡರ ಬೆಲೆ ಮತ್ತೆ ಯಾವಾಗ ಹೆಚ್ಚುತ್ತದೆ ಎಂಬುದು ಯಾರಿಗೂ ತಿಳಿದಿಲ್ಲ ಎಂದು ತಿಳಿಸಿದರು.

 ಹಣದುಬ್ಬರಕ್ಕೆ ಬ್ರೇಕ್ ಯಾವಾಗ?

ಹಣದುಬ್ಬರಕ್ಕೆ ಬ್ರೇಕ್ ಯಾವಾಗ?

ಡಿಸೆಂಬರ್ ಅಂತ್ಯದ ವೇಳೆಗೆ ಕಚ್ಚಾ ವಸ್ತುಗಳ ಬೆಲೆಗಳು ಕಡಿಮೆಯಾಗುವ ನಿರೀಕ್ಷೆಯಿದೆ ಎಂದು ಮಾರಿಕೋದ ವ್ಯವಸ್ಥಾಪಕ ನಿರ್ದೇಶಕ ಸೌಗತ ಗುಪ್ತಾ ನಿರೀಕ್ಷಿಸಿದ್ದಾರೆ. ಹಣದುಬ್ಬರದ ಮೂರು ಪ್ರಮುಖ ಅಂಶಗಳಿವೆ ಎಂದು ಅವರು ಹೇಳುತ್ತಾರೆ. ಏನೆಂದರೆ ಆಹಾರ ಪದಾರ್ಥಗಳು, ಅಡುಗೆ ಎಣ್ಣೆ ಮತ್ತು ಕಚ್ಚಾ ತೈಲ. ತಾಳೆ ಎಣ್ಣೆ ಬೆಲೆ ಕಡಿಮೆಯಾಗಿದೆ ಆದರೆ ಕಚ್ಚಾ ತೈಲವು ಇನ್ನೂ ದುಬಾರಿಯಾಗಿದೆ. ಆದ್ದರಿಂದ, ಸರಕು ಕಳೆದ ವರ್ಷಕ್ಕೆ ಹೋಲಿಸಿದರೆ ದುಬಾರಿಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಆರ್ಥಿಕ ವರ್ಷದ ಮೂರನೇ ತ್ರೈಮಾಸಿಕದ ಅಂತ್ಯದ ವೇಳೆಗೆ ಸರಕುಗಳ ಬೆಲೆ ಕಡಿಮೆಯಾಗಬಹುದು ಎಂದು ಹೇಳಿದರು.

 ಜನವರಿಯಿಂದ ಕಿರಾಣಿ, ದೈನಂದಿನ ವಸ್ತುಗಳ ಬೆಲೆ ಹೆಚ್ಚಳ

ಜನವರಿಯಿಂದ ಕಿರಾಣಿ, ದೈನಂದಿನ ವಸ್ತುಗಳ ಬೆಲೆ ಹೆಚ್ಚಳ

ಅಡುಗೆ ಎಣ್ಣೆ 9ರಿಂದ 22% ಹೆಚ್ಚಳ
ತೆಂಗಿನ ಎಣ್ಣೆ 5%
ಗರಮ್‌ ಮಸಾಲಾ 2.5%
ಮೆಣಸಿಣಕಾಯಿ ಪುಡಿ(ಖಾರದ ಪುಡಿ) 14.3%
ದನಿಯಾ 6%
ಜೀರಾ 18%
ಡಾಲ್ಡಾ 18%
ಬ್ರಾಂಡೆಡ್ ಅಕ್ಕಿ 10%
ಬ್ರಾಂಡೆಡ್ ಹಿಟ್ಟು 19%
(ಮಾಹಿತಿ: bezom ರಿಟೈಲ್ ವಿಶ್ಲೇಷಣೆ)

English summary
Price-tags of daily essentials rise up to 22% since January Read more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X