ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆಟ್ರೋಲ್, ಡೀಸೆಲ್ ಬೆಲೆ ಸ್ಥಿರ; ಸಿಎನ್‌ಜಿ, ಪಿಎನ್‌ಜಿ ಬೆಲೆ ಏರಿಕೆ

|
Google Oneindia Kannada News

ನವದೆಹಲಿ, ಮಾರ್ಚ್ 2: ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ಮಂಗಳವಾರ(ಮಾ.2)ದಂದು ಇಂಧನ ಬೆಲೆ ಪರಿಷ್ಕರಿಸಿಲ್ಲ. ಆದರೆ, ಸಿಎನ್‌ಜಿ, ಪಿಎನ್‌ಜಿ ಬೆಲೆ ಏರಿಕೆ ಮಾಡಲಾಗಿದೆ. ಈಗಾಗಲೇ ಮಾರ್ಚ್ 1ರಂದು ಎಲ್‌ಪಿಜಿ ಸಿಲಿಂಡರ್ ಬೆಲೆ 25 ರು ನಷ್ಟು ಏರಿಕೆ ಕಂಡಿದೆ.

ಈಗ Compressed Natural Gas (CNG) ಬೆಲೆ ಮಾರ್ಚ್ 2ರಿಂದ 70ಪೈಸೆ ಏರಿಕೆಯಾಗಿದೆ. ದೆಹಲಿಯಲ್ಲಿ ಸಿಎನ್‌ಜಿ ಬೆಲೆ 43.40 ರು ಪ್ರತಿ ಕಿಲೋಗ್ರಾಂ ಆಗಿದೆ.

ಪೆಟ್ರೋಲ್ ದರ ದೆಹಲಿಯಲ್ಲಿ 97.17 ರು ಪ್ರತಿ ಲೀಟರ್ ಹಾಗೂ ಡೀಸೆಲ್ 81.47 ಪ್ರತಿ ಲೀಟರ್ ನಷ್ಟಿದೆ. ಮುಂಬೈನಲ್ಲಿ 97.57 ರು ಪ್ರತಿ ಲೀಟರ್ ಹಾಗೂ ಡೀಸೆಲ್ 88.60 ಪ್ರತಿ ಲೀಟರ್ ಆಗಿದೆ.

Price of CNG, PNG hiked from March 2, Petrol and Diesel prices stable

ಕಳೆದ ಕೆಲವು ದಿನಗಳಲ್ಲಿ ಸರಿ ಸುಮಾರು 23-25 ಪೈಸೆಯಂತೆ ಪೆಟ್ರೋಲ್ ಏರಿಕೆಯಾಗಿದ್ದರೆ, ಡೀಸೆಲ್ ಬೆಲೆ 24-26 ಪೈಸೆ ಪ್ರತಿ ಲೀಟರ್ ನಂತೆ ಏರಿಕೆ ಕಂಡಿತ್ತು. ಒಟ್ಟಾರೆ ಈ ತಿಂಗಳಲ್ಲಿ ಪೆಟ್ರೋಲ್ ಒಟ್ಟು 4.87 ಪ್ರತಿ ಲೀಟರ್ ಹಾಗೂ ಡೀಸೆಲ್ 4.99 ಪ್ರತಿ ಲೀಟರ್ ನಷ್ಟು ಏರಿಕೆಯಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಶೇ 1.7 ರಷ್ಟು ಏರಿಕೆ ಕಂಡು 65.49 ಯುಎಸ್ ಡಾಲರ್ ಪ್ರತಿ ಬ್ಯಾರೆಲ್ ನಷ್ಟಿದೆ. ಒಪೆಕ್ ರಾಷ್ಟ್ರಗಳು ತೈಲ ಪೂರೈಕೆಯಲ್ಲಿ ವ್ಯತ್ಯಯ ಮಾಡಿರುವುದರಿಂದ ಭಾರತದಂಥ ಅತಿ ಹೆಚ್ಚು ಆಮದು ಮಾಡಿಕೊಳ್ಳುವ ರಾಷ್ಟ್ರಕ್ಕೆ ಭಾರಿ ಹೊಡೆತ ಬಿದ್ದಿದೆ. ಭಾರತ ಸರ್ಕಾರ ಮೂಲ ಬೆಲೆಯ 125% ರಷ್ಟು ತೆರಿಗೆ ವಿಧಿಸುತ್ತದೆ. ಇಂಧನದ ಮೇಲೆ ಅಬಕಾರಿ ಸುಂಕ 32. 98ರು ನಷ್ಟಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.

English summary
The price was Piped Natural Gas (PNG) also climbed to Rs 28.41 SCM (Standard Cubic Meter), an increase of 91 paise per SCM.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X