• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಐಫೋನ್ ಎಕ್ಸ್‌ಎಸ್ ಗಾಗಿ ಪ್ರೀಪೇಯ್ಡ್ ಇ ಸಿಮ್ ನೀಡಿದ ಜಿಯೋ

|

ಮುಂಬೈ, ಸೆಪ್ಟೆಂಬರ್ 23: ವಿಶ್ವದ ಅತಿದೊಡ್ಡ ಮೊಬೈಲ್ ಡೇಟಾ ನೆಟ್‌ವರ್ಕ್ ಆದ ಜಿಯೋ, ಈವರೆಗಿನ ಅತ್ಯಂತ ಮುಂದುವರೆದ ಐಫೋನ್ ಮಾದರಿಗಳಾದ ಐಫೋನ್ ಎಕ್ಸ್‌ಎಸ್ ಮತ್ತು ಐಫೋನ್ ಎಕ್ಸ್‌ಎಸ್ ಮ್ಯಾಕ್ಸ್, ಜಿಯೋ ಮೂಲಕ ಲಭ್ಯವಿವೆಯೆಂದು ಘೋಷಿಸಿದೆ. ಗ್ರಾಹಕರು ಐಫೋನ್ ಎಕ್ಸ್‌ಎಸ್ ಮತ್ತು ಐಫೋನ್ ಎಕ್ಸ್‌ಎಸ್ ಮ್ಯಾಕ್ಸ್‌ಗಳನ್ನು ಮುಂಗಡವಾಗಿ ಕಾಯ್ದಿರಿಸಬಹುದಾಗಿದೆ.

ಈವರೆಗಿನ ಅತ್ಯಂತ ಮುಂದುವರೆದ ಐಫೋನ್ ಮಾದರಿಗಳಾದ ಐಫೋನ್ ಎಕ್ಸ್‌ಎಸ್ ಮತ್ತು ಐಫೋನ್ ಎಕ್ಸ್‌ಎಸ್ ಮ್ಯಾಕ್ಸ್, ಸ್ಮಾರ್ಟ್‌ಫೋನ್ ಭವಿಷ್ಯ ಕುರಿತ ಮುನ್ನೋಟವನ್ನು ಹೊಸ ಮಟ್ಟಕ್ಕೆ ಕೊಂಡೊಯ್ದಿವೆ. ಈ ಎರಡೂ ಫೋನ್‌ಗಳು ನ್ಯಾನೋ ಸಿಮ್ ಮತ್ತು ಡಿಜಿಟಲ್ ಇ-ಸಿಮ್ ಬಳಸುವ ಮೂಲಕ ಐಫೋನ್‌ನಲ್ಲಿ ಡ್ಯುಯಲ್ ಸಿಮ್ ಅನ್ನು ಪರಿಚಯಿಸುತ್ತಿವೆ.

ಐಫೋನ್ ಎಕ್ಸ್‌ಎಸ್ ಮತ್ತು ಐಫೋನ್ ಎಕ್ಸ್‌ಎಸ್ ಮ್ಯಾಕ್ಸ್‌‌ನಲ್ಲಿರುವ 5.8 ಹಾಗೂ 6.5-ಇಂಚಿನ ಸೂಪರ್ ರೆಟಿನಾ ಡಿಸ್ಪ್ಲೇ, ಅಪ್ರತಿಮ ಬ್ರೈಟ್‌ನೆಸ್ ಹಾಗೂ ಟ್ರೂ ಬ್ಲ್ಯಾಕ್ ಅನುಭವ ನೀಡುವುದಲ್ಲದೆ ಎಚ್‌ಡಿಆರ್ ಫೋಟೋಗಳಲ್ಲಿ ಶೇ. 60ರಷ್ಟು ಹೆಚ್ಚಿನ ಡೈನಮಿಕ್ ರೇಂಜ್ ಅನ್ನು ಪ್ರದರ್ಶಿಸುತ್ತದೆ. ಐಫೋನ್ ಎಕ್ಸ್‌ಎಸ್ ಮತ್ತು ಐಫೋನ್ ಎಕ್ಸ್‌ಎಸ್ ಮ್ಯಾಕ್ಸ್‌‌ನಲ್ಲಿ ಅತ್ಯುತ್ತಮ ಫೋಟೋ ಹಾಗೂ ವೀಡಿಯೋ ಸೌಲಭ್ಯಗಳುಳ್ಳ ಸುಧಾರಿತ ಡ್ಯುಯಲ್ ಕ್ಯಾಮೆರಾ ವ್ಯವಸ್ಥೆ ಇದೆ.

ಮುಂದಿನ ತಲೆಮಾರಿನ ನ್ಯೂರಲ್ ಇಂಜಿನ್ ಇರುವ ಎ12 ಬಯಾನಿಕ್ ಚಿಪ್, ಕ್ಷಿಪ್ರ ಫೇಸ್ ಐಡಿ, ಹೆಚ್ಚು ವಿಸ್ತಾರವಾದ ಸ್ಟೀರಿಯೋ ಧ್ವನಿ, ದೀರ್ಘ ಬಾಳಿಕೆ ಬರುವ ಬ್ಯಾಟರಿ, ಎರಚುವಿಕೆ ಹಾಗೂ ನೀರು ನಿರೋಧಕ ಗುಣ, ಯಾವುದೇ ಮೊಬೈಲ್ ಫೋನ್ ಹೋಲಿಕೆಯಲ್ಲಿ ಅತ್ಯಂತ ದೀರ್ಘಕಾಲ ಬಾಳುವ ಗಾಜು, ಸಿಲ್ವರ್ ಹಾಗೂ ಸ್ಪೇಸ್ ಗ್ರೇಗಳನ್ನು ಬೆಸೆಯುವ ಹೊಸ ಗೋಲ್ಡ್ ಫಿನಿಶ್ ಜೊತೆಯಲ್ಲಿ ಇನ್ನೂ ಹೆಚ್ಚಿನ ಡೌನ್‌ಲೋಡ್ ವೇಗಕ್ಕಾಗಿ ಗಿಗಾಬಿಟ್-ಕ್ಲಾಸ್ ಎಲ್‌ಟಿಇಯನ್ನು ಪರಿಚಯಿಸಲಾಗುತ್ತಿದೆ.

ಐಫೋನ್‌ಗಳ ಪೈಕಿ ಅತ್ಯಂತ ದೊಡ್ಡ ಡಿಸ್ಪ್ಲೇ ಹಾಗೂ ಮೂರು ಮಿಲಿಯನ್‌ಗೂ ಹೆಚ್ಚಿನ ಪಿಕ್ಸೆಲ್‌ಗಳೊಡನೆ ಐಫೋನ್ ಎಕ್ಸ್‌ಎಸ್ ಮ್ಯಾಕ್ಸ್ ವೀಡಿಯೋ, ಚಲನಚಿತ್ರ ಹಾಗೂ ಗೇಮ್‌ಗಳಿಗಾಗಿ ಇನ್ನೂ ಹೆಚ್ಚು ತಲ್ಲೀನವಾಗಿಸುವ ಅನುಭವವನ್ನು ನೀಡುತ್ತದೆ. ನ್ಯಾನೋ-ಸಿಮ್ ಹಾಗೂ ಡಿಜಿಟಲ್ ಇ-ಸಿಮ್‌ಗಳ ಬಳಕೆಯ ಮೂಲಕ ಈ ಎರಡೂ ಮಾದರಿಗಳು ಐಫೋನ್‌ನಲ್ಲಿ ಡ್ಯುಯಲ್ ಸಿಮ್ ಪರಿಕಲ್ಪನೆಯನ್ನು ಪರಿಚಯಿಸುತ್ತಿವೆ.

ಲಭ್ಯತೆ: ಗ್ರಾಹಕರು ಐಫೋನ್ ಎಕ್ಸ್‌ಎಸ್ ಮತ್ತು ಐಫೋನ್ ಎಕ್ಸ್‌ಎಸ್ ಮ್ಯಾಕ್ಸ್‌ ಅನ್ನು ಸೆಪ್ಟೆಂಬರ್ 21, 2018ರ ಶುಕ್ರವಾರದಿಂದ ಜಿಯೋ ಜಾಲತಾಣ, ರಿಲಯನ್ಸ್ ಡಿಜಿಟಲ್, ಮೈಜಿಯೋ ಸ್ಟೋರ್‌ ಹಾಗೂ ಮೈಜಿಯೋ ಆಪ್ ಮೂಲಕ ಮುಂಗಡವಾಗಿ ಕಾಯ್ದಿರಿಸುವುದು ಸಾಧ್ಯ. ಎರಡೂ ಮಾದರಿಗಳು ಸೆಪ್ಟೆಂಬರ್ 28, 2018ರ ಶುಕ್ರವಾರದಿಂದ ಮಳಿಗೆಗಳಲ್ಲಿ ಲಭ್ಯವಿರುತ್ತವೆ. ರಿಲಯನ್ಸ್ ಡಿಜಿಟಲ್ ಮಳಿಗೆಗಳ ವಿಸ್ತಾರವಾದ ಜಾಲವು, ಆಪಲ್ ಸಂಸ್ಥೆ ತನ್ನ ಹೊಚ್ಚಹೊಸ ಸ್ಮಾರ್ಟ್‌ಫೋನುಗಳನ್ನು ದೇಶದಾದ್ಯಂತ ಲಭ್ಯವಿರುವಂತೆ ಮಾಡಲು ನೆರವಾಗಲಿದೆ.

ನೆಟ್‌ವರ್ಕ್ ಅನುಕೂಲ: ಜಿಯೋ, ವಿಶ್ವದ ಅತಿದೊಡ್ಡ ಮೊಬೈಲ್ ಡೇಟಾ ನೆಟ್‌ವರ್ಕ್, ಭಾರತ ಮತ್ತು ಭಾರತೀಯರಿಗಾಗಿ ಹಲವು ಬದಲಾವಣೆಗಳನ್ನು ತಂದಿದೆ. 227 ಮಿಲಿಯನ್‌ಗೂ ಹೆಚ್ಚಿನ ಗ್ರಾಹಕರು ಹಾಗೂ ಮಾಸಿಕ 248 ಕೋಟಿ ಜಿಬಿ ಡೇಟಾ ಬಳಕೆಯೊಡನೆ, ಜಿಯೋ ವಿಶ್ವದ ಅತಿದೊಡ್ಡ ಮೊಬೈಲ್ ಡೇಟಾ ನೆಟ್‌ವರ್ಕ್ ಆಗಿದೆ. ಅಷ್ಟೇ ಅಲ್ಲ, ದೇಶದ ಅತಿವೇಗದ ನೆಟ್‌ವರ್ಕ್ ಎನ್ನುವ ಗೌರವಕ್ಕೂ ಜಿಯೋ ಸತತವಾಗಿ ಪಾತ್ರವಾಗುತ್ತಿದೆ. ಜಿಯೋದ ಆಧುನಿಕ ತಂತ್ರಜ್ಞಾನ, ಅತಿವೇಗದ ಡೇಟಾ, ಉಚಿತ ಎಚ್‌ಡಿ ವಾಯ್ಸ್ ಮತ್ತು ಪ್ರೀಮಿಯಂ ಕಂಟೆಂಟ್ ಜೊತೆಗೆ ಐಫೋನ್ ಎಕ್ಸ್‌ಎಸ್ ಮತ್ತು ಐಫೋನ್ ಎಕ್ಸ್‌ಎಸ್ ಮ್ಯಾಕ್ಸ್ ಬಳಕೆದಾರರು ತಮ್ಮ ಸಾಧನದ ನೈಜ ಸಾಮರ್ಥ್ಯವನ್ನು ಕಂಡುಕೊಳ್ಳಬಹುದಾಗಿದೆ. ಭಾರತದಾದ್ಯಂತ 4ಜಿ-ಡೇಟಾ ಮತ್ತು ವಾಯ್ಸ್ ಸೇವೆಗಳ (ವಿಓಎಲ್‌ಟಿಇ) ಸರಿಗಟ್ಟಲಾಗದ ಅನುಭವವನ್ನು ನೀಡುತ್ತಿರುವ ಏಕೈಕ ನೆಟ್‌ವರ್ಕ್ ಜಿಯೋ ಆಗಿದೆ.

ಆಪಲ್‌ನ ಇ-ಸಿಮ್ ಸೌಲಭ್ಯವನ್ನು ಆಪಲ್ ಡ್ಯುಯಲ್ ಸಿಮ್ ಸಾಧನಗಳಲ್ಲಿ ಸಕ್ರಿಯಗೊಳಿಸಲಿರುವ ಜಿಯೋ: ಆಪಲ್‌ನ ಹೊಚ್ಚಹೊಸ ಐಫೋನ್‌ಗಳಲ್ಲಿ ಅತ್ಯಾಧುನಿಕ ಇ-ಸಿಮ್ ಸೌಲಭ್ಯವನ್ನು ಜಿಯೋ ಪ್ರೀಪೇಯ್ಡ್ ಹಾಗೂ ಪೋಸ್ಟ್‌ಪೇಯ್ಡ್ ಗ್ರಾಹಕರೆಲ್ಲರಿಗೂ ವಿಶೇಷವಾಗಿ ಸಕ್ರಿಯಗೊಳಿಸಲಿದೆ. ಜಿಯೋ, ಪ್ರಸ್ತುತ ನಮ್ಮ ದೇಶದಲ್ಲಿ ಪ್ರೀಪೇಯ್ಡ್ ಗ್ರಾಹಕರಿಗೂ ಇ-ಸಿಮ್ ಆಕ್ಟಿವೇಶನ್ ಸೌಲಭ್ಯ ನೀಡುತ್ತಿರುವ ಏಕೈಕ ಸಂಸ್ಥೆಯಾಗಿದೆ.

ಟ್ಯಾರಿಫ್: ಮಾರುಕಟ್ಟೆ ನಾಯಕತ್ವದ ತನ್ನ ಸ್ಥಾನಕ್ಕೆ ಅನುಗುಣವಾಗಿ, ಪ್ರೀಪೇಯ್ಡ್ ಹಾಗೂ ಪೋಸ್ಟ್‌ಪೇಯ್ಡ್ ಗ್ರಾಹಕರೆಲ್ಲರಿಗೂ ರಿಲಯನ್ಸ್ ಜಿಯೋ ವಿಶೇಷ ಟ್ಯಾರಿಫ್‌ಗಳನ್ನು ನೀಡುತ್ತಿದೆ. ಉಚಿತ ಕರೆ, ಎಸ್ಸೆಮ್ಮೆಸ್ ಹಾಗೂ ಜಿಯೋದ ಪ್ರೀಮಿಯಂ ಅಪ್ಲಿಕೇಶನ್‌ಗಳಿಗೆ ಉಚಿತ ಚಂದಾ ಜೊತೆಗೆ ಬಳಕೆದಾರರ ವಿಶಿಷ್ಟ ಅಗತ್ಯಗಳನ್ನು ಪೂರೈಸಲು ಪ್ರತಿ ಪ್ಲಾನಿನಲ್ಲೂ ಅತಿವೇಗದ ಡೇಟಾ ಸೌಲಭ್ಯ ನೀಡಲಾಗುತ್ತಿದೆ. ಐಫೋನ್ ಬಳಕೆದಾರರು ಡೇಟಾದ ಯಾವುದೇ ಮಿತಿಗಳಿಲ್ಲದೆ ಡಿಜಿಟಲ್ ಜೀವನಶೈಲಿಯನ್ನು ಪೂರ್ಣವಾಗಿ ಆನಂದಿಸುವುದನ್ನು ಜಿಯೋದ ಆಕರ್ಷಕ ಪ್ಲಾನುಗಳು ಖಚಿತಪಡಿಸುತ್ತವೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Prepaid users can use only Jio on iPhone XS’ eSIM slot, for now.Reliance Jio will be providing eSIM connection for both prepaid and postpaid users on iPhone XS, XS Max. Jio says it is the only prepaid eSIM provider for the new iPhones.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more