ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Alert: ಅಂಚೆ ಕಚೇರಿ ಉಳಿತಾಯ ಖಾತೆಯಲ್ಲಿ 500 ರೂ. ಬ್ಯಾಲೆನ್ಸ್ ಕಡ್ಡಾಯ

|
Google Oneindia Kannada News

ನವದೆಹಲಿ, ಡಿಸೆಂಬರ್ 11: ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ಹೊಂದಿರುವವರು ಕನಿಷ್ಠ 500 ರೂಪಾಯಿ ಬ್ಯಾಲೆನ್ಸ್ ಹೊಂದಿರುವುದು ಕಡ್ಡಾಯವಾಗಿದೆ. ಇಲ್ಲವಾದಲ್ಲಿ 100 ರೂ. ದಂಡ ಮತ್ತು ಜಿಎಸ್‌ಟಿ ವಿಧಿಸಲಾಗುವುದು ಎಂದು ಇಂಡಿಯಾ ಪೋಸ್ಟ್ ತಿಳಿಸಿದೆ.

ಈ ಹೊಸ ನಿಯಮಗಳು ಡಿಸೆಂಬರ್ 11ರಿಂದ ಜಾರಿಗೆ ಬರಲಿದ್ದು, ಉಳಿತಾಯ ಖಾತೆ ಹೊಂದಿರುವವರು ಡಿಸೆಂಬರ್ ಕೊನೆಯ ಹೊತ್ತಿಗೆ ಖಾತೆಯಲ್ಲಿ 500 ರೂಪಾಯಿ ಹೊಂದಿರಬೇಕಾಗುತ್ತದೆ. ಉಳಿತಾಯ ಖಾತೆಗೆ ಪ್ರಸ್ತುತ ವಾರ್ಷಿಕ ಶೇಕಡಾ 4ರ ಬಡ್ಡಿಯನ್ನು ನೀಡುತ್ತದೆ.

Post Office RD: 1000 ರೂ. ತಿಂಗಳ ಹೂಡಿಕೆ, 1.5 ಲಕ್ಷ ರೂ. ತನಕ ಉಳಿತಾಯPost Office RD: 1000 ರೂ. ತಿಂಗಳ ಹೂಡಿಕೆ, 1.5 ಲಕ್ಷ ರೂ. ತನಕ ಉಳಿತಾಯ

"ಹಣಕಾಸಿನ ವರ್ಷದ ಕೊನೆಯಲ್ಲಿ ಖಾತೆ ಬಾಕಿ 500 ರೂ. ಇರಿಸದಿದ್ದಲ್ಲಿ 100 ರೂ.ಗಳನ್ನು ಖಾತೆ ನಿರ್ವಹಣಾ ಶುಲ್ಕವಾಗಿ ಕಡಿತಗೊಳಿಸಲಾಗುತ್ತದೆ ಮತ್ತು ಖಾತೆಯಲ್ಲಿ ಹಣ ಬಾಕಿ ಇಲ್ಲದಿದ್ದರೆ ಸ್ವಯಂಚಾಲಿತವಾಗಿ ಅಕೌಂಟ್ ಮುಚ್ಚಲ್ಪಡುತ್ತದೆ" ಎಂದು ಹೊಸ ನಿಯಮ ಹೇಳುತ್ತದೆ.

 Post Office Saving Account Holder Must Maintain Rs 500 Balance Or Else Rs 100 Penalty

ಅಂಚೆ ಕಚೇರಿ ಉಳಿತಾಯ ಖಾತೆ ತೆರೆಯಲು 500 ರೂ. ಠೇವಣಿಯಾಗಿದ್ದರೆ, ನಂತರದ ಕನಿಷ್ಠ ಠೇವಣಿ 10 ರೂ. ಹಾಗೂ ಕನಿಷ್ಠ ವಾಪಸಾತಿ ಮೊತ್ತ 50 ರೂ. ಆಗಿದ್ದು, ಠೇವಣಿಗೆ ಗರಿಷ್ಠ ಮಿತಿಯಿಲ್ಲ. ಖಾತೆಯಲ್ಲಿ 500 ರೂ.ಗಿಂತ ಕಡಿಮೆ ಹಣವಿದ್ದರೆ ವಿತ್‌ಡ್ರಾ ಮಾಡಲು ಸಾಧ್ಯವಾಗುವುದಿಲ್ಲ.

ಸತತ ಮೂರು ಹಣಕಾಸು ವರ್ಷಗಳವರೆಗೆ ಖಾತೆಯಲ್ಲಿ ಯಾವುದೇ ವಹಿವಾಟು ಇಲ್ಲದಿದ್ದರೆ, ಖಾತೆಯು ಮುಚ್ಚಲ್ಪಡುತ್ತವೆ. ಅಂತಹ ಖಾತೆಗಳನ್ನು ಮತ್ತೆ ಪ್ರಾರಂಭಿಸಲು ಗ್ರಾಹಕರು ಅರ್ಜಿಯೊಂದಿಗೆ ಹೊಸ ಕೆವೈಸಿ ದಾಖಲೆಗಳು, ಪಾಸ್‌ಬುಕ್ ಅನ್ನು ಸಲ್ಲಿಸಬೇಕು.

English summary
Post office savings accounts holders will have to maintain a minimum balance of Rs 500 or else a penalty of Rs 100 and GST will be charged, India Post said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X