ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣೆಯಲ್ಲಿ ಬಿಜೆಪಿಗೆ ಸೋಲು, ರುಪಾಯಿ ಮೌಲ್ಯ ಕುಸಿತ- 5 ಅಂಶಗಳು

|
Google Oneindia Kannada News

ಮುಂಬೈ, ಡಿಸೆಂಬರ್ 12: ಪಂಚರಾಜ್ಯಗಳ ಚುನಾವಣಾ ಫಲಿತಾಂಶಗಳ ಹಿನ್ನಲೆಯಲ್ಲಿ ಷೇರುಪೇಟೆಯಲ್ಲಿ ಏರಿಳಿತ ಮುಂದುವರೆದಿದೆ. ಜೊತೆಗೆ ಡಾಲರ್ ಎದುರು ರುಪಾಯಿ ಮೌಲ್ಯ ಕೂಡಾ ಕುಸಿಯುತ್ತಿದೆ.

ಸೋಮವಾರದಂದು ಆರ್ ಬಿಐ ಗವರ್ನರ್ ಊರ್ಜಿತ್ ಪಟೇಲ್ ಅವರ ರಾಜೀನಾಮೆಯಿಂದ ಷೇರುಪೇಟೆಯಲ್ಲಿ ಭಾರಿ ಕುಸಿತ ಉಂಟಾಗಿತ್ತು. ಮಂಗಳವಾರ(ಡಿ.11)ದಂದು ಬಿಜೆಪಿ ಆಡಳಿತ ರಾಜ್ಯಗಳಲ್ಲಿನ ಫಲಿತಾಂಶದಲ್ಲಿ ಅತಂತ್ರ ಸ್ಥಿತಿ ಕಾಣಿಸಿದ್ದರಿಂದ ಕೆಲ ಷೇರುಗಳು ಆರಂಭಿಕ ಕುಸಿತ ಕಂಡಿದ್ದವು

ಊರ್ಜಿತ್ ನಿರ್ಗಮನ ಪರಿಣಾಮ: ಡಾಲರ್ ಎದುರು ರೂಪಾಯಿ ಮೌಲ್ಯ ಭಾರಿ ಕುಸಿತ ಊರ್ಜಿತ್ ನಿರ್ಗಮನ ಪರಿಣಾಮ: ಡಾಲರ್ ಎದುರು ರೂಪಾಯಿ ಮೌಲ್ಯ ಭಾರಿ ಕುಸಿತ

ರುಪಾಯಿ ಮೌಲ್ಯ: ಮಂಗಳವಾರದಂದು 72.46 ರು ಪ್ರತಿ ಡಾಲರ್ ನಂತೆ ವಹಿವಾಟು ಆರಂಭಿಸಿತ್ತು. ಸೋಮವಾರದಂದು 50 ಪೈಸೆ ಕಳೆದುಕೊಂಡು 71.32ರು ನಂತೆ ಇತ್ತು. ಜಾಗತಿಕ ಮಾರುಕಟ್ಟೆ ವ್ಯತ್ಯಯ, ಊರ್ಜಿತ್ ಪಟೇಲ್ ರಾಜೀನಾಮೆ, ವಿದೇಶಿ ವಿನಿಯಮ ವ್ಯತ್ಯಾಸ ಎಲ್ಲವೂ ಕಾರಣವಾಗಿತ್ತು.

ಮಂಗಳವಾರಂದು 71.84ರಂತೆ ವಹಿವಾಟು ಮುಗಿದ್ದ ಡಾಲರ್ ವಿರುದ್ಧ ರುಪಾಯಿ ಬುಧವಾರದಂದು ಮೌಲ್ಯ 72.01 ನಷ್ಟಿತ್ತು. ಒಪೆಕ್ ಸಭೆ, ಕಚ್ಚಾತೈಲ ಉತ್ಪಾದನೆ ಪೂರೈಕೆ ಭಾರತದಂಥ ರಾಷ್ಟ್ರಗಳ ಆಮದು ಬೇಡಿಕೆ ಹೆಚ್ಚಳ ಎಲ್ಲವೂ ರುಪಾಯಿ ಮೌಲ್ಯ ಇನ್ನಷ್ಟು ಕುಸಿಯುವಂತೆ ಮಾಡುವ ಸಾಧ್ಯತೆಯನ್ನು ಉಂಟು ಮಾಡಿದೆ.

ಭರ್ಜರಿ ಏರಿಕೆ ಮೂಲಕ ಎದ್ದು ನಿಂತ ರುಪಾಯಿ, 70ಕ್ಕಿಂತ ಕೆಳಗಿಳಿದ ಡಾಲರ್ ಭರ್ಜರಿ ಏರಿಕೆ ಮೂಲಕ ಎದ್ದು ನಿಂತ ರುಪಾಯಿ, 70ಕ್ಕಿಂತ ಕೆಳಗಿಳಿದ ಡಾಲರ್

ಕಳೆದ ಕೆಲ ದಿನಗಳಿಂದಲೂ ಷೇರು ಮಾರುಕಟ್ಟೆ ಕುಸಿಯುತ್ತಲೇ ಇದ್ದು, ಚೇತರಿಕೆ ಕಾಣುವ ಲಕ್ಷಣಗಳಿಲ್ಲ. ಡಿಸೆಂಬರ್ 14ರಂದು ಹೊಸ ಗವರ್ನರ್ ಶಕ್ತಿಕಾಂತ್ ಅವರು ಆರ್ ಬಿಐ ಸಭೆ ನಡೆಸಲಿದ್ದು, ಸಭೆ ಬಳಿಕ ಪರಿಸ್ಥಿತಿ ಬದಲಾವಣೆ ನಿರೀಕ್ಷಿಸಬಹುದು.

ಮೂಲಾಂಶದಲ್ಲಿ ಬದಲಾವಣೆ ಸಾಧ್ಯತೆ

ಮೂಲಾಂಶದಲ್ಲಿ ಬದಲಾವಣೆ ಸಾಧ್ಯತೆ

ಆರ್ ಬಿಐ ತನ್ನ ರೆಪೋ ದರ, ಸಿಆರ್ ಆರ್ ದರದಲ್ಲಿ ಬದಲಾವಣೆ ಮಾಡುವ ನಿರೀಕ್ಷೆಯಿದೆ. ಐಎಫ್ಎ ಗ್ಲೋಬಲ್ ಸಂಸ್ಥೆ ಪ್ರಕಾರ, ಹೊಸ ಗವರ್ನರ್ ಅವರಿಂದ ಸ್ಥಿರತೆ ಕಾಯ್ದುಕೊಳ್ಳುವ ಮಾರ್ಗದರ್ಶನ ಸಿಗುವ ನಿರೀಕ್ಷೆಯಿದೆ. ಡಾಲರ್ ಎದುರು ರುಪಾಯಿ ಕೆಲ ಸಮಯದ ಮಟ್ಟಿಗೆ 71.90 ರಿಂದ 72.35 ರು ನಂತೆ ವಹಿವಾಟು ನಡೆಸುವ ಸಾಧ್ಯತೆಗಳಿವೆ

ಹೂಡಿಕೆದಾರರಿಗೆ ಆಕರ್ಷಣೆ

ಹೂಡಿಕೆದಾರರಿಗೆ ಆಕರ್ಷಣೆ

ಎಚ್ ಡಿ ಎಫ್ ಸಿ ಬ್ಯಾಂಕಿನ ಆರ್ಥಿಕ ತಜ್ಞರ ಪ್ರಕಾರ, ನವೆಂಬರ್ ತಿಂಗಳ ಚಿಲ್ಲರೆ ಹಣದುಬ್ಬರ ಅಂಕಿ ಅಂಶ ಹೊರಬಂದ ನಂತರ ಮುಂದಿನ ಮಾರ್ಗದರ್ಶಿ ಸೂತ್ರಗಳು ತಿಳಿದು ಬರಲಿದೆ. ಆಹಾರ ಉತ್ಪನ್ನ, ಇಂಧನ ದರ ಮೇಲೆ ನಿಯಂತ್ರಣದ ಭರವಸೆ ಸಿಕ್ಕರೆ ಹೆಚ್ಚು ಹೂಡಿಕೆದಾರರನ್ನು ಆಕರ್ಷಿಸುವ ಸಾಧ್ಯತೆಯಿದೆ.

ಡಾಲರ್ ವಿರುದ್ಧ ಮೈ ಕೊಡವಿ ನಿಂತ ರುಪಾಯಿ, 12 ವಾರದ ಗರಿಷ್ಠ ಮಟ್ಟಕ್ಕೆ ಡಾಲರ್ ವಿರುದ್ಧ ಮೈ ಕೊಡವಿ ನಿಂತ ರುಪಾಯಿ, 12 ವಾರದ ಗರಿಷ್ಠ ಮಟ್ಟಕ್ಕೆ

ಕಚ್ಚಾತೈಲ ದರ ಏರಿಳಿತ

ಕಚ್ಚಾತೈಲ ದರ ಏರಿಳಿತ

ಜಾಗತಿಕ ಮಟ್ಟದಲ್ಲಿ ತೈಲ ಉತ್ಪಾದನಾ ರಾಷ್ಟ್ರಗಳ ನಡುವಿನ ಮಾತುಕತೆ ಸಂಘರ್ಷಗಳ ನಡುವೆ ಇಂದು ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಪ್ರತಿ ಬ್ಯಾರೆಲ್ ಗೆ 60.85 ರು ನಷ್ಟಿತ್ತು. ಒಪೆಕ್ ಸಭೆ ಬಳಿಕ ಉತ್ಪಾದನೆ ಹಾಗೂ ಪೂರೈಕೆ ಮೇಲಿನ ನಿಯಂತ್ರಣ ದರ ಮೇಲೆ ನಿರೀಕ್ಷೆಗಳಿವೆ.

ಕರೆನ್ಸಿ ಮಾರುಕಟ್ಟೆಯಲ್ಲಿನ ಪರಿಸ್ಥಿತಿ

ಕರೆನ್ಸಿ ಮಾರುಕಟ್ಟೆಯಲ್ಲಿನ ಪರಿಸ್ಥಿತಿ

ಬ್ರಿಟಿಷ್ ಪೌಂಡ್ ಕೂಡಾ ಕುಸಿತ ಕಂಡಿದ್ದು, ಡಾಲರ್ ಎದುರ 20 ತಿಂಗಳ ಹಿಂದಿನ ದರಕ್ಕೆ ಇಳಿದಿದೆ. ಬ್ರಿಟಿಷ್ ಪ್ರಧಾನಿ ಥೆರೆಸಾ ಮೇ ಅವರು ಬ್ರೆಕ್ಸಿಟ್ ಒಪ್ಪಂದ ಕುರಿತ ಸಭೆಯನ್ನು ಮುಂದೂಡಿದ್ದೆ ಇದಕ್ಕೆ ಕಾರಣ.ಸದ್ಯಕ್ಕೆ ಡಾಲರ್ ಮೌಲ್ಯ ಸ್ಥಿರವಾಗಿದ್ದು, ಜಾಗತಿಕವಾಗಿ ಹೆಚ್ಚಿನ ಬದಲಾವಣೆ ಕಂಡು ಬಂದಿಲ್ಲ.

English summary
Post 5 state Election results : The rupee (INR) today weakened past the 72 mark against the US dollar (USD) while stock and bond markets rallied.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X