ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಸಿತದ ನಡುವೆ ಎದ್ದು ನಿಂತು ಭರವಸೆ ಮೂಡಿಸಿದ ಷೇರುಗಳು

|
Google Oneindia Kannada News

ಮುಂಬೈ, ಆಗಸ್ಟ್ 01: ಜುಲೈನಲ್ಲಿ ಷೇರುಪೇಟೆಯಲ್ಲಿ ಗೂಳಿ ಘರ್ಜನೆ, ಕರಡಿ ಕುಣಿತ, ರಕ್ತಪಾತ ನಿರೀಕ್ಷಿಸಲು ಸಾಧ್ಯವೇ ಇಲ್ಲ ಸದಾ ಹಸಿರು ಗುರುತಿನಲ್ಲಿಯೇ ಸಾಗುತ್ತವೆ. ಆದರೆ, ತಡವಾದ ಮುಂಗಾರು, ಕಾರ್ಪೊರೇಟ್ ಫಲಿತಾಂಶಗಳ ನಿಧಾನಗತಿ, ಆರ್ಥಿಕ ಬೆಳವಣಿಗೆಯ ಹಿನ್ನಡೆ ಮತ್ತು ಇತರೆ ವಿವಿಧ ಅಂಶಗಳು ಹೂಡಿಕೆದಾರರ ಭಾವನೆಗಳ ಮೇಲೆ ಪರಿಣಾಮ ಬೀರಿದ ಫಲವಾಗಿ ಇಂದು ಷೇರುಪೇಟೆ ಸೆನ್ಸೆಕ್ಸ್ ಕುಸಿತ ಸುದ್ದಿಯಲ್ಲಿದೆ.

ನಿಫ್ಟಿ ಶೇ 5.68ರಷ್ಟು ಕುಸಿತ ಕಂಡಿದ್ದರೆ, ಸೆನ್ಸೆಕ್ಸ್ ಶೇ 4.86ರಷ್ಟು ಹಿನ್ನಡೆ ಅನುಭವಿಸಿದೆ. ಕಳೆದ 17 ವರ್ಷಗಳಲ್ಲಿಯೇ ಇದು ಭಾರಿ ದೊಡ್ಡ ಕುಸಿತವಾಗಿದೆ. 2002ರ ಜುಲೈನಲ್ಲಿ ನಿಫ್ಟಿ50 ಶೇ 9.3ರಷ್ಟು ಕುಸಿತ ಕಂಡಿತ್ತು. ಸೆನ್ಸೆಕ್ಸ್ ಶೇ 8ರಷ್ಟು ಕುಸಿದಿತ್ತು.

17 ವರ್ಷದಲ್ಲೇ ಸೆನ್ಸೆಕ್ಸ್, ನಿಫ್ಟಿ ಭಾರಿ ಕುಸಿತ: ನೆಲಕಚ್ಚಿದ ಷೇರು17 ವರ್ಷದಲ್ಲೇ ಸೆನ್ಸೆಕ್ಸ್, ನಿಫ್ಟಿ ಭಾರಿ ಕುಸಿತ: ನೆಲಕಚ್ಚಿದ ಷೇರು

ಪ್ರಮುಖವಾಗಿ ಎಚ್‌ಡಿಎಫ್‌ಸಿ, ಎಚ್‌ಡಿಎಫ್‌ಸಿ ಬ್ಯಾಂಕ್, ಇನ್ಫೋಸಿಸ್, ಎಲ್ ಅಂಡ್ ಟಿ ಯಂಥ ದೊಡ್ಡ ಕಂಪನಿಗಳ ಷೇರುಗಳು ಇಳಿಮುಖವಾಗಿದ್ದು,ಬಿಎಸ್‌ಇಯಲ್ಲಿ 239 ಕಂಪೆನಿಗಳ ಷೇರುಗಳು ಶೇ 10-50ರವರೆಗೂ ನೆಲಕಚ್ಚಿದ್ದು ಗಮನಾರ್ಹ.

Positive Signal for investors The Sensex crashed 462 Points

ಆದರೆ, ಷೇರುಪೇಟೆಯಲ್ಲಿ ಕುಸಿತದ ನಡುವೆಯೂ ಆಶಾದಾಯಕವಾಗಿ ಮೂಡಿದ ಕಂಪನಿಗಳ ಷೇರುಗಳಿವೆ. ಇವು ದೇಶಿ ಸಾಂಸ್ಥಿಕ ಹೂಡಿಕೆದಾರರು(ಡಿಐಐ) ಹಾಗೂ ವಿದೇಶಿ ಹೂಡಿಕೆದಾರ(ಎಫ್ ಐಐ)ರಿಗೆ 'ಪಾಸಿಟಿವ್' ಆಗಿ ಕಾಣಿಸಿವೆ.

ವರ್ಷದಿಂದ ವರ್ಷಕ್ಕೆ ಆಧಾರದ ಮೇಲೆ ಜುಲೈ ತಿಂಗಳಿನಲ್ಲಿ ಕನಿಷ್ಠ 10ರಷ್ಟು ಕುಸಿತ ಕಂಡ ಷೇರುಗಳು ಕೂಡಾ ಜನಪ್ರಿಯತೆಯ ಪಟ್ಟಿಯಲ್ಲಿವೆ. ಬಜಾಜ್ ಹೋಲ್ಡಿಂಗ್, ರಿಲಯನ್ಸ್ ಇಂಡಸ್ಟ್ರೀಸ್, ಟೆಕ್ ಮಹೀಂದ್ರಾ, ಸಿಯಿಂಟ್, ವೋಡಾಫೋನ್ ಐಡಿಯಾ, ರಾಮ್ಕೋ ಇಂಡಸ್ಟ್ರೀಸ್, ಜೆನ್ಸಾರ್ ಟೆಕ್ನಾಲಜೀಸ್, ಅಲೆಂಬಿಕ್, ಮಿಂಡಾ ಕಾರ್ಪೊರೇಷನ್, ನವ ಭಾರತ್ ವೆಂಚರ್ಸ್ ಇಂದು ಆಶಾದಾಯಕವಾಗಿ ಕಾಣಿಸಿವೆ.

English summary
Positive Signal for DII and FII investors as the Sensex crashed 462 Points on August 01, 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X