ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

100 ಟನ್ ಚಿನ್ನ ಖರೀದಿಸಲು ಬಯಸಿದ ಪೋಲ್ಯಾಂಡ್ ಕೇಂದ್ರ ಬ್ಯಾಂಕ್

|
Google Oneindia Kannada News

ವಾರ್ಸಾ, ಮಾರ್ಚ್ 18: ಪೋಲ್ಯಾಂಡ್‌ನ ಕೇಂದ್ರ ಬ್ಯಾಂಕ್ ತನ್ನ ಚಿನ್ನದ ಸಂಪತ್ತಿನ ಮೀಸಲನ್ನು ಹೆಚ್ಚಿಸಿಕೊಳ್ಳುವುದನ್ನು ಮುಂದುವರಿಸಿದ್ದು, ಮುಂಬರುವ ವರ್ಷಗಳಲ್ಲಿ ಈಗಿನ ದರದ 5.5 ಬಿಲಿಯನ್ ಡಾಲರ್‌ ಮೌಲ್ಯದ ಕನಿಷ್ಠ 100 ಟನ್ ಚಿನ್ನವನ್ನು ಖರೀದಿಸಲು ಬಯಸಿದೆ.

'ಪ್ರಸ್ತುತ ನಮ್ಮ ಬಳಿ 229 ಟನ್ ಚಿನ್ನದ ಸಂಗ್ರಹವಿದೆ. ಇದರಲ್ಲಿ ಹೆಚ್ಚೂಕಡಿಮೆ ಅರ್ಧದಷ್ಟು ಭಾಗವನ್ನು ನನ್ನ ಅಧಿಕಾರಾವಧಿಯಲ್ಲಿ ಖರೀದಿಸಲಾಗಿದೆ' ಎಂದು ಸೆಂಟ್ರಲ್ ಬ್ಯಾಂಕ್ ಗವರ್ನರ್ ಆಡಂ ಗ್ಲಾಪಿನ್ಸ್‌ಕಿ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ಚಿನ್ನದ ಬೆಲೆ ಏರಿಕೆ ಕುರಿತು ಚಿನ್ನದ ಬೆಲೆ ಏರಿಕೆ ಕುರಿತು "ಗೋಲ್ಡ್ ಗುರು" ಕೊಟ್ಟಿರುವ ಈ ವಾರದ ಟಿಪ್ಸ್ !

'ಮುಂದಿನ ಕೆಲವು ವರ್ಷಗಳಲ್ಲಿ ನಾವು ಮತ್ತೆ 100 ಟನ್ ಚಿನ್ನವನ್ನು ಖರೀದಿಸಲು ಹಾಗೂ ಅದನ್ನು ಪೋಲ್ಯಾಂಡ್‌ನಲ್ಲಿ ಇರಿಸಲು ಬಯಸಿದ್ದೇವೆ' ಎಂದು ಹೇಳಿದ್ದಾರೆ. ಗ್ಲಾಪಿನ್ಸ್‌ಕಿ ಅವರ ಆರು ವರ್ಷಗಳ ಅಧಿಕಾರಾವಧಿ 2022ರ ಜೂನ್‌ಗೆ ಅಂತ್ಯಗೊಳ್ಳಲಿದೆ.

 Polands Central Bank Wants To Buy 100 Tonnes Of Gold: Governor Adam Glapinski

ಕಳೆದ ದಶಕದಿಂದ ಮುಖ್ಯವಾಗಿ ಪೂರ್ವ ಯುರೋಪ್, ಮಧ್ಯಪ್ರಾಚ್ಯ ಮತ್ತು ಏಷ್ಯಾದ ಕೇಂದ್ರ ಬ್ಯಾಂಕ್‌ಗಳು ಚಿನ್ನ ಖರೀದಿಗೆ ಹೆಚ್ಚಿನ ಗಮನ ಹರಿಸಿವೆ. ಈ ಮೂಲಕ ಅಮೆರಿಕನ್ ಡಾಲರ್‌ನಂತಹ ಸಂಪತ್ತಿನ ಮೇಲಿನ ಅವಲಂಬನೆಯನ್ನು ತಗ್ಗಿಸಿಕೊಳ್ಳಲು ಮಾರ್ಗ ಹುಡುಕುತ್ತಿವೆ.

2018 ರಿಂದ 2019ರ ಅವಧಿಯಲ್ಲಿ ಪೋಲ್ಯಾಂಡ್ ಕೇಂದ್ರ ಬ್ಯಾಂಕ್ 126 ಟನ್‌ನಷ್ಟು ಚಿನ್ನ ಖರೀದಿ ಮಾಡಿದೆ. ಪ್ರಸ್ತುತ ಚಿನ್ನದ ಸಂಪತ್ತಿನ ಸಂಗ್ರಹ ಶೇ 9ರಷ್ಟಿದೆ. ತಮ್ಮ ಮುಂದಿನ ಅವಧಿಯ ವೇಳೆಗೆ ಅದು ಶೇ 20ಕ್ಕೆ ಏರಿಕೆಯಾಗಬೇಕು ಎಂದು ಗ್ಲಾಪಿನ್ಸ್‌ಕಿ ಗುರಿ ಹೊಂದಿದ್ದಾರೆ.

English summary
Poland's central bank governor Adam Glapinski said, they want to buy at least 100 tonnes of gold over the coming years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X