ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೊಕೊ ಎಂ 3 ಸ್ಮಾರ್ಟ್‌ಫೋನ್ ಬಿಡುಗಡೆ: ಬೆಲೆ, ವೈಶಿಷ್ಟ್ಯತೆ ಏನು?

|
Google Oneindia Kannada News

ನವದೆಹಲಿ, ಫೆಬ್ರವರಿ 02: ಪೊಕೊ ತನ್ನ ಇತ್ತೀಚಿನ ಸ್ಮಾರ್ಟ್‌ಫೋನ್ ಪೊಕೊ ಎಂ 3 ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. 128 ಜಿಬಿಯ ಇಂಟರ್ನಲ್ ಸ್ಟೋರೇಜ್ ಅನ್ನು ಈ ಮೊಬೈಲ್ ಒಳಗೊಂಡಿದೆ. ಹೊಸ ಮಾದರಿಯ ಮೊಬೈಲ್ ಹಲವಾರು ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ.

ಕಳೆದ ವರ್ಷ ನವೆಂಬರ್‌ನಲ್ಲಿ ಜಾಗತಿಕವಾಗಿ ಬಿಡುಗಡೆಯಾದ ಪೊಕೊ ಎಂ 3 ಪೊಕೊ ಎಂ ಸರಣಿಯ ಮೂರನೇ ಫೋನ್‌ ಆಗಿದ್ದು, ಪೊಕೊ ಎಂ 2 ಮತ್ತು ಪೊಕೊ ಎಂ 2 ಪ್ರೊ ನಂತರ ಬಂದಿದೆ. ಭಾರತದಲ್ಲಿ ರಿಯಲ್‌ಮೆ 7 ಐ, ಮೊಟೊರೊಲಾ ಜಿ 9 ಪವರ್ ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ 11 ವಿರುದ್ಧ ಈ ಫೋನ್ ಸ್ಪರ್ಧೆಗೆ ಇಳಿಯಲಿದೆ.

ಬಜೆಟ್ 2021: ಆಮದು ಸುಂಕ ಹೆಚ್ಚಳ, ಮೊಬೈಲ್‌ಗಳ ಬೆಲೆ ಹೆಚ್ಚಾಗಲಿದೆ!ಬಜೆಟ್ 2021: ಆಮದು ಸುಂಕ ಹೆಚ್ಚಳ, ಮೊಬೈಲ್‌ಗಳ ಬೆಲೆ ಹೆಚ್ಚಾಗಲಿದೆ!

ಸ್ಮಾರ್ಟ್‌ಫೋನ್‌ನ 6 ಜಿಬಿ RAM ಮತ್ತು 64 ಜಿಬಿ ಸ್ಟೋರೇಜ್ ರೂಪಾಂತರದ ಬೆಲೆ 10,999 ರೂ. ಆಗಿದ್ದು, 6 ಜಿಬಿ RAM ಮತ್ತು 128 ಜಿಬಿ ಸ್ಟೋರೇಜ್ ರೂಪಾಂತರವು ಬಳಕೆದಾರರಿಗೆ 11,999 ರೂ. ಲಭ್ಯವಿದೆ.

Poco M3 With Qualcomm Snapdragon 662 SoC Launched in India: Price, Specifications in Kannada

ಇತ್ತೀಚಿನ ಮಾದರಿಯನ್ನು ಖರೀದಿಸಲು ಬಯಸುವ ಜನರು ಫ್ಲಿಪ್‌ಕಾರ್ಟ್‌ನಲ್ಲಿ ಫೆಬ್ರವರಿ 9 ರಂದು ಮಧ್ಯಾಹ್ನ 12 ಗಂಟೆಗೆ ಸ್ಮಾರ್ಟ್‌ಫೋನ್ ಮಾರಾಟ ಪ್ರಾರಂಭವಾಗಲಿದೆ ಮತ್ತು ಇಎಂಐ ಆಯ್ಕೆಯನ್ನು ಬಳಸುವವರು ಅಥವಾ ಐಸಿಐಸಿಐ ಬ್ಯಾಂಕ್ ಕಾರ್ಡ್ ಬಳಸುವವರು ತ್ವರಿತವಾಗಿ 1,000 ರೂ. ಡಿಸ್ಕೌಂಟ್ ಪಡೆಯುತ್ತಾರೆ.

ಇನ್ನು ಪೊಕೊ ಎಂ 3 ಡ್ಯುಯಲ್ ನ್ಯಾನೊ ಸಿಮ್ ಫೋನ್ ಆಗಿದ್ದು, ಇದು ಆಂಡ್ರಾಯ್ಡ್ 10 ಆಧಾರಿತ ಎಂಐಯುಐ 12 ನಲ್ಲಿ ಕಾರ್ಯನಿರ್ವಹಿಸುತ್ತದೆ. 6.53 ಇಂಚುಗಳ ಪೂರ್ಣ ಹೆಚ್‌ಡಿ ಡಿಸ್‌ಪ್ಲೇ ಹೊಂದಿದೆ.

6,000mah ಬ್ಯಾಟರಿ ಸಾಮರ್ಥ್ಯ ಹೊಂದಿರುವ ಪೊಕೊ ಎಂ 3 ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್‌ ಸೆನ್ಸಾರ್‌ ಮ್ಯಾಕ್ರೋ ಲೆನ್ಸ್ ಕ್ಯಾಮೆರಾ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಅನ್ನು ಸಹ ಒಳಗೊಂಡಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

English summary
Poco has launched its latest smartphone Poco M3 in India. Know More
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X