ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉದ್ಯಮಿ ನೀರವ್ ಮೋದಿ ಪತ್ನಿಗೆ ರೆಡ್ ಕಾರ್ನರ್ ನೋಟಿಸ್

|
Google Oneindia Kannada News

ನವದೆಹಲಿ, ಆ. 25: ಪಂಜಾಬ್ ನ್ಯಾಷನಲ್ ಬ್ಯಾಂಕಿನ ಬಹುಕೋಟಿ ಹಗರಣದ ಪ್ರಮುಖ ಆರೋಪಿ, ದೇಶಭ್ರಷ್ಟ ಉದ್ಯಮಿ ನೀರವ್ ಮೋದಿ ಅವರಿಗೆ ಸಂಬಂಧಿಸಿದ ಆಸ್ತಿ, ವಸ್ತುಗಳನ್ನು ಜಪ್ತಿ, ಹರಾಜು ಹಾಕಲು ವಿಶೇಷ ಕೋರ್ಟ್ ಅನುಮತಿ ನೀಡಿದೆ. ಇದರ ಬೆನ್ನಲ್ಲೇ ನೀರವ್ ಪತ್ನಿ ಅಮಿ ಮೋದಿಗೆ ಇಂಟರ್ ಪೋಲ್ ಸಂಸ್ಥೆಯಿಂದ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಲಾಗಿದೆ.

Recommended Video

DK Shivakumar, ಕನಕಪುರ ಬಂಡೆನು ಬಿಡಲಿಲ್ಲ ಕೊರೋನ! | Oneindia Kannada

ಸುಮಾರು 13,700 ಕೋಟಿ ರು ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದಲ್ಲಿ ನೀರವ್ ಸೋದರಿ ಪೂರ್ವಿ ಮೋದಿ ಮೆಹ್ತಾ ಕೂಡಾ ಸಹ ಆರೋಪಿಯಾಗಿದ್ದಾರೆ. ಪಿಎನ್‌ಬಿ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಅಮಿ ಮೋದಿ ಅವರ ಪಾತ್ರ ಇದೆ ಎಂದು ಜಾರಿ ಮತ್ತು ನಿರ್ದೇಶನಾಲಯ ಹೇಳಿದೆ.

ನೀರವ್ ಮೋದಿ ಸಮಸ್ತ ಆಸ್ತಿ ಜಪ್ತಿಗೆ ಕೋರ್ಟ್ ಅನುಮತಿನೀರವ್ ಮೋದಿ ಸಮಸ್ತ ಆಸ್ತಿ ಜಪ್ತಿಗೆ ಕೋರ್ಟ್ ಅನುಮತಿ

ಮೋದಿ ಅವರ ಸೋದರಿಗೆ ಸೇರಿದ ಸಿಂಗಪುರದ ಬ್ಯಾಂಕ್ ಖಾತೆಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ನೀರವ್ ಅಡವಿಟ್ಟ ಆಸ್ತಿಯಲ್ಲದೆ ಇತರೆ ಆಸ್ತಿಯನ್ನು ಕೂಡಾ ಜಪ್ತಿ ಮಾಡಲು Fugitive Economic Offenders Act (FEOA) ಅಡಿಯಲ್ಲಿ ತನಿಖಾ ಸಂಸ್ಥೆ ಜಾರಿ ನಿರ್ದೇಶನಲಯಕ್ಕೆ ಕೋರ್ಟಿನಿಂದ ಅನುಮತಿ ಸಿಕ್ಕಿದೆ.

ಗೀತಾಂಜಲಿ ಸಂಸ್ಥೆಯ ಪೂರ್ವಿ ಮೆಹ್ತಾ

ಗೀತಾಂಜಲಿ ಸಂಸ್ಥೆಯ ಪೂರ್ವಿ ಮೆಹ್ತಾ

ದುಬೈ ಹಾಗೂ ಹಾಂಗ್ ಕಾಂಗ್ ಮೂಲದ ಕಂಪನಿಗೆ ಮೆಹ್ತಾ ಅವರು ನಿರ್ದೇಶಕಿಯಾಗಿದ್ದರು. ನೀರವ್ ಮೋದಿ ಅವರ ಗೀತಾಂಜಲಿ ಸಂಸ್ಥೆಯ ವ್ಯವಹಾರಗಳನ್ನು ನಿರ್ವಹಿಸುತ್ತಿದ್ದರು. ವಿದೇಶಿ ವಿನಿಯಮ ಕಾಯ್ದೆ ಉಲ್ಲಂಘಿಸಿರುವ ಪೂರ್ವಿ ಮೆಹ್ತಾ ಅವರು ಕೂಡಾ ಈ ಮನಿ ಲಾಂಡ್ರಿಂಗ್ ಪ್ರಕರಣದಲ್ಲಿ ಮಹತ್ವದ ಪಾತ್ರ ಹೊಂದಿದ್ದಾರೆ ಎಂದು ಜಾರಿ ನಿರ್ದೇಶನಾಲಯ ತನ್ನ ದೋಷಾರೋಪಣ ಪಟ್ಟಿಯಲ್ಲಿ ಹೇಳಿದೆ. ನೀರವ್ ಮೋದಿ, ಮೆಹುಲ್ ಚೊಕ್ಸಿ ಅವರು ಭಾರತದಿಂದ ಪರಾರಿಯಾಗಿದ್ದು, ವಿವಿಧ ತನಿಖಾ ಸಂಸ್ಥೆಗಳು ಇವರಿಬ್ಬರನ್ನು ಭಾರತಕ್ಕೆ ಕರೆ ತಂದು ವಿಚಾರಣೆ ನಡೆಸಲು ಯತ್ನಿಸುತ್ತಿವೆ.

ನೀರವ್ ಮೋದಿಯ 4 ಸ್ವಿಸ್ ಬ್ಯಾಂಕ್ ಖಾತೆ ಜಪ್ತಿಯಾಗಿದೆ

ನೀರವ್ ಮೋದಿಯ 4 ಸ್ವಿಸ್ ಬ್ಯಾಂಕ್ ಖಾತೆ ಜಪ್ತಿಯಾಗಿದೆ

ನೀರವ್ ಮೋದಿಯ 4 ಸ್ವಿಸ್ ಬ್ಯಾಂಕ್ ಖಾತೆಯಿಂದ ಸಿಕ್ಕ ಮೊತ್ತ ಬಹಿರಂಗವಾಗಿದ್ದು, ಸುಮಾರು 283.16 ಕೋಟಿ ರು ಗಳನ್ನು ತನಿಖಾ ಸಂಸ್ಥೆಗಳು ತಮ್ಮ ವಶಕ್ಕೆ ತೆಗೆದುಕೊಂಡಿವೆ. 3,74,11,596 ಡಾಲರ್ ಠೇವಣಿ ಹೊಂದಿದ್ದರೆ, ಸೋದರಿ ಪೂರ್ವಿ ಮೋದಿ ಖಾತೆಯಲ್ಲಿ 27,38,136 ಬ್ರಿಟಿಷ್ ಪೌಂಡ್ ಹೊಂದಿದ್ದರು. ಸುಮಾರು 13,700 ಕೋಟಿ ರು ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದಲ್ಲಿ ಪೂರ್ವಿ ಮೋದಿ ಕೂಡಾ ಸಹ ಆರೋಪಿಯಾಗಿದ್ದಾರೆ.

ಯಾರೀತ ಬಹುಕೋಟಿ ವಂಚಕ ನೀರವ್ ಮೋದಿ?ಯಾರೀತ ಬಹುಕೋಟಿ ವಂಚಕ ನೀರವ್ ಮೋದಿ?

ಮನಿಲಾಂಡ್ರಿಂಗ್ ಅವ್ಯವಹಾರ

ಮನಿಲಾಂಡ್ರಿಂಗ್ ಅವ್ಯವಹಾರ

ನೀರವ್ ಮೋದಿ ಅವರು 6,400 ಕೋಟಿ ರು ಮನಿಲಾಂಡ್ರಿಂಗ್ ಅವ್ಯವಹಾರದಲ್ಲಿ ತೊಡಗಿದ್ದರು ಎಂದು ಜಾರಿ ನಿರ್ದೇಶನಾಲಯವು ತನ್ನ ದೋಷಾರೋಪಣ ಪಟ್ಟಿಯಲ್ಲಿ ಹೇಳಿದೆ. ಪಿಎಂಎಲ್ಎ ಕಾಯ್ದೆ ಉಲ್ಲಂಘನೆಯಡಿಯಲ್ಲಿ ಥೈಲ್ಯಾಂಡ್ ನಲ್ಲಿ 13 ಕೋಟಿ ರು ಮೌಲ್ಯದ ಆಸ್ತಿ ವಶ ಪಡಿಸಿಕೊಳ್ಳಲಾಗಿತ್ತು. ಗೀತಾಂಜಲಿ ಸಮೂಹ ಸಂಸ್ಥೆಗೆ ಸೇರಿದ ಈ ಆಸ್ತಿಗೆ ನೀರವ್ ಅವರ ಅಂಕಲ್ ಮೆಹುಲ್ ಚೋಕ್ಸಿ ಅವರು ಸಹ ಮಾಲೀಕರಾಗಿದ್ದಾರೆ

ಲಂಡನ್‌ನ ಜೈಲಿನಲ್ಲಿರುವ ನೀರವ್ ಮೋದಿ

ಲಂಡನ್‌ನ ಜೈಲಿನಲ್ಲಿರುವ ನೀರವ್ ಮೋದಿ

ಲಂಡನ್‌ನಲ್ಲಿ ನೀರವ್ ಮೋದಿಯನ್ನು ಬಂಧಿಸಲಾಗಿದ್ದು, ಆತನನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ. ನೀರವ್ ಮೋದಿ ಅವರು ಜಾಮೀನಿಗಾಗಿ ಐದು ಬಾರಿ ಮನವಿ ಸಲ್ಲಿಸಿದ್ದರೂ ಜಾಮೀನು ಸಿಕ್ಕಿಲ್ಲ. ನೀರವ್ ಮೋದಿಗೆ ಇಂಗ್ಲೆಂಡಿನ ವೆಸ್ಟ್‌ಮಿನಿಸ್ಟರ್ ಕೋರ್ಟ್ ಜಾಮೀನು ನಿರಾಕರಿಸುತ್ತಾ ಬಂದಿದೆ. ಮೋದಿ ಅವರ ಮಕ್ಕಳು ಲಂಡನ್ನಿನಲ್ಲೇ ವ್ಯಾಸಂಗ ಮಾಡುತ್ತಿದ್ದು, ಲಂಡನ್ ಬಿಡುವುದಿಲ್ಲ, ತನಿಖೆಗೆ ಸಹಕರಿಸುತ್ತಿದ್ದಾರೆ ಎಂದು ಮೋದಿ ಪರ ವಕೀಲರು ವಾದಿಸಿದ್ದರು.

English summary
The Interpol has issued a red notice agains the wife of Nirav Modi, a prime accused in the Punjab National Bank fraud case amounting to Rs 13,500 crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X