ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೆಹುಲ್ ಚೊಕ್ಸಿಗೆ ಸೇರಿದ 41 ಆಸ್ತಿ ಜಪ್ತಿ ಮಾಡಿದ 'ಇಡಿ'

By Mahesh
|
Google Oneindia Kannada News

ನವದೆಹಲಿ, ಮಾರ್ಚ್ 01: ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ ಬಿ) ನ ಬಹುಕೋಟಿ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯಾಗಿರುವ ಮೆಹುಲ್ ಚೊಕ್ಸಿ ಅವರ ಕಚೇರಿ ಮೇಲೆ ಸತತವಾಗಿ ದಾಳಿ ನಡೆಸಲಾಗುತ್ತಿದೆ.

ಮೆಹುಲ್ ಗೆ ಸುಮಾರು 1217.20 ಕೋಟಿ ರು ಮೌಲ್ಯದ 41 ಸ್ಥಿರಾಸ್ತಿಗಳನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಗುರುವಾರದಂದು ವಶಪಡಿಸಿಕೊಂಡಿದ್ದಾರೆ.

ಇದರಲ್ಲಿ ಮುಂಬೈನಲ್ಲಿರುವ 15 ಫ್ಲಾಟ್ ಗಳು, 17 ಕಚೇರಿ ಕಟ್ಟಡ, ಆಂಧ್ರಪ್ರದೇಶದಲ್ಲಿರುವ ಮೆಸರ್ಸ್ ಹೈದರಾಬಾದ್ ಜೆಮ್ಸ್ ಎಸ್ ಇ ಜಡ್, ಕೋಲ್ಕತಾದಲ್ಲಿರುವ ಶಾಪಿಂಗ್ ಮಾಲ್, ಆಲಿಬಾಗ್ ನಲ್ಲಿರುವ ತೋಟದ ಮನೆ, ಮಹಾರಾಷ್ಟ್ರ ಹಾಗೂ ತಮಿಳುನಾಡಿನಲ್ಲಿರುವ 231 ಎಕರೆ ವಾಣಿಜ್ಯ ಭೂಮಿ ಸೇರಿದೆ.

ED attaches 41 properties Mehul Choksi

ಪಂಜಾಬ್ ನ್ಯಾಷನಲ್ ಬ್ಯಾಂಕಿನ ಮುಂಬೈ ಶಾಖೆಯೊಂದರಲ್ಲಿ 11,500 ಕೋಟಿ ರೂ.ಗಳ ವಂಚನೆ ಮತ್ತು ಅಕ್ರಮ ವಹಿವಾಟು ಪ್ರಕರಣಕ್ಕೆ ಸಂಬಂಧಿಸಿದಂತೆ ನೀರವ್ ಮೋದಿ ಜತೆಗೆ ಮೆಹುಲ್ ಚೊಕ್ಸಿ ಕೂಡಾ ಆರೋಪಿ.

ಪಂಜಾಬ್ ನ್ಯಾಷನಲ್ ಬ್ಯಾಂಕ್ ಬಹುಕೋಟಿ ವಂಚನೆ ಪ್ರಕರಣ ಪ್ರಮುಖ ಆರೋಪಿ, ಗೀತಾಂಜಲಿ ಸಂಸ್ಥೆಯ ಒಡೆಯ ಮೆಹುಲ್ ಚೊಕ್ಸಿ ವಿರುದ್ಧ ಬಾಲಿವುಡ್ ನ ತಾರೆಯರು ಕೂಡಾ ತಿರುಗಿ ಬಿದ್ದಿದ್ದು, ಬಾಕಿ ಮೊತ್ತಕ್ಕಾಗಿ ಆಗ್ರಹಿಸಿದ್ದಾರೆ.

English summary
ED attaches 41 properties worth Rs 1217.20 crore of #MehulChoksi & the companies controlled by him. It includes 15 flats & 17 office premises in Mumbai, M/s Hyderabad Gems SEZ in AP, a shopping mall in Kolkata, farm house in Alibaug & 231 acres land in Maharashtra & TN.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X