ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಂಜಾಬ್ ನ್ಯಾಷನಲ್ ಬ್ಯಾಂಕಿನಲ್ಲಿ ಮತ್ತೆ ಭಾರಿ ವಂಚನೆ ಪತ್ತೆ

|
Google Oneindia Kannada News

ನವದೆಹಲಿ, ಅ. 1: ಸರ್ಕಾರಿ ಸ್ವಾಮ್ಯದ ಪಂಜಾಬ್ ನ್ಯಾಷನಲ್ ಬ್ಯಾಂಕಿನಲ್ಲಿ ಮತ್ತೆ ಕೋಟ್ಯಂತರ ರುಪಾಯಿ ವಂಚನೆಯಾಗಿರುವ ವರದಿ ಬಂದಿದೆ. ಸಿಂಟೆಕ್ಸ್ ಇಂಡಸ್ಟ್ರೀಸ್ ಲಿಮೆಟ್ ಸಂಸ್ಥೆಯು ಸುಮಾರು 1,203.26 ಕೋಟಿ ರು ಅನುತ್ಪಾದಕ ಆಸ್ತಿ(NPA) ತೋರಿಸಿ ವಂಚಿಸಿರುವುದು ಕಂಡು ಬಂದಿದೆ.

SIL ಕಂಪನಿ ಖಾತೆ ವಿವರ ಹಾಗೂ ವಂಚನೆ ಬಗ್ಗೆ ಆರ್ ಬಿಐಗೆ ಮಾಹಿತಿ ನೀಡಲಾಗಿದೆ ಎಂದು ಷೇರುಪೇಟೆಗೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ತಿಳಿಸಿದೆ. ಬ್ಯಾಂಕ್ ತನ್ನ ಆದಾಯದಲ್ಲಿ ಈ ರೀತಿ ಸಮಸ್ಯೆ ಎದುರಾದಾಗ ಬಳಸಲು ನಿಯಮಗಳ ಪ್ರಕಾರ, 215.21 ಕೋಟಿ ರು ಎತ್ತಿಹಿಡಲಾಗಿದೆ.

ನೀರವ್ ಮೋದಿ ಸಮಸ್ತ ಆಸ್ತಿ ಜಪ್ತಿಗೆ ಕೋರ್ಟ್ ಅನುಮತಿ ನೀರವ್ ಮೋದಿ ಸಮಸ್ತ ಆಸ್ತಿ ಜಪ್ತಿಗೆ ಕೋರ್ಟ್ ಅನುಮತಿ

PNB reports Rs 1,203 crore fraud by Sintex Industries

ಸುಮಾರು 13,700 ಕೋಟಿ ರು ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣ ಗೊತ್ತಿರಬಹುದು. ಆಭರಣ ಉದ್ಯಮಿ ನೀರವ್ ಮೋದಿ ಹಾಗೂ ಕುಟುಂಬಸ್ಥರು ಭಾರಿ ವಂಚನೆ ನಂತರ ದೇಶದಿಂದ ಪರಾರಿಯಾಗಿ ಉದ್ದೇಶಪೂರ್ವಕ ಸುಸ್ತಿದಾರ, ಆರ್ಥಿಕ ಭ್ರಷ್ಟರೆನಿಸಿಕೊಂಡಿದ್ದಾರೆ. ಸದ್ಯ ಲಂಡನ್ನಿನಲ್ಲಿರುವ ನೀರವ್ ಮೋದಿಗೆ ಇಂಗ್ಲೆಂಡಿನ ವೆಸ್ಟ್‌ಮಿನಿಸ್ಟರ್ ಕೋರ್ಟ್ ಜಾಮೀನು ನಿರಾಕರಿಸುತ್ತಾ ಬಂದಿದೆ. ವಿಶೇಷ ಆರ್ಥಿಕ ಅಪರಾಧಿಯೊಬ್ಬರ ಆಸ್ತಿ ಜಪ್ತಿ ಮಾಡಲು Fugitive Economic Offenders Act (FEOA) ಅಡಿಯಲ್ಲಿ ತನಿಖಾ ಸಂಸ್ಥೆ ಜಾರಿ ನಿರ್ದೇಶನಾಲಯಕ್ಕೆ ಕೋರ್ಟಿನಿಂದ ಅನುಮತಿ ಸಿಕ್ಕಿದ್ದು, ಸಾವಿರಾರು ಕೋಟಿ ಆಸ್ತಿ ಜಪ್ತಿ ಮಾಡಲಾಗಿದೆ.

English summary
State-run Punjab National Bank (PNB) on Wednesday reported a borrowal fraud of Rs 1,203.26 crore in the non-performing assets (NPA) account of Sintex Industries Ltd. (SIL).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X