ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿಎನ್‌ಬಿ ಹಗರಣ: ಐಸಿಐಸಿಐ, ಆಕ್ಸಿಸ್‌ ಬ್ಯಾಂಕ್‌ ಮುಖ್ಯಸ್ಥರಿಗೆ ಸಮನ್ಸ್

By Sachhidananda Acharya
|
Google Oneindia Kannada News

ಮುಂಬೈ, ಮಾರ್ಚ್ 3: ಪಿಎನ್‌ಬಿ ಹಗರಣ ಸರಕಾರಿ ಸ್ವಾಮ್ಯದ ಬ್ಯಾಂಕುಗಳಿಂದ ಖಾಸಗಿ ಸ್ವಾಮ್ಯದ ಬ್ಯಾಂಕ್ ಗಳಿಗೂ ಹರಡಿಕೊಳ್ಳುತ್ತಿದೆ. ನೀರವ್ ಮೋದಿ ಸಂಬಂಧಿ ಮೆಹುಲ್ ಚೋಕ್ಸಿಗೆ 5,000 ಕೋಟಿ ರೂಪಾಯಿ ಸಾಲ ನೀಡಿದ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಐಸಿಐಸಿಐ ಬ್ಯಾಂಕ್ ಸಿಇಒ ಚಂದಾ ಕೊಚ್ಚಾರ್ ಮತ್ತು ಆಕ್ಸಿಸ್ ಬ್ಯಾಂಕ್ ಸಿಇಒ ಶಿಖಾ ಶರ್ಮಾಗೆ ಸಮನ್ಸ್ ನೀಡಲಾಗಿದೆ.

ಗಂಭೀರ ವಂಚನೆ ತನಿಖಾ ಕಚೇರಿಯ ಮುಂಬೈ ವಿಭಾಗದ ಅಧಿಕಾರಿಗಳು ಅವರಿಗೆ ಈ ಸಮನ್ಸ್ ನೀಡಿದ್ದಾರೆ.

ಪಿಎನ್ ಬಿ ಆರೋಪಿಗಳಿಗೆ ಚಿದಂಬರಂ ನೆರವು : ಬಿಜೆಪಿ ಆರೋಪಪಿಎನ್ ಬಿ ಆರೋಪಿಗಳಿಗೆ ಚಿದಂಬರಂ ನೆರವು : ಬಿಜೆಪಿ ಆರೋಪ

ಸುಮಾರು 31 ಬ್ಯಾಂಕ್ ಗಳ ಒಕ್ಕೂಟ ಮೆಹುಲ್ ಚೋಕ್ಸಿ ಕಂಪನಿಗಳಿಗೆ 5,280 ಕೋಟಿ ರೂಪಾಯಿ ಸಾಲ ನೀಡಿವೆ. ಇದರಲ್ಲಿ ಐಸಿಐಸಿಐ ಬ್ಯಾಂಕ್ ಹೆಚ್ಚಿನ ಸಾಲ ನೀಡಿದೆ. ಹೀಗಾಗಿ ಬ್ಯಾಂಕ್ ಮುಖ್ಯಸ್ಥರಿಗೆ ಸಮನ್ಸ್ ನೀಡಲಾಗಿದ್ದು ಮುಂದಿನ ದಿನಗಳಲ್ಲಿ ಉಳಿದವರಿಗೂ ಸಮನ್ಸ್ ನೀಡುವ ಸಾಧ್ಯತೆಗಳಿವೆ.

PNB fraud: ICICI Bank and Axis Bank's CEO summoned

11,400 ಕೋಟಿ ರೂಪಾಯಿಗೂ ಹೆಚ್ಚಿನ ಮೊತ್ತವನ್ನು ನೀರವ್ ಮೋದಿ, ಅವರ ಕಂಪನಿಗಳು ಮತ್ತು ಅವರ ಸಂಬಂಧಿಕರು ವಂಚಿಸಿದ್ದಾಗಿ ಫೆಬ್ರವರಿಯಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಹೇಳಿತ್ತು.

ನಂತರ ಮೊತ್ತವನ್ನು ಮತ್ತೂ 1,300 ಕೋಟಿ ರೂಪಾಯಿ ಹೆಚ್ಚಿಸಿ ಒಟ್ಟಾರೆ ಹಗರಣದ ಮೊತ್ತ 12,700 ಕೋಟಿ ರೂಪಾಯಿಗೆ ಏರಿಕೆಯಾಗಿತ್ತು. ಇದರಲ್ಲಿ ಸರಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲದೆ ಇದೀಗ ಖಾಸಗೀ ಬ್ಯಾಂಕ್ ಗಳೂ ಪಾಲ್ಗೊಂಡಿರುವುದು ಬೆಳಕಿಗೆ ಬರುತ್ತಿದೆ.

ನೀರವ್ ಮೋದಿಗೆ ಸೇರಿದ ಸಾಗರೋತ್ತರ ಖಾತೆಗಳಿಗೆ ಎಸ್.ಬಿ.ಐ ಬೀಗನೀರವ್ ಮೋದಿಗೆ ಸೇರಿದ ಸಾಗರೋತ್ತರ ಖಾತೆಗಳಿಗೆ ಎಸ್.ಬಿ.ಐ ಬೀಗ

English summary
ICICI Bank CEO Chanda Kochchar and Axis Bank CEO Shikha Sharma have been summoned by the mumbai wing of the Serious Fraud Investigation Office in the multi-crore PNB scam case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X